ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಅವಘಡ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಇವಿ ವಾಹನಗಳಲ್ಲಿ ಕಳಪೆ ಬಿಡಿಭಾಗಗಳಿಂದ ಇತ್ತೀಚೆಗೆ ಗ್ರಾಹಕರ ಟೀಕೆಗೆ ಗುರಿಯಾಗಿದ್ದ ಒಕಿನಾವ ಕಂಪನಿಯ ಮಾರಾಟ ಮಳಿಗೆಯಲ್ಲಿಯೇ ಇದೀಗ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ.

ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಒಕಿನಾವ ಕಂಪನಿಯು ಕರ್ನಾಟಕ ಸೇರಿದಂತೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಇವಿ ಸ್ಕೂಟರ್ ಮಾರಾಟ ಮಳಿಗೆಗಳನ್ನು ಹೊಂದಿದ್ದು, ಕಂಪನಿಯು ಇತ್ತೀಚೆಗೆಷ್ಟೇ ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವಾದ ಮಂಗಳೂರಿನಲ್ಲೂ ಕೂಡಾ ಇವಿ ಸ್ಕೂಟರ್ ಮಳಿಗೆಯನ್ನು ಆರಂಭಿಸಿತ್ತು. ಇವಿ ಸ್ಕೂಟರ್ ಮಾರಾಟದಲ್ಲಿ ಸದ್ಯ ಎರಡನೇ ಸ್ಥಾನದಲ್ಲಿರುವ ಒಕಿನಾವ ಕಂಪನಿಯು ಗ್ರಾಹಕರ ಬೇಡಿಕೆ ಪ್ರಮುಖ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಇವಿ ಸ್ಕೂಟರ್ ಮಾರಾಟ ಹೊಂದಿರುವ ಒಕಿನಾವ ಕಂಪನಿಯು ಉತ್ತಮ ಮೈಲೇಜ್ ಬ್ಯಾಟರಿ ಒದಗಿಸುತ್ತಿದ್ದರೂ ಉತ್ಪನ್ನಗಳಲ್ಲಿನ ಸುರಕ್ಷತೆ ವಿಚಾರದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ.

ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಇದಕ್ಕೆ ಪೂರಕ ಎನ್ನುವಂತೆ ದೇಶದ ಪ್ರಮುಖ ಕಡೆಗಳಲ್ಲಿ ಒಕಿನಾವ ಸ್ಕೂಟರ್ ಮಾದರಿಗಳಲ್ಲಿಯೇ ಹೆಚ್ಚಿನ ಮಟ್ಟದ ಅಗ್ನಿ ಅವಘಡಗಳು ಸಂಭವಿಸಿದ್ದು, ಇದೀಗ ಮಂಗಳೂರಿನಲ್ಲಿರುವ ಮಾರಾಟ ಮಳಿಗೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಅಗ್ನಿ ಅವಘಡದಲ್ಲಿ ಮಾರಾಟ ಮಳಿಗೆಯಲ್ಲಿದ್ದ ಹತ್ತಾರು ಇವಿ ಸ್ಕೂಟರ್‌ಗಳು ಸುಟ್ಟು ಕರಕಲಾಗಿರುವ ಮಾಹಿತಿಗಳಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಬೆಂಕಿ ಹೊತ್ತಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಯು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಘಟನೆಯಲ್ಲಿ ಹತ್ತಾರು ಇವಿ ಸ್ಕೂಟರ್‌ಗಳ ಜೊತೆಗೆ ಸಾಮಾನ್ಯ ವಾಹನಗಳು ಕೂಡಾ ಅಗ್ನಿ ಜ್ವಾಲೆಗೆ ಕರಕಲಾಗಿವೆ.

ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಘಟನೆ ಕುರಿತು ಸದ್ಯ ತನಿಖೆ ನಡೆಯುತ್ತಿದ್ದು, ಘಟನೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಕಟ್ಟಡ ಮಾಲೀಕರ ಹೇಳಿಕೆಯ ಪ್ರಕಾರ ಬೆಂಕಿ ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿಯೇ ಕಾಣಿಸಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಆದರೆ ಶಾರ್ಟ್ ಸರ್ಕ್ಯೂಟ್ ನಿಂದಲೂ ಈ ಅಗ್ನಿದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಶೀಘ್ರದಲ್ಲಿಯೇ ಘಟನೆ ನಿಖರ ಕಾರಣ ಹೊರಬಿಳಲಿದೆ. ಆದರೆ ದುರಾದೃಷ್ಟವಶಾತ್ ಇವಿ ವಾಹನಗಳು ಅಗ್ನಿ ಅವಘಡ ಕಾರಣವಾಗುತ್ತಿರುವುದು ಭವಿಷ್ಯದಲ್ಲಿ ಇವಿ ವಾಹನಗಳನ್ನು ಅಳವಡಿಸಿಕೊಳ್ಳಲಿರುವ ವಾಹನ ಮಾಲೀಕರಲ್ಲಿ ಸುರಕ್ಷತೆ ಪ್ರಶ್ನೆ ಎದುರಾಗುತ್ತಿದೆ.

ದುಬಾರಿ ಇಂಧನಗಳ ಪರಿಣಾಮ ಹೊಸ ವಾಹನ ಖರೀದಿದಾರರು ಪರಿಸರ ಸ್ನೇಹಿ ಮತ್ತು ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇವಿ ವಾಹನಗಳ ಮಾರಾಟದಲ್ಲಿ ಮೊದಲ ಬಾರಿಗೆ ಗಮನಾರ್ಹವಾದ ಬೆಳವಣಿಗೆ ಕಾಣುತ್ತಿರುವ ಸಂದರ್ಭದಲ್ಲಿಯೇ ಇವಿ ವಾಹನಗಳಿಂದಾಗುತ್ತಿರುವ ಅನಾಹುತಗಳು ಭವಿಷ್ಯದಲ್ಲಿ ಮತ್ತಷ್ಟು ಹಾನಿ ಉಂಟುಮಾಡುವ ಆತಂಕ ಸೃಷ್ಠಿಸಿವೆ.

ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಇವಿ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಪರಿಣಾಮ ಕಳೆದ 2 ವರ್ಷಗಳ ಅಂತರದಲ್ಲಿ ಹಲವಾರು ಇವಿ ಸ್ಟಾರ್ಟ್ಅಪ್ ಕಂಪನಿಗಳು ಮಾರುಕಟ್ಟೆ ಪ್ರವೇಶಿಸಿದ್ದು, ಇವಿ ವಾಹನಗಳ ಮಾರಾಟದಲ್ಲಿ ಸದ್ಯ ಇವಿ ಸ್ಕೂಟರ್‌ಗಳ ಮಾರಾಟವು ಅಗ್ರಸ್ಥಾನ ಹೊಂದಿವೆ.

ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಆದರೆ ಇವಿ ಸ್ಕೂಟರ್‌ಗಳಿಂದಾಗುತ್ತಿರುವ ಅನಾಹುತಗಳು ಇವಿ ವಾಹನ ಬಳಕೆದಾರರನ್ನು ಆತಂಕಕ್ಕೀಡು ಮಾಡಿದ್ದು, ದೇಶದ ವಿವಿಧಡೆ ದಿನಕ್ಕೊಂದು ಬ್ಯಾಟರಿ ಸ್ಪೋಟ ಪ್ರಕಟಗಳು ದಾಖಲಾಗುತ್ತಿವೆ.

ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಇತ್ತೀಚೆಗೆ ದಾಖಲಾಗಿದ್ದ ಇವಿ ಸ್ಕೂಟರ್ ಬ್ಯಾಟರಿ ಸ್ಪೋಟ ಪ್ರಕರಣದಲ್ಲಿ 40 ವರ್ಷದ ಓರ್ವ ಬಲಿಯಾಗಿದ್ದು, ಬ್ಯಾಟರಿ ಚಾರ್ಜಿಂಗ್ ಸಂದರ್ಭದಲ್ಲಿಯೇ ಈ ದುರಂತ ನಡೆದಿತ್ತು. ಸ್ಪೋಟದ ರಭಸಕ್ಕೆ ಪಕ್ಕದಲ್ಲಿಯೇ ಇದ್ದ ವಿಜಯವಾಡ ಮೂಲದ ಶಿವಕುಮಾರ್ ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಆತನ ಪತ್ನಿ ಮತ್ತು ಇಬ್ಬರು ಮಕ್ಕಳಿಗೂ ಗಂಭೀರ ಗಾಯಗಳಾದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಇವಿ ಸ್ಕೂಟರ್ ವಿಭಾಗದಲ್ಲಿ ಇತ್ತೀಚೆಗೆ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ವಿವಿಧ ಇವಿ ಸ್ಕೂಟರ್ ಮಾದರಿಗಳೊಂದಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ. ಆದರೆ ಇವಿ ಸ್ಕೂಟರ್ ಬೇಡಿಕೆ ಹೆಚ್ಚುತ್ತಿದ್ದರೂ ಭವಿಷ್ಯದ ವಾಹನಗಳ ಕುರಿತಾಗಿ ಗ್ರಾಹಕರಲ್ಲಿ ಇನ್ನು ಕೂಡಾ ಹಲವಾರು ಅನುಮಾನ ಮತ್ತು ಗೊಂದಲಗಳಿದ್ದು, ಅದು ಇತ್ತೀಚೆಗೆ ಸಂಭವಿಸಿದ ಬೆಂಕಿ ಅವಘಡ ಪ್ರಕರಣಗಳು ಗ್ರಾಹಕರಲ್ಲಿ ಇನ್ನಷ್ಟು ಗೊಂದಲವನ್ನು ಸೃಷ್ಠಿಸುತ್ತಿವೆ.

ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಇವಿ ಸ್ಕೂಟರ್‌ಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುವುದು, ಬಿಡಿಭಾಗಗಳು ಬಹುಬೇಗನೆ ಹಾಳಾಗುತ್ತಿರುವ ಪ್ರಕರಣಗಳು ಗ್ರಾಹಕರಲ್ಲಿ ಇವಿ ವಾಹನಗಳ ಬಗೆಗೆ ವಿಶ್ವಾಸ ಮೂಡಿಸುವ ಬದಲಾಗಿ ಅನುಮಾನಗಳನ್ನು ಹುಟ್ಟುಹಾಕುತ್ತಿವೆ.

ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಹೊಸ ಇವಿ ವಾಹನಗಳ ಬಿಡುಗಡೆಗೂ ಮುನ್ನ ವಿವಿಧ ಹಂತದ ಸಂಶೋಧನೆ, ಪರೀಕ್ಷಾರ್ಥ ಮಾದರಿಗಳನ್ನು ನಿರಂತರವಾಗಿ ಬದಲಾವಣೆಗೊಳಿಸುವ ಪ್ರಕ್ರಿಯೆಯಲ್ಲಿ ಅವಸರದ ನೀತಿ ಅನುಸರಿಸುತ್ತಿರುವುದೇ ಭವಿಷ್ಯ ವಾಹನಗಳ ಬಗೆಗೆ ಗೊಂದಲಗಳು ಸೃಷ್ಠಿಯಾಗುತ್ತಿದ್ದು, ಇದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಕಠಿಣ ಕ್ರಮಕೈಗೊಳ್ಳುವುತ್ತಿರುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದರು.

ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ತುರ್ತಾಗಿ ತಮ್ಮತ್ತ ಸೆಳೆಯುವ ಉದ್ದೇಶದಿಂದ ಯಾವುದೇ ದೀರ್ಘಾವಧಿಯ ಸಂಶೋಧನೆಗಳನ್ನು ಮಾಡದೆ, ವಿವಿಧ ಹಂತದ ಕಾರ್ಯಕ್ಷಮತೆಯ ಪರೀಕ್ಷಾರ್ಥ ಮಾದರಿಗಳನ್ನು ಬಳಸದೆ ನೇರವಾಗಿ ವಾಹನ ಉತ್ಪಾದನೆ ಮಾಡುವುದು ಮತ್ತು ಬಿಡುಗಡೆ ಮಾಡುವ ಪ್ರಕ್ರಿಯೆಗಳು ಭವಿಷ್ಯದಲ್ಲಿ ಬಹುದೊಡ್ಡ ಹೊಡೆತ ನೀಡುವ ಮುನ್ಸೂಚನೆ ನೀಡುತ್ತಿವೆ.

ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಅದರಲ್ಲೂ ಓಲಾ, ಪ್ಯೂರ್, ಒಕಿನವಾದಂತಹ ಬೃಹತ್ ಇವಿ ಸ್ಕೂಟರ್ ಉತ್ಪಾದನಾ ಕಂಪನಿಗಳ ಇವಿ ಸ್ಕೂಟರ್ ಮಾದರಿಗಳೇ ಹೆಚ್ಚಿನ ಅವಘಡಗಳಿಗೆ ಕಾರಣವಾಗುತ್ತಿದ್ದು, ಇದು ಭವಿಷ್ಯ ವಾಹನಗಳ ಮೇಲೆ ಗ್ರಾಹಕರ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ.

ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ

ಹೀಗಾಗಿ ಇವಿ ಸ್ಕೂಟರ್‌ಗಳಲ್ಲಿನ ಬ್ಯಾಟರಿ ಪ್ಯಾಕ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಂಕಿ ಅವಘಡ ಪ್ರಕರಣಗಳು ತಂತ್ರಜ್ಞಾನ ಅಭಿವೃದ್ದಿಯಲ್ಲಿ ಇನ್ನಷ್ಟು ಸುಧಾರಿಸುವ ಅವಶ್ಯಕತೆ ಸ್ಪಷ್ಟವಾಗಿಸಿದ್ದು, ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕಿದೆ.

Most Read Articles

Kannada
English summary
Fired in mangaluru okinawa electric scooter dealership
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X