ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ನೀವು ಭಾರತದ ಯಾವುದೇ ರಸ್ತೆಗಳಲ್ಲಿ ವಾಹನವನ್ನು ಚಲಾಯಿಸುತ್ತಿದ್ದರೆ, ಪ್ರಪಂಚದ ಯಾವುದೇ ಮೂಲೆಯಲ್ಲಿ ಬೇಕಾದರೂ ವಾಹನವನ್ನು ಚಲಾಯಿಸಬಹುದೆಂದು ಹೇಳಲಾಗುತ್ತದೆ. ಇದರಲ್ಲಿ ಎಷ್ಟು ಸತ್ಯವಿದೆಯೊ ತಿಳಿಯದು. ಆದರೆ ಭಾರತದ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸುವುದು ಅಷ್ಟು ಸುಲಭವಲ್ಲ.

ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ರಸ್ತೆಗಳಲ್ಲಿ ಅಡ್ಡಬರುವ ಪ್ರಾಣಿಗಳು, ಅಡ್ಡಾದಿಡ್ಡಿಯಾಗಿ ಓಡಾಡುವ ಮನುಷ್ಯರು, ಕುಡಿದು ವಾಹನ ಚಲಾಯಿಸುವವರು, ಹದಗೆಟ್ಟ ರಸ್ತೆಗಳು ಭಾರತದ ರಸ್ತೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯಗಳಾಗಿವೆ. ಈ ಎಲ್ಲವನ್ನೂ ಎದುರಿಸಿ ವಾಹನ ಸವಾರರು ಭಾರತದ ರಸ್ತೆಗಳಲ್ಲಿ ವಾಹನ ಚಲಾಯಿಸಬೇಕಾಗುತ್ತದೆ. ಇವುಗಳೆಲ್ಲದರ ಜೊತೆಗೆ ಹಲವು ಹಗರಣಗಳೂ ಸಹ ವಾಹನಗಳ ಮಾಲೀಕರನ್ನು ಹೈರಾಣು ಮಾಡುತ್ತವೆ.

ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಈ ಹಿಂದೆ ಈ ರೀತಿಯ ಹಲವು ಹಗರಣಗಳು ಬಯಲಿಗೆ ಬಂದಿದ್ದವು. ಈಗ ಮತ್ತೊಂದು ಹಗರಣ ಬಯಲಿಗೆ ಬಂದಿದೆ. ಜನರು ದಿಢೀರ್ ಎಂದು ಶ್ರೀಮಂತರಾಗಬೇಕೆಂದು ಹೇಗೆಲ್ಲಾ ಅಡ್ಡದಾರಿಗಳನ್ನು ಹಿಡಿಯುತ್ತಾರೆ ಎಂಬುದನ್ನು ಇಲ್ಲಿ ಕಾಣಬಹುದು.

ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಅವರ್ ಘೋಡ್ ಬಂದರ್ ರೋಡ್ ಎಂಬ ಫೇಸ್ ಬುಕ್‍ ಫೇಜಿನಲ್ಲಿ ಪೋಸ್ಟ್ ಮಾಡಿರುವಂತೆ, ಹೊಸ ಹಗರಣವೊಂದು ಬಯಲಿಗೆ ಬಂದಿದೆ. ಈ ಹಗರಣದಲ್ಲಿ ಕೆಲವರು ಟ್ರಾಫಿಕ್ ವಾರ್ಡನ್‍‍ಗಳಂತೆ ನಟಿಸಿ ಜನರಿಗೆ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಈ ಖದೀಮರು ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿರುವ ವಾಹನಗಳಿಗೆ ವ್ಹೀಲ್ ಜಾಮರ್ ಅಳವಡಿಸಿ ಹಣ ಪೀಕುತ್ತಿದ್ದರು. ಇಲ್ಲಿರುವ ಚಿತ್ರಗಳಲ್ಲಿ ಕಾಣುವಂತೆ ಈ ಜನರು ಆನ್ ಡ್ಯೂಟಿ ಟ್ರಾಫಿಕ್ ಪೊಲೀಸ್, ಕೆಲಸ ನಿರ್ವಹಿಸುತ್ತಿರುವ ಸಂಚಾರಿ ಪೊಲೀಸ್ ಎಂಬ ಟಿ ಶರ್ಟ್‍‍ಗಳನ್ನು ಧರಿಸಿ, ತಮ್ಮನ್ನು ಟ್ರಾಫಿಕ್ ಪೊಲೀಸರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ.

ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಹಲವು ಪ್ರದೇಶಗಳಲ್ಲಿ ಸುತ್ತಾಡುವ ಇವರು, ನೋ ಪಾರ್ಕಿಂಗ್ ಜಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾರ್ಕ್ ಮಾಡಿರುವ ವಾಹನಗಳನ್ನು ಗುರುತಿಸಿ, ಅಲ್ಲಿ ನಿಲ್ಲಿಸಿರುವ ವಾಹನಗಳಿಗೆ ವ್ಹೀಲ್ ಜಾಮರ್‍‍ಗಳನ್ನು ಅಳವಡಿಸುತ್ತಾರೆ.

ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ತಮ್ಮ ಜೊತೆಯಲ್ಲಿ ವ್ಹೀಲ್ ಜಾಮರ್‍‍ಗಳನ್ನು ಕೊಂಡೊಯ್ಯುವ ಈ ಖದೀಮರು, ವಾಹನಗಳಿಗೆ ಈ ಜಾಮರ್‍‍ಗಳನ್ನು ಅಳವಡಿಸಿ, ತಮ್ಮ ನಂಬರ್ ಅನ್ನು ಒಂದು ಚೀಟಿಯಲ್ಲಿ ಬರೆದು, ಆ ಚೀಟಿಯನ್ನು ವಾಹನಗಳ ಗ್ಲಾಸಿನ ಮೇಲೆ ಅಂಟಿಸುತ್ತಾರೆ.

MOST READ: ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಫೇಸ್‌ಬುಕ್ ಪೋಸ್ಟ್‌ನ ಪ್ರಕಾರ, ಈ ಖದೀಮರು ಹೆಚ್ಚಾಗಿ ವ್ಯಾಪಾರಿಗಳನ್ನು ಟಾರ್ಗೆಟ್ ಮಾಡುತ್ತಾರೆ. ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿರುವ ವಾಹನಗಳು ಕಣ್ಣಿಗೆ ಬಿದ್ದರೆ, ಆ ವಾಹನಗಳಿಗೆ ಪಾರ್ಕಿಂಗ್ ವ್ಹೀಲ್ ಜಾಮರ್ ಅಳವಡಿಸಿ, ತಮ್ಮ ಫೋನ್ ನಂಬರ್ ಇರುವ ಚೀಟಿಯನ್ನು ವಾಹನಗಳ ಗ್ಲಾಸಿನ ಮೇಲೆ ಅಂಟಿಸುತ್ತಾರೆ.

MOST READ: ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಮಾಲೀಕರು ಬಂದು ವಾಹನವನ್ನು ಲಾಕ್ ಮಾಡಿರುವುದನ್ನು ಕಂಡು ಗ್ಲಾಸಿನ ಮೇಲಿರುವ ನಂಬರಿಗೆ ಕರೆ ಮಾಡಿದಾಗ ಅಲ್ಲಿಗೆ ಬರುವ ಈ ಖದೀಮರು, ತಮ್ಮನ್ನು ಟ್ರಾಫಿಕ್ ಪೊಲೀಸರೆಂದು ಬಿಂಬಿಸಿಕೊಳ್ಳುತ್ತಾರೆ. ಮಾಲೀಕರನ್ನು ಹೆದರಿಸಲು ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಹನಕ್ಕೆ ಸಂಬಂಧಪಟ್ಟ ಬೇರೆ ದಾಖಲೆಗಳನ್ನು ಕೇಳುತ್ತಾರೆ.

MOST READ: ಐ‍‍ಆರ್‍‍ಸಿ‍‍ಟಿ‍‍ಸಿಗೆ ಹಸ್ತಾಂತರಗೊಳ್ಳಲಿದೆ ತೇಜಸ್ ಎಕ್ಸ್ ಪ್ರೆಸ್

ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಯಾವುದೇ ದಾಖಲೆಗಳಿಲ್ಲದೇ ಇರುವುದು ಕಂಡು ಬಂದರೆ, ದಂಡ ವಿಧಿಸುವಂತೆ ನಟಿಸುತ್ತಾರೆ. ದಂಡ ಕೊಡಲು ಸಾಧ್ಯವಾಗದಿದ್ದರೆ, ಕಡೆಗೆ ಲಂಚ ನೀಡಲು ಹೇಳುತ್ತಾರೆ. ಈ ರೀತಿ ವಾಹನ ಮಾಲೀಕರನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದಾರೆ.

ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ವಾಹನದ ಮಾಲೀಕರು ಅವರನ್ನು ಹೆಚ್ಚು ಪ್ರಶ್ನಿಸಿದರೆ ಅಥವಾ ಸಂದರ್ಭ ತಮ್ಮ ಕೈ ಮೀರುವಂತಿದ್ದರೆ, ಅವರು ನಿಜವಾದ ಟ್ರಾಫಿಕ್ ಪೊಲೀಸರನ್ನೆ ಸ್ಥಳಕ್ಕೆ ಕರೆ ತರುತ್ತಾರೆ. ಹಲವು ಜನ ರಾಜಕಾರಣಿಗಳು ಹಾಗೂ ಪೊಲೀಸರು ಈ ಹಗರಣದಲ್ಲಿ ಭಾಗಿಯಾಗಿರುವುದರಿಂದ ಈ ಖದೀಮರು ರಾಜಾರೋಷವಾಗಿ ಸುಲಿಗೆ ಮಾಡುತ್ತಿದ್ದಾರೆ ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಲಾಗಿದೆ.

ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಫೇಸ್ ಬುಕ್‍ ಪೇಜಿ‍ನಲ್ಲಿ ಈ ಪೋಸ್ಟ್ ಪ್ರಕಟವಾದ ಬೆನ್ನಲ್ಲೇ ಹಲವರು ತಾವೂ ಸಹ ಈ ಗ್ಯಾಂಗ್‍‍ನಿಂದ ಮೋಸ ಹೋಗಿರುವುದಾಗಿ, ಲಂಚ ನೀಡಿರುವುದಾಗಿ ಹೇಳಿದ್ದಾರೆ. ಇನ್ನು ಹಲವರು ಈ ಹಗರಣದ ಬಗ್ಗೆ ಧ್ವನಿ ಎತ್ತಿದ್ದಾರೆ. ಅಂದ ಹಾಗೇ ಈ ಘಟನೆ ನಡೆದಿರುವುದು ಮಹಾರಾಷ್ಟ್ರದಲ್ಲಿ.

ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ನಿಮಗೂ ಸಹ ಇಂತಹ ಪರಿಸ್ಥಿತಿ ಎದುರಾದರೆ, ಹತ್ತಿರದ ಟ್ರಾಫಿಕ್ ಪೊಲೀಸ್ ಸ್ಟೇಷನ್ ಅನ್ನು ಸಂಪರ್ಕಿಸಿ, ಅವರು ಈ ರೀತಿಯ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ರೀತಿಯಾಗಿ ದಂಡ ವಸೂಲಿಗೆ ಬಂದು ಲಂಚ ಕೇಳುವ ಖದೀಮರನ್ನು ಪೊಲೀಸ್ ಇಲಾಖೆಯ ಐಡಿ ಕಾರ್ಡ್ ತೋರಿಸುವಂತೆ ಕೇಳಿ. ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ.

Source: Our Ghodbunder Road/Facebook

Most Read Articles

Kannada
English summary
Fake traffic wardens putting jammers on vehicles parked in no-parking zones -Read in kannada
Story first published: Friday, August 23, 2019, 12:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X