ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಹಾಡಿ ಹೊಗಳಿದ ಮಾಜಿ ಸಿಎಂ ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಕಾರುಗಳ ಕ್ರೇಜ್ ಹೊಂದಿರುವ ರಾಜಕಾರಣಿಗಳಲ್ಲಿ ಒಬ್ಬರು. ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಎಸ್‍ಯುವಿ ವಾಹನ ಪ್ರೇಮಿಯಾಗಿದ್ದಾರೆ.

ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಹಾಡಿ ಹೊಗಳಿದ ಮಾಜಿ ಸಿಎಂ ಒಮರ್ ಅಬ್ದುಲ್ಲಾ

ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಲ್ಯಾಂಡ್ ರೋವರ್ ರೇಂಜ್ ರೋವರ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್‌ನಂತಹ ಕೆಲವು ಅತ್ಯುತ್ತಮ ಎಸ್‍ಯುವಿಗಳನ್ನು ಹೊಂದಿದ್ದಾರೆ. ಅವರ ಎಸ್‍ಯುವಿ ಸಂಗ್ರಹಕ್ಕೆ ಇತ್ತೀಚೆಗೆ ಹೊಸ ಮಹೀಂದ್ರಾ ಥಾರ್ ಕೂಡ ಸೇರ್ಪಡೆಯಾಗಿದೆ. ಮಹೀಂದ್ರಾ ಥಾರ್ ಎಸ್‍ಯುವಿಯು ಬಹಳ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್-ರೋಡರ್ ಆಗಿದೆ. ಈ ಥಾರ್ ಎಸ್‍ಯುವಿಯ ಅತ್ಯುತ್ತಮ ಆಫ್-ರೋಡ್ ಸಾಮರ್ಥ್ಯದಿಂದಾಗಿ ಹೆಚ್ಚಿನ ವಾಹನ ಪ್ರಿಯರು ಥಾರ್ ಎಸ್‍ಯುವಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಹಾಡಿ ಹೊಗಳಿದ ಮಾಜಿ ಸಿಎಂ ಒಮರ್ ಅಬ್ದುಲ್ಲಾ

ಒಮರ್ ಅಬ್ದುಲ್ಲಾ ಇತ್ತೀಚೆಗೆ ತಮ್ಮ ಮಹೀಂದ್ರಾ ಥಾರ್‌ನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಹಿಮಭರಿತ ಭೂಪ್ರದೇಶಗಳಲ್ಲಿ ಥಾರ್‌ನ ಚಾಲನಾ ಸಾಮರ್ಥ್ಯವನ್ನು ಹಾಡಿ ಹೊಗಳಿದ್ದಾರೆ. ಈ ಥಾರ್ ನೆಚ್ಚಿನ ರೈಡ್‌ಗಳಲ್ಲಿ ಖಂಡಿತವಾಗಿಯೂ ಒಂದಾಗಿದೆ ಎಂದು ಹೇಳಿದ್ದಾರೆ. ವಿಪರೀತ ಹವಾಮಾನ ಮತ್ತು ಹಿಮಭರಿತ ಪರಿಸ್ಥಿತಿಗಳಲ್ಲಿ ಕಾರಿನ ಪರ್ಫಾಮೆನ್ಸ್​​​​ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಹಾಡಿ ಹೊಗಳಿದ ಮಾಜಿ ಸಿಎಂ ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಮಹೀಂದ್ರಾ ಥಾರ್ ಎಸ್‌ಯುವಿಯು ದಟ್ಟವಾದ ಹಿಮದಿಂದ ಆವೃತವಾದ ರಸ್ತೆಗಳಲ್ಲಿ ಸುಲಭವಾಗಿ ಚಲಿಸಿದೆ. ಒಮರ್ ಅಬ್ದುಲ್ಲಾ ಒಡೆತನದ ಮಹೀಂದ್ರಾ ಥಾರ್ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ,

ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಹಾಡಿ ಹೊಗಳಿದ ಮಾಜಿ ಸಿಎಂ ಒಮರ್ ಅಬ್ದುಲ್ಲಾ

ಈ ಎಸ್‍ಯುವಿಯು ಪೆಟ್ರೋಲ್-ಚಾಲಿತ ಅಥವಾ ಡೀಸೆಲ್-ಚಾಲಿತ ಆವೃತ್ತಿಯೇ ಎಂಬುದು ಸ್ಪಷ್ಟವಾಗಿಲ್ಲವಾದರೂ ಇದು ಹಾರ್ಡ್-ಟಾಪ್ ರೂಪಾಂತರವಾಗಿದೆ. ಎಸ್‍ಯುವಿಯ ಗ್ರಿಲ್‌ನ ಮುಂದೆ ಬುಲ್-ಬಾರ್ ಅನ್ನು ಆವಡಿಸಲಾಗಿದೆ. ಈ ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಸ್ಟಾಕ್ ಟೈರ್‌ಗಳು ಮತ್ತು 18-ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.

ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಹಾಡಿ ಹೊಗಳಿದ ಮಾಜಿ ಸಿಎಂ ಒಮರ್ ಅಬ್ದುಲ್ಲಾ

ಹಿಮದಲ್ಲಿ ಚಾಲನೆ ಮಾಡಲು ಸಾಕಷ್ಟು ಕೌಶಲ್ಯ ಮತ್ತು ತಾಳ್ಮೆ ಮತ್ತು ಸರಿಯಾದ ಫ್ಹೋರ್ ವ್ಹೀಲ್ ಡ್ರೈವ್ ವಾಹನ ಅಗತ್ಯವಿರುತ್ತದೆ. ಹಿಮದಿಂದ ಆವೃತವಾದ ರಸ್ತೆಗಳಲ್ಲಿ ಚಾಲನೆ ಮಾಡುವಾಗ ನೀವು ಸಿಲುಕಿಕೊಳ್ಳದಂತೆ ಟೈರ್‌ಗಳ ಮೇಲೆ ಹಿಮ ಸರಪಳಿಗಳನ್ನು ಸುತ್ತಿ ಚಾಲನೆ ಮಾಡುವುದು ಉತ್ತಮ.

ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಹಾಡಿ ಹೊಗಳಿದ ಮಾಜಿ ಸಿಎಂ ಒಮರ್ ಅಬ್ದುಲ್ಲಾ

ಉತ್ತಮ ಟ್ರ್ಯಾಕ್ಷನ್ ಮತ್ತು ಗ್ರಿಪ್ ಗಾಗಿ ಚಳಿಗಾಲದ-ಸ್ಪೆಕ್ ಟೈರ್‌ಗಳೊಂದಿಗೆ ಓಡಿಸುವುದು ಉತ್ತಮ. ಇನ್ನು ಒಮರ್ ಅಬ್ದುಲ್ಲಾ ಅವರು ಕಾರು ಉತ್ಸಾಹಿಯಾಗಿದ್ದಾರೆ ಮತ್ತು ಬಹಳ ಹಿಂದಿನ ಕಾಲದಿಂದಲೂ ವಿವಿಧ 4X4 ಎಸ್‍ಯುವಿಗಳೊಂದಿಗೆ ಚಿತ್ರಗಳನ್ನು ಹಂಚಿಕೊಳುತ್ತಿದ್ದಾರೆ. ಅವರು ಈ ಹಿಂದೆಯು ಇದೇ ರೀತಿಯ ಚಿತ್ರಗಳನ್ನು ಸಹ ಪೋಸ್ಟ್ ಮಾಡಿದ್ದಾರೆ.

ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಹಾಡಿ ಹೊಗಳಿದ ಮಾಜಿ ಸಿಎಂ ಒಮರ್ ಅಬ್ದುಲ್ಲಾ

ಹಿಮದಲ್ಲಿ #ಗುಲ್ಮಾರ್ಗ್‌ ಕಣಿವೆ ಏರಲು ಹೊಸ ಮಹೀಂದ್ರಾ ರೈಸ್​ ಥಾರ್‌ ಮುಂದೆ ಏನೂ ಇಲ್ಲ' ಎಂದು ಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ. ಒಮರ್ ಅಬ್ದುಲ್ಲಾರಿಗೆ ರೀಟ್ವೀಟ್ ಮಾಡಿದ ಆನಂದ್ ಮಹೀಂದ್ರಾ, ‘ಯಾವತ್ತೂ ನಿಜವಾದ ಪದವನ್ನು ಮಾತನಾಡಿಲ್ಲ!' ಎಂದು ತಮಾಷೆ ಮಾಡಿದ್ದಾರೆ.

ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಹಾಡಿ ಹೊಗಳಿದ ಮಾಜಿ ಸಿಎಂ ಒಮರ್ ಅಬ್ದುಲ್ಲಾ

ಮಹೀಂದ್ರಾ ಥಾರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 150 ಬಿಹೆಚ್‍ಪಿ ಪವರ್ ಉತ್ಪಾದಿಸಿದರೆ, 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಹಾಡಿ ಹೊಗಳಿದ ಮಾಜಿ ಸಿಎಂ ಒಮರ್ ಅಬ್ದುಲ್ಲಾ

ಹೊಸ ವಿನ್ಯಾಸ, ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಆಫ್ ರೋಡ್ ಎಸ್‌ಯುವಿ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಿದೆ. ಥಾರ್ ಎಸ್‍ಯುವಿ ಮಾದರಿಯು ಬಿಡುಗಡೆಯಾಗಿ ಉತ್ತಮ ಯಶಸ್ಸನ್ನು ಕಂಡಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಆಫ್ ರೋಡ್ ಎಸ್‌ಯುವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡಿತ್ತು.

ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಹಾಡಿ ಹೊಗಳಿದ ಮಾಜಿ ಸಿಎಂ ಒಮರ್ ಅಬ್ದುಲ್ಲಾ

ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಹೊಸ ಥಾರ್ ಕಾರಿಗೆ ಮತ್ತಷ್ಟು ಬೇಡಿಕೆ ಪಡೆದುಕೊಂಡಿದೆ. ಈ ಎಸ್‍ಯುವಿಯ ವೈಟಿಂಗ್ ಪಿರೇಡ್ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಿರ್ಧಾರವಾಗಲಿದೆ.

ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಹಾಡಿ ಹೊಗಳಿದ ಮಾಜಿ ಸಿಎಂ ಒಮರ್ ಅಬ್ದುಲ್ಲಾ

ಈ ನ್ಯೂ ಜನರೇಷನ್ ಮಹೀಂದ್ರಾ ಥಾರ್ ಎಸ್‍ಯುವಿಯ ಒಳಭಾಗದಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿರುವ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ,ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಪೋಟೈನ್ ಮೆಂಟ್ ಸಿಸ್ಟಂ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಅನ್ನು ಒಳಗೊಂಡಿದೆ,

ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಹಾಡಿ ಹೊಗಳಿದ ಮಾಜಿ ಸಿಎಂ ಒಮರ್ ಅಬ್ದುಲ್ಲಾ

ಥಾರ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್ ಮತ್ತು ರಿಯರ್ ವ್ಯೂ ಕ್ಯಾಮೆರಾವನ್ನು ಕೂಡ ಹೊಂದಿದೆ,

ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಹಾಡಿ ಹೊಗಳಿದ ಮಾಜಿ ಸಿಎಂ ಒಮರ್ ಅಬ್ದುಲ್ಲಾ

ಇನ್ನು ಮಹೀಂದ್ರಾ ಥಾರ್ ಭಾರತೀಯ ಮಾರುಕಟ್ಟೆಯಲ್ಲಿ ಬಹುದೀರ್ಘ ಕಾಲದಿಂದ ಮಾರಾಟವಾಗುತ್ತಿರುವ ಜನಪ್ರಿಯ ಆಫ್-ರೋಡ್ ಎಸ್‍ಯುವಿ ಮಾದರಿಯಾಗಿದೆ. ಆಫ್-ರೋಡ್ ವಾಹನ ಎಂದಾಗ ಭಾರತೀಯರಿಗೆ ಮೊದಲಿಗೆ ಥಾರ್ ಎಸ್‍ಯುವಿಯು ಮನಸ್ಸಿಗೆ ಬರುತ್ತದೆ. ಅಷ್ಟು ಜನಪ್ರಿಯತೆಯನ್ನು ಹೊಂದಿರುವ ಆಫ್-ರೋಡರ್ ಆಗಿದೆ,

Most Read Articles

Kannada
English summary
Former jammu kashmir cm omar abdullah with mahindra thar suv in gulmarg on snowy roads details
Story first published: Friday, January 7, 2022, 12:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X