ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಹಾರುವ ಬೈಕಿನ ಬಗ್ಗೆ ನೀವು ಈಗಾಗಲೇ ಕೇಳಿದ್ದಿರಿ. ಹಾಗೆಯೇ ಹಾರುವ ಕಾರುಗಳ ಬಗ್ಗೆಯೂ ಹಲವೆಡೆ ಅರಕೆಗಳು ಚುರುಕುಗೊಳ್ಳುತ್ತಿವೆ. ಇದಕ್ಕೆ ಪೂರಕ್ಕೆ ಎಂಬಂತೆ ಪಿಎಲ್-ವಿ ಲಿಬರ್ಟಿ ಸಂಸ್ಥೆಯ ಹೊಸ ಮಾದರಿಯ ಹಾರುವ ಕಾರು ಗೈರೊಕಾಪ್ಟಾರ್ ಇದೀಗ ಬಿಡುಗಡೆಗೆ ಸಿದ್ದವಾಗಿದ್ದು, ಭಾರತದಲ್ಲೂ ಸದ್ದು ಮಾಡುವ ಸುಳಿವು ನೀಡಿದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಆಟೋ ಉದ್ಯಮದಲ್ಲಿ ದಿನದಿಂದ ದಿನಕ್ಕೆ ಹೊಸ ಸಂಶೋಧನೆಗಳು ಮತ್ತು ಆವಿಷ್ಕಾರಗಳು ನಡೆಯುತ್ತಲೇ ಇದ್ದು, ಇದೀಗ ಹಾರುವ ಕಾರುಗಳ ಉತ್ಪಾದನೆ ಸಾಧ್ಯತೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಸಿ ಬಿಸಿ ಚರ್ಚೆಗಳ ಬೆನ್ನಲ್ಲೇ ಡಚ್ ಮೂಲದ ಪಿಎಲ್-ವಿ ಲಿಬರ್ಟಿ ಸಂಸ್ಥೆಯು ಹೊಸ ಪ್ರಯತ್ನಕ್ಕೆ ಕೈ ಹಾಕಿ ಅದರಲ್ಲಿ ಯಶಸ್ವಿಯಾಗುವ ತವಕದಲ್ಲಿದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

2020ರ ಆರಂಭದಲ್ಲಿ ಹಾರುವ ಕಾರುಗಳ ಉತ್ಪಾದನೆಯನ್ನು ಶುರು ಮಾಡುವ ಬಗ್ಗೆ ಸುಳಿವು ನೀಡಿದ್ದ ಪಿಎಲ್-ವಿ ಲಿಬರ್ಟಿ ಸಂಸ್ಥೆಯು, ಹೆಲಿಕಾಪ್ಟರ್‌ಗಿಂತ ಕಡಿಮೆ ದರ್ಜೆಯ ಮತ್ತು ಟ್ರೈಸೈಕಲ್‌ಗಳಿಂತ ಉನ್ನತ ಸೌಲಭ್ಯಗಳನ್ನು ಹೊಂದಿರುವ ಗೈರೊಕಾಪ್ಟಾರ್ ಕಾರುನ್ನು ನಿರ್ಮಾಣ ಮಾಡಿದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಇದರೊಂದಿಗೆ ಸುಧಾರಿತ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಟು ಸೀಟರ್ ಸೌಲಭ್ಯವನ್ನು ಹೊಂದಿರುವ ಹಾರುವ ಕಾರಗಳು ಮೊದಲು ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆ ಪ್ರವೇಶ ಪಡೆಯಲಿದ್ದು, ತದನಂತರ 2021ರ ವೇಳೆಗೆ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳಲ್ಲಿ ಹಾರುವ ಕಾರುಗಳಿಗೆ ರೆಕ್ಕೆ ಬರಲಿದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಇದಕ್ಕೆ ಕಾರಣ ಅಮೆರಿಕನ್ ಮತ್ತು ಯುರೋಪಿನ್ ಮಾರುಕಟ್ಟೆಯಲ್ಲಿ ಈಗಾಗಲೇ ಹಾರುವ ಕಾರುಗಳಿಗೆ ಮಾನ್ಯತೆ ಸಿಕಿದ್ದು, 2020ರ ವೇಳೆಗೆ ಹೊಸ ಮಾದರಿಯ ಸಾರಿಗೆ ವ್ಯವಸ್ಥೆಯು ಜಗತ್ತಿಗೆ ತೆರೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಸದ್ಯಕ್ಕೆ ಭಾರತದಲ್ಲಿ ಫೋಟೋಟೈಪ್ ಮಾದರಿಗಳ ಮೂಲಕ ಪರೀಕ್ಷೆ ನಡೆಸಲು ಮುಂದಾಗಿರುವ ಪಿಎಲ್-ವಿ ಲಿಬರ್ಟಿ ಸಂಸ್ಥೆಯು ಪ್ರಾಯೋಗಿಕವಾಗಿ ಖಾಸಗಿ ಸಂಸ್ಥೆಗಳಿಗೆ, ಆರೋಗ್ಯ ಸಂಸ್ಥೆಗಳಿಗೆ, ಕೊಸ್ಟ್ ಗಾರ್ಡ್, ಸರ್ಕಾರಿ ಏಜೆನ್ಸಿಸ್ ಮತ್ತು ಪೊಲೀಸ್ ಇಲಾಖೆಗಳ ಕಾರ್ಯಚರಣೆಗಾಗಿ ಬಳಕೆ ಮಾಡಲಿದ್ದು, ತದನಂತರ ಸಾರ್ವಜನಿಕ ಸಾರಿಗೆಯಾಗಿಯೂ ಬಳಕೆ ಮಾಡುವ ನೀರಿಕ್ಷೆಯಲ್ಲಿದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಇನ್ನು ಕಾರ್ಬನ್ ಮತ್ತು ಟೈಟಾನಿಯಂನಿಂದ ಗೈರೊಕಾಪ್ಟಾರ್ ಕಾರುಗಳ ಬಾಡಿ ಕಿಟ್ ಅಭಿವೃದ್ಧಿ ಮಾಡಲಾಗುತ್ತಿದ್ದು, 680 ಕೆಜಿ ತೂಕವನ್ನು ಪಡೆದುಕೊಂಡಿವೆ. ಹೀಗಾಗಿ ಕಡಿಮೆ ಅಂತರದಲ್ಲಿ ಟೆಕ್ ಆಫ್ ಮತ್ತು ಲ್ಯಾಂಡಿಂಗ್‌ಗೆ ಅನಕೂಲಕರರವಾಗಿವೆ ಎನ್ನಬಹುದು.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಮೂಲಗಳ ಪ್ರಕಾರ, ಪಿಎಲ್-ವಿ ಲಿಬರ್ಟಿಯ ಸಂಸ್ಥೆಯ ಕಾರುಗಳು ಟೆಕ್ ಆಫ್ ಆಗಲು 165 ಮೀಟರ್ ಮತ್ತು ಲ್ಯಾಂಡಿಂಗ್‌ಗೆ 30 ಮೀಟರ್ ‌ಬೇಕಾಗಲಿದ್ದು, 100 ಬಿಎಚ್‌ಪಿ ಉತ್ಪಾದನಾ ಎಂಜಿನ್ ಬಳಕೆ ಮಾಡಲಾಗಿದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಈ ಮೂಲಕ ಪ್ರತಿಗಂಟೆಗೆ 180ಕಿಮಿ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದಿರುವ ಪಿಎಲ್-ವಿ ಲಿಬರ್ಟಿ ಹಾರುವ ಕಾರು ಕೇವಲ ಆಕಾಶದಲ್ಲಿದಷ್ಟೇ ಅಲ್ಲದೇ ಸಾಮಾನ್ಯ ಕಾರುಗಳಂತೆ ರಸ್ತೆಯಲ್ಲೂ ಸುಗಮವಾಗಿ ಸಂಚರಿಸಬಲ್ಲವು.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ರಸ್ತೆಯಲ್ಲಿ ಸಂಚರಿಸುವಾಗ ಕಾರಿನ ರೆಕ್ಕೆಗಳು ಮಡಿಚಿಕೊಳ್ಳುವ ವ್ಯವಸ್ಥೆಯನ್ನು ಇದರಲ್ಲಿ ಇರಿಸಲಾಗಿದ್ದು, ಮೂರು ಚಕ್ರಗಳೊಂದಿಗೆ ವೇಗವಾಗಿ ಸಂಚರಿಸುವುದಲ್ಲದೇ ಅರಾಮದಾಯಕ ಪ್ರಯಾಣವನ್ನು ಒದಗಿಸಲಿವೆ ಎನ್ನುತ್ತೆ ಪಿಎಲ್-ವಿ ಲಿಬರ್ಟಿ ಸಂಸ್ಥೆ.

MOST READ: ಮಹೀಂದ್ರಾ ಅಲ್ಟುರಾಸ್ ಜಿ4 ಕಾರಿಗೆ ಹೊಸ ಹೆಸರು ನೀಡಿದ್ರೆ 2 ಕಾರು ಫ್ರೀ ಅಂತೆ..!

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಹೀಗಾಗಿ ಕೆಲವೇ ನಿಮಿಷಗಳಲ್ಲಿ ನಿಮಗೆ ಬೇಕಾದ ಸ್ಥಳಗಳನ್ನು ತಲುಪಲು ಸಹಾಯಕವಾಗುವ ಈ ಕಾರುಗಳ ಬೆಲೆ ಕೊಂಚ ದುಬಾರಿಯಾಗಿದ್ದು, ಎರಡು ಮಾದರಿಯಲ್ಲಿ ಪಿಎಲ್-ವಿ ಲಿಬರ್ಟಿ ಹಾರುವ ಕಾರುಗಳನ್ನು ನಿರ್ಮಾಣ ಮಾಡಲಾಗಿದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಮೈಲೇಜ್

ಡ್ಯುಯಲ್ ಎಂಜಿನ್ ಹೊಂದಿರುವ ಪಿಎಲ್-ವಿ ಲಿಬರ್ಟಿಯ ಗೈರೊಕಾಪ್ಟಾರ್ ಹಾರುವ ಕಾರುಗಳು ಪ್ರತಿ ಚಾರ್ಜ್‌ಗೆ 482 ಕಿ.ಮಿ(ಆಕಾಶದಲ್ಲಿ) ಮತ್ತು 1,287 ಕಿ.ಮಿ ರಸ್ತೆಯ ಮೇಲೆ ಚಲಿಸುವಷ್ಟು ಸಾಮರ್ಥ್ಯವನ್ನು ಹೊಂದಿವೆ.

MOST READ: ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಹಾರುವ ಕಾರುಗಳ ಬೆಲೆ ಭಾರತೀಯ ಮೌಲ್ಯದಲ್ಲಿ ಹೇಳುವುದಾರೇ ಆರಂಭಿಕ ಹೊಸ ಕಾರಿನ ಬೆಲೆಯನ್ನು ರೂ. 2.89 ಕೋಟಿ ಮಾಡಿದ್ದು, ಕಾರು ಖರೀದಿಗೆ ಮುಂಗಡ ಪಾವತಿಸಿದ 150 ಗಂಟೆಗಳ ಒಳಗಾಗಿ ಹೊಸ ಕಾರು ಒದಗಿಸುವ ಬಗ್ಗೆ ಪಿಎಲ್-ವಿ ಲಿಬರ್ಟಿಯು ಭರವಸೆ ನೀಡಿದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಬುಕ್ಕಿಂಗ್ ಆರಂಭ

ಪಿಎಲ್-ವಿ ಲಿಬರ್ಟಿ ಸಂಸ್ಥೆಯು ತನ್ನ ಬಹುನೀರಿಕ್ಷಿತ ಗೈರೊಕಾಪ್ಟಾರ್ ಹಾರುವ ಕಾರುಗಳನ್ನು 2020ರ ಆರಂಭದಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಆಸಕ್ತ ಗ್ರಾಹಕರಿಂದ ಈಗಿನಿಂದಲೇ ಫ್ರೀ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಆಟೋ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಠಿಸಿದೆ.

Most Read Articles

Kannada
English summary
India’s Flying Car Fantasies Might Become Real In 2021. Read in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X