Just In
- 34 min ago
ಭಾರತದ ನಂತರ ಜಪಾನ್ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುತ್ತಿದೆ ಹೋಂಡಾ ಹೈನೆಸ್ ಸಿಬಿ 350
- 10 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 12 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 12 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
Don't Miss!
- News
ಬೈಡನ್ ಪದಗ್ರಹಣಕ್ಕೆ ಸಕಲ ಸಿದ್ಧತೆ, ಮದುಮಗಳಂತೆ ಸಿಂಗಾರಗೊಳ್ಳುತ್ತಿದೆ ಸಂಸತ್
- Movies
ಸುದೀಪ್ ಜೊತೆ ಸಿನಿಮಾ: ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, Live ಸ್ಕೋರ್: ಭಾರತದ ಆರಂಭಿಕ ವಿಕೆಟ್ ಪತನ
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
ಇಷ್ಟು ದಿನ ಜನರ ಹಾಗೂ ಜನರ ನೆಚ್ಚಿನ ಪ್ರಾಣಿಗಳ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದ ಬಗ್ಗೆ ವರದಿಗಳಾಗಿದ್ದವು. ಆದರೆ ಇದೇ ಮೊದಲ ಬಾರಿಗೆ ವಾಹನ ಮಾಲೀಕರೊಬ್ಬರು ತಮ್ಮ ವಾಹನದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಈ ವಿಶೇಷ ಘಟನೆ ನಡೆದಿರುವುದು ನಮ್ಮ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ. ಮುಂಡೋಡಿ ಕುಟುಂಬದ ಅಪ್ಪ ಮಗ ಇಬ್ಬರೂ ಸೇರಿ ತಮ್ಮ ಬಳಿ ಇರುವ ಮಹೀಂದ್ರಾ ಕಂಪನಿಯ ಜೀಪ್ ಸಿಜೆ 3 ಬಿ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಈ ಸಂಭ್ರಮಾಚರಣೆಯ ವೀಡಿಯೊವನ್ನು ತಮ್ಮ ಮುಂಡೋಡಿ ವಿಲಾಗ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಧ್ರುವ ಮುಂಡೋಡಿರವರು ಜೀಪ್ ಅನ್ನು ಪರಿಚಯಿಸುವ ಮೂಲಕ ಈ ವೀಡಿಯೊ ಶುರುವಾಗುತ್ತದೆ.

ಮುಂಡೋಡಿ ಕುಟುಂಬದ ಬಳಿಯಿರುವ ಈ ಜೀಪ್ ಅನ್ನು 1969ರಲ್ಲಿ ರಿಜಿಸ್ಟ್ರೇಷನ್ ಮಾಡಲಾಗಿದೆ. ಅಂದರೆ ಬರೋಬ್ಬರಿ 50 ವರ್ಷಗಳ ಹಿಂದೆ. ಈ ಜೀಪ್ ಮುಂಡೋಡಿ ಕುಟುಂಬದ ಸದಸ್ಯನೇ ಆಗಿದೆ. ಜೀಪಿನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಜೀಪ್ ಅನ್ನು ಹತ್ತಿರದ ಹಳ್ಳಿಗೆ ಡ್ರೈವ್ ಮಾಡಿಕೊಂಡು ಹೋಗಿ ಅಪ್ಪ ಮಗ ಹಳ್ಳಿಯ ಜನರಿಗೆ ಸಿಹಿ ವಿತರಿಸಿದ್ದಾರೆ.

ಈ ವೀಡಿಯೊದಲ್ಲಿ ಜೀಪ್ ಇನ್ನೂ ಹೊಸದರಂತೆ ಕಾಣುತ್ತದೆ. ಕೆಲವು ವರದಿಗಳ ಪ್ರಕಾರ, ಮುಂಡೋಡಿ ಕುಟುಂಬವು ಈ ಜೀಪ್ ಅನ್ನು ಸುಸ್ಥಿತಿಯಲ್ಲಿಡಲು ಸಾಕಷ್ಟು ಕಾಳಜಿ ವಹಿಸಿದೆ. ಕೆಲವು ವರ್ಷಗಳ ಹಿಂದೆ ಈ ಜೀಪಿನ ಇಡೀ ಬಾಡಿಗೆ 16 ಗೇಜಿನ ಮೆಟಲ್ ಶೀಟ್ ಅನ್ನು ಹೊಸದಾಗಿ ಅಳವಡಿಸಲಾಗಿದೆ.

ಈ ಮೊದಲು ಜೀಪ್ ನೀಲಿ ಬಣ್ಣವನ್ನು ಹೊಂದಿತ್ತು. ಕೆಲ ಸಮಯದ ನಂತರ ಕೆಂಪು ಬಣ್ಣವನ್ನು ನೀಡಲಾಗಿದೆ. ಮೊದಲಿದ್ದ ಸ್ಟೀಲ್ ವ್ಹೀಲ್ಗಳನ್ನೂ ಸಹ ಬದಲಿಸಿ ಸ್ಪೋರ್ಟಿ ಲುಕ್ ನೀಡಲು 6 ಸ್ಪೋಕ್ನ ಅಲಾಯ್ ವ್ಹೀಲ್ಗಳನ್ನು ಅಳವಡಿಸಲಾಗಿದೆ.

ಸಿಜೆ 3 ಬಿ ಜೀಪ್ 4x4 ಎಸ್ಯುವಿಯಾಗಿದ್ದು, ಆಫ್ ರೋಡ್ಗಳಲ್ಲಿ ಸರಾಗವಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಜೀಪಿನಲ್ಲಿ ಹೈ ಹಾಗೂ ಲೋ ರೆಶಿಯೊದ 3 ಸ್ಪೀಡಿನ ಮ್ಯಾನುವಲ್ ಗೇರ್ಬಾಕ್ಸ್ ಅಳವಡಿಸಲಾಗಿದೆ. 1990ರಲ್ಲಿ ಈ ಜೀಪಿನಲ್ಲಿದ್ದ ಪೆಟ್ರೋಲ್ ಎಂಜಿನ್ ಅನ್ನು ಬದಲಿಸಿ ಹೈ ಸ್ಪೀಡಿನ ಡೈರೆಕ್ಟ್ ಇಂಜೆಕ್ಷನ್ ಎಂಜಿನ್ ಅಳವಡಿಸಲಾಯಿತು.
MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಮಹೀಂದ್ರಾ ಕಂಪನಿಯು ಯುಟಿಲಿಟಿ ವಾಹನಗಳನ್ನು ತಯಾರಿಸುವುದಕ್ಕೆ ಹೆಸರುವಾಸಿಯಾಗಿದೆ. ಮೊದಲಿನಿಂದಲೂ ಯುಟಿಲಿಟಿ ವಾಹನಗಳನ್ನು ತಯಾರಿಸುವುದಕ್ಕೆ ಹೆಚ್ಚಿನ ಗಮನ ನೀಡಿದ್ದ ಮಹೀಂದ್ರಾ ಈಗ ಭಾರತದ ಅತಿ ದೊಡ್ಡ ಯುಟಿಲಿಟಿ ವಾಹನ ತಯಾರಕ ಕಂಪನಿಯಾಗಿದೆ.
MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಕಾಲ ಬದಲಾದಂತೆ ಮಹೀಂದ್ರಾ ಕಂಪನಿಯ ತಯಾರಕ ವಿಧಾನಗಳೂ ಸಹ ಬದಲಾಗಿವೆ. ಮಹೀಂದ್ರಾ ಕಂಪನಿಯು ಸದ್ಯಕ್ಕೆ ಹೊಸ ತಲೆಮಾರಿನ ಥಾರ್ ವಾಹನವನ್ನು ಅಭಿವೃದ್ಧಿಪಡಿಸುತ್ತಿದೆ. ಈ ವಾಹನವನ್ನು ಹಲವಾರು ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ.
MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ದೆಹಲಿಯಲ್ಲಿ ನಡೆಯಲಿರುವ 2020ರ ಆಟೋ ಎಕ್ಸ್ ಪೋದಲ್ಲಿ ಈ ವಾಹನವನ್ನು ಪ್ರದರ್ಶಿಸುವ ಸಾಧ್ಯತೆಗಳಿವೆ. ಥಾರ್ ವಾಹನದ ಜೊತೆಗೆ ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಸ್ಕಾರ್ಪಿಯೊ ಹಾಗೂ ಎಕ್ಸ್ ಯುವಿ 500ಗಳನ್ನು ಸಹ ಅಭಿವೃದ್ಧಿಪಡಿಸುತ್ತಿದೆ.
ಎಲ್ಲಾ ಹೊಸ ವಾಹನಗಳನ್ನೂ ಹೊಸ ಪ್ಲಾಟ್ಫಾರಂನಲ್ಲಿ ತಯಾರಿಸಲಾಗುವುದು. ಈ ಎಲ್ಲಾ ವಾಹನಗಳೂ ಮಾರುಕಟ್ಟೆಯಲ್ಲಿರುವ ವಾಹನಗಳಿಗಿಂತ ಅಗಲವಾದ ಗಾತ್ರವನ್ನು ಹೊಂದಿರಲಿವೆ. ಇದರ ಜೊತೆಗೆ ಈ ವಾಹನಗಳು ಹೊಸ ಬಿಎಸ್ 6 ಎಂಜಿನ್ ಹೊಂದಿರಲಿವೆ.

2020ರ ಥಾರ್ ವಾಹನವು ಬಲಶಾಲಿಯಾದ ಎಂಜಿನ್ ಹಾಗೂ ಹೆಚ್ಚಿನ ಸುರಕ್ಷತಾ ಫೀಚರ್ಗಳನ್ನು ಹೊಂದಲಿರುವ ಕಾರಣಕ್ಕೆ, ಹೊಸದಾಗಿ ಬಿಡುಗಡೆಯಾಗಲಿರುವ ವಾಹನದ ಬೆಲೆಯು ಮಾರುಕಟ್ಟೆಯಲ್ಲಿರುವ ವಾಹನದ ಬೆಲೆಗಿಂತ ಹೆಚ್ಚಾಗಿರಲಿದೆ.