ಅಮೆರಿಕಾ, ರಷ್ಯಾ ಅಧ್ಯಕ್ಷರ ಕಾರುಗಳಲ್ಲಿರುವ ವಿಶೇಷತೆಗಳಿವು

ಜೂನ್ 16 ರಂದು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಅಮೆರಿಕಾ-ರಷ್ಯಾ ದೇಶಗಳ ಮಧ್ಯೆ ನಡೆದಿದ್ದ ಶೃಂಗಸಭೆಯಲ್ಲಿ ಅಮೆರಿಕಾ ಅಧ್ಯಕ್ಷರಾದ ಜೋ ಬಿಡನ್ ಹಾಗೂ ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಭಾಗವಹಿಸಿದ್ದರು.

ಅಮೆರಿಕಾ, ರಷ್ಯಾ ಅಧ್ಯಕ್ಷರ ಕಾರುಗಳಲ್ಲಿರುವ ವಿಶೇಷತೆಗಳಿವು

ಈ ಸಂದರ್ಭದಲ್ಲಿ ಇವರಿಬ್ಬರು ತಮ್ಮ ಕಾರುಗಳಲ್ಲಿ ಸಮಾವೇಶದ ಸ್ಥಳಕ್ಕೆ ಧಾವಿಸಿದರು. ಈ ಎರಡೂ ಕಾರುಗಳು ಐಷಾರಾಮಿ ಲುಕ್ ಹೊಂದಿಲ್ಲದಿದ್ದರೂ ಹೆಚ್ಚು ಶಕ್ತಿಯುತವಾಗಿವೆ. ಈ ಕಾರುಗಳು ಗುಂಡಿನ ದಾಳಿಯಿಂದ ಬಾಂಬ್ ದಾಳಿಯವರೆಗೆ ಎಲ್ಲಾ ರೀತಿಯ ದಾಳಿಯನ್ನು ಎದುರಿಸಲು ಸಮರ್ಥವಾಗಿವೆ.

ಅಮೆರಿಕಾ, ರಷ್ಯಾ ಅಧ್ಯಕ್ಷರ ಕಾರುಗಳಲ್ಲಿರುವ ವಿಶೇಷತೆಗಳಿವು

ಈ ಎರಡೂ ಕಾರುಗಳನ್ನು ದೇಶದ ಪ್ರಮುಖ ನಾಯಕರ ಸುರಕ್ಷತೆಗಾಗಿ ಲಕ್ಷಾಂತರ ಡಾಲರ್ ವೆಚ್ಚ ಮಾಡಿ ನಿರ್ಮಿಸಲಾಗಿದೆ. ಈ ಲೇಖನದಲ್ಲಿ ಈ ಕಾರುಗಳ ಫೀಚರ್ ಹಾಗೂ ಅವುಗಳ ವಿಶೇಷತೆಗಳನ್ನು ನೋಡೋಣ.

ಅಮೆರಿಕಾ, ರಷ್ಯಾ ಅಧ್ಯಕ್ಷರ ಕಾರುಗಳಲ್ಲಿರುವ ವಿಶೇಷತೆಗಳಿವು

ಜೋ ಬಿಡೆನ್ ಕ್ಯಾಡಿಲಾಕ್ ಲಿಮೋಸಿನ್:

ಜೋ ಬಿಡನ್‌ರವರು ಕ್ಯಾಡಿಲಾಕ್ ಲಿಮೋಸಿನ್ ಕಾರ್ ಅನ್ನು ಹೊಂದಿದ್ದಾರೆ. ಈ ಕಾರು ಹೆಚ್ಚು ಸುರಕ್ಷತಾ ಫೀಚರ್'ಗಳನ್ನು ಹೊಂದಿದೆ. ಕ್ಯಾಡಿಲಾಕ್ ಲಿಮೋಸಿನ್ ಕಾರಿನಲ್ಲಿ ನೈಟ್ ಕ್ಲಿಯರ್ ವಿಷನ್, ಟಿಯರ್ ಗ್ಯಾಸ್, ಕಮ್ಯೂನಿಕೇಷನ್, ಆಕ್ಸಿಜನ್, ಆಟೋಮ್ಯಾಟಿಕ್ ಫೈರ್ ಎಕ್ಸ್ ಟಿಂಗ್ಯುಷರ್, ಚಿಕ್ಕ ಬ್ಲಡ್ ಬ್ಯಾಂಕ್, ಹಲವಾರು ವಿಶೇಷ ಲಕ್ಷಣಗಳನ್ನು ಹೊಂದಿರುವ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಅಮೆರಿಕಾ, ರಷ್ಯಾ ಅಧ್ಯಕ್ಷರ ಕಾರುಗಳಲ್ಲಿರುವ ವಿಶೇಷತೆಗಳಿವು

ಈ ಕಾರಣಕ್ಕಾಗಿಯೇ ಈ ಕಾರ್ ಅನ್ನು ಬೀಸ್ಟ್ ಎಂದು ಕರೆಯಲಾಗುತ್ತದೆ. ಈ ಕಾರನ್ನು ಜನರಲ್ ಮೋಟಾರ್ಸ್ ವಿನ್ಯಾಸಗೊಳಿಸಿದೆ. ಕ್ಯಾಡಿಲಾಕ್ ಲಿಮೋಸಿನ್ ಕಾರ್ ಅನ್ನು ಅಲ್ಯೂಮಿನಿಯಂ, ಟಿಟಾನಿಯಂ ಹಾಗೂ ಸೆರಾಮಿಕ್ ಸಂಯೋಜನೆಯಿಂದ ತಯಾರಿಸಲಾಗಿದೆ.

ಅಮೆರಿಕಾ, ರಷ್ಯಾ ಅಧ್ಯಕ್ಷರ ಕಾರುಗಳಲ್ಲಿರುವ ವಿಶೇಷತೆಗಳಿವು

20,000 ಪೌಂಡ್‌ ತೂಕವನ್ನು ಹೊಂದಿರುವ ಈ ಕಾರಿನ ಬಾಡಿಯಲ್ಲಿ 8 ಇಂಚಿನ ಬುಲೆಟ್ ಪ್ರೂಫ್ ಅಳವಡಿಸಲಾಗಿದೆ. ಈ ಬುಲೆಟ್ ಪ್ರೂಫ್, ಗುಂಡುಗಳನ್ನು ಮಾತ್ರವಲ್ಲದೆ ಬಾಂಬ್‌ಗಳನ್ನು ಸಹ ತಡೆದುಕೊಳ್ಳಬಲ್ಲದು.

ಅಮೆರಿಕಾ, ರಷ್ಯಾ ಅಧ್ಯಕ್ಷರ ಕಾರುಗಳಲ್ಲಿರುವ ವಿಶೇಷತೆಗಳಿವು

ಈ ಕಾರಿನ ಮಿರರ್'ಗಳನ್ನು ಐದು ಲೇಯರ್'ಗಳಿಂದ ತಯಾರಿಸಲಾಗಿದೆ. ಮೂರು ಇಂಚು ಉದ್ದವಿರುವ ಈ ಮಿರರ್ ಎಲ್ಲಾ ರೀತಿಯ ಗುಂಡಿನ ದಾಳಿಯನ್ನು ತಡೆದುಕೊಳ್ಳುತ್ತದೆ. ಕ್ಯಾಡಿಲಾಕ್ ಲಿಮೋಸಿನ್‌ ಕಾರಿನ ಡೋರುಗಳು ಬೋಯಿಂಗ್ 757 ವಿಮಾನಗಳಲ್ಲಿ ಕಂಡುಬರುವಷ್ಟು ಗಟ್ಟಿಮುಟ್ಟಾಗಿದ್ದು, ಸುರಕ್ಷಿತವಾಗಿವೆ.

ಅಮೆರಿಕಾ, ರಷ್ಯಾ ಅಧ್ಯಕ್ಷರ ಕಾರುಗಳಲ್ಲಿರುವ ವಿಶೇಷತೆಗಳಿವು

ಈ ಕಾರಿನ ಟಯರ್‌ಗಳು ಸಹ ಹೆಚ್ಚು ಬಾಳಿಕೆ ಬರುತ್ತವೆ. ಈ ಟಯರ್‌ಗಳು ಬೆಂಕಿ ಹಾಗೂ ಚೂಪಾದ ಮೊಳೆಗಳಿಂದಲೂ ಹಾನಿಗೊಳಗಾಗುವುದಿಲ್ಲ. ಅಂದರೆ ಈ ಟಯರ್‌ಗಳು ಪಂಕ್ಚರ್ ಆಗುವುದಿಲ್ಲ.

ಅಮೆರಿಕಾ, ರಷ್ಯಾ ಅಧ್ಯಕ್ಷರ ಕಾರುಗಳಲ್ಲಿರುವ ವಿಶೇಷತೆಗಳಿವು

ಈ ಕಾರಿನ ಫ್ಯೂಯಲ್ ಟ್ಯಾಂಕ್ ಸಹ ಇದೇ ರೀತಿಯ ಸುರಕ್ಷತಾ ಫೀಚರ್'ಗಳನ್ನು ಹೊಂದಿದೆ. ಅಮೆರಿಕಾ ಅಧ್ಯಕ್ಷರು ಕುಳಿತುಕೊಳ್ಳುವ ಸ್ಥಳವು ಖಾಸಗಿ ಕೋಣೆಯಂತಿದೆ. ಈ ಕಾರಿನಲ್ಲಿ ಐದು ಜನರು ಕುಳಿತು ಪ್ರಯಾಣಿಸಬಹುದು.

ಅಮೆರಿಕಾ, ರಷ್ಯಾ ಅಧ್ಯಕ್ಷರ ಕಾರುಗಳಲ್ಲಿರುವ ವಿಶೇಷತೆಗಳಿವು

ಜನರಲ್ ಮೋಟಾರ್ಸ್ ಈ ಕಾರಿನಲ್ಲಿ 5.0 ಲೀಟರ್ ಡೀಸೆಲ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ ಉತ್ಪಾದಿಸುವ ಪವರ್ ಅಂಕಿ ಅಂಶಗಳ ಬಗ್ಗೆ ಕಂಪನಿಯು ಇದುವರೆಗೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ಕಾರು ಪ್ರತಿ ಲೀಟರ್ ಡೀಸೆಲ್'ಗೆ 3 ಕಿ.ಮೀ ಮೈಲೇಜ್ ನೀಡುತ್ತದೆ.

ಅಮೆರಿಕಾ, ರಷ್ಯಾ ಅಧ್ಯಕ್ಷರ ಕಾರುಗಳಲ್ಲಿರುವ ವಿಶೇಷತೆಗಳಿವು

ವ್ಲಾಡಿಮಿರ್ ಪುಟಿನ್ ಔರಾಸ್ ಸೆನೆಟ್ ಲಿಮೋಸಿನ್:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಳಿಯಿರುವ ಔರಾಸ್ ಸೆನೆಟ್ ಲಿಮೋಸಿನ್ ಕಾರು ಅಮೆರಿಕಾ ಅಧ್ಯಕ್ಷ ಜೋ ಬಿಡನ್'ರವರ ಬಳಿಯಿರುವ ಕ್ಯಾಡಿಲಾಕ್ ಲಿಮೋಸಿನ್ ಕಾರಿನಂತೆಯೇ ಇದೆ.

ಅಮೆರಿಕಾ, ರಷ್ಯಾ ಅಧ್ಯಕ್ಷರ ಕಾರುಗಳಲ್ಲಿರುವ ವಿಶೇಷತೆಗಳಿವು

ಈ ಕಾರನ್ನು ರಷ್ಯಾದ ಐಷಾರಾಮಿ ಕಾರು ತಯಾರಕ ಕಂಪನಿಯಾದ ನಾಮಿ ಅಭಿವೃದ್ಧಿಪಡಿಸಿದೆ. ಈ ಕಾರು 21.7 ಅಡಿ ಉದ್ದವಿದ್ದು, 14,330 ಪೌಂಡ್‌ ತೂಕವನ್ನು ಹೊಂದಿದೆ.

ಅಮೆರಿಕಾ, ರಷ್ಯಾ ಅಧ್ಯಕ್ಷರ ಕಾರುಗಳಲ್ಲಿರುವ ವಿಶೇಷತೆಗಳಿವು

ಈ ಕಾರಿನಲ್ಲಿ ಅಳವಡಿಸಿರುವ 4.4 ಲೀಟರ್ ವಿ 8 ಎಂಜಿನ್ 598 ಬಿಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಹೆಚ್ಚುಪರಿಣಾಮಕಾರಿಯಾಗಿಸಲು ಪ್ರಯತ್ನಿಸಲಾಗುತ್ತಿದೆ.

ಅಮೆರಿಕಾ, ರಷ್ಯಾ ಅಧ್ಯಕ್ಷರ ಕಾರುಗಳಲ್ಲಿರುವ ವಿಶೇಷತೆಗಳಿವು

ಅಂದರೆ ಈ ಕಾರಿನಲ್ಲಿ 6.6 ಲೀಟರ್ ವಿ 12 ಎಂಜಿನ್ ಅಳವಡಿಸಲು ನಿರ್ಧರಿಸಲಾಗಿದೆ. ಈ ಎಂಜಿನ್ 857 ಬಿಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಾರಿನ ಒಟ್ಟು ಮೌಲ್ಯ 2,45,000 ಅಮೆರಿಕನ್ ಡಾಲರ್'ಗಳಾಗಿದೆ.

ಅಮೆರಿಕಾ, ರಷ್ಯಾ ಅಧ್ಯಕ್ಷರ ಕಾರುಗಳಲ್ಲಿರುವ ವಿಶೇಷತೆಗಳಿವು

ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರ ಲಿಮೋಸಿನ್ ಕಾರನ್ನು 1.5 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಔರಾಸ್ ಸೆನೆಟ್ ಕಾರು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದರೂ ಕಾರಿನಲ್ಲಿರುವವರನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ.

ಅಮೆರಿಕಾ, ರಷ್ಯಾ ಅಧ್ಯಕ್ಷರ ಕಾರುಗಳಲ್ಲಿರುವ ವಿಶೇಷತೆಗಳಿವು

ಈ ಕಾರಿನಲ್ಲಿ ಇನ್ನೂ ಹಲವು ಫೀಚರ್'ಗಳಿವೆ ಎಂದು ಹೇಳಲಾಗಿದೆ. ಆದರೆ ರಷ್ಯಾ ಸರ್ಕಾರವು ಸುರಕ್ಷತೆಯ ದೃಷ್ಟಿಯಿಂದ ಈ ಕಾರಿನ ಸಂಪೂರ್ಣ ವಿವರಗಳನ್ನು ಬಿಡುಗಡೆ ಮಾಡಿಲ್ಲ.

Most Read Articles

Kannada
English summary
Features in US President's and Russian President's cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X