ಹೊಲವನ್ನು ಉಳುಮೆ ಮಾಡಿದ ಫೋರ್ಡ್ ಎಂಡೀವರ್..!

ಫೋರ್ಡ್ ಎಂಡೀವರ್ ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಪೂರ್ಣ ಪ್ರಮಾಣದ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ತನ್ನ ವಿಶಿಷ್ಟ ಲುಕ್, ಆಫ್ ರೋಡ್ ಸಾಮರ್ಥ್ಯದಿಂದಾಗಿ ಈ ಎಸ್‍‍‍ಯುವಿಯು ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ.

ಹೊಲವನ್ನು ಉಳುಮೆ ಮಾಡಿದ ಫೋರ್ಡ್ ಎಂಡೀವರ್..!

ಎಸ್‍‍ಯುವಿಗಳನ್ನು ಹೊಂದಿರುವ ಮಾಲೀಕರು, ತಮ್ಮ ವಾಹನಗಳನ್ನು ಆಫ್ ರೋಡ್‍‍ಗಳಲ್ಲಿ ಚಾಲನೆ ಮಾಡುವುದರ ಜೊತೆಗೆ ಬೇರೆ ಕೆಲಸಗಳಿಗೂ ಬಳಸಿ ತಮ್ಮ ಎಸ್‍‍ಯುವಿಗಳ ನಿಜವಾದ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾರೆ. ಇನ್ನು ಕೆಲವರು ತಮ್ಮ ಎಸ್‍‍ಯುವಿಗಳಿಂದ ಹೆವಿ ಸಾಮರ್ಥ್ಯದ ವಾಹನಗಳನ್ನು ಎಳೆಯುವ ಸಾಹಸಕ್ಕೆ ಮುಂದಾಗುತ್ತಾರೆ.

ಹೊಲವನ್ನು ಉಳುಮೆ ಮಾಡಿದ ಫೋರ್ಡ್ ಎಂಡೀವರ್..!

ಇದರ ಜೊತೆಗೆ ಹಗ್ಗ ಜಗ್ಗಾಟ, ಜಮಿನುಗಳನ್ನು ಉಳುಮೆ ಮಾಡಲು ಸಹ ಬಳಸುತ್ತಾರೆ. ಇದೇ ರೀತಿಯ ಘಟನೆಯೊಂದು ನಡೆದಿದ್ದು, ಫೋರ್ಡ್ ಎಂಡೀವರ್ ಜಮೀನನ್ನು ಉಳುಮೆ ಮಾಡುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ.

ಹೊಲವನ್ನು ಉಳುಮೆ ಮಾಡಿದ ಫೋರ್ಡ್ ಎಂಡೀವರ್..!

ಈ ವೀಡಿಯೊವನ್ನು ವಿಶಾಲ್ ಸಿಂಗ್ ಕೈಂತ್‍ ತಮ್ಮ ಯುಟ್ಯೂಬ್ ಚಾನೆಲ್‍‍ನಲ್ಲಿ ಅಪ್‍‍ಲೋಡ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಫೋರ್ಡ್ ಎಂಡೀವರ್‍‍ನ ಹಿಂಭಾಗಕ್ಕೆ ನೇಗಿಲನ್ನು ಕಟ್ಟಲಾಗಿದೆ. ಫೋರ್ಡ್ ಎಂಡೀವರ್ ಈ ನೇಗಿಲಿನ ನೆರವಿನಿಂದ ಜಮೀನನ್ನು ಉಳುಮೆ ಮಾಡುತ್ತಾ ಮುಂದೆ ಸಾಗುತ್ತದೆ.

ಹೊಲವನ್ನು ಉಳುಮೆ ಮಾಡಿದ ಫೋರ್ಡ್ ಎಂಡೀವರ್..!

ನೇಗಿಲನ್ನು ಹೊತ್ತ ಎಂಡೀವರ್ ಎಷ್ಟು ಸರಾಗವಾಗಿ ಸಾಗುತ್ತದೆ ಎಂದರೆ, ಈ ಎಸ್‍‍ಯುವಿಯನ್ನು ಉಳುಮೆ ಮಾಡಲು ತಯಾರಿಸಲಾಗಿದೆ ಎಂಬಂತೆ ಸಾಗುತ್ತದೆ. ಉಳುಮೆ ಮಾಡುವ ಯಾವುದೇ ಹಂತದಲ್ಲೂ ಎಂಡೀವರ್ ಕಷ್ಟ ಪಡದೇ ಇರುವುದನ್ನು ಕಾಣಬಹುದು.

ಹೊಲವನ್ನು ಉಳುಮೆ ಮಾಡಿದ ಫೋರ್ಡ್ ಎಂಡೀವರ್..!

ಟ್ರಾಕ್ಟರ್‍‍ಗಳು ಕಡಿಮೆ ಆರ್‍‍ಪಿ‍ಎಂನಲ್ಲಿಯೂ ಹೆಚ್ಚು ಪ್ರಮಾಣದ ಟಾರ್ಕ್ ಉತ್ಪಾದಿಸುವ ಕಾರಣಕ್ಕೆ ರೈತರು ಟ್ರಾಕ್ಟರ್‍‍ಗಳ ಸಹಾಯದಿಂದ ಉಳುಮೆ ಮಾಡುತ್ತಾರೆ. ಇದರಿಂದಾಗಿ ಜಮೀನುಗಳನ್ನು ಉತ್ತಮವಾಗಿ ಉಳುಮೆ ಮಾಡಬಹುದಾಗಿದೆ.

ಹೊಲವನ್ನು ಉಳುಮೆ ಮಾಡಿದ ಫೋರ್ಡ್ ಎಂಡೀವರ್..!

ಎಂಡೀವರ್ ಎಸ್‍‍ಯುವಿಯನ್ನು ಬಲಿಷ್ಟವಾಗಿ ನಿರ್ಮಿಸಲಾಗಿದೆ. ಈ ಎಸ್‍‍ಯುವಿಯು ಆಕರ್ಷಕ ಲುಕ್ ಹೊಂದಿದ್ದು, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಯಾವುದೇ ಪರಿಸ್ಥಿತಿಯಲ್ಲೂ ಸರಾಗವಾಗಿ ಚಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಹೊಲವನ್ನು ಉಳುಮೆ ಮಾಡಿದ ಫೋರ್ಡ್ ಎಂಡೀವರ್..!

ಈ ಎಸ್‍‍ಯುವಿಯಲ್ಲಿ ನಾರ್ಮಲ್, ಸ್ನೋ(ಮಡ್), ಸ್ಯಾಂಡ್ ಹಾಗೂ ರಾಕ್ ಎಂಬ ಡ್ರೈವಿಂಗ್ ಮೋಡ್‍‍‍ಗಳನ್ನು ನೀಡಲಾಗಿದೆ. ಈ ಮೋಡ್‍‍ಗಳು ತಮ್ಮದೇ ಆದ ಪ್ರಯೋಜನಗಳನ್ನು ಹೊಂದಿವೆ. ಇವುಗಳು ಥ್ರಾಟಲ್ ರೆಸ್ಪಾನ್ಸ್ ಅನ್ನು ಕಂಟ್ರೋಲ್ ಮಾಡುತ್ತವೆ. ಟ್ರಾಕ್ಷನ್ ಕಂಟ್ರೋಲ್‍‍ನಿಂದಾಗಿ ಹೆಚ್ಚು ಟ್ರಾಕ್ಷನ್ ಹಾಗೂ ವ್ಹೀಲ್‍‍‍ಗಳನ್ನು ಕಡಿಮೆ ಸ್ಪಿನ್ ಮಾಡುತ್ತವೆ. ಇದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಹೊಲವನ್ನು ಉಳುಮೆ ಮಾಡಿದ ಫೋರ್ಡ್ ಎಂಡೀವರ್..!

ಈ ವೀಡಿಯೊದಲ್ಲಿರುವ ಫೋರ್ಡ್ ಎಂಡೀವರ್ ಚಾಲಕನು ಈ ಎಸ್‍‍ಯುವಿಯನ್ನು ಮಡ್ ಮೋಡ್‍‍ನಲ್ಲಿಟ್ಟು ನೇಗಿಲಿನ ಸಹಾಯದಿಂದ ಉಳುಮೆ ಮಾಡಿರುವ ಸಾಧ್ಯತೆಗಳಿವೆ. ಫೋರ್ಡ್ ಎಂಡೀವರ್ ಎಸ್‍‍ಯುವಿಯನ್ನು ಎರಡು ರೀತಿಯ ಡೀಸೆಲ್ ಎಂಜಿನ್‍‍ಗಳಲ್ಲಿ ಮಾರಾಟ ಮಾಡಲಾಗುವುದು.

2.2 ಲೀಟರಿನ ಡೀಸೆಲ್ ಎಂಜಿನ್ 158 ಬಿ‍‍ಹೆಚ್‍‍ಪಿ ಪವರ್ ಹಾಗೂ 385 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ದೊಡ್ಡ ಗಾತ್ರದ 3.2 ಲೀಟರ್ ಡೀಸೆಲ್ ಎಂಜಿನ್ 197 ಬಿ‍‍ಹೆಚ್‍‍ಪಿ ಪವರ್ ಹಾಗೂ 470 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಲವನ್ನು ಉಳುಮೆ ಮಾಡಿದ ಫೋರ್ಡ್ ಎಂಡೀವರ್..!

ಈ ವೀಡಿಯೊದಲ್ಲಿರುವ ಫೋರ್ಡ್ ಎಂಡೀವರ್ ಎಸ್‍‍ಯುವಿಯಲ್ಲಿ ದೊಡ್ಡ ಗಾತ್ರದ ಎಂಜಿನ್ ಅಳವಡಿಸಲಾಗಿದೆ. ಇದರ ಜೊತೆಗೆ 4 ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರುವ ಟೆರೇನ್ ರೆಸ್ಪಾನ್ಸ್ ಸಿಸ್ಟಂ ಸಹ ಫೋರ್ಡ್ ಎಂಡೀವರ್‍‍ಗೆ ನೆರವಾಗಿದೆ.

Most Read Articles

Kannada
English summary
Ford Endeavour suv used to plough farm. Read in Kannada.
Story first published: Monday, January 20, 2020, 11:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X