ಸರ್ವೀಸ್ ಸೆಂಟರ್ ಸಿಬ್ಬಂದಿಯಿಂದ ಅಪಘಾತಕ್ಕೀಡಾದ ಫುಟ್ಬಾಲ್ ಆಟಗಾರನ ಕಾರು

ಯಾರೇ ಆಗಲಿ ಅವರ ಕಾರು ಅಥವಾ ಬೈಕುಗಳ ಮೇಲೆ ಒಲವನ್ನು ಹೊಂದಿರುತ್ತಾರೆ. ಅದರಲ್ಲೂ ಇಷ್ಟ ಪಟ್ಟು ಖರೀದಿಸಿದ ಕಾರಿನ ಮೇಲಂತೂ ವಿಪರೀತ ಪ್ರೀತಿ ಇರುತ್ತದೆ. ಕೆಲವರು ತಮಗಿಂತ ತಮ್ಮ ಕಾರುಗಳನ್ನೇ ಚೆನ್ನಾಗಿ ನೋಡಿಕೊಳ್ಳುತ್ತಾರೆ.

ಸರ್ವೀಸ್ ಸೆಂಟರ್ ಸಿಬ್ಬಂದಿಯಿಂದ ಅಪಘಾತಕ್ಕೀಡಾದ ಫುಟ್ಬಾಲ್ ಆಟಗಾರನ ಕಾರು

ನೆಚ್ಚಿನ ಕಾರಿನ ಮೇಲೆ ಒಂದೇ ಒಂದು ಗೆರೆ ಬಿದ್ದರೂ ಮನಸ್ಸಿಗೆ ನೋವಾಗುತ್ತದೆ. ಅದರಲ್ಲೂ ಬೇರೊಬ್ಬರ ನಿರ್ಲಕ್ಷ್ಯದಿಂದಾಗಿ ಕಾರಿಗೆ ಹಾನಿಯಾದರೆ ಆಗುವ ನೋವು ಹೇಳಲಾಸಾಧ್ಯ. ನ್ಯೂಸ್ 18 ಆಟೋ ಪ್ರಕಟಿಸಿರುವ ವರದಿಯ ಪ್ರಕಾರ, ಇಟಲಿಯ ಫುಟ್ಬಾಲ್ ಆಟಗಾರ ಫೆಡೆರಿಕೊ ಮಾರ್ಚೆಟ್ಟಿ ಸರ್ವೀಸ್ ಸೆಂಟರ್ ಸಿಬ್ಬಂದಿಯ ಅಚಾತುರ್ಯಕ್ಕೆ ಭಾರೀ ಬೆಲೆ ತೆರಬೇಕಾಗಿದೆ. ಫೆಡೆರಿಕೊ ಮಾರ್ಚೆಟ್ಟಿ ತಮ್ಮ ಹೊಸ ಫೆರಾರಿ 812 ಕಾರ್ ಅನ್ನು ಸರ್ವಿಸ್ ಸೆಂಟರ್'ಗೆ ನೀಡಿದ್ದರು.

ಸರ್ವೀಸ್ ಸೆಂಟರ್ ಸಿಬ್ಬಂದಿಯಿಂದ ಅಪಘಾತಕ್ಕೀಡಾದ ಫುಟ್ಬಾಲ್ ಆಟಗಾರನ ಕಾರು

ಸರ್ವಿಸ್ ಆದ ಕಾರು ಹಿಂದಿರುಗುವಾಗ ಸರ್ವೀಸ್ ಸೆಂಟರ್ ಸಿಬ್ಬಂದಿಯಿಂದ ಅಪಘಾತಕ್ಕೀಡಾಗಿದೆ. ಟ್ವಿಟರ್'ನಲ್ಲಿ ಈ ಅಪಘಾತದ ಚಿತ್ರಗಳು ಬಿಡುಗಡೆಯಾಗಿವೆ. ಈ ಚಿತ್ರಗಳಲ್ಲಿ ಅಪಘಾತದಿಂದಾಗಿ ಕಾರು ಹಾನಿಗೀಡಾಗಿರುವುದನ್ನು ಕಾಣಬಹುದು. ಕಾರಿನ ಮುಂಭಾಗ, ವ್ಹೀಲ್ ಹಾಗೂ ಎಂಜಿನ್'ಗಳಿಗೆ ಈ ಅಪಘಾತದಲ್ಲಿ ಹಾನಿಯಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸರ್ವೀಸ್ ಸೆಂಟರ್ ಸಿಬ್ಬಂದಿಯಿಂದ ಅಪಘಾತಕ್ಕೀಡಾದ ಫುಟ್ಬಾಲ್ ಆಟಗಾರನ ಕಾರು

ಅಪಘಾತಕ್ಕೀಡಾಗಿರುವ ಈ ಕಾರ್ ಅನ್ನು ಇನ್ನು ಮುಂದೆ ಬಳಸಲು ಸಾಧ್ಯವಾಗುವುದಿಲ್ಲ. ಫೆಡೆರಿಕೊ ತಮ್ಮ ನೆಚ್ಚಿನ ಕಾರಿನ ಸ್ಥಿತಿಯನ್ನು ನೋಡಿ ಕೋಪಗೊಂಡಿದ್ದರೂ ಸಭ್ಯವಾಗಿಯೇ ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್'ನಲ್ಲಿ ಈ ಅಪಘಾತದಲ್ಲಿ ಯಾರೂ ಸಾವನ್ನಪ್ಪಿಲ್ಲ ಎಂಬುದೇ ಸಮಾಧಾನಕರ ಸುದ್ದಿಯಾಗಿದೆ ಎಂದು ಹೇಳಿದ್ದಾರೆ.

ಸರ್ವೀಸ್ ಸೆಂಟರ್ ಸಿಬ್ಬಂದಿಯಿಂದ ಅಪಘಾತಕ್ಕೀಡಾದ ಫುಟ್ಬಾಲ್ ಆಟಗಾರನ ಕಾರು

ಫೆಡೆರಿಕೊ ಅವರ ಈ ಗುಣವನ್ನು ಅವರ ಅಭಿಮಾನಿಗಳು ಕೊಂಡಾಡಿದ್ದಾರೆ. ಫೆರಾರಿ 812 ಕಂಪನಿಯ ಅತ್ಯಂತ ಶಕ್ತಿಶಾಲಿ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 211 ಕಿ.ಮೀಗಳಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸರ್ವೀಸ್ ಸೆಂಟರ್ ಸಿಬ್ಬಂದಿಯಿಂದ ಅಪಘಾತಕ್ಕೀಡಾದ ಫುಟ್ಬಾಲ್ ಆಟಗಾರನ ಕಾರು

ಫೆರಾರಿ 812 ಕಾರಿನ ಬೆಲೆ ಸುಮಾರು 3 ಲಕ್ಷ ಯುರೋ ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.2.65 ಕೋಟಿಗಳಾಗಿದೆ. ಅಪಘಾತದ ನಂತರ ಫೆಡೆರಿಕೊರವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಈ ಚಿತ್ರದಲ್ಲಿ ಕಾರಿನ ಮುಂಭಾಗವು ಹಾನಿಯಾಗಿರುವುದನ್ನು ಕಾಣಬಹುದು.

ಸರ್ವೀಸ್ ಸೆಂಟರ್ ಸಿಬ್ಬಂದಿಯಿಂದ ಅಪಘಾತಕ್ಕೀಡಾದ ಫುಟ್ಬಾಲ್ ಆಟಗಾರನ ಕಾರು

ಈ ಕಾರು ಹೆಚ್ಚು ಶಕ್ತಿಶಾಲಿಯಾಗಿದ್ದು, ಅದನ್ನು ಚಾಲನೆ ಮಾಡಲು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಸರ್ವೀಸ್ ಸೆಂಟರ್ ಸಿಬ್ಬಂದಿ ಕಾರಿನಲ್ಲಿ ಹೆಚ್ಚಿನ ಥ್ರೊಟಲ್ ಬಳಸಿದ್ದರಿಂದ ಕಾರು ನಿಯಂತ್ರಣ ತಪ್ಪಿ ಇತರ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ.

Most Read Articles

Kannada
English summary
Football player Ferrari car crashed by serviceman. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X