ಡೀಸೆಲ್ ಪೆಟ್ರೋಲ್ ಬೆಲೆ ಕಡಿಮೆ ಮಾಡುವುದಿಲ್ಲವೆಂದ ಕೇಂದ್ರ ಸರ್ಕಾರ

ಜಿ‍ಎಸ್‍‍ಟಿ ವಿಧಿಸುವ ಮುನ್ನ ದೇಶದ್ಯಾಂತ ವಿವಿಧ ತೆರಿಗೆಗಳನ್ನು ವಿಧಿಸಲಾಗುತ್ತಿತ್ತು. ಜಿಎಸ್‍‍ಟಿ ಜಾರಿಯಾದ ನಂತರ ಒಂದು ದೇಶ ಒಂದು ತೆರಿಗೆ ಅಡಿಯಲ್ಲಿ ಬಹುತೇಕ ಎಲ್ಲಾ ವಸ್ತುಗಳ ಬೆಲೆ ಕಡಿಮೆಯಾಗಲಿದೆ ಎಂದು ಭಾವಿಸಲಾಗಿತ್ತು.

ಡೀಸೆಲ್ ಪೆಟ್ರೋಲ್ ಬೆಲೆ ಕಡಿಮೆ ಮಾಡುವುದಿಲ್ಲವೆಂದ ಕೇಂದ್ರ ಸರ್ಕಾರ

ಕೆಲವೊಂದು ವಸ್ತುಗಳ ಬೆಲೆ ಕಡಿಮೆಯಾದರೆ, ಮತ್ತೆ ಕೆಲವು ವಸ್ತುಗಳ ಬೆಲೆ ಏರಿಕೆಯಾಯಿತು. ವಾಹನ ಮಾಲೀಕರು ಜಿ‍ಎಸ್‍‍ಟಿ ಜಾರಿಯಾದ ನಂತರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಡಿಮೆಯಾಗಲಿದೆ ಎಂದು ಭಾವಿಸಿದ್ದರು.

ಡೀಸೆಲ್ ಪೆಟ್ರೋಲ್ ಬೆಲೆ ಕಡಿಮೆ ಮಾಡುವುದಿಲ್ಲವೆಂದ ಕೇಂದ್ರ ಸರ್ಕಾರ

ಆದರೆ ಇದುವರೆಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿ‍ಎಸ್‍‍ಟಿ ವ್ಯಾಪ್ತಿಗೆ ತಂದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಬದಲಿಗೆ ದಿನ ಕಳೆದಂತೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ.

ಡೀಸೆಲ್ ಪೆಟ್ರೋಲ್ ಬೆಲೆ ಕಡಿಮೆ ಮಾಡುವುದಿಲ್ಲವೆಂದ ಕೇಂದ್ರ ಸರ್ಕಾರ

ಈ ಮೊದಲು 15 ದಿನಗಳಿಗೊಮ್ಮೆ ಪೆಟ್ರೋಲ್ ಬೆಲೆ ಏರಿಸಲಾಗುತ್ತಿತ್ತು. ಆದರೆ ಈಗ ಪ್ರತಿದಿನ ಬೆಲೆ ಏರಿಸಲಾಗುತ್ತಿದೆ. ಇಂಧನದ ಬೆಲೆಗಳು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ರೂಪಾಯಿಗಳ ಲೆಕ್ಕದಲ್ಲಿ ಏರಿಕೆಯಾಗುವ ಇಂಧನಗಳ ಬೆಲೆಯನ್ನು ಕೆಲವೊಮ್ಮೆ ಪೈಸೆಗಳ ಲೆಕ್ಕದಲ್ಲಿ ಇಳಿಕೆ ಮಾಡಲಾಗುತ್ತಿದೆ.

ಡೀಸೆಲ್ ಪೆಟ್ರೋಲ್ ಬೆಲೆ ಕಡಿಮೆ ಮಾಡುವುದಿಲ್ಲವೆಂದ ಕೇಂದ್ರ ಸರ್ಕಾರ

ಇಂಧನಗಳ ಬೆಲೆ ಏರಿಕೆಯಿಂದಾಗಿ ಹೈರಣಾಗಿರುವ ವಾಹನಗಳ ಮಾಲೀಕರು ತಮ್ಮ ಸ್ವಂತ ವಾಹನಗಳ ಬದಲಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆಯು ಪ್ರತಿ ಲೀಟರಿಗೆ ರೂ.77ಗಳಾದರೆ, ಡೀಸೆಲ್ ಬೆಲೆಯು ರೂ.69ಗಳಾಗಿದೆ.

ಡೀಸೆಲ್ ಪೆಟ್ರೋಲ್ ಬೆಲೆ ಕಡಿಮೆ ಮಾಡುವುದಿಲ್ಲವೆಂದ ಕೇಂದ್ರ ಸರ್ಕಾರ

ಈ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ, ನಗರಗಳಿಂದ ನಗರಕ್ಕೆ ಬೇರೆ ಬೇರೆಯಾಗಿರುತ್ತವೆ. ಈಗ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‍‍ರವರಿಗೆ ಇಂಧನಗಳನ್ನು ಜಿ‍ಎಸ್‍‍ಟಿ ವ್ಯಾಪ್ತಿಗೆ ತಂದು ಅವುಗಳ ಬೆಲೆಯನ್ನು ಇಳಿಸಲಾಗುತ್ತದೆಯೇ ಇಲ್ಲವೇ ಎಂದು ಪ್ರಶ್ನಿಸಲಾಗಿತ್ತು.

ಡೀಸೆಲ್ ಪೆಟ್ರೋಲ್ ಬೆಲೆ ಕಡಿಮೆ ಮಾಡುವುದಿಲ್ಲವೆಂದ ಕೇಂದ್ರ ಸರ್ಕಾರ

ಇದಕ್ಕೆ ಉತ್ತರ ನೀಡಿರುವ ನಿರ್ಮಲಾ ಸೀತಾರಾಮನ್‍‍ರವರು ಇಂಧನಗಳ ತೆರಿಗೆಯನ್ನು ಇಳಿಸುವ ಯಾವುದೇ ಪ್ರಸ್ತಾಪವು ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾರೆ. ಹಣಕಾಸು ಸಚಿವರ ಈ ಹೇಳಿಕೆಯು, ಇಂಧನಗಳನ್ನು ಜಿ‍ಎಸ್‍‍ಟಿ ವ್ಯಾಪ್ತಿಗೆ ತಂದು ಬೆಲೆ ಏರಿಕೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದ ವಾಹನ ಮಾಲೀಕರನ್ನು ಕೆರಳಿಸಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಡೀಸೆಲ್ ಪೆಟ್ರೋಲ್ ಬೆಲೆ ಕಡಿಮೆ ಮಾಡುವುದಿಲ್ಲವೆಂದ ಕೇಂದ್ರ ಸರ್ಕಾರ

ಇದೇ ವೇಳೆ ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಯಾವುದೇ ಹೊಸ ತೆರಿಗೆಯನ್ನು ವಿಧಿಸುವುದಿಲ್ಲವೆಂದು ಹೇಳಿದೆ. ಕೇಂದ್ರ ಸರ್ಕಾರವು ಇಂಧನಗಳ ಮೇಲೆ ಎಕ್ಸೈಸ್ ತೆರಿಗೆಯನ್ನು ವಿಧಿಸಿದರೆ, ರಾಜ್ಯ ಸರ್ಕಾರಗಳು ವಿವಿಧ ತೆರಿಗೆಗಳನ್ನು ವಿಧಿಸುತ್ತವೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಡೀಸೆಲ್ ಪೆಟ್ರೋಲ್ ಬೆಲೆ ಕಡಿಮೆ ಮಾಡುವುದಿಲ್ಲವೆಂದ ಕೇಂದ್ರ ಸರ್ಕಾರ

ಈ ಕಾರಣಕ್ಕಾಗಿ ಪೆಟ್ರೋಲ್ ಹಾಗೂ ಡೀಸೆಲ್‍‍ನ ಮೂಲ ಬೆಲೆಗಿಂತ ನೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದರಿಂದಾಗಿ ಸಾಮಾನ್ಯ ಜನರು ಹಾಗೂ ರೈತರು ಪರದಾಡುವಂತಾಗಿದೆ. ಈ ಕಾರಣಕ್ಕೆ ಪೆಟ್ರೋಲ್ ಹಾಗೂ ಡೀಸೆಲ್‍‍ಗಳನ್ನು ಜಿ‍ಎಸ್‍‍ಟಿ ವ್ಯಾಪ್ತಿಗೆ ತರುವಂತೆ ಒತ್ತಡ ಹೇರಲಾಗುತ್ತಿದೆ.

Most Read Articles

Kannada
English summary
FM Nirmala Sitharaman says no proposal to reduce taxes on fuel - Read in Kannada
Story first published: Wednesday, December 4, 2019, 11:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X