ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

By Nagaraja

ಅಂಗವೈಕಲ್ಯವಿದ್ದರೇನಂತೆ, ಸಾಧಿಸುವ ಛಲವಿದ್ದರೆ ಈ ಭೂಮಿಯಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಂದೊಂದು ನೈಜ ಉದಾಹರಣೆಯಾಗಿದೆ. ಇದು ಅಪಘಾತವೊಂದರಲ್ಲಿ ಚಿಕ್ಕವನಿಂದಲೇ ಶಾಶ್ವತ ಅಂಗವಿಕಲತೆಗೆ ಒಳಗಾದ ವ್ಯಕ್ತಿಯೊಬ್ಬರ ಕಥೆ. ಅಂಗವೈಕಲ್ಯವೆಂಬ ಕೊರಗಿಗೆ ಮನ ಸೋಲದೇ ಗೆಲ್ಲುವ ಛಲವೊಂದಿದ್ದರೆ ಎಲ್ಲ ನ್ಯೂನ್ಯತೆಗಳನ್ನು ಮೆಟ್ಟಿ ನಿಂತು ಸಾಮಾನ್ಯ ಜನರಿಗಿಂತಲೂ ಹೆಚ್ಚು ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ದೃಢ ನಿರ್ಧಾರ ಹಾಗೂ ಅದಕ್ಕೆ ತಕ್ಕುದಾದ ಪರಿಶ್ರಮವಿದ್ದರೆ ಅಂಗವೈಕಲ್ಯವನ್ನು ಮೀರಿ ನಿಲ್ಲಬಹುದು ಎಂಬದುಕ್ಕೆ 46ರ ಹರೆಯದ ವಿಕ್ರಂ ಅಗ್ನಿಹೋತ್ರಿ ಜೀವಂತ ಉದಾಹರಣೆಯಾಗಿದ್ದಾರೆ.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ಏಳರ ಹರೆಯದಲ್ಲಿ ವಿದ್ಯುತ್ ಅಪಘಾತವೊಂದರಲ್ಲಿ ಎರಡು ಕೈಗಳನ್ನು ನಷ್ಟಗೊಂಡ ವಿಕ್ರಂ ಶಾಶ್ವತ ಅಂಗವಿಕತೆಗೆ ತುತ್ತಾಗಿದ್ದರು. ಬಳಿಕದ ತಮ್ಮ ಜೀವನ ಪರ್ಯಂತ ಎಲ್ಲ ಕಾರ್ಯಗಳಿಗೂ ಕಾಲುಗಳನ್ನೇ ಆಶ್ರಯಿಸಿಕೊಳ್ಳಬೇಕಾಯಿತು.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ಕಾಲಿನಲ್ಲೇ ಬರೆಯುವ ಆತ, ಶೇವಿಂಗ್ ಮಾಡಲು, ಮುಖ ತೊಳೆಯಲು, ಭೋಜನ ಸ್ವೀಕರಿಸಲು, ಕಂಪ್ಯೂಟರ್ ಕೆಲಸ ಮಾಡಲು ಹೀಗೆ ಎಲ್ಲ ಕ್ರಿಯೆಗಳನ್ನು ಕಾಲಿನಿಂದಲೇ ಮಾಡಲು ಅಭ್ಯಾಸಿಸಿದರು.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ಜೀವನದಲ್ಲಿ ಸೋಲು ಎಂಬುದಿಲ್ಲ ಎಂಬುದಕ್ಕೆ ವಿಕ್ರಂ ಉದಾಹರಣೆಯಾಗಿದ್ದಾರೆ. ಅಷ್ಟೇ ಯಾಕೆ ಈಜಾಡುವುದು, ಸ್ನೇಹಿತರ ಜೊತೆ ಫುಟ್ಬಾಲ್ ಆಡುವುದು ಅವರ ಇಷ್ಟ ಮೋಜಿನ ಕ್ರೀಡೆಯಾಗಿದೆ.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ಈಗ ಇನ್ನು ಒಂದು ಹೆಜ್ಜೆ ಮುಂದಿಟ್ಟಿರುವ ವಿಕ್ರಂ, ಕಾರು ಚಾಲನೆಯನ್ನು ಕರಗತ ಮಾಡಿಕೊಂಡಿದ್ದಾರೆ. ಎಲ್ಲ ಸವಾರರಂತೆ ಕಾಲಲ್ಲೇ ಬಹಳ ಸಲೀಸಾಗಿ ಕಾರು ಚಾಲನೆ ಮಾಡುತ್ತಾರೆ.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ಮ್ಯಾನುವಲ್ ಗೇರ್ ಕಾರುಗಳನ್ನು ಓಡಿಸುವುದು ಕಷ್ಟವಾಗಿದ್ದರಿಂದ ಆಟೋಮ್ಯಾಟಿಕ್ ಕಾರುಗಳನ್ನು ಚಾಲನೆಗಾಗಿ ಆಯ್ಕೆ ಮಾಡಿಕೊಂಡಿದ್ದರು. ಅಲ್ಲದೆ ಬಲಗಾಲಲ್ಲಿ ಸ್ಟೀರಿಂಗ್ ಹಾಗೂ ಎಡಗಾಲಿಂದ ಬ್ರೇಕ್ ಹಾಗೂ ಎಕ್ಸಿಲೇಟರ್ ನಿಯಂತ್ರಿಸುತ್ತಾರೆ.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ಕಾರು ಚಾಲನೆಗಾಗಿ ಡ್ರೈವಿಂಗ್ ಲೈಸನ್ಸ್ ಗಿಟ್ಟಿಸಿಕೊಳ್ಳುವುದು ಅವರ ಗುರಿಯಾಗಿದೆ. ಈ ಮೂಲಕ ಅಧಿಕೃತವಾಗಿ ಕಾಲಿನಿಂದಲೇ ಕಾರು ಓಡಿಸುವ ದೇಶದ ಮೊದಲ ವ್ಯಕ್ತಿಯೆನಿಸಿಕೊಂಡಿದ್ದಾರೆ.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ಚಾಲನಾ ಪರವಾನಗಿ ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಬಲಗಾಲಲ್ಲಿ ಕಾರು ಓಡಿಸುವ ವ್ಯಕ್ತಿಗೆ ಹೇಗೆ ಚಾಲನಾ ಪರವಾನಗಿ ನೀಡಲಿ ಎಂಬುದರ ಬಗ್ಗೆ ಅಧಿಕೃತರು ಗೊಂದಲದಲ್ಲಿದ್ದರು.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ಕೊನೆಗೂ ವಿಕ್ರಂ ಕಾರು ಚಾಲನೆಗಾಗಿ ಕಲಿಕಾ ಲೈಸನ್ಸ್ ನೀಡಿದರೂ ಶಾಶ್ವತ ಡ್ರೈವಿಂಗ್ ಲೈಸನ್ಸ್ ನೀಡಲು ಮಾತ್ರ ಹಿಂದು ಮುಂದು ನೋಡುತ್ತಿದ್ದರು.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ವಿಕ್ರಂ ಮಾತ್ರ ಪೂರ್ಣ ಆತ್ಮವಿಶ್ವಾಸದಲ್ಲಿದ್ದು, ತಮ್ಮ ಅರ್ಜಿಯನ್ನು ಅಧಿಕೃತರಿಂದ ತಳ್ಳಿ ಹಾಕಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕಠಿಣ ಪರಿಶ್ರಮವನ್ನು ಮುಂದುವರಿಸಿದ್ದರು.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ಕಾರಿನಲ್ಲಿ ಕೆಲವೊಂದು ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ಎಡಗಾಲಿಂದ ಬಲಬದಿಯಲ್ಲಿರುವ ಆಕ್ಸಿಲೇಟರ್ ನಿಯಂತ್ರಿಸುವುದು ಕಷ್ಟವೆನಿಸಿದ್ದರಿಂದ ಇದನ್ನು ಕ್ಲಚ್ ಪೆಡಲ್ ಇರುವ ಜಾಗಕ್ಕೆ ವರ್ಗಾಯಿಸಲಾಗಿತ್ತು. ಇಂದೊಂದು ಆಟೋಮ್ಯಾಟಿಕ್ ಕಾರಾಗಿರುವುದರಿಂದ ಕ್ಲಚ್ ಪೆಡಲ್ ಅಗತ್ಯವಿರುವುದಿಲ್ಲ.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ಇವೆಲ್ಲದಕ್ಕೂ ಮಿಗಿಲಾಗಿ ವಿಕ್ರಂ ಚಾಲನಾ ಕೌಶಲ್ಯವನ್ನು ಅಧಿಕೃತರು ಸಂದೇಹಪಡುವ ಅಗತ್ಯವೇ ಇಲ್ಲ. ಓರ್ವ ವೃತ್ತಿಪರ ಚಾಲಕನಷ್ಟು ಸುಲಲಿತವಾಗಿ ಅವರು ಕಾರು ಓಡಿಸುತ್ತಿದ್ದಾರೆ.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ಅಂತು ಇಂತೂ ಕೊನೆಗೂ ವಿಕ್ರಂ ಸಾಧನೆಗೆ ಅಧಿಕೃತರು ತಲೆಬಾಗಲೇ ಬೇಕಾಯಿತು. ಅಲ್ಲದೆ ಚಾಲನಾ ಪರವಾನಗಿ ಗಿಟ್ಟಿಸಿಕೊಂಡ ಬಳಿಕ ಕಳೆದ 15 ತಿಂಗಳ ಅವಧಿಯಲ್ಲಿ 14,500ಕ್ಕೂ ಹೆಚ್ಚು ಕೀ.ಮೀ. ದೂರವನ್ನು ಯಶಸ್ವಿಯಾಗಿ ಕ್ರಮಿಸಿದ್ದಾರೆ.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ವಿಕ್ರಂ ಈಗ ಅಂಗವಿಕಲರಿಗಾಗಿ 'ವಿನ್ನರ್ಸ್ ಇನ್ ಲೈಫ್' ಎಂಬ ಸರ್ಕಾರೇತರ ಸಂಘಟನೆಯನ್ನು ಆರಂಭಿಸಿದ್ದು, ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ಇತರರನ್ನು ಹುರಿದುಂಬಿಸಲಿದ್ದಾರೆ.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ಈ ಜಗತ್ತಿನಲ್ಲಿ ವಿಕಲಚೇತನರು ಸಾವಿರಾರು ಕಾರ್ಯಗಳನ್ನು ಮಾಡಬಹುದು ಎಂಬುದನ್ನು ತೋರಿಸಲು ಬಯಸುತ್ತಿದ್ದೇನೆ ಎಂದು ವಿಕ್ರಂ ಹೆಮ್ಮೆಯಿಂದಲೇ ನುಡಿಯುತ್ತಾರೆ.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ತಾವು ಆರಂಭಿಸಿರುವ ಸರ್ಕಾರೇತರ ಸಂಘಟನೆಯ ನಿಧಿ ಸಂಗ್ರಹಕ್ಕಾಗಿ ಅತ್ಯಂತ ಕಠಿಣವಾದ ಲಡಾಕ್ ಗೆ ಕಾರು ಪ್ರಯಾಣ ಹೊರಡಲು ವಿಕ್ರಂ ನಿರ್ಧರಿಸಿದ್ದಾರೆ.

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

ಮೋಟಾರು ವಾಹನ ಸಂಚರಿಸುವ ವಿಶ್ವದ ಅತ್ಯಂತ ಎತ್ತರದ ಖರ್ದುಂಗ್ ಲಾ ಪ್ರದೇಶದಲ್ಲಿ ತಮ್ಮ ಕಾಲಿನಿಂದಲೇ ಕಾರು ಓಡಿಸುವ ಸಾಹಸಕ್ಕೆ ಮುಂದಾಗಲಿರುವ ವಿಕ್ರಂ ಮಗದೊಂದು ವಿಶ್ವ ದಾಖಲೆ ಬರೆಯಲು ಹೊರಟಿದ್ದಾರೆ. ಅವರ ಈ ಹಾದಿಯು ಯಶಸ್ಸಿನಿಂದ ಕೂಡಿರಲಿ ಎಂಬದು ನಮ್ಮ ಪ್ರಾರ್ಥನೆಯಾಗಿದೆ. ವಿಕ್ರಂ ಸವಾಲಿಗೆ ನೀವೂ ಕೂಡಾ ಶುಭ ಹಾರೈಸಿರಿ!

ಅಂಗವೈಕಲ್ಯ ಗೆದ್ದು ಬಂದ ವೀರ; ಕಾಲಲ್ಲೇ ಕಾರು ಚಾಲನೆ ಮಾಡಿ ದಾಖಲೆ

01. ಭಾರತೀಯ ಲೈಸನ್ಸ್ ಇಟ್ಟುಕೊಂಡು ವಿದೇಶಗಳಲ್ಲಿ ಗಾಡಿ ಓಡಿಸಲು ಸಾಧ್ಯವೇ?

02. ಡಿಎಲ್, ಆರ್‌ಸಿ ಸಾಫ್ಟ್ ಕಾಪಿ ಇದ್ದರೆ ಸಾಕು; ಹಾಯಾಗಿ ವಾಹನ ಚಲಾಯಿಸಿ!03. ಭಾರತೀಯ ಲೈಸನ್ಸ್ ಇಟ್ಟುಕೊಂಡು ಯಾವೆಲ್ಲ ರಾಷ್ಟ್ರಗಳಲ್ಲಿ ಗಾಡಿ ಓಡಿಸಬಹುದು?

Most Read Articles

Kannada
English summary
First Indian who drives Car with his legs gets a valid driving licence
Story first published: Friday, October 14, 2016, 11:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X