ತಮ್ಮ ಹೆಸರಿನ ನಂಬರ್ ಪ್ಲೇಟ್ ಹೊಂದಿರುವ ಐಷಾರಾಮಿ ಕಾರಿನ ಚಿತ್ರ ಹಂಚಿಕೊಂಡ ಭಾರತ್ ಪೇ ಮಾಜಿ ಎಂಡಿ

ಅಶ್ನೀರ್ ಗ್ರೋವರ್ ಅವರು ಸಾಕಷ್ಟು ಕಾರಣಗಳಿಗಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಇವರು ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ನಂತರ ಅವರು ಖ್ಯಾತಿಯನ್ನು ಗಳಿಸಿದರು. ಇವರಿಗೆ ಐಷಾರಾಮಿ ಕಾರುಗಳ ಮೇಲೆ ಹೆಚ್ಚು ಕ್ರೇಜ್ ಅನ್ನು ಹೊಂದಿದ್ದಾರೆ.

ತಮ್ಮ ಹೆಸರಿನ ನಂಬರ್ ಪ್ಲೇಟ್ ಹೊಂದಿರುವ ಐಷಾರಾಮಿ ಕಾರಿನ ಚಿತ್ರ ಹಂಚಿಕೊಂಡ ಭಾರತ್ ಪೇ ಮಾಜಿ ಎಂಡಿ

ಅಶ್ನೀರ್ ಗ್ರೋವರ್ ಅವರು ಇತ್ತೀಚೆಗೆ ತಮ್ಮ ಮರ್ಸಿಡಿಸ್-ಮೇಬ್ಯಾಕ್ ಎಸ್650 ಚಿತ್ರವನ್ನು ತಮ್ಮ Instagram ನಲ್ಲಿ ಕಸ್ಟಮೈಸ್ ಮಾಡಿದ ನಂಬರ್ ಪ್ಲೇಟ್‌ನೊಂದಿಗೆ ಹಂಚಿಕೊಂಡಿದ್ದಾರೆ. ಬಿಳಿ ಬಣ್ಣದ ಮರ್ಸಿಡಿಸ್-ಮೇಬ್ಯಾಕ್ ಎಸ್650 ಕಾರಿನ ನಂಬರ್ ಪ್ಲೇಟ್ ನಲ್ಲಿ "ASHNEER G" ಎಂಬ ಹೆಸರಿದೆ. ಇದು IND ಮುದ್ರೆಯೊಂದಿಗೆ ಪೂರ್ಣಗೊಂಡಿದೆ, ಇದು ತುಂಬಾ ನೈಜವಾದ ನಂಬರ್ ಪ್ಲೇಟ್ ನಂತೆ ಚಿತ್ರದಲ್ಲಿ ನೋಡಲು ಕಾಣುತ್ತದೆ.

ತಮ್ಮ ಹೆಸರಿನ ನಂಬರ್ ಪ್ಲೇಟ್ ಹೊಂದಿರುವ ಐಷಾರಾಮಿ ಕಾರಿನ ಚಿತ್ರ ಹಂಚಿಕೊಂಡ ಭಾರತ್ ಪೇ ಮಾಜಿ ಎಂಡಿ

ಕಸ್ಟಮೈಸ್ ಮಾಡಿದ ನಂಬರ್ ಪ್ಲೇಟ್ ಗಳಿಗೆ ಭಾರತದಲ್ಲಿ ಅನುಮತಿ ಇದೆ. ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಮೂಲಕ ಗ್ರಾಹಕರು ನೋಂದಣಿ ಸಂಖ್ಯೆಯಲ್ಲಿ ವಿಶೇಷ ಸಂಖ್ಯೆಗಳನ್ನು ಆಯ್ಕೆ ಮಾಡಬಹುದು. ಅನೇಕ RTO ಗಳು ಹೆಚ್ಚುವರಿ ಹಣವನ್ನು ಗಳಿಸಲು ಹರಾಜಿನಲ್ಲಿ ಅಂತಹ ವಿಶೇಷ ಸಂಖ್ಯೆಗಳನ್ನು ಸಹ ನೀಡುತ್ತವೆ.

ತಮ್ಮ ಹೆಸರಿನ ನಂಬರ್ ಪ್ಲೇಟ್ ಹೊಂದಿರುವ ಐಷಾರಾಮಿ ಕಾರಿನ ಚಿತ್ರ ಹಂಚಿಕೊಂಡ ಭಾರತ್ ಪೇ ಮಾಜಿ ಎಂಡಿ

ಆದರೆ ಪ್ರಸ್ತುತ, ಕಸ್ಟಮೈಸ್ ಮಾಡಿದ ನಂಬರ್ ಪ್ಲೇಟ್ ಗಳನ್ನು ಭಾರತದಲ್ಲಿ ಅನುಮತಿಸಲಾಗುವುದಿಲ್ಲ ಮತ್ತು ಲಭ್ಯವಿಲ್ಲ. ಇಂತಹ ವಿಶೇಷ ಸಂಖ್ಯೆಗಳನ್ನು ಪಡೆಯಲು ಲಕ್ಷಗಟ್ಟಲೆ ಖರ್ಚು ಮಾಡಿದ ಅನೇಕ ಭಾರತೀಯರಿದ್ದಾರೆ. ಭಾರತದಲ್ಲಿ ಅತ್ಯಂತ ದುಬಾರಿ ನೋಂದಣಿ ಸಂಖ್ಯೆ ರೂ.25 ಲಕ್ಷ ವಾಗಿದೆ.

ತಮ್ಮ ಹೆಸರಿನ ನಂಬರ್ ಪ್ಲೇಟ್ ಹೊಂದಿರುವ ಐಷಾರಾಮಿ ಕಾರಿನ ಚಿತ್ರ ಹಂಚಿಕೊಂಡ ಭಾರತ್ ಪೇ ಮಾಜಿ ಎಂಡಿ

ಅಶ್ನೀರ್ ಫೋಟೋಶಾಪ್ ಬಳಸಿದಂತೆ ಅಥವಾ ಕಾರಿನಲ್ಲಿ ಕಸ್ಟಮ್ ನಕಲಿ ನೋಂದಣಿ ನಂಬರ್ ಪ್ಲೇಟ್ ಬಳಸಿದಂತೆ ತೋರುತ್ತಿದೆ .ಅಶ್ನೀರ್ ಅವರ ಜನಪ್ರಿಯತೆಯು ಶಾರ್ಕ್ ಟ್ಯಾಂಕ್‌ನಲ್ಲಿ ಕಾಣಿಸಿಕೊಂಡ ಬಳಿಕ ಹೆಚ್ಚಾಯ್ತು. ಅವರು ದುಬಾರಿ ಕಾರುಗಳನ್ನು ಓಡಿಸಲು ಇಷ್ಟಪಡುತ್ತಾರೆ.

ತಮ್ಮ ಹೆಸರಿನ ನಂಬರ್ ಪ್ಲೇಟ್ ಹೊಂದಿರುವ ಐಷಾರಾಮಿ ಕಾರಿನ ಚಿತ್ರ ಹಂಚಿಕೊಂಡ ಭಾರತ್ ಪೇ ಮಾಜಿ ಎಂಡಿ

ಮರ್ಸಿಡಿಸ್-ಮೇಬ್ಯಾಕ್ ಎಸ್650 ಹೊರತುಪಡಿಸಿ ಅವರ ಬಳಿ ಇನ್ನು ಹಲವು ಕಾರುಗಳಿವೆ. ಈ ಮರ್ಸಿಡಿಸ್-ಮೇಬ್ಯಾಕ್ ಎಸ್650 ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳಲ್ಲಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಹೊಸ ಎಸ್650 ಭಾರತದ ಅನೇಕ ಸೆಲೆಬ್ರಿಟಿಗಳ ಗ್ಯಾರೇಜ್‌ಗಳಲ್ಲಿ ಸಾಮಾನ್ಯ ದೃಶ್ಯವಾಗಿದೆ.

ತಮ್ಮ ಹೆಸರಿನ ನಂಬರ್ ಪ್ಲೇಟ್ ಹೊಂದಿರುವ ಐಷಾರಾಮಿ ಕಾರಿನ ಚಿತ್ರ ಹಂಚಿಕೊಂಡ ಭಾರತ್ ಪೇ ಮಾಜಿ ಎಂಡಿ

ಮರ್ಸಿಡಿಸ್-ಮೇಬ್ಯಾಕ್ ಎಸ್650 ಕಾರಿನ ಬೆಲೆಯು ಸುಮಾರು ರೂ.2.5 ಕೋಟಿಯಾಗಿದೆ. ಈ ಕಾರಿನಲ್ಲಿ 4.0 ಲೀಟರ್ ವಿ8 ಬಿಟರ್ಬೊ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 469 ಬಿಎಚ್‌ಪಿ ಮತ್ತು 700 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ ಮತ್ತು ಇದು ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಹೊಂದಿದೆ.

ತಮ್ಮ ಹೆಸರಿನ ನಂಬರ್ ಪ್ಲೇಟ್ ಹೊಂದಿರುವ ಐಷಾರಾಮಿ ಕಾರಿನ ಚಿತ್ರ ಹಂಚಿಕೊಂಡ ಭಾರತ್ ಪೇ ಮಾಜಿ ಎಂಡಿ

ಈ ಕಾರು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತನ್ನ ಸರಣಿ ಕಾರುಗಳಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಸುಧಾರಿತ ತಂತ್ರಜ್ಞಾನ ಮತ್ತು ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ. ಇದರ ಒಳಗೆ ಮತ್ತು ಹೊರಗೆ ಬೆಸ್ಪೋಕ್ ವೈಶಿಷ್ಟ್ಯಗಳನ್ನು ಹೊಂದಿದೆ.

ತಮ್ಮ ಹೆಸರಿನ ನಂಬರ್ ಪ್ಲೇಟ್ ಹೊಂದಿರುವ ಐಷಾರಾಮಿ ಕಾರಿನ ಚಿತ್ರ ಹಂಚಿಕೊಂಡ ಭಾರತ್ ಪೇ ಮಾಜಿ ಎಂಡಿ

ಇದರ ಒಟ್ಟಾರೆ ವಿನ್ಯಾಸವು ಐಷಾರಾಮಿ ಮತ್ತು ಪ್ರೀಮಿಯಂ ಆಗಿದೆ. ಇದರಲ್ಲಿ ದೊಡ್ಡದಾದ ವರ್ಟಿಕಲ್ ಸ್ಲ್ಯಾಟ್ ಗ್ರಿಲ್, ವಿಂಡೋ ಲೈನ್, ಸೈಡ್-ಸ್ಟೆಪ್, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ಡಿಸೈನ್ ಆಕ್ಸೆಂಟ್, ರೂಫ್ ರೈಲ್ಸ್ ಮತ್ತು ಸ್ಪೋರ್ಟಿ ಎಕ್ಸಾಸ್ ನೋಟ್ ಹೊಂದಿದೆ.ಪ್ರೀಮಿಯಂ ಐಷಾರಾಮಿ ಎಸ್‌ಯುವಿ ಕಾರಿನ ವಿನ್ಯಾಸಕ್ಕೆ ತಕ್ಕಂತೆ 23 ಇಂಚಿನ ಬ್ರಷ್ಡ್ ಮಲ್ಟಿ-ಸ್ಪೋಕ್ ವೀಲ್ಹ್ ಆಯ್ಕೆ ಜೊತೆಗೆ ವಿಂಡೋ ಪಿಲ್ಲರ್, ರೂಫ್ ಮೇಲೆ ಕಪ್ಪು ಬಣ್ಣದ ಡ್ಯುಯಲ್ ಟೋನ್ ಪೇಂಟ್ ಸ್ಕೀಮ್ ಮತ್ತು 'ಮೇಬ್ಯಾಕ್' ಬ್ರಾಂಡ್ ಬ್ಯಾಡ್ಜ್ ಹೊಂದಿದೆ.

ತಮ್ಮ ಹೆಸರಿನ ನಂಬರ್ ಪ್ಲೇಟ್ ಹೊಂದಿರುವ ಐಷಾರಾಮಿ ಕಾರಿನ ಚಿತ್ರ ಹಂಚಿಕೊಂಡ ಭಾರತ್ ಪೇ ಮಾಜಿ ಎಂಡಿ

ಈ ಕಾರಿನ ಪ್ರತಿ ಸೀಟ್ ವೆಂಟಿಲೆಟರ್ ಮತ್ತು ಮಸಾಜ್ ಫಂಕ್ಷನ್ ವೈಶಿಷ್ಟ್ಯತೆ ಒಳಗೊಂಡಿದ್ದು, ಪ್ರತಿ ಸೀಟ್ ನಲ್ಲೂ ಆಡಿಯೋ, ಹವಾಮಾನ ನಿಯಂತ್ರಣ, ಆಂಬಿಯೆಂಟ್ ಲೈಟಿಂಗ್, ಸನ್ಶೇಡ್ಸ್ ಮತ್ತು ನ್ಯಾವಿಗೇಷನ್ ಅನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಫೋರ್ಡರ್‌ಗಳಲ್ಲಿ ರೆಫ್ರಿಜರೇಟರ್ ಅನ್ನು ಸಹ ಒಳಗೊಂಡಿದೆ. ಇನ್ನು ದೊಡ್ಡದಾದ ಪನೋರಮಿಕ್ ಮೂನ್‌ರೂಫ್, 12.3-ಇಂಚಿನ ಎಂಬಿಯುಎಕ್ಸ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಮತ್ತು 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬರ್ಮೆಸ್ಟರ್ ಸರೌಂಡ್ ಸೌಂಡ್ ಸಿಸ್ಟಮ್, 64 ಬಣ್ಣ ಮತ್ತು ಹೆಚ್ಚಿನ ಎಲ್ಇಡಿ ಆಪ್ಟಿಕಲ್ ಫೈಬರ್ ಆಂಬಿಯೆಂಟ್ ಲೈಟಿಂಗ್ ಸೇರಿವೆ.

ತಮ್ಮ ಹೆಸರಿನ ನಂಬರ್ ಪ್ಲೇಟ್ ಹೊಂದಿರುವ ಐಷಾರಾಮಿ ಕಾರಿನ ಚಿತ್ರ ಹಂಚಿಕೊಂಡ ಭಾರತ್ ಪೇ ಮಾಜಿ ಎಂಡಿ

ಈ ಕಾರಿನಲ್ಲಿ ವಿಶೇಷ ತಂತ್ರಜ್ಞಾನ ಪ್ರೇರಿತ ಇ-ಆಕ್ಟಿವ್ ಬಾಡಿ ಕಂಟ್ರೋಲ್ ಸಸ್ಪೆಂಕ್ಷನ್ ಸಿಸ್ಟಂ ಹೊಂದಿದ್ದು, ಫ್ರಂಟ್ ಕ್ಯಾಮೆರಾ ಮೂಲಕ ಕಾರು ಚಾಲನೆಯಲ್ಲಿರುವಾಗ ರಸ್ತೆಯನ್ನು ಸ್ಕ್ಯಾನ್ ಮಾಡುವ ಮೂಲಕ ಮತ್ತು ಸಸ್ಪೆಂಕ್ಷನ್ ಹೊಂದಾಣಿಕೆಯೊಂದಿಗೆ ಅಂಡರ್ ಬಾಡಿ ಡ್ಯಾಮೆಜ್ ತಪ್ಪಿಸಲು ನೆರವಾಗುತ್ತದೆ.

Most Read Articles

Kannada
English summary
Former md of bharat pe ashneer grover shows off his maybach s650 with custom plates details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X