ಐಷಾರಾಮಿ 'BMW X7' ಕಾರಿನಲ್ಲಿ ಬಂದಿಳಿದ ಖ್ಯಾತ ನಟಿ

ಬಾಲಿವುಡ್ ಖ್ಯಾತ ನಟಿ ಕಾಜೋಲ್ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಬಾಜಿಗರ್, ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ, ಕುಚ್ ಕುಚ್ ಹೋತಾ ಹೈ, ಕಭಿ ಖುಷಿ ಕಭಿ ಘಮ್ ಸಿನಿಮಾಗಳ ಮೂಲಕ ಖ್ಯಾತಿಗಳಿಸಿರುವ ಅವರು ವಿವಿಧ ಕಾರ್ ಕಲೆಕ್ಷನ್ ಹೊಂದಿದ್ದು, ಆಟೋಮೊಬೈಲ್ ಪ್ರಿಯರು ಲೈಕ್ ಮಾಡುತ್ತಿದ್ದಾರೆ.

ನಟಿ ಕಾಜೋಲ್ ಮುಂಬೈನ ಅಂಧೇರಿಯಲ್ಲಿ ತನ್ನ ಮುಂಬರುವ ಚಲನಚಿತ್ರ 'ಸಲಾಮ್ ವೆಂಕಿಯ' ಪ್ರಚಾರದ ಭಾಗವಾಗಿ ಕಾಣಿಸಿಕೊಂಡರು. ಅಲ್ಲಿ ದುಬಾರಿ ಐಷಾರಾಮಿ ಎಸ್‌ಯುವಿಯಲ್ಲಿ ಬಂದಿಳಿದಿದ್ದರು. ಪಾಪರಾಜಿಗಳು ಫೋಟೋವನ್ನು ತೆಗೆದಿದ್ದು, ಸದ್ಯ ಅವರ ಲುಕ್ ಹಾಗೂ ಉಪಯೋಗಿಸಿದ ಕಾರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟಿ ಕಾಜೋಲ್ BMW X7 ಎಸ್‌ಯುವಿಯನ್ನು ಬಳಸಿದ್ದು, ಎಕ್ಸ್ ಶೋ ರೂಂ ಪ್ರಕಾರ ಈ ಕಾರಿನ ಬೆಲೆ ಬರೋಬ್ಬರಿ 1.78 ಕೋಟಿ ರೂ. ಇದೆ ಎಂದು ತಿಳಿದುಬಂದಿದೆ.

ಇದರ ಬಗ್ಗೆ ಹೇಳಬೇಕಾದರೆ BMW X7 ಹೊಸ ಎಸ್‌ಯುವಿ ಅಲ್ಲ. ಕಾಜೋಲ್ ಅವರ ಪತಿ ಅಜಯ್ ದೇವಗನ್ ಅವರು, 2020ರಲ್ಲಿ ಈ ಎಸ್‌ಯುವಿಯನ್ನು ಖರೀದಿಸಿದ್ದರು. ಬಣ್ಣವನ್ನು ನೋಡಿದಾಗ, ಇದು ಅದೇ ಎಸ್‌ಯುವಿ ಎಂದು ಗೊತ್ತಾಗುತ್ತದೆ. BMW X7 ಪ್ರಸ್ತುತ ಭಾರತದಲ್ಲಿ ಮಾರಾಟವಾಗುವ ಪ್ರಮುಖ ಮಾದರಿಯಾಗಿದೆ. ಇದು ಬಹುಶಃ ಟಾಪ್-ಎಂಡ್ ಪೆಟ್ರೋಲ್ xDriver 40i M ಸ್ಪೋರ್ಟ್ ರೂಪಾಂತರವಾಗಿದ್ದು, ಈ ಕಾರಿನಲ್ಲಿ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳಿದ್ದು, ಹಿಂದಿನ ಮಾದರಿಗೆ ಹೋಲಿಸಿದರೆ ಅಗ್ರೆಸಿವ್ ಅಥವಾ ಸ್ಪೋರ್ಟಿಯಾಗಿ ಕಾಣುವ ಮುಂಭಾಗವನ್ನು ಹೊಂದಿದೆ.

ಫೈಟೋನಿಕ್ ಬ್ಲೂ ಶೇಡ್ ಬಣ್ಣದಲ್ಲಿ SUV ಅದ್ಭುತವಾಗಿ ಕಾಣುತ್ತದೆ. ಇದು ವೆರ್ನಾಸ್ಕಾ ವಿನ್ಯಾಸದ ಪೆರ್ಪೋರ್ಟೆಡ್ ಲೆದರ್, 12.3 ಇಂಚಿನ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಬಿಲ್ಟ್-ಇನ್ HUD, ಹರ್ಮನ್‌ ಆಡಿಯೋ ಸಿಸ್ಟಮ್, ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ಗಾಗಿ ಗೆಸ್ಚರ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್, ಆಂಬಿಯೆಂಟ್ ಲೈಟ್‌ಗಳು, 4 ಜೋನ್ ಕ್ಲೈಮೆಟ್ ಕಂಟ್ರೋಲ್, ಲೇನ್ ಮಾನಿಟರಿಂಗ್, ಸೆಲ್ಫ್ ಲೆವೆಲಿಂಗ್ ಅಡಾಪ್ಟಿವ್ ಸಸ್ಪೆನ್ಷನ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಸೀಟುಗಳಲ್ಲಿ ಎಂಟರ್‌ಟೈನ್ಮೆಂಟ್ ಸ್ಕ್ರೀನ್ ಅನ್ನು ನೋಡಬಹುದು. BMW X7 ಒಂದು ಬೃಹತ್ SUV ಆಗಿದ್ದು, ಇದು Audi Q8ನಂತಹ ಕಾರುಗಳಿಗೆ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ನೀಡುತ್ತದೆ. ಈ ಕಾರಿನ ಎಂಜಿನ್ ಬಗ್ಗೆ ಮಾತನಾಡುವುದಾದರೆ BMW X7, 3.0 ಲೀಟರ್, 6 ಸಿಲಿಂಡರ್ ಎಂಜಿನ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು ಟ್ವಿನ್-ಟರ್ಬೋಚಾರ್ಜ್ಡ್ ಯುನಿಟ್ ಹೊಂದಿದ್ದು, 335 Bhp ಗರಿಷ್ಠ ಪವರ್ ಮತ್ತು 450 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಈ ಕಾರಿನ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಇದು ಎಲ್ಲಾ ನಾಲ್ಕು ವೀಲ್‌ಗಳಿಗೆ ಪವರ್ ಸಪ್ಲೈ ಮಾಡುತ್ತದೆ. SUVಯ ಆರು ಆಸನಗಳನ್ನು ಅತ್ಯುನ್ನತ ದರ್ಜೆಯಲ್ಲಿ ವಿನ್ಯಾಸ ಮಾಡಲಾಗಿದೆ. ಇದು 21 ಇಂಚಿನ ಡಬಲ್-ಸ್ಪೋಕ್ M-ಲೈಟ್ ಅಲಾಯ್ ವೀಲ್‌ಗಳನ್ನು ಹೊಂದಿದೆ. ಈ SUVಯಲ್ಲಿನ ಬ್ರೇಕ್ ಕ್ಯಾಲಿಪರ್‌ಗಳು ನೀಲಿ ಬಣ್ಣದಲ್ಲಿ ಇದೆ. X7 ಅನ್ನು ಮೊದಲ ಬಾರಿಗೆ BMW ಮಾರ್ಚ್ 2014ರಲ್ಲಿ ಉತ್ಪಾದನೆ ಮಾಡುವುದಾಗಿ ತಿಳಿಸಿತು. ಇದನ್ನು ಅಧಿಕೃತವಾಗಿ 17 ಅಕ್ಟೋಬರ್ 2018ರಲ್ಲಿ ಅನಾವರಣಗೊಳಿಸಲಾಯಿತು.

ನಟ ಅಜಯ್ ದೇವಗನ್ ಮತ್ತು ಕಾಜೋಲ್ ದಂಪತಿ ಆಗಾಗ್ಗೆ ತಮ್ಮ ಬೆಲೆಬಾಳುವ ಕಾರುಗಳಲ್ಲಿ ಅನೇಕ ಬಾರಿ ತಿರುಗಾಡುತ್ತಾ ಕಾಣಿಸಿಕೊಂಡಿದ್ದರು. ದಂಪತಿ ಐಷಾರಾಮಿ ಕಾರು ಕಲೆಕ್ಷನ್ ಅನ್ನೇ ಹೊಂದಿದ್ದಾರೆ. ಬರೋಬ್ಬರಿ 1.5 ಕೋಟಿಯ ಮೆಸರೋಟಿ ಕ್ವಾಟ್ರೋಪೋರ್ಟೆ, 80.70 ಲಕ್ಷ ಬೆಲೆ ಇರುವ ಆಡಿ Q7, 1.6 ಕೋಟಿ ದರ ಹೊಂದಿರುವ BMW X7 SUV, ಜೊತೆಗೆ 87.9 ಲಕ್ಷ ರೂ. ವೋಲ್ವೋ XC90 ಕಾರನ್ನು ಹೊಂದಿದ್ದಾರೆ.

ಇಷ್ಟೇಅಲ್ಲದೆ, ಅಜಯ್ ಮತ್ತು ಕಾಜೋಲ್ ಅವರು ಅತ್ಯಂತ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಲಿನನ್ ಕಾರನ್ನು ಹೊಂದಿದ್ದಾರೆ. ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಸೇರಿದಂತೆ ಬೆರಳೆಣಿಕೆಯಷ್ಟು ಭಾರತೀಯರ ಒಡೆತನದಲ್ಲಿರುವ ಈ ಕಾರಿನ ಬೆಲೆ ಬರೋಬ್ಬರಿ 6.5 ಕೋಟಿ ರೂ. ಇದೆ. ಇದರೊಂದಿಗೆ ದಂಪತಿ ಆಡಿ A5 ಸ್ಪೋರ್ಟ್‌ಬ್ಯಾಕ್ ಮತ್ತು Mercedes-Benz S-ಕ್ಲಾಸ್ ಸೇರಿ ವಿವಿಧ ರೀತಿಯ ಕಾರು ಸಂಹ್ರಹವನ್ನು ತಮ್ಮ ಗ್ಯಾರೇಜ್‌ನಲ್ಲಿ ಹೊಂದಿರುವುದು ವಿಶೇಷ.

Most Read Articles

Kannada
English summary
Famous actress landed in a luxury bmw x7 car
Story first published: Sunday, November 27, 2022, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X