2026ರ ವೇಳಗೆ ಭಾರತದಲ್ಲಿ ಓಡಲಿದೆ ಮೊದಲ ಬುಲೆಟ್‌ ರೈಲು

ಭಾರತದ ರೈಲ್ವೇ ಸಾರಿಗೆ ವ್ಯವಸ್ಥೆಯ ದಿಕ್ಕನ್ನೇ ಬದಲಿಸಲಿರುವ ದೇಶದ ಮೊಟ್ಟ ಮೊದಲ ಬುಲೆಟ್ ರೈಲು 2026ರ ವೇಳಗೆ ಸೇವೆ ಆರಂಭಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಟಿವಿ ಚಾನೆಲ್​ವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ, ಅಶ್ವಿನಿ ವೈಷ್ಣವ್ ಅವರು ಭಾರತೀಯ ರೈಲ್ವೆ ಹೊಸ ಯೋಜನೆಗಳ ಬಗ್ಗೆ ವಿವರಿಸಿದ್ದಾರೆ.

2026ರ ವೇಳಗೆ ಭಾರತದ ಓಡಲಿದೆ ಮೊದಲ ಬುಲೆಟ್‌ ರೈಲು

ಭಾರತೀಯರ ಬಹುದಿನಗಳ ಕನಸಾಗಿರುವ ಬುಲೆಟ್ ಟ್ರೈನ್ ಯೋಜನೆಯ ಮಹತ್ವದ ಮಾಹಿತಿಯನ್ನೂ ಅವರು ಬಿಡುಗಡೆ ಮಾಡಿದರು. ಭಾರತದ ಮೊದಲ ಬುಲೆಟ್ ರೈಲು ಯಾವಾಗ ಬಳಕೆಗೆ ಬರಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಬುಲೆಟ್ ರೈಲು ಯೋಜನೆಯು 2026ರ ವೇಳೆಗೆ ಭಾರತದಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಇತ್ತೀಚೆಗೆ ನೀಡಿದ ಟಿವಿ ಸಂದರ್ಶನದಲ್ಲಿ ಸಚಿವರೇ ಇದನ್ನು ಖಚಿತಪಡಿಸಿದ್ದಾರೆ. ಬುಲೆಟ್ ಟ್ರೈನ್ ಭಾರತದ ರೈಲ್ವೇ ಸಾರಿಗೆ ವ್ಯವಸ್ಥೆಯ ದಿಕ್ಕನ್ನೇ ಬದಲಿಸಲಿರುವ ಯೋಜನೆಯಾಗಬಹುದು ಎಂದು ಹೇಳಲಾಗುತ್ತಿದೆ.

2026ರ ವೇಳಗೆ ಭಾರತದ ಓಡಲಿದೆ ಮೊದಲ ಬುಲೆಟ್‌ ರೈಲು

ದೇಶದಲ್ಲಿ ಬುಲೆಟ್ ಟ್ರೈನ್ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗುತ್ತಿದೆ. 2026ರ ವೇಳೆಗೆ ಮೊದಲ ಭಾರತೀಯ ಬುಲೆಟ್ ರೈಲು ಓಡಾಟ ನಡೆಸಬಹುದು. ಕೇಂದ್ರ ಸರಕಾರ ಜನರ ಹಿತಕ್ಕಾಗಿ ಶ್ರಮಿಸುತ್ತಿದೆ. ರೈಲ್ವೆಯು ಜನ ಸಾಮಾನ್ಯರಿಗೆ ಸೌಲಭ್ಯಗಳನ್ನು ಹೆಚ್ಚಿಸುತ್ತಿದೆ ಎಂದು ರೈಲ್ವೆ ಸಚಿವರು ಹೇಳಿದರು.

2026ರ ವೇಳಗೆ ಭಾರತದ ಓಡಲಿದೆ ಮೊದಲ ಬುಲೆಟ್‌ ರೈಲು

ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು ಮತ್ತು "ಸರ್ಕಾರದ ಯೋಜನೆಗಳು ಮತ್ತು ಕ್ರಮಗಳನ್ನು ವಿರೋಧವು ಗಿಮಿಕ್ ಎಂದು ಕರೆಯುತ್ತಾರೆ. ಆದರೆ ಸರ್ಕಾರವು ಅವುಗಳ ಬಗ್ಗೆ ಗಂಭೀರವಾಗಿದೆ ಎಂದು ಅವರು ಹೇಳಿದರು,

2026ರ ವೇಳಗೆ ಭಾರತದ ಓಡಲಿದೆ ಮೊದಲ ಬುಲೆಟ್‌ ರೈಲು

ರೈಲ್ವೇ ದರದ ಬಗ್ಗೆ ಅಶ್ವಿನಿ ವೈಷ್ಣವ್ ಅವರು, ಪ್ರಯಾಣಿಕರ ಅನುಕೂಲಕ್ಕಾಗಿ ಸಚಿವಾಲಯವು ಪ್ರಯಾಣ ದರವನ್ನು ಹೆಚ್ಚಿಸಿಲ್ಲ. ಇದಲ್ಲದೆ, ರೈಲ್ವೆಯ ಬೆಲೆಗಳನ್ನು ಹೆಚ್ಚಿಸುವ ಯಾವುದೇ ಉದ್ದೇಶವನ್ನು ಸರ್ಕಾರ ಹೊಂದಿಲ್ಲ ಎಂದು ಅವರು ಹೇಳಿದರು,

2026ರ ವೇಳಗೆ ಭಾರತದ ಓಡಲಿದೆ ಮೊದಲ ಬುಲೆಟ್‌ ರೈಲು

ಈಗಾಗಲೇ ಹಾಕಲಾದ ಹಳಿಗಳನ್ನು ಬಲಪಡಿಸುವುದನ್ನು ಹೊರತುಪಡಿಸಿ ಹಲವಾರು ಯೋಜನೆಗಳು ನಡೆಯುತ್ತಿವೆ. ನರೇಂದ್ರ ಮೋದಿ ಅವರ ಆಶ್ರಯದಲ್ಲಿ, ಸರ್ಕಾರವು ಸ್ಟಾರ್ಟ್‌ಅಪ್ ಸಂಸ್ಕೃತಿಯನ್ನು ಉತ್ತೇಜಿಸುತ್ತಿರುವುದರಿಂದ ಸ್ಟಾರ್ಟ್‌ಅಪ್‌ಗಳ ವಿಷಯದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಒತ್ತಿ ಹೇಳಿದರು.

2026ರ ವೇಳಗೆ ಭಾರತದ ಓಡಲಿದೆ ಮೊದಲ ಬುಲೆಟ್‌ ರೈಲು

ಸೆಮಿಕಂಡಕ್ಟರ್ ಉತ್ಪಾದನೆಯ ಬಗ್ಗೆ ಕೇಳಿದಾಗ, ಅವರು ಎರಡೂವರೆ ವರ್ಷಗಳಲ್ಲಿ ಭಾರತದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸುತ್ತಾರೆ ಎಂದು ಹೇಳಿದರು. ಭಾರತದಲ್ಲಿ ವಾಹನ ಉತ್ಪಾದಕರಿಗೆ ಸೆಮಿಕಂಡಕ್ಟರ್ ಕೊರತೆಯು ದೊಡ್ಡ ಸಮಸ್ಯೆಯಾಗಿದೆ,

2026ರ ವೇಳಗೆ ಭಾರತದ ಓಡಲಿದೆ ಮೊದಲ ಬುಲೆಟ್‌ ರೈಲು

ಭಾರತೀಯ ರೈಲ್ವೇ ಮೊದಲ ಬುಲೆಟ್ ರೈಲು ಓಡಿಸಲು ಭಾರೀ ಸಿದ್ಧತೆ ನಡೆಸುತ್ತಿದೆ. ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಹೈಸ್ಪೀಡ್ ರೈಲ್ ಕಾರಿಡಾರ್ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಬುಲೆಟ್ ರೈಲು ನಿಲ್ದಾಣ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ.

2026ರ ವೇಳಗೆ ಭಾರತದ ಓಡಲಿದೆ ಮೊದಲ ಬುಲೆಟ್‌ ರೈಲು

ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಮೊದಲ ಬುಲೆಟ್ ರೈಲು ಓಡಲಿದೆ. ಈಗಾಗಲೇ ಇದರ ಕಾಮಗಾರಿ ಆರಂಭವಾಗಿದೆ. ಬುಲೆಟ್ ರೈಲು ನಿಲ್ದಾಣಗಳನ್ನೂ ಸಿದ್ಧಪಡಿಸಲಾಗುತ್ತಿದೆ. ಗುಜರಾತಿನ ಸೂರತ್ ನಲ್ಲಿರುವ ಬುಲೆಟ್ ರೈಲು ನಿಲ್ದಾಣದ ಮಾದರಿಯನ್ನು ಭಾರತೀಯ ರೈಲ್ವೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು. ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಈ ಬುಲೆಟ್ ಟ್ರೈನ್ ಯೋಜನೆಯ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ. ಮೂಲಸೌಕರ್ಯ ನಿರ್ಮಾಣ ಕಂಪನಿಯಾದ ಲಾರ್ಸೆನ್ & ಟೂಬ್ರೊ (L&T) ಬುಲೆಟ್ ರೈಲು ನಿಲ್ದಾಣದ ನಿರ್ಮಾಣವನ್ನು ಕೈಗೆತ್ತಿಕೊಂಡಿತು.

2026ರ ವೇಳಗೆ ಭಾರತದ ಓಡಲಿದೆ ಮೊದಲ ಬುಲೆಟ್‌ ರೈಲು

ವಡೋದರ ಪಟ್ಟಣದಲ್ಲಿ ಹೈಸ್ಪೀಡ್ ರೈಲು ನಿಲ್ದಾಣದ ನಿರ್ಮಾಣಕ್ಕೆ ಇತ್ತೀಚೆಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಬುಲೆಟ್ ರೈಲು ಮುಂಬೈ-ಅಹಮದಾಬಾದ್ ಮಾರ್ಗ ಒಟ್ಟು 508.17 ಕಿಮೀ ದೂರ ಇದೆ. ಮುಂಬೈ ಅಹಮದಾಬಾದ್ ಬುಲೆಟ್ ಟ್ರೈನ್ ಕಾರಿಡಾರ್ ಒಟ್ಟು 12 ಹೈ ಸ್ಪೀಡ್ ರೈಲು ನಿಲ್ದಾಣಗಳನ್ನು ಹೊಂದಿದೆ. ಅಹಮದಾಬಾದ್, ಸೂರತ್, ಸಬರಮತಿ, ವಡೋದರಾ, ಆನಂದ್, ಬಿಲಿಮೋರಾ, ಭರೂಚ್, ವಿರಾರ್, ಬೋಯ್ಸರ್, ವಾಪಿ, ಮುಂಬೈ ಮತ್ತು ಥಾಣೆಯಲ್ಲಿ ಹೈ ಸ್ಪೀಡ್ ರೈಲು ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಪ್ರಸ್ತುತ ಸೂರತ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಬುಲೆಟ್ ರೈಲು ನಿಲ್ದಾಣವು ಡಿಸೆಂಬರ್ 2024 ರೊಳಗೆ ಪೂರ್ಣಗೊಳ್ಳಬಹುದು ಎಂದು ಹೇಳಲಾಗುತ್ತಿದೆ.

2026ರ ವೇಳಗೆ ಭಾರತದ ಓಡಲಿದೆ ಮೊದಲ ಬುಲೆಟ್‌ ರೈಲು

ಭಾರತದಲ್ಲಿ ಮೊದಲ ಹೈಸ್ಪೀಡ್ ರೈಲ್ ಕಾರಿಡಾರ್ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ರೂ.1.1 ಲಕ್ಷ ಕೋಟಿ ವೆಚ್ಚ ಮಾಡಲಿದೆ. ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ 2026-27ರ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿದೆ. ಹೈ-ಸ್ಪೀಡ್ ಬುಲೆಟ್ ರೈಲುಗಳು ನಂತರ ಈ ಕಾರಿಡಾರ್ನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಓಡುತ್ತವೆ. ಮುಂಬೈ-ಅಹಮದಾಬಾದ್ ಮಾರ್ಗ ಸೇರಿದಂತೆ ಇನ್ನಷ್ಟು ಮಾರ್ಗಗಳಲ್ಲಿ ಬುಲೆಟ್ ರೈಲು ಓಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಜೊತೆಗೆ ನಾಲ್ಕು ಪಟ್ಟಣಗಳು ಮತ್ತು ನಗರಗಳನ್ನು ಇತರ ನಾಲ್ಕು ಮಾರ್ಗಗಳಲ್ಲಿ ಸಂಪರ್ಕಿಸುವ ಹೈಸ್ಪೀಡ್ ರೈಲು ಜಾಲವನ್ನು ನಿರ್ಮಿಸುವ ಯೋಜನೆ ಇದೆ.

2026ರ ವೇಳಗೆ ಭಾರತದ ಓಡಲಿದೆ ಮೊದಲ ಬುಲೆಟ್‌ ರೈಲು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದ ರೈಲ್ವೇ ಸಾರಿಗೆ ವ್ಯವಸ್ಥೆಯ ದಿಕ್ಕನ್ನೇ ಬದಲಿಸಲಿರುವ ದೇಶದ ಮೊಟ್ಟ ಮೊದಲ ಬುಲೆಟ್ ರೈಲು 2026ರ ವೇಳಗೆ ಸೇವೆ ಆರಂಭಿಸಲಿದೆ. ಭಾರತೀಯರ ಬಹುದಿನಗಳ ಕನಸಾಗಿರುವ ಬುಲೆಟ್ ಟ್ರೈನ್ ಯೋಜನೆಯು ದೇಶದ ಜನರು ಬಹುನಿರೀಕ್ಷೆಯಿಂದ ಕಾಯುತಿದ್ದಾರೆ. ಬುಲೆಟ್ ರೈಲ್ ಪ್ರಾವಸಿಗರಿಗೆ ಹಾಗೂ ಇತರ ಉದ್ಯುಮಿಗಳಿಗೆ ಹಚ್ಚು ನೆರವಾಗುತ್ತದೆ. ತಮ್ಮ ತೆರಳ ಬೇಕಾದ ಸ್ಥಳಕ್ಕೆ ಬೇಗ ತಲುಪಬಹುದು.

Most Read Articles

Kannada
Read more on ರೈಲು train
English summary
First bullet train in india to be operational by 2026 here is full details
Story first published: Tuesday, June 28, 2022, 14:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X