Just In
- 15 min ago
ವಿನೂತನ ವೈಶಿಷ್ಟ್ಯತೆಯೊಂದಿಗೆ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾದ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350
- 52 min ago
ಹೊಸ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಲಾಂಚ್ ಎಡಿಷನ್ ಬಿಡುಗಡೆ
- 1 hr ago
ಸ್ಪ್ಲೆಂಡರ್ ಬೈಕುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ ಹೀರೋ ಮೋಟೊಕಾರ್ಪ್
- 2 hrs ago
2021ರ ಸ್ವಿಫ್ಟ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ
Don't Miss!
- News
ಅಂತರರಾಷ್ಟ್ರೀಯ ವಿಮಾನ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಕೆ
- Movies
ನಿರ್ದೇಶಕನಿಗೆ ಅವಮಾನ: ಸ್ಟಾರ್ ನಟ ಆಗಿದ್ರೆ ಸುಮ್ಮನೆ ಬಿಡುತ್ತಿದ್ರಾ? ಚಂದ್ರಶೇಖರ್ ಅಸಮಾಧಾನ
- Finance
ಮುಂದಿನ 6 ತಿಂಗಳಿನಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಕಾರುಗಳು, ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಗಲಿವೆ!
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್
ಭಾರತೀಯರು ಭೋಜನ ಪ್ರಿಯರು. ಭಾರತದ ಪ್ರತಿಯೊಂದು ಮೂಲೆಯಲ್ಲೂ ವಿಭಿನ್ನ ಭಕ್ಷ್ಯಗಳನ್ನು ನೀಡಲಾಗುತ್ತದೆ. ಈಗ ವಿಭಿನ್ನ ಬಗೆಯ ಭಕ್ಷ್ಯವೊಂದನ್ನು ನೀಡಲಾಗುತ್ತಿದೆ. ಆ ಭಕ್ಷ್ಯದ ಹೆಸರು ಬುಲೆಟ್ ಥಾಲಿ.

ಈ ಬುಲೆಟ್ ಥಾಲಿಯನ್ನು ನಿಗದಿಪಡಿಸಿದ ಸಮಯದಲ್ಲಿ ತಿಂದು ಮುಗಿಸುವವರಿಗೆ ರಾಯಲ್ ಎನ್‌ಫೀಲ್ಡ್‌ನ ಬೈಕ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಪುಣೆಯಲ್ಲಿರುವ ರೆಸ್ಟೋರೆಂಟ್ ಗ್ರಾಹಕರನ್ನು ಆಕರ್ಷಿಸಲು ಊಟದ ಸವಾಲ್ ಅನ್ನು ನೀಡುತ್ತಿದೆ. ಈ ಸವಾಲನ್ನು ಪೂರ್ಣಗೊಳಿಸುವ ಗ್ರಾಹಕರಿಗೆ ಬುಲೆಟ್ ಬೈಕ್ ಅನ್ನು ನೀಡಲಾಗುವುದು.

ಈ ರೆಸ್ಟೋರೆಂಟ್'ಗೆ ಬರುವ ಗ್ರಾಹಕರಿಗಾಗಿ ಈ ವಿಶಿಷ್ಟವಾದ ಥಾಲಿಯನ್ನು ಪರಿಚಯಿಸಲಾಗಿದೆ. ಈ ಥಾಲಿಗೆ ಬುಲೆಟ್ ಥಾಲಿ ಎಂಬ ಹೆಸರಿಡಲಾಗಿದೆ. ಈ ಥಾಲಿಯನ್ನು ಒಂದು ಗಂಟೆಯೊಳಗೆ ತಿಂದು ಮುಗಿಸುವವರಿಗೆ ರೆಸ್ಟೋರೆಂಟ್ ಬುಲೆಟ್ ಬೈಕ್ ಅನ್ನು ಉಚಿತವಾಗಿ ನೀಡಲಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಆದರೆ ಈ ಥಾಲಿಯನ್ನು ತಿಂದು ಮುಗಿಸುವುದು ಅಷ್ಟು ಸುಲಭವಲ್ಲ. ಈ ಬುಲೆಟ್ ಥಾಲಿಯಲ್ಲಿ 4 ಕೆ.ಜಿ ಮಟನ್ ಹಾಗೂ ಹುರಿದ ಮೀನು ಸೇರಿದಂತೆ ಸುಮಾರು 12 ಬಗೆಯ ವಿವಿಧ ಭಕ್ಷ್ಯಗಳನ್ನು ನೀಡಲಾಗುತ್ತದೆ. ಈ ವಿಶಿಷ್ಟವಾದ ಥಾಲಿಯನ್ನು ತಯಾರಿಸಲು 55 ಜನರು ಕೆಲಸ ಮಾಡುತ್ತಾರೆ.

ಬುಲೆಟ್ ಪ್ಲೇಟ್ ಚಾಲೆಂಜ್ ಎರಡು ಆಯ್ಕೆಗಳನ್ನು ಹೊಂದಿದೆ
ಈ ಬುಲೆಟ್ ಥಾಲಿ ಚಾಲೆಂಜ್‌ನಲ್ಲಿ ಎರಡು ಆಯ್ಕೆಗಳಿವೆ. ಮೊದಲನೇ ಆಯ್ಕೆಯಲ್ಲಿ ರೂ.4444 ಬೆಲೆಯ ದೊಡ್ಡ ಬುಲೆಟ್ ಪ್ಲೇಟ್ ಖರೀದಿಸಿ ಇಬ್ಬರು ಅದನ್ನು ಒಂದು ಗಂಟೆಯಲ್ಲಿ ತಿಂದು ಮುಗಿಸಿದರೆ, ಹೊಸ ಎನ್‌ಫೀಲ್ಡ್ ಬುಲೆಟ್ ಬೈಕ್ ಅನ್ನು ಉಚಿತವಾಗಿ ಕೊಂಡೊಯ್ಯಬಹುದು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಎರಡನೇ ಆಯ್ಕೆಯಲ್ಲಿ ರೂ.2500 ಮೌಲ್ಯದ ಸಣ್ಣ ಬುಲೆಟ್ ಪ್ಲೇಟ್ ಖರೀದಿಸಿ ಅದನ್ನು ಒಂದು ಗಂಟೆಯಲ್ಲಿ ತಿಂದು ಮುಗಿಸಿದರೆ, ಹೊಸ ಎನ್‌ಫೀಲ್ಡ್ ಬುಲೆಟ್ ಬೈಕ್ ಅನ್ನು ಕೊಂಡೊಯ್ಯಬಹುದು.

ಕೋವಿಡ್ -19 ಹಿನ್ನೆಲೆಯಲ್ಲಿ ರೆಸ್ಟೋರೆಂಟ್'ಗಳು ಗ್ರಾಹಕರ ಕೊರತೆಯನ್ನು ಎದುರಿಸುತ್ತಿವೆ. ಈ ಕಾರಣಕ್ಕೆ ಗ್ರಾಹಕರನ್ನು ಆಕರ್ಷಿಸಲು ಈ ರೆಸ್ಟೋರೆಂಟ್ ಬುಲೆಟ್ ಥಾಲಿ ಸ್ಪರ್ಧೆಯನ್ನು ಆರಂಭಿಸಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಸ್ಪರ್ಧೆಗಾಗಿ ರೆಸ್ಟೋರೆಂಟ್‌ನ ಹೊರಗೆ 5 ಬುಲೆಟ್ ಬೈಕ್‌ಗಳನ್ನು ನಿಲ್ಲಿಸಲಾಗಿದೆ. ರೆಸ್ಟೋರೆಂಟ್‌ನಲ್ಲಿ ಆರಂಭಿಸಿರುವ ಬುಲೆಟ್ ಥಾಲಿ ಚಾಲೆಂಜ್ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ಈ ಸವಾಲನ್ನು ಪ್ರಯತ್ನಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ರೆಸ್ಟೋರೆಂಟ್ ಮಾಲೀಕರು ಹೇಳಿದ್ದಾರೆ.

ಇದುವರೆಗೆ ಮಹಾರಾಷ್ಟ್ರದ ಸೊಲ್ಲಾಪುರದ ನಿವಾಸಿಯಾದ ಸೋಮನಾಥ್ ಪವಾರ್ ಎಂಬುವವರು ಮಾತ್ರ ಒಂದು ಗಂಟೆಯೊಳಗೆ ಬುಲೆಟ್ ಥಾಲಿಯನ್ನು ಪೂರ್ತಿಯಾಗಿ ತಿಂದು ಮುಗಿಸಲು ಯಶಸ್ವಿಯಾಗಿದ್ದಾರೆ. ಅವರಿಗೆ ಬುಲೆಟ್ ಬೈಕ್ ಅನ್ನು ಬಹುಮಾನವಾಗಿ ನೀಡಲಾಗಿದೆ.