ಫೋರ್ಡ್ ಕಾರುಗಳಲ್ಲಿ ತಾಂತ್ರಿಕ ದೋಷ- ಬಲಿಯಾಗುತ್ತಿವೆ ಅಮಾಯಕರ ಜೀವ..!

ವಾಹನಗಳ ಎಂಜಿನ್ ವಿಭಾಗದಲ್ಲಿ ಆಗುವ ಕೆಲವು ತಾಂತ್ರಿಕ ದೋಷಗಳ ಬಗ್ಗೆ ಆಗಾಗ ಗಮನಹರಿಸದೇ ಹೋದಲ್ಲಿ ಅಪಾಯ ತಪ್ಪಿದ್ದಲ್ಲ. ಕೆಲವೊಮ್ಮೆ ಅದು ದೊಡ್ಡ ಅನಾಹುತವನ್ನೇ ಸೃಷ್ಠಿಸಬಲ್ಲದು. ಇಲ್ಲೂ ಕೂಡಾ ನಡೆದಿದ್ದು ಅಂತದ್ದೆ ಘಟನೆ.

ಫೋರ್ಡ್ ಕಾರುಗಳಲ್ಲಿ ತಾಂತ್ರಿಕ ದೋಷ- ಬಲಿಯಾಗುತ್ತಿವೆ ಅಮಾಯಕರ ಜೀವ..!

ಕಾರಿನಲ್ಲಿ ಕಂಡುಬಂದ ಸ್ಪೋಟದ ಶಬ್ದದ ಬಗ್ಗೆ ನಿರ್ಲಕ್ಷ್ಯಕ್ಕೆ ಮಾಡಿದ ತಪ್ಪಿಗೆ ಫೋರ್ಡ್ ಐಕಾನ್ ಸೆಡಾನ್ ಕಾರಿನ ಸಮೇತ ಮಾಲೀಕ ಕೂಡಾ ಸುಟ್ಟುಹೋಗಿರುವ ಘಟನೆ ನಡೆದಿದ್ದು, ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಾಗ ಕಾರಿನಿಂದ ಹೊರ ಬರಲು ಸಾಧ್ಯವಾಗದೇ ಕಾರು ಚಾಲನೆ ಮಾಡುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್‌ನೊಬ್ಬರು ಜೀವಂತವಾಗಿ ಸುಟ್ಟುಹೋಗಿರುವ ದುರಂತ ನಡೆದಿದೆ.

ಫೋರ್ಡ್ ಕಾರುಗಳಲ್ಲಿ ತಾಂತ್ರಿಕ ದೋಷ- ಬಲಿಯಾಗುತ್ತಿವೆ ಅಮಾಯಕರ ಜೀವ..!

ಕಾರಿನ ಎಂಜಿನ್ ವಿಭಾಗದಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದಾಗಿಯೇ ಐಕಾನ್ ಕಾರು ಬೆಂಕಿಗಾಹುತಿಯಾಗಿದ್ದು, ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಪವನ್ ಧೀಮನ್(45) ಪ್ರಾಣಕಳೆದುಕೊಂಡಿದ್ದಾರೆ.

ಫೋರ್ಡ್ ಕಾರುಗಳಲ್ಲಿ ತಾಂತ್ರಿಕ ದೋಷ- ಬಲಿಯಾಗುತ್ತಿವೆ ಅಮಾಯಕರ ಜೀವ..!

ದೆಹಲಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಪವನ್ ಅವರು ನೈಟ್ ಶಿಫ್ಟ್ ಮುಗಿಸಿ ಮುಂಜಾನೆ 5 ಗಂಟೆಗೆ ಕಚೇರಿಯಿಂದ ಗ್ರೇಟರ್ ನೋಯ್ಡಾದತ್ತ ತೆರಳುತ್ತಿದ್ದರು. ಈ ವೇಳೆ ಮನೆ ಮುಟ್ಟಲು ಕೇವಲ 500 ಮೀಟರ್ ಅಂತರದಲ್ಲಿರುವಾಗಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಫೋರ್ಡ್ ಕಾರುಗಳಲ್ಲಿ ತಾಂತ್ರಿಕ ದೋಷ- ಬಲಿಯಾಗುತ್ತಿವೆ ಅಮಾಯಕರ ಜೀವ..!

ತಕ್ಷಣವೇ ರಸ್ತೆ ಬದಿಯಲ್ಲಿ ಕಾರ್ ಪಾರ್ಕ್ ಮಾಡಿ ಎನಾಗಿದೆ ಎಂದು ನೋಡುವಷ್ಟರಲ್ಲಿ ಡೋರ್ ಲಾಕ್ ಸಹ ಜಖಂಗೊಂಡಿವೆ. ಇದರಿಂದ ಕಾರಿನಿಂದ ಹೊರಬರಲು ಸಾಕಷ್ಟು ಪ್ರಯತ್ನಪಟ್ಟರು ಅದು ಸಾಧ್ಯವಾಗಿಲ್ಲ.

ಫೋರ್ಡ್ ಕಾರುಗಳಲ್ಲಿ ತಾಂತ್ರಿಕ ದೋಷ- ಬಲಿಯಾಗುತ್ತಿವೆ ಅಮಾಯಕರ ಜೀವ..!

ಬೆಳಗಿನ ಜಾವ ಆಗಿದ್ದರಿಂದ ಸ್ಥಳೀಯರಿಗೂ ಅಲ್ಲಿ ಎನು ನಡೆಯುತ್ತಿದೆ ಎನ್ನುವುದು ಸಹ ಗೊತ್ತಾಗಿಲ್ಲ. ಯಾವಾಗ ಬೆಂಕಿಯ ತೀವ್ರತೆ ಹೆಚ್ಚಾಗುತ್ತಾ ಬಂದಿತೋ ಆಗಲೇ ಸ್ಥಳೀಯರು ಕಾರಿನಲ್ಲಿದ್ದ ಪವನ್ ಅವರನ್ನು ರಕ್ಷಣೆ ಮಾಡಲು ಯತ್ನಿಸಿದ್ದಾರೆ.

ಫೋರ್ಡ್ ಕಾರುಗಳಲ್ಲಿ ತಾಂತ್ರಿಕ ದೋಷ- ಬಲಿಯಾಗುತ್ತಿವೆ ಅಮಾಯಕರ ಜೀವ..!

ಅಷ್ಟರಲ್ಲೇ ಕಾರಿನಲ್ಲಿ ಪ್ರತಿಯೊಂದು ಭಾಗಕ್ಕೂ ಬೆಂಕಿ ಹರಡಿಕೊಂಡ ಪರಿಣಾಮ ಪವನ್ ಕಾರಿನ ಒಳಭಾಗದಲ್ಲೇ ಉಸಿರುಗಟ್ಟಿ ಪ್ರಾಣಕಳೆದುಕೊಂಡಿದ್ದರು. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದಿಂದಲೂ ಪವನ್ ಅವರನ್ನು ರಕ್ಷಣೆ ಮಾಡುವ ಪ್ರಯತ್ನ ಕೈ ಮೀರಿಹೊಗಿತ್ತು.

ಫೋರ್ಡ್ ಕಾರುಗಳಲ್ಲಿ ತಾಂತ್ರಿಕ ದೋಷ- ಬಲಿಯಾಗುತ್ತಿವೆ ಅಮಾಯಕರ ಜೀವ..!

ಕಾರು ಚಾಲನೆಯಲ್ಲಿರುವಾಗಲೇ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಕೆಲವೇ ನಿಮಿಷಗಳಲ್ಲಿ ಫೋರ್ಡ್ ಐಕಾನಿಕ್ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ ಎನ್ನಲಾಗಿದೆ.

ಫೋರ್ಡ್ ಕಾರುಗಳಲ್ಲಿ ತಾಂತ್ರಿಕ ದೋಷ- ಬಲಿಯಾಗುತ್ತಿವೆ ಅಮಾಯಕರ ಜೀವ..!

ಘಟನೆ ನಡೆದ ಸ್ಥಳ ಗ್ರೇಟರ್ ನೋಯ್ಡಾ ಹೊರವಲಯವಾಗಿದ್ದರಿಂದ ಬೆಂಕಿ ಕೆನ್ನಾಲಿಗೆಯಿಂದ ಇತರೆ ಯಾವುದೇ ಹಾನಿಯಾಗಿಲ್ಲವಾದರೂ ಎಂಜಿನ್ ವಿಭಾಗದಲ್ಲಿ ಆಗುವ ಸಣ್ಣಪುಟ್ಟ ದೋಷಗಳು ಜೀವಹಾನಿಗೂ ಕಾರಣವಾಗುತ್ತವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಫೋರ್ಡ್ ಕಾರುಗಳಲ್ಲಿ ತಾಂತ್ರಿಕ ದೋಷ- ಬಲಿಯಾಗುತ್ತಿವೆ ಅಮಾಯಕರ ಜೀವ..!

ಸದ್ಯ ಈ ಘಟನೆ ಬಗ್ಗೆ ದೂರು ದಾಖಲಿಸಿಕೊಂಡಿರುವ ನೋಯ್ಡಾ ಪೊಲೀಸರು ಘಟನೆಗೆ ನಿಖರ ಕಾರಣ ಏನು ಎನ್ನುವ ಕುರಿತು ತನಿಖೆ ನಡೆಸುತ್ತಿದ್ದು, ಕಾರಿನಲ್ಲಿ ಎಂಜಿನ್ ವಿಭಾಗದಲ್ಲಿ ಕಂಡುಬರುವ ಸಣ್ಣಪುಟ್ಟ ತಾಂತ್ರಿಕ ದೋಷಗಳ ಬಗ್ಗೆ ಆಗಾಗ ತಂತ್ರಜ್ಞರ ಬಳಿ ಪರಿಶೀಲನೆ ಮಾಡಿಸುವುದು ಒಳಿತು.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಫೋರ್ಡ್ ಕಾರುಗಳಲ್ಲಿ ತಾಂತ್ರಿಕ ದೋಷ- ಬಲಿಯಾಗುತ್ತಿವೆ ಅಮಾಯಕರ ಜೀವ..!

ಇನ್ನೊಂದು ವಿಚಾರವನ್ನು ನಾವಿಲ್ಲಿ ಹೇಳುವುದಾದರೇ, ಅಮೆರಿಕನ್ ಬ್ರಾಂಡ್ ಫೋರ್ಡ್ ಕಾರುಗಳ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಘಟನೆ ಇದೇ ಮೊದಲೇನು ಅಲ್ಲಾ ಬಿಡಿ. ಈ ಹಿಂದೆ ಯಾದಗಿರಿ ಜಿಲ್ಲೆಯ ಶಹಾಪುರ ಮತ್ತು ಗುಜರಾತ್‌ನ ವಡೋದರದಲ್ಲೂ ಎಂಡೀವರ್ ಕಾರುಗಳಲ್ಲೂ ಇಂತದ್ದೆ ಅವಘಡ ಸಂಭವಿಸಿತ್ತು.

ಫೋರ್ಡ್ ಕಾರುಗಳಲ್ಲಿ ತಾಂತ್ರಿಕ ದೋಷ- ಬಲಿಯಾಗುತ್ತಿವೆ ಅಮಾಯಕರ ಜೀವ..!

ಎಂಡೀವರ್ ಕಾರು ಚಾಲನೆ ಮಾಡುತ್ತಿದ್ದ ಮಿಹಿರ್ ಪಾಂಚಾಲ್(41) ಕೂಡಾ ಕಾರಿನ ಸಮೇತ ಜೀವಂತವಾಗಿ ಸುಟ್ಟಿರುವ ದುರಂತ ಘಟನೆ ವಡೋದರಲ್ಲಿ ನಡೆದಿದ್ದರೇ, ಯಾದಗಿರಿ ನಡೆದ ಎಂಡೀವರ್ ಕಾರಿನ ಬೆಂಕಿ ಅನಾಹುತ ಪ್ರಕರಣದಲ್ಲಿ ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರು.

MOST READ: ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!

ಫೋರ್ಡ್ ಕಾರುಗಳಲ್ಲಿ ತಾಂತ್ರಿಕ ದೋಷ- ಬಲಿಯಾಗುತ್ತಿವೆ ಅಮಾಯಕರ ಜೀವ..!

ಫೋರ್ಡ್ ಕಾರುಗಳಲ್ಲಿ ಪದೇ ಪದೇ ತಾಂತ್ರಿಕ ದೋಷಗಳು ಕಂಡುಬರುತ್ತಿರುವುದಲ್ಲದೇ ಬೆಂಕಿ ಅನಾಹುತ ನಡೆಯುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದ್ದು, ಪೂರ್ಣ ಪ್ರಮಾಣದ ತನಿಖೆ ನಂತರವಷ್ಟೇ ಇಂತಹ ಘಟನೆಗಳಿಗೆ ನಿಖರ ಕಾರಣ ತಿಳಿದು ಬರಲಿದೆ.

ಫೋರ್ಡ್ ಕಾರುಗಳಲ್ಲಿ ತಾಂತ್ರಿಕ ದೋಷ- ಬಲಿಯಾಗುತ್ತಿವೆ ಅಮಾಯಕರ ಜೀವ..!

ಮತ್ತೊಂದು ವಿಚಾರ ಅಂದ್ರೆ ಕಾರು ಚಾಲಕರು ದೂರದ ಪ್ರಯಾಣದ ವೇಳೆ ಯಾವುದೇ ಕಾರಣಕ್ಕೂ ಎಂಜಿನ್‌ಗೆ ಬಿಡುವು ಇಲ್ಲದೇ ಚಾಲನೆ ಮಾಡಬೇಡಿ. ಕಾರಿನ ಎಂಜಿನ್ ಅತಿಯಾಗಿ ಬಿಸಿಯಾಗುವುದರಿಂದಲೂ ಇಂತಹ ಘಟನೆಗಳು ನಡೆಯುವ ಅವಕಾಶ ಇರುತ್ತೆ. ಹೀಗಾಗಿ ಎಂಜಿನ್ ಬಿಸಿಯಾಗಿದಲ್ಲಿ ಸ್ವಲ್ಪ ವಿಶ್ರಾಂತಿ ನಂತರವೇ ಚಾಲನೆ ಕೈಗೊಳ್ಳಿ.

Most Read Articles

Kannada
Read more on ಫೋರ್ಡ್ ford
English summary
Ford Ikon Catches Fire In Greater Noida: Software Engineer Burnt To Death. Read in Kannada.
Story first published: Wednesday, December 26, 2018, 15:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X