ಯುದ್ದ ವಿಮಾನದ ಟಯರ್ ಕಳುವು ಮಾಡಿದ ಖದೀಮರು

ಭಾರತದಲ್ಲಿ ವಾಹನಗಳ ಕಳ್ಳತನ ಸಾಮಾನ್ಯವೆಂದೇ ಹೇಳಬಹುದು. ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಳುವಾಗುತ್ತಿವೆ. ಒಂದು ರಾಜ್ಯಗಳಲ್ಲಿ ಕಳುವು ಮಾಡುವ ವಾಹನಗಳನ್ನು ಮತ್ತೊಂದು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತದೆ. ಅದೂ ಸಹ ಕಡಿಮೆ ಬೆಲೆಗೆ. ವಾಹನಗಳಲ್ಲಿ ಎಷ್ಟೇ ಹೈಟೆಕ್ ಸಾಧನಗಳಿದ್ದರೂ ವಾಹನಗಳ್ಳರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಯೇ ವಾಹನಗಳನ್ನು ಕಳುವು ಮಾಡುತ್ತಿದ್ದಾರೆ.

ಯುದ್ದ ವಿಮಾನದ ಟಯರ್ ಕಳುವು ಮಾಡಿದ ಖದೀಮರು

ವಾಹನಗಳನ್ನು ಕಳುವು ಮಾಡಲು ಸಾಧ್ಯವಾಗದಿದ್ದರೆ, ಅವುಗಳ ಬಿಡಿ ಭಾಗಗಳನ್ನು ಇಲ್ಲವೇ ಟಯರ್ ಗಳನ್ನು ಕಳುವು ಮಾಡುತ್ತಾರೆ. ಇಂತಹುದೇ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯಲ್ಲಿ ಖದೀಮರು ಯುದ್ದ ವಿಮಾನದ ಟಯರ್ ಅನ್ನು ಕಳುವು ಮಾಡಿದ್ದಾರೆ. ಲಕ್ನೋದಿಂದ ಸೇನಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಟ್ರಕ್‌ನಲ್ಲಿದ್ದ ಮಿರಾಜ್ 2000 ಯುದ್ಧ ವಿಮಾನದ ಟಯರ್ ಗಳನ್ನು ಕದ್ದ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿದ್ದಾರೆ.

ಯುದ್ದ ವಿಮಾನದ ಟಯರ್ ಕಳುವು ಮಾಡಿದ ಖದೀಮರು

ಬಕ್ಷಿ ಕಾ ತಲಾಬ್ ವಾಯುನೆಲೆಯಿಂದ ಜೋಧ್‌ಪುರ ವಾಯುನೆಲೆಗೆ ಸೇನಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಟ್ರಕ್‌ನಿಂದ ಫೈಟರ್ ಜೆಟ್‌ ಯುದ್ಧ ವಿಮಾನದ ಟಯರ್ ಅನ್ನು ಕಳ್ಳರು ಕಳುವು ಮಾಡಿದ್ದಾರೆ. ವರದಿಗಳ ಪ್ರಕಾರ, ನವೆಂಬರ್ 27 ರಂದು ಮುಂಜಾನೆ 2 ಗಂಟೆಗೆ ಲಕ್ನೋದ ಶಹೀದ್ ಪಥ್ ಬಳಿ ಟ್ರಕ್ ಜೋಧ್‌ಪುರ ವಾಯುನೆಲೆಯ ಕಡೆಗೆ ಹೋಗುತ್ತಿದ್ದಾಗ ಕಳ್ಳತನ ನಡೆದಿದೆ.

ಯುದ್ದ ವಿಮಾನದ ಟಯರ್ ಕಳುವು ಮಾಡಿದ ಖದೀಮರು

ಕಪ್ಪು ಬಣ್ಣದ ಸ್ಕಾರ್ಪಿಯೊ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಟ್ರಾಫಿಕ್ ಜಾಮ್‌ನ ಲಾಭ ಪಡೆದು ಮೀರಜ್ ಫೈಟರ್ ಜೆಟ್‌ನ ಟಯರ್ ಅನ್ನು ಕದ್ದಿದ್ದಾರೆ ಎಂದು ಟ್ರಕ್ ಚಾಲಕ ಹೇಮ್ ಸಿಂಗ್ ರಾವತ್ ಹೇಳಿದ್ದಾರೆ. ಟ್ರಾಫಿಕ್ ಜಾಮ್‌ನಿಂದಾಗಿ ಸಣ್ಣ ವಾಹನಗಳು ಮುಂದೆ ಸಾಗುತ್ತಿದ್ದರೆ, ದೊಡ್ಡ ವಾಹನಗಳು ಜಾಮ್‌ನಲ್ಲಿ ಸಿಲುಕಿಕೊಂಡಿದ್ದವು ಎಂದು ಟ್ರಕ್ ಚಾಲಕ ಹೇಳಿದ್ದಾರೆ.

ಯುದ್ದ ವಿಮಾನದ ಟಯರ್ ಕಳುವು ಮಾಡಿದ ಖದೀಮರು

ಕಳ್ಳತನವಾಗಿರುವ ವಿಷಯ ತಿಳಿದ ತಕ್ಷಣ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೆಲ ಸಮಯದ ನಂತರ ಪೊಲೀಸರ ತಂಡವು ಸ್ಥಳಕ್ಕೆ ಬಂದು ಟ್ರಕ್‌ನಿಂದ ಮಿರಾಜ್ 2000 ಫೈಟರ್ ಜೆಟ್‌ನ ಒಂದು ಟಯರ್ ಅನ್ನು ಕಳುವು ಮಾಡಿರುವುದರ ಬಗ್ಗೆ ಪರಿಶೀಲಿಸಿದರು. ಮಿರಾಜ್ 2000 ಯುದ್ಧ ವಿಮಾನದ ಟಯರ್‌ಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್‌ನ ಗಾಡಿಯಲ್ಲಿ ವಾಯುಪಡೆಯ ಇತರ ಸಾಮಗ್ರಿಗಳು ಇದ್ದವು.

ಯುದ್ದ ವಿಮಾನದ ಟಯರ್ ಕಳುವು ಮಾಡಿದ ಖದೀಮರು

ಫೈಟರ್ ಜೆಟ್‌ಗಳಲ್ಲಿ ಬಳಸಲಾಗುವ ಹಲವು ಪ್ರಮುಖ ಸಲಕರಣೆಗಳನ್ನೂ ಈ ಟ್ರಕ್ ನಲ್ಲಿ ಕೊಂಡೊಯ್ಯಲಾಗುತ್ತಿತ್ತು. ವರದಿಗಳ ಪ್ರಕಾರ, ಈ ಟ್ರಕ್‌ನಲ್ಲಿ ಇಂಧನ ತುಂಬುವ ವಾಹನ, ಬಾಂಬ್ ಟ್ರಾಲಿ, ಯುನಿವರ್ಸಲ್ ಟ್ರಾಲಿ, ವಿಮಾನದ ಮುಖ್ಯ ಟಯರ್, ನೋಸ್ ಟಯರ್, ಮೆಟ್ಟಿಲು ಹಾಗೂ ಟ್ರಾಲಿಯಂತಹ ಉಪಕರಣಗಳನ್ನು ಸಹ ಸಾಗಿಸಲಾಗುತ್ತಿತ್ತು. ಆದರೆ ಈ ಎಲ್ಲಾ ಸಾಧನಗಳು ಸುರಕ್ಷಿತವಾಗಿರುವುದು ಕಂಡು ಬಂದಿದೆ. ಲಕ್ನೋದ ಆಶಿಯಾನಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಕಳ್ಳರ ವಿರುದ್ಧ ಐಪಿಸಿ ಸೆಕ್ಷನ್ 379 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಯುದ್ದ ವಿಮಾನದ ಟಯರ್ ಕಳುವು ಮಾಡಿದ ಖದೀಮರು

ಮಿರಾಜ್ 2000 ಯುದ್ಧ ವಿಮಾನದ ವಿಶೇಷತೆ:

ಮಿರಾಜ್ 2000 ಅತ್ಯಾಧುನಿಕ ಯುದ್ಧ ವಿಮಾನವಾಗಿದ್ದು, ಇದನ್ನು ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ​​ಕಂಪನಿ ತಯಾರಿಸಿದೆ. ರಫೇಲ್ ಯುದ್ಧ ವಿಮಾನವನ್ನು ತಯಾರಿಸಿದ್ದು ಸಹ ಇದೇ ಕಂಪನಿ ಎಂಬುದು ಗಮನಾರ್ಹ. ಮಿರಾಜ್ 2000 ಯುದ್ದ ವಿಮಾನವು 47 ಅಡಿ ಉದ್ದ, 7,500 ಕೆ.ಜಿ ತೂಕವನ್ನು ಹೊಂದಿದೆ. ಈ ವಿಮಾನವು ಪ್ರತಿ ಗಂಟೆಗೆ ಗರಿಷ್ಠ 2,000 ಕಿ.ಮೀ ವೇಗದಲ್ಲಿ ಹಾರಬಲ್ಲದು.

ಯುದ್ದ ವಿಮಾನದ ಟಯರ್ ಕಳುವು ಮಾಡಿದ ಖದೀಮರು

ಈಗ ಭಾರತೀಯ ವಾಯುಪಡೆಯು ಡಬಲ್ ಇಂಜಿನ್‌ನ ನಾಲ್ಕನೇ ತಲೆಮಾರಿನ ಮಿರಾಜ್ 2000 MK 2 ಮಲ್ಟಿರೋಲ್ ಯುದ್ಧ ವಿಮಾನವನ್ನು ಬಳಸುತ್ತಿದೆ. ಭಾರತವು 1980 ರ ದಶಕದಲ್ಲಿ ಮೊದಲ ಬಾರಿಗೆ ಈ ಯುದ್ದ ವಿಮಾನವನ್ನು ಆರ್ಡರ್ ಮಾಡಿತು. ಕಾರ್ಗಿಲ್ ಯುದ್ಧದಲ್ಲಿ ಮಿಗ್ 21 ಜೊತೆಗೆ ಮಿರಾಜ್ 2000 ಯುದ್ದ ವಿಮಾನವೂ ಸಹ ಪ್ರಮುಖ ಪಾತ್ರವನ್ನು ವಹಿಸಿತ್ತು.

ಯುದ್ದ ವಿಮಾನದ ಟಯರ್ ಕಳುವು ಮಾಡಿದ ಖದೀಮರು

2015 ರಲ್ಲಿ ಕಂಪನಿಯು ನವೀಕರಿಸಿದ ಮಿರಾಜ್ 2000 ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಿತು. ಈ ನವೀಕರಿಸಿದ ವಿಮಾನಗಳು ಹೊಸ ರಾಡಾರ್ ಹಾಗೂ ಎಲೆಕ್ಟ್ರಾನಿಕ್ ಸಿಸ್ಟಂಗಳನ್ನು ಹೊಂದಿವೆ. ಇದರಿಂದ ಈ ವಿಮಾನಗಳ ಫೈರ್‌ಪವರ್ ಹಾಗೂ ವಿಚಕ್ಷಣ ಸಾಮರ್ಥ್ಯ ಸಹ ಹೆಚ್ಚಿದೆ.

ಯುದ್ದ ವಿಮಾನದ ಟಯರ್ ಕಳುವು ಮಾಡಿದ ಖದೀಮರು

ಮಿರಾಜ್ 2000 ಯುದ್ದ ವಿಮಾನವನ್ನು ಭಾರತ ಮಾತ್ರವಲ್ಲದೇ ವಿಶ್ವದ ಒಂಬತ್ತು ದೇಶಗಳ ವಾಯುಪಡೆಗಳು ಬಳಸುತ್ತಿವೆ. ಎರಡು ಎಂಜಿನ್ ಇರುವ ಕಾರಣ ಮಿರಾಜ್ 2000 ಯುದ್ದ ವಿಮಾನವು ಕ್ರ್ಯಾಶ್ ಆಗುವ ಸಾಧ್ಯತೆಗಳು ತುಂಬಾ ಕಡಿಮೆ. ಮಿರಾಜ್ 2000 ವಿಮಾನವು ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸಬಲ್ಲದು. ಈ ವಿಮಾನವು ಹೆಚ್ಚು ಹೆಚ್ಚು ಬಾಂಬುಗಳನ್ನು ಅಥವಾ ಕ್ಷಿಪಣಿಗಳನ್ನು ಬೀಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಯುದ್ದ ವಿಮಾನದ ಟಯರ್ ಕಳುವು ಮಾಡಿದ ಖದೀಮರು

ಇದರ ಜೊತೆಯಲ್ಲಿ ಗಾಳಿಯಲ್ಲಿ ಶತ್ರುಗಳನ್ನು ಸುಲಭವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನವು ಆಕಾಶದಿಂದ ಆಕಾಶ ಹಾಗೂ ಆಕಾಶದಿಂದ ನೆಲಕ್ಕೆ ಕ್ಷಿಪಣಿಗಳನ್ನು ಚಿಮ್ಮಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನವು ಲೇಸರ್ ನಿರ್ದೇಶಿತ ಕ್ಷಿಪಣಿಗಳು ಹಾಗೂ ಪರಮಾಣು ಚಾಲಿತ ಕ್ರೂಸ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಸಹ ಹೊಂದಿದೆ.

ಗಮನಿಸಿ: ಈ ಲೇಖನದಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Fighter jet tyre stolen in uttar pradesh details
Story first published: Friday, December 3, 2021, 17:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X