ಸ್ವಾತಂತ್ರ್ಯ ಸಂಭ್ರಮ: ಎಸ್-ಕ್ಲಾಸ್ ಲಿಮೋಸಿನ್ ಕಾರು ಬಳಸಿದ ಭಾರತದ ಮೊದಲ ರಾಷ್ಟ್ರಪತಿ ಯಾರು ಗೊತ್ತಾ?

ಸ್ವಾತಂತ್ರ್ಯ ಸಿಗುವ ಮುನ್ನ ಭಾರತದ ಆರ್ಥಿಕತೆಯು ತೀರಾ ಹದಗೆಟ್ಟ ಸ್ಥಿತಿಯಲ್ಲಿತ್ತು. ಬ್ರಿಟಿಷ್ ಆಡಳಿತವು ನಮ್ಮ ಆರ್ಥಿಕತೆಯನ್ನು ಅಧಃ ಪತನಕ್ಕೆ ದೂಡಿತ್ತು. ಸ್ವಾತಂತ್ರ್ಯ ದೊರೆತ ನಂತರ, ಭಾರತವು ತನ್ನ ಆರ್ಥಿಕತೆಯನ್ನು ಪುನರ್ ನಿರ್ಮಿಸಬೇಕಾಗಿತ್ತು.

ಸ್ವಾತಂತ್ರ್ಯ ಸಂಭ್ರಮ: ಎಸ್-ಕ್ಲಾಸ್ ಲಿಮೋಸಿನ್ ಕಾರು ಬಳಸಿದ ಭಾರತದ ಮೊದಲ ರಾಷ್ಟ್ರಪತಿ ಯಾರು ಗೊತ್ತಾ?

ಸ್ವಾತಂತ್ರ್ಯ ದೊರೆತ 74 ವರ್ಷಗಳ ನಂತರವೂ ಭಾರತವನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದು ಪರಿಗಣಿಸಲಾಗುತ್ತಿದೆ. ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ರಾಷ್ಟ್ರಪತಿಗಳು ಬಳಸುವ ಅಧಿಕೃತ ಕಾರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾಣಬಹುದು. ರಾಷ್ಟ್ರಪತಿಗಳ ಅಧಿಕೃತ ಕಾರು ಕೇವಲ ಸಾರಿಗೆ ಸಾಧನ ಮಾತ್ರವಾಗಿರದೇ ದೇಶದ ಸಂಪತ್ತು, ಸ್ಥಾನಮಾನ ಹಾಗೂ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಸ್ವಾತಂತ್ರ್ಯ ಸಂಭ್ರಮ: ಎಸ್-ಕ್ಲಾಸ್ ಲಿಮೋಸಿನ್ ಕಾರು ಬಳಸಿದ ಭಾರತದ ಮೊದಲ ರಾಷ್ಟ್ರಪತಿ ಯಾರು ಗೊತ್ತಾ?

ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳಂತಹ ಉನ್ನತ ಸ್ಥಾನಗಳಲ್ಲಿರುವ ಗಣ್ಯರು ತಮ್ಮ ಪ್ರಯಾಣಕ್ಕಾಗಿ ಉನ್ನತ ದರ್ಜೆಯ ವಾಹನಗಳನ್ನು ಏಕೆ ಬಳಸುತ್ತಾರೆ ಎಂಬುದಕ್ಕೆ ಕೇವಲ ಭದ್ರತೆಯ ದೃಷಿಯಿಂದ ಮಾತ್ರ ಕಾರಣವಾಗಿರದೇ ಹಲವಾರು ಕಾರಣಗಳಿವೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಸ್ವಾತಂತ್ರ್ಯ ಸಂಭ್ರಮ: ಎಸ್-ಕ್ಲಾಸ್ ಲಿಮೋಸಿನ್ ಕಾರು ಬಳಸಿದ ಭಾರತದ ಮೊದಲ ರಾಷ್ಟ್ರಪತಿ ಯಾರು ಗೊತ್ತಾ?

ಭಾರತದ ಹಾಲಿ ರಾಷ್ಟ್ರಪತಿಗಳಾದ ರಾಮ್ ನಾಥ್ ಕೋವಿಂದ್ ರವರು ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಲಿಮೋಸಿನ್ ಎಸ್ 600 ಪುಲ್ಮನ್ ಗಾರ್ಡ್ ಕಾರ್ ಅನ್ನು ಅಧಿಕೃತ ವಾಹನವಾಗಿ ಬಳಸುತ್ತಿದ್ದಾರೆ. 21.3 ಅಡಿಗಳ ಈ ಲಿಮೋಸಿನ್ ಕಾರ್ ಅನ್ನು ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿರವರು ಸಹ ಬಳಸುತ್ತಿದ್ದರು.

ಸ್ವಾತಂತ್ರ್ಯ ಸಂಭ್ರಮ: ಎಸ್-ಕ್ಲಾಸ್ ಲಿಮೋಸಿನ್ ಕಾರು ಬಳಸಿದ ಭಾರತದ ಮೊದಲ ರಾಷ್ಟ್ರಪತಿ ಯಾರು ಗೊತ್ತಾ?

ಆದರೆ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಲಿಮೋಸಿನ್ ಕಾರು ಮೊದಲಿನಿಂದ ಭಾರತದ ರಾಷ್ಟ್ರಪತಿಗಳ ಆಯ್ಕೆಯ ಕಾರ್ ಆಗಿರಲಿಲ್ಲ. ಹಾಗಾದರೆ ಎಸ್-ಕ್ಲಾಸ್ ಆಯ್ಕೆ ಮಾಡಿದ ಭಾರತದ ಮೊದಲ ರಾಷ್ಟ್ರಪತಿ ಯಾರು? ಅವರಿಗಿಂತ ಮುಂಚೆಯಿದ್ದ ರಾಷ್ಟ್ರಪತಿಗಳು ಬಳಸಿದ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸ್ವಾತಂತ್ರ್ಯ ಸಂಭ್ರಮ: ಎಸ್-ಕ್ಲಾಸ್ ಲಿಮೋಸಿನ್ ಕಾರು ಬಳಸಿದ ಭಾರತದ ಮೊದಲ ರಾಷ್ಟ್ರಪತಿ ಯಾರು ಗೊತ್ತಾ?

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಅನ್ನು ತಮ್ಮ ಅಧಿಕೃತ ಕಾರನ್ನಾಗಿ ಮೊದಲ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ. 1992-1997ರ ನಡುವೆ ಭಾರತದ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದ ಶಂಕರ್ ದಯಾಳ್ ಶರ್ಮಾ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಲಿಮೋಸಿನ್ ಡಬ್ಲ್ಯು 140 ಕಾರ್ ಅನ್ನು ತಮ್ಮ ಅಧಿಕೃತ ಕಾರನ್ನಾಗಿ ಆಯ್ಕೆ ಮಾಡಿಕೊಂಡರು.

ಸ್ವಾತಂತ್ರ್ಯ ಸಂಭ್ರಮ: ಎಸ್-ಕ್ಲಾಸ್ ಲಿಮೋಸಿನ್ ಕಾರು ಬಳಸಿದ ಭಾರತದ ಮೊದಲ ರಾಷ್ಟ್ರಪತಿ ಯಾರು ಗೊತ್ತಾ?

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಲಿಮೋಸಿನ್ ಡಬ್ಲ್ಯು 140 ಬುಲೆಟ್ ಪ್ರೂಫ್ ಹಾಗೂ ಗ್ರೆನೇಡ್ ಪ್ರೂಫ್ ಕಾರ್ ಆಗಿದೆ. ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಲಿಮೋಸಿನ್ ಡಬ್ಲ್ಯು 140 ಕಾರು ಹಲವಾರು ಸುರಕ್ಷತಾ ಫೀಚರ್ ಗಳನ್ನು ಹೊಂದಿದ್ದು, ರಾಷ್ಟ್ರಪತಿಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸ್ವಾತಂತ್ರ್ಯ ಸಂಭ್ರಮ: ಎಸ್-ಕ್ಲಾಸ್ ಲಿಮೋಸಿನ್ ಕಾರು ಬಳಸಿದ ಭಾರತದ ಮೊದಲ ರಾಷ್ಟ್ರಪತಿ ಯಾರು ಗೊತ್ತಾ?

ಎಸ್-ಕ್ಲಾಸ್ ಲಿಮೋಸಿನ್ ಡಬ್ಲ್ಯು 140 ಕಾರ್ ಅನ್ನು ಬೇರೆ ದೇಶಗಳ ಗಣ್ಯ ವ್ಯಕ್ತಿಗಳು ಸಹ ಬಳಸುತ್ತಾರೆ. ಡಬ್ಲ್ಯು 140 ಕಾರು ವಿ 8 ಹಾಗೂ ವಿ 12 ಎಂಬ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ.

ಸ್ವಾತಂತ್ರ್ಯ ಸಂಭ್ರಮ: ಎಸ್-ಕ್ಲಾಸ್ ಲಿಮೋಸಿನ್ ಕಾರು ಬಳಸಿದ ಭಾರತದ ಮೊದಲ ರಾಷ್ಟ್ರಪತಿ ಯಾರು ಗೊತ್ತಾ?

ವಿ 8 ಎಂಜಿನ್ ಸ್ಟ್ಯಾಂಡರ್ಡ್ ಮಾದರಿಗಳಲ್ಲಿ ಬಳಕೆಯಾದರೆ, ವಿ 12 ರಾಷ್ಟ್ರಪತಿಗಳು ಸೇರಿದಂತೆ ಅತಿ ಮುಖ್ಯ ಗಣ್ಯರು ಬಳಸುವ ಶಸ್ತ್ರಸಜ್ಜಿತ ವಾಹನಗಳಲ್ಲಿ ಬಳಕೆಯಾಗುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸ್ವಾತಂತ್ರ್ಯ ಸಂಭ್ರಮ: ಎಸ್-ಕ್ಲಾಸ್ ಲಿಮೋಸಿನ್ ಕಾರು ಬಳಸಿದ ಭಾರತದ ಮೊದಲ ರಾಷ್ಟ್ರಪತಿ ಯಾರು ಗೊತ್ತಾ?

ಎಸ್-ಕ್ಲಾಸ್ ಲಿಮೋಸಿನ್ ಡಬ್ಲ್ಯು 140 ಕಾರ್ ಅನ್ನು ಗಣ್ಯರು ತಮ್ಮ ಅವಶ್ಯಕತೆಗಳಿಗಾಗಿ ಅನುಸಾರವಾಗಿ ಕಸ್ಟಮೈಸ್ ಮಾಡಿಕೊಳ್ಳಬಹುದು. ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಬಳಸಿದ ಅಧಿಕೃತ ಕಾರು ಸಹ ಈ ಹೆಚ್ಚುವರಿ ಫೀಚರ್ ಗಳನ್ನು ಹೊಂದಿತ್ತು.

ಸ್ವಾತಂತ್ರ್ಯ ಸಂಭ್ರಮ: ಎಸ್-ಕ್ಲಾಸ್ ಲಿಮೋಸಿನ್ ಕಾರು ಬಳಸಿದ ಭಾರತದ ಮೊದಲ ರಾಷ್ಟ್ರಪತಿ ಯಾರು ಗೊತ್ತಾ?

ರಾಷ್ಟ್ರಪತಿಗಳ ಅಧಿಕೃತ ಕಾರ್ ಆಗಿರುವ ಕಾರಣಕ್ಕೆ ಈ ಕಾರಿನಲ್ಲಿರುವ ಫೀಚರ್ ಗಳ ಬಗ್ಗೆ ಹೆಚ್ಚಿನ ವಿವರಗಳು ಬಹಿರಂಗವಾಗಿಲ್ಲ. ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಲಿಮೋಸಿನ್ ಡಬ್ಲ್ಯು 140 ಕಾರ್ ಅನ್ನು ಶಂಕರ್ ದಯಾಳ್ ಶರ್ಮಾ ಅವರ ನಂತರ ಅವರ ಉತ್ತರಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಸ್ವಾತಂತ್ರ್ಯ ಸಂಭ್ರಮ: ಎಸ್-ಕ್ಲಾಸ್ ಲಿಮೋಸಿನ್ ಕಾರು ಬಳಸಿದ ಭಾರತದ ಮೊದಲ ರಾಷ್ಟ್ರಪತಿ ಯಾರು ಗೊತ್ತಾ?

ಮಾಜಿ ರಾಷ್ಟ್ರಪತಿಗಳಾದ ಕೆ ಆರ್ ನಾರಾಯಣನ್, ಎಪಿಜೆ ಅಬ್ದುಲ್ ಕಲಾಂ ಹಾಗೂ ಪ್ರತಿಭಾ ಪಾಟೀಲ್ ಸಹ ಎಸ್-ಕ್ಲಾಸ್ ಲಿಮೋಸಿನ್ ಡಬ್ಲ್ಯು 140 ಕಾರ್ ಅನ್ನು ಬಳಸುತ್ತಿದ್ದರು. ಪ್ರತಿಭಾ ಪಾಟೀಲ್ ರವರು ರಾಷ್ಟ್ರಪತಿಗಳಾಗಿದ್ದಾಗ ಈ ಕಾರಿನ ಬದಲು ಮರ್ಸಿಡಿಸ್-ಮೇಬ್ಯಾಕ್ ಎಸ್ 600 ಪುಲ್ಮನ್ ಡಬ್ಲ್ಯು 220 ಕಾರಿಗೆ ಅಪ್ ಗ್ರೇಡ್ ಆದರು.

ಸ್ವಾತಂತ್ರ್ಯ ಸಂಭ್ರಮ: ಎಸ್-ಕ್ಲಾಸ್ ಲಿಮೋಸಿನ್ ಕಾರು ಬಳಸಿದ ಭಾರತದ ಮೊದಲ ರಾಷ್ಟ್ರಪತಿ ಯಾರು ಗೊತ್ತಾ?

ನಂತರ ಡಬ್ಲ್ಯು 221 ಆವೃತ್ತಿಗೆ ಅಪ್ ಗ್ರೇಡ್ ಮಾಡಲಾಯಿತು. ಈಗಿನ ರಾಷ್ಟ್ರಪತಿಗಳಾದ ರಾಮ್ ನಾಥ್ ಕೋವಿಂದ್ ಈ ವರ್ಷ ಡಬ್ಲ್ಯು 222 ಕಾರಿಗೆ ಅಪ್ ಗ್ರೇಡ್ ಆಗಲು ಬಯಸಿದ್ದರು. ಆದರೆ ಕೋವಿಡ್-19 ಕಾರಣಕ್ಕೆ ತಮ್ಮ ನಿರ್ಧಾರವನ್ನು ಕೈಬಿಟ್ಟರು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಸ್ವಾತಂತ್ರ್ಯ ಸಂಭ್ರಮ: ಎಸ್-ಕ್ಲಾಸ್ ಲಿಮೋಸಿನ್ ಕಾರು ಬಳಸಿದ ಭಾರತದ ಮೊದಲ ರಾಷ್ಟ್ರಪತಿ ಯಾರು ಗೊತ್ತಾ?

ಶಂಕರ್ ದಯಾಳ್ ಶರ್ಮಾರವರಿಗೆ ಮುನ್ನ ಭಾರತದ ರಾಷ್ಟ್ರಪತಿಗಳಾಗಿದ್ದವರು ಯಾವ ಕಾರುಗಳನ್ನು ಬಳಸುತ್ತಿದ್ದರು ಎಂಬುದನ್ನು ನೋಡುವುದಾದರೆ, ಭಾರತದ ಮೊದಲ ರಾಷ್ಟ್ರಪತಿಗಳಾದ ಡಾ.ರಾಜೇಂದ್ರ ಪ್ರಸಾದ್ ರವರು ಕನ್ವರ್ಟಿಬಲ್ ಕ್ಯಾಡಿಲಾಕ್ ಹಾಗೂ ಜೀಪ್ ವಿಲ್ಲೀಸ್ ಕಾರುಗಳನ್ನು ಬಳಸುತ್ತಿದ್ದರು.

ಸ್ವಾತಂತ್ರ್ಯ ಸಂಭ್ರಮ: ಎಸ್-ಕ್ಲಾಸ್ ಲಿಮೋಸಿನ್ ಕಾರು ಬಳಸಿದ ಭಾರತದ ಮೊದಲ ರಾಷ್ಟ್ರಪತಿ ಯಾರು ಗೊತ್ತಾ?

ಮರ್ಸಿಡಿಸ್ ಬೆಂಝ್ 300 ಡಿ ಅಡೆನೌರ್ ಕ್ಯಾಬ್ರಿಯೊಲೆಟ್, ಹಿಂದೂಸ್ತಾನ್ ಅಂಬಾಸಿಡರ್ ಸಹ ರಾಷ್ಟ್ರಪತಿಗಳ ಸೇವೆಗೆ ಬಳಕೆಯಾಗಿವೆ. ಭಾರತದ ರಾಷ್ಟ್ರಪತಿಗಳು ಗೋಲ್ಡ್ ಪ್ಲೇಟೆಡ್ ಬಗ್ಗಿಯನ್ನು ಬಳಸುತ್ತಿದ್ದರು. ಇವುಗಳನ್ನು ಮೊದಲು ಭಾರತದ ವೈಸ್ ರಾಯ್ ಗಳು ಬಳಸುತ್ತಿದ್ದರು. ನಂತರ ಅವುಗಳನ್ನು ಭಾರತದ ರಾಷ್ಟ್ರಪತಿಗಳಿಗೆ ಹಸ್ತಾಂತರಿಸಲಾಯಿತು.

Most Read Articles

Kannada
English summary
The Mercedes-Benz S-Class Limousine has become the official car of the President of India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X