ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಅಂದವಾದ ರಸ್ತೆಗಳು, ಕೈಯೊಂದು ಸೂಪರ್ ಕಾರು. ಇಷ್ಟು ಇದ್ರೆ ಯಾರಿಗೆ ತಾನೆ ಸಮ್ಮನೆ ಕೂರಲು ಮನಸಾಗುತ್ತೆ ಹೇಳಿ. ಆದರೆ ಅದು ಮಿತಿಯೊಳಗೆ ಇದ್ರೆ ಎಲ್ಲರಿಗೂ ಒಳ್ಳೆಯದು. ಹೀಗೆ ಇಲ್ಲೊಬ್ಬ ತನ್ನ ಸೂಪರ್ ಕಾರಿನಲ್ಲಿ ಎಲ್ಲೆಂದರಲ್ಲೆ ಟಾಪ್ ಸ್ಪೀಡ್‌ನಲ್ಲಿ ಚಾಲನೆ ಮಾಡುತ್ತಿರುವುದಲ್ಲದೇ ಯುಟ್ಯೂಬ್‌ನಲ್ಲಿ ತನ್ನ ಕಾರ್ ಡ್ರೈವಿಂಗ್ ಶೋಕಿಯನ್ನು ಲೈವ್ ಮಾಡಲು ಹೋಗಿ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾನೆ.

ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಅತಿಯಾದ ವೇಗದ ವಾಹನ ಚಾಲನೆ ಪ್ರಾಣಕ್ಕೆ ಕುತ್ತು ತರುತ್ತೆ ಅಂತಾ ಗೊತ್ತಿದ್ರು ಬಹುತೇಕ ವಾಹನ ಸವಾರರು ಸಾರಿಗೆ ನಿಯಮಗಳನ್ನು ಮೀರಿ ಸಾರ್ವಜನಿಕ ಪ್ರದೇಶಗಳಲ್ಲೂ ಅತಿ ವೇಗದಲ್ಲಿ ವಾಹನ ಸವಾರಿಯನ್ನು ಮಾಡುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ತಪ್ಪು ಮಾಡಿದವರಿಗಿಂತ ಅಮಾಯಕರೇ ಹೆಚ್ಚು ಬಲಿಯಾಗುತ್ತಿದ್ದು, ಟಾಪ್ ಸ್ಪೀಡ್ ಶೋಕಿ ಹಿಂದೆ ಬಿದ್ದಿದ್ದ ಫೋರ್ಡ್ ಮಸ್ಟಾಂಗ್ ಕಾರು ಮಾಲೀಕನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಹೈವೇ ಆದ್ರು ಸರಿ, ಸಾಮಾನ್ಯ ರಸ್ತೆಗಳಾದ್ರು ಸರಿ 300 ಕಿ.ಮಿ ಟಾಪ್ ಸ್ಪೀಡ್‌ನಲ್ಲೇ ಕಾರು ಚಾಲನೆ ಮಾಡುತ್ತಿದ್ದ ಫೋರ್ಡ್ ಮಸ್ಟಾಂಗ್ ಕಾರು ಮಾಲೀಕನು ಯುಟ್ಯೂಬ್‌ನಲ್ಲಿ ಲೈವ್ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಪ್ರತಿ ಬಾರಿ ಕಾರು ಚಾಲನೆ ಮಾಡುತ್ತಿರುವಾಗಲೂ ಯುಟ್ಯೂಬ್‌ನಲ್ಲಿ ಲೈವ್‌ಗೆ ಬರುತ್ತಿದ್ದ ಫೋರ್ಡ್ ಮಸ್ಟಾಂಗ್ ಕಾರು ಮಾಲೀಕನು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದನಲ್ಲದೇ ಅದೆಷ್ಟೋ ಬಾರಿ ಪೊಲೀಸರಿಗೂ ಯಾಮಾರಿಸಿ ಟಾಪ್ ಸ್ಪೀಡ್‌ನಲ್ಲೇ ಕಾರು ಚಾಲನೆ ಮಾಡುತ್ತಿದ್ದ.

ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಇದರಿಂದ ಕೇವಲ ಸಾರ್ವಜನಿಕನ್ನು ಅಷ್ಟೇ ಅಲ್ಲ ಪೊಲೀಸರನ್ನು ನಿದ್ದೆಗೆಡಿಸಿದ್ದ ಫೋರ್ಡ್ ಮಸ್ಟಾಂಗ್ ಕಾರು ಮಾಲೀಕರು ಕೊನೆಗೂ ಸಿಕ್ಕಿಬಿದ್ದಿದ್ದು, ಯುಟ್ಯೂಬ್‌ನಲ್ಲಿ ಲೈವ್ ಮಾಡುತ್ತಿರುವಾಗಲೇ ಕಾರು ಮಾಲೀಕನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ ಇದು ನಡೆದಿರುವುದು ಉತ್ತರ ಅಮೆರಿಕದ ಮಿಸ್ಸಿಸ್ಸಿಪ್ಪಿ ರಾಜ್ಯದ ಬ್ರಾಂಡನ್ ನಗರದಲ್ಲಿ.

ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಯುಟ್ಯೂಬ್‌ನಲ್ಲಿ ಲೈವ್ ಮಾಡುತ್ತಿರುವಾಗ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ರೆಡ್‌ಹ್ಯಾಂಡ್ ಆಗಿ ಫೋರ್ಡ್ ಮಸ್ಟಾಂಗ್ ಕಾರು ಮಾಲೀಕನ್ನು ಬಂಧಿಸಿರುವ ಮಿಸ್ಸಿಸ್ಸಿಪ್ಪಿ ಪೊಲೀಸರು, ಸಾರ್ವಜನಿಕ ಪ್ರದೇಶಗಳಲ್ಲಿ ಹೈ ಸ್ಪೀಡ್ ಡ್ರೈವ್ ಜೊತೆಗೆ ಹತ್ತಕ್ಕೂ ಹೆಚ್ಚು ಕೇಸ್‌ಗಳನ್ನು ಜಡಿದಿದ್ದಾರೆ.

MOST READ: ಹಾಸನದ ಬಳಿ ಬರೋಬ್ಬರಿ 300ಕಿ.ಮೀ ಸ್ಪೀಡ್‌‌ನಲ್ಲಿ ಬೈಕ್ ರೈಡ್ ಮಾಡಿದ ಯುವಕ

ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಹೈ ಸ್ಪೀಡ್ ಕಾರು ಚಾಲನೆ ಮೂಲಕ ಯುಟ್ಯೂಬ್‌ನಲ್ಲಿ ಸೆಲೆಬ್ರಿಟಿಯಾಗಿ ಜನಪ್ರಿಯವಾಗಿದ್ದ ಫೋರ್ಡ್ ಮಸ್ಟಾಂಗ್ ಕಾರು ಮಾಲೀಕ ಬ್ಯೂ ಅಲಾನ್ ರೊಗೆಲ್(38) ತನ್ನ ರ‍್ಯಾಷ್ ಡ್ರೈವಿಂಗ್ ಮೂಲಕವೇ ಲಕ್ಷಾಂತರ ಜನ ಫಾಲೋವರ್ಸ್ ಹೊಂದಿದ್ದು, ಅವರ ಮೆಚ್ಚುಗೆಗಾಗಿ ಆಗಾಗ ಲೈವ್‌ಗೆ ಬರುವ ಮೂಲಕ ಎಲ್ಲೆಂದರಲ್ಲೆ ಟಾಪ್ ಸ್ಪೀಡ್ ಹುಚ್ಚಾಟ ಪ್ರದರ್ಶನ ಮಾಡುತ್ತಿದ್ದ.

ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಇದಲ್ಲದೇ ಹೈ ಸ್ಪೀಡ್ ಕಾರಿನ ಚಾಲನೆ ವೇಳೆಯೇ ಯುಟ್ಯೂಬ್ ಲೈವ್‌ನಲ್ಲಿಯೇ ಮಾರಕಾಸ್ತ್ರಗಳನ್ನು ಸಹ ಪ್ರದರ್ಶನ ಮಾಡುತ್ತಿದ್ದ ಈ ಭೂಪ ವಿವಿಧ ಮಾದರಿಯ ಮಾರಕಾಸ್ತ್ರಗಳ ಸಂಗ್ರಹವೇ ನನ್ನ ಬಳಿ ಇರುವುದಾಗಿ ಹೇಳುವ ಮೂಲಕ ಲೈವ್‌ನಲ್ಲಿ ಅತಿ ಹೆಚ್ಚು ಲೈಕ್ ಗಿಟ್ಟಿಸಿಕೊಳ್ಳಲು ಗಿಮಿಕ್ ಮಾಡುತ್ತಿದ್ದ.

MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಇದಕ್ಕೆ ಸಾಥ್ ನೀಡುತ್ತಿದ್ದ ಈತನ ಪತ್ನಿ ಕ್ರಿಸ್ಟಿನಾ ಆಲ್ ರೊಗೆಲ್ ಕೂಡಾ ಆಗಾಗ ಅದೇ ಕಾರಿನ ಮೂಲಕ ಟಾಪ್ ಸ್ಪೀಡ್ ಹುಚ್ಚಾಟ ಮೆರೆಯುತ್ತಿದ್ದಲ್ಲದೇ ಪೊಲೀಸರ ಕರ್ತವ್ಯಕ್ಕೂ ಕೆಲವೊಮ್ಮೆ ಅಡ್ಡಿಪಡಿಸಿದ್ದರು. ಹೀಗಾಗಿ ಪಕ್ಕಾ ಪ್ಲ್ಯಾನ್ ಮೂಲಕವೇ ಇಬ್ಬರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

ಇನ್ನು ಬ್ಯೂ ಅಲಾನ್ ರೊಗೆಲ್ ಡ್ರೈವ್ ಮಾಡುತ್ತಿದ್ದ ಫೋರ್ಡ್ ಮಸ್ಟಾಂಗ್ ಶೆಲ್‌ಬೈ ಜಿಟಿ350 ಕಾರು 5.2-ಲೀಟರ್(5,200ಸಿಸಿ) ವಿ8 ಎಂಜಿನ್ ಹೊಂದಿದ್ದು, 526-ಬಿಎಚ್‌ಪಿ ಮತ್ತು 581-ಎನ್ಎಂ ಟಾರ್ಕ್ ಉತ್ಪಾದನೆಯ ಮೂಲಕ ಟ್ರ್ಯಾಕ್ ಪರ್ಫಾಮೆನ್ಸ್‌ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಸೂಪರ್ ಕಾರು ಮಾದರಿಯಾಗಿದೆ.

Most Read Articles

Kannada
English summary
Police Arrests Mustang Driver Livestreaming His 300 Kmph Run on YouTube- Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X