ಪ್ರಧಾನಿ ನರೇಂದ್ರ ಮೋದಿಯವರ ಈ ವಿಡಿಯೋ ವೈರಲ್ ಆಗಿದ್ದು ಯಾಕೆ ಗೊತ್ತಾ..?

ಪ್ರಧಾನಿ ನರೇಂದ್ರ ಮೋದಿ ಕುರಿತಾತ ವೀಡಿಯೊ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿಯಿಂದ ಬಹಿರಂಗಗೊಂಡ ಈ ವೀಡಿಯೊವನ್ನು ನೋಡಿ ಅನೇಕರು ಇದನ್ನು ನೋಡಿ ಮೋದಿಯವರಿಗೆ ಮೆಚ್ಚುಗೆಯನ್ನು ನೀಡಿದ್ದಾರೆ.

By Rahul Ts

ಪ್ರಧಾನಿ ನರೇಂದ್ರ ಮೋದಿ ಕುರಿತಾತ ವಿಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿಯಿಂದ ಬಹಿರಂಗಗೊಂಡ ಈ ವೀಡಿಯೊವನ್ನು ನೋಡಿ ಅನೇಕರು ಇದನ್ನು ನೋಡಿ ಮೋದಿಯವರಿಗೆ ಮೆಚ್ಚುಗೆಯನ್ನು ನೀಡಿದ್ದಾರೆ. ಅಸಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ ಅಂತಹ ವಿಚಾರ ಏನಿದೇ ಎಂದು ಈ ಕೆಳಗಿನ ಸ್ಲೈಡರ್‍‍ಗಳಲ್ಲಿ ನೋಡಿ..

ಪ್ರಧಾನಿ ನರೇಂದ್ರ ಮೋದಿಯವರ ಈ ವೀಡಿಯೊ ವೈರಲ್ ಆಗಿದ್ದು ಯಾಕೆ ಗೊತ್ತ..??

ಪ್ರಧಾನಿಯಾದ ನಂತರ ನರೇಂದ್ರ ಮೋದಿಯವರು ಸಾರ್ವಜನಿಕವಾಗಿ ಹಲವಾರು ಉಪಯುಕ್ತ ಯೋಜನೆಗಳನ್ನು ಜಾರಿ ಮಾಡುತ್ತಿದ್ದು, ಅದರಲ್ಲೂ ವಾಹನ ಸವಾರರ ರಕ್ಷಣೆಗಾಗಿ ಮಹತ್ವದ ಮಾರ್ಗಸೂಚಿಗಳನ್ನು ನೀಡುತ್ತಲೇ ಬಂದಿದ್ದಾರೆ. ಅದರಂತೆ ಅವರು ನಡೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ.

ಪ್ರಧಾನಿ ನರೇಂದ್ರ ಮೋದಿಯವರ ಈ ವೀಡಿಯೊ ವೈರಲ್ ಆಗಿದ್ದು ಯಾಕೆ ಗೊತ್ತ..??

ರಸ್ತೆ ಅಪಘಾತಗಳ ಬಗ್ಗೆ ಎಲ್ಲೆಡೆ ಕೇಳುತ್ತಿದ್ದೇವೆ ನೋಡುತ್ತಿದ್ದೇವೆ ಆದರೇ ಹಲವರು ರಸ್ತೆ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಆದರೇ ಪ್ರಧಾನ ಮಂತ್ರಿ ಮೋದಿಯವರು ತಾವು ಕಾರಿನ ಒಳಗಡೆ ಕುಳಿತ ತಕ್ಷಣ ಸೀಲ್ಟ್ ಬೆಲ್ಟ್ ಅನ್ನು ಖಡ್ಡಾಯವಾಗಿ ಧರಿಸಬೇಕೆಂಬ ನಿಯಮವನ್ನು ಪಾಲಿಸುತ್ತರೆ ಎಂದರೇ ನೀವು ನಂಬಲೇಬೇಕು.

ಪ್ರಧಾನಿ ನರೇಂದ್ರ ಮೋದಿಯವರ ಈ ವೀಡಿಯೊ ವೈರಲ್ ಆಗಿದ್ದು ಯಾಕೆ ಗೊತ್ತ..??

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊನಲ್ಲಿ ಪ್ರಧಾನಿಯವರು ಕಾರಿನಲ್ಲಿ ಕುಳಿತ ತಕ್ಷಣವೇ ಅವರ ಕೈ ಸೀಟ್ ಬೆಲ್ಟ್ ನ ಕಡೆಗೆ ಹೋಗುತ್ತದೆ. ಕಾರಿನಲ್ಲಿ ಕುಳಿತ ನಂತರ ಅವರು ಮೊದಲು ಮಾಡುವುದೇ ಸೀಟ್ ಬೆಲ್ಟ್ ಅನ್ನು ಧರಿಸುವುದು. ಈ ವಿಡಿಯೋವನ್ನು ಪಿಐಬಿ (ಪ್ರೆಸ್ ಇನ್ಫರ್ಮೇಷನ್ ಬ್ಯೂರೊ) ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಈ ವೀಡಿಯೊ ವೈರಲ್ ಆಗಿದ್ದು ಯಾಕೆ ಗೊತ್ತ..??

ಸುಮಾರು 1.30 ನಿಮಿಷದ ಈ ವಿಡಿಯೋನಲ್ಲಿ ಪ್ರಧಾನಿಯವರು ತಮ್ಮ ರೇಂಜ್ ರೋವರ್ ಕಾರಿನ ಒಳಗೆ ಕುಳಿತ ಮರುಕ್ಷಣವೇ ಅವರು ಸೀಟ್ ಬೆಲ್ಟ್ ಅನ್ನು ಧರಿಸುವ ವಿಡಿಯೋವನ್ನ ನೀವು ನೋಡಬಹುದಾಗಿದೆ.

ನಿನ್ನೆಯಷ್ಟೆ ಪಿಐಬಿಯವರು ಈ ವಿಡಿಯೋವನ್ನ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಈ ವಿಡಿಯೋಗೆ ಸುಮಾರು 2,800ಕ್ಕೂ ಅಧಿಕ ರೀ ಟ್ವೀಟ್, 7200ಕ್ಕೂ ಹೆಚ್ಚು ಲೈಕ್ಸ್ ಮತ್ತು 230ಕ್ಕೂ ಹೆಚ್ಚು ಕಮೆಂಟ್‍‍ಗಳು ಬಂದಿವೆ.

ಪ್ರಧಾನಿ ನರೇಂದ್ರ ಮೋದಿಯವರ ಈ ವೀಡಿಯೊ ವೈರಲ್ ಆಗಿದ್ದು ಯಾಕೆ ಗೊತ್ತ..??

ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ತಂಡವು ಈ ವಿಡಿಯೋವನ್ನ ಸಡಕ್ ಸುರಕ್ಷಾ(ರಸ್ತೆ ಸುರಕ್ಷೆ) ಎಂಬ ಹ್ಯಾಶ್‍‍ಟ್ಯಾಗ್‍‍ನೊಂದಿಗೆ ಪೋಸ್ಟ್ ಮಾಡಿದ್ದು, ಜೊತೆಗೆ ರಸ್ತೆ ನಿಯಮಗಳು ಕೆವಲ ಜನಸಾಮನ್ಯರಿಗೆ ಮಾತ್ರವಲ್ಲ ಎಲ್ಲರಿಗೂ ವಿಧಿಸುತ್ತದೆ ಎಂಬ ವಾಕ್ಯವನ್ನು ಕೂಡಾ ಸೇರಿಸಲಾಗಿದೆ.

ಪ್ರಧಾನಿ ಮೋದಿಯವರು ಕಾರಿನಲ್ಲಿ ಕೂತ ಮರುಕ್ಷಣವೇ ಸೀಟ್ ಬೆಲ್ಟ್ ಅನ್ನು ಧರಿಸಿರುವ ವೀಡಿಯೊವನ್ನ ನೋಡಿ ಹಲವಾರು ಸೆಲೆಬ್ರಿಟಿಗಳು ತಮ್ಮದೆಯಾದ ಶೈಲಿಯಲ್ಲಿ ಅಭಿನಂದಿಸಿರುವುದು ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ.

ಪ್ರಧಾನಿ ನರೇಂದ್ರ ಮೋದಿಯವರ ಈ ವೀಡಿಯೊ ವೈರಲ್ ಆಗಿದ್ದು ಯಾಕೆ ಗೊತ್ತ..??

ಭಾರತೀಯ ರಸ್ತೆಗಳಲ್ಲಿ ಒಂದಲ್ಲ ಒಂದು ಕಾರು ಅಪಘಾತಕ್ಕೆ ಈಡಾಗುತ್ತಿರುತ್ತವೆ. ರಸ್ತೆ ನಿಯಮದ ಬಗ್ಗೆ ಟ್ರಾಫಿಕ್ ಪೊಲೀಸರು ಹಲವಾರು ಬಗೆಯಲ್ಲಿ ಪ್ರಚಾರ ಮಾಡುತ್ತಿದ್ದರು ಕೇವಲ ಟ್ರಾಫಿಕ್ ಪೊಲೀಸರಿಂದ ಬಚಾವ್ ಆಗಲು ಮಾತ್ರ ಸೀಟ್ ಬೆಲ್ಟ್ ಅನ್ನು ಧರಿಸುತ್ತಿರುವುದು ಸಾಮಾನ್ಯವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಈ ವೀಡಿಯೊ ವೈರಲ್ ಆಗಿದ್ದು ಯಾಕೆ ಗೊತ್ತ..??

ಅಪಘಾತ ಯಾವ ರೂಪದಲ್ಲಿ ಬೇಕಾದರೂ ಆಗಬಹುದು. ಆದ್ರೆ ಕಾರಿನಲ್ಲಿ ಪ್ರಯಾಣಿಸುವಾಗ ಹಲವರು ಸೀಟ್ ಬೆಲ್ಟ್ ಅನ್ನು ಧರಿಸುವುದೇ ಇಲ್ಲ. ಕಾರು ಚಾಲನೆಯ ವೇಳೆ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ ಹಾಗೂ ಅದು ನಮ್ಮ ಜೀವ ರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದು ಗೊತ್ತಿದ್ದರೂ ಕೆಲವರು ಅದನ್ನು ಬಳಕೆ ಹಿಂದೇಟು ಹಾಕುತ್ತಾರೆ.

ಪ್ರಧಾನಿ ನರೇಂದ್ರ ಮೋದಿಯವರ ಈ ವೀಡಿಯೊ ವೈರಲ್ ಆಗಿದ್ದು ಯಾಕೆ ಗೊತ್ತ..??

ಆದ್ದರಿಂದ ಕೇವಲ ಚಾಲಕನು ಮಾತ್ರವಲ್ಲದೇ, ಕಾರಿನಲ್ಲಿ ಕೂರುವ ಪ್ರತಿಯೊಬ್ಬರೂ ಸೀಟ್ ಬೆಲ್ಟ್ ಅನ್ನು ಧರಿಸಲೇಬೇಕು, ನೀವು ಪ್ರಯಾಣಿಸುತ್ತಿರುವ ಕಾರಿನಲ್ಲಿ ಚಾಲಕನು ಸೀಟ್ ಬೆಲ್ಟ್ ಧರಿಸದಿದ್ದರೆ ನೀವೆ ಅವರಿಗೆ ಸೀಟ್ ಬೆಲ್ಟ್ ಅನ್ನು ಧರಿಸಲು ಆದೇಶಿಸಿರಿ.

ಪ್ರಧಾನಿ ನರೇಂದ್ರ ಮೋದಿಯವರ ಈ ವೀಡಿಯೊ ವೈರಲ್ ಆಗಿದ್ದು ಯಾಕೆ ಗೊತ್ತ..??

2016ರಲ್ಲಿ ಕೇವಲ ಎಂದು ವರ್ಷದ ಕಾಲದಲ್ಲಿ ಸುಮಾರು 1,50,000 ಲಕ್ಷದ ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ನೀವಾಗಲಿ ನೀವು ರಸ್ತೆಯಲ್ಲಿ ಚಲಿಸುವಾಗ ನಿಮ್ಮ ಪಕ್ಕದಲ್ಲೆ ಹೋಗುತ್ತಿರುವ ಕಾರಿನಲ್ಲಿ ಯಾರಾದರೂ ಸೀಲ್ಟ್ ಬೆಲ್ತ್ ಅನ್ನು ಧರಿಸದಿದ್ದರೆ ಸೀಟ್ ಬೆಲ್ಟ್ ಅನ್ನು ಧರಿಸಲು ಹೇಳಿ.

Most Read Articles

Kannada
English summary
Did you see the Prime Minister Modi doing the car in the car?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X