ಫಾಸ್ಟ್ ಟ್ಯಾಗ್ ಹೆಸರಲ್ಲಿ ಗ್ರಾಹಕನಿಗೆ ಉಂಡೆ ನಾಮ ತಿಕ್ಕಿದ ಖದೀಮರು

ಟೆಕ್ನಾಲಜಿ ಬೆಳೆದಂತೆಲ್ಲಾ ಖದೀಮರ ಯೋಜನೆಗಳೂ ಬದಲಾಗುತ್ತವೆ. ಹಿಂದೆಲ್ಲಾ ಪಿಕ್‍‍ಪಾಕೆಟ್, ಸರಗಳ್ಳತನದಲ್ಲಿದ್ದ ಖದೀಮರ ಆಲೋಚನೆಗಳು ಈಗ ಹೈಟೆಕ್ ಆಗಿವೆ. ಈಗ ಯಾವುದೋ ಒಂದು ಮೂಲೆಯಲ್ಲಿ ಕುಳಿತು ಯಾವುದೋ ಒಂದು ನಂಬರಿಗೆ ಕರೆ ಮಾಡಿ ಜನರನ್ನು ಯಾಮಾರಿಸಿ ಅವರ ದುಡ್ಡನ್ನು ದೋಚುತ್ತಿದ್ದಾರೆ.

ಫಾಸ್ಟ್ ಟ್ಯಾಗ್ ಹೆಸರಲ್ಲಿ ಗ್ರಾಹಕನಿಗೆ ಉಂಡೆ ನಾಮ ತಿಕ್ಕಿದ ಖದೀಮರು

ಟೋಲ್‍‍ಗಳಲ್ಲಿ ಉಂಟಾಗುವ ದಟ್ಟಣೆಯನ್ನು ನಿವಾರಿಸುವ ಸಲುವಾಗಿ ಕೇಂದ್ರ ಸರ್ಕಾರವು ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಫಾಸ್ಟ್ ಟ್ಯಾಗ್‍‍ಗಳಲ್ಲಿ ನಡೆಯುತ್ತಿದ್ದ ಅಕ್ರಮವನ್ನು ತಡೆಗಟ್ಟುವ ಉದ್ದೇಶದಿಂದ ಇವುಗಳನ್ನು ಆನ್‍‍ಲೈನ್‍‍ನಲ್ಲಿ ರಿಚಾರ್ಜ್ ಮಾಡಬಹುದಾಗಿದೆ.

ಫಾಸ್ಟ್ ಟ್ಯಾಗ್ ಹೆಸರಲ್ಲಿ ಗ್ರಾಹಕನಿಗೆ ಉಂಡೆ ನಾಮ ತಿಕ್ಕಿದ ಖದೀಮರು

ಈ ಯೋಜನೆಯನ್ನು ಜನರನ್ನು ಟೋಲ್ ಫ್ರಿ ಟೋಕನ್‍‍ಗಳಿಂದ ಪಾರು ಮಾಡಲು ಜಾರಿಗೆ ತರಲಾಗಿದೆ. ಖದೀಮರು ಈಗ ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ಜನರನ್ನು ವಂಚಿಸಲು ಶುರುಮಾಡಿದ್ದಾರೆ. ಈ ರೀತಿಯ ಘಟನೆಯೊಂದು ಕರ್ನಾಟಕದಲ್ಲಿ ಅದರಲ್ಲೂ ನಮ್ಮ ಬೆಂಗಳೂರಿನಲ್ಲಿ ನಡೆದಿದೆ.

ಫಾಸ್ಟ್ ಟ್ಯಾಗ್ ಹೆಸರಲ್ಲಿ ಗ್ರಾಹಕನಿಗೆ ಉಂಡೆ ನಾಮ ತಿಕ್ಕಿದ ಖದೀಮರು

ಬೆಂಗಳೂರಿನ ಯುವಕ ತನ್ನ ಫಾಸ್ಟ್ ಟ್ಯಾಗ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಫಾಸ್ಟ್ ಟ್ಯಾಗ್ ಕಸ್ಟಮರ್ ಕೇರ್‍‍ನಲ್ಲಿ ದೂರು ನೀಡಿದ್ದಾರೆ. ಆ ನಂತರ ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಆ ಯುವಕನಿಗೆ ವಂಚಕನೊಬ್ಬ ಕರೆ ಮಾಡಿದ್ದಾನೆ.

ಫಾಸ್ಟ್ ಟ್ಯಾಗ್ ಹೆಸರಲ್ಲಿ ಗ್ರಾಹಕನಿಗೆ ಉಂಡೆ ನಾಮ ತಿಕ್ಕಿದ ಖದೀಮರು

ಆ ವಂಚಕನು ತಾನು ಆಕ್ಸಿಸ್ ಬ್ಯಾಂಕ್‍‍ನಿಂದ ಕರೆಮಾಡುತ್ತಿರುವುದಾಗಿ ಹೇಳಿ, ಫಾಸ್ಟ್ ಟ್ಯಾಗ್‍‍ನಲ್ಲಿರುವ ಸಮಸ್ಯೆಯನ್ನು ಸರಿಪಡಿಸುವುದಾಗಿ ತಿಳಿಸಿದ್ದಾನೆ. ಇದಕ್ಕಾಗಿ ಆನ್‍‍ಲೈನ್ ಫಾರಂ ಕಳುಹಿಸುವುದಾಗಿ ಅದನ್ನು ತುಂಬಿ ವಾಪಸ್ ಕಳುಹಿಸುವಂತೆ ಹೇಳಿದ್ದಾನೆ.

ಫಾಸ್ಟ್ ಟ್ಯಾಗ್ ಹೆಸರಲ್ಲಿ ಗ್ರಾಹಕನಿಗೆ ಉಂಡೆ ನಾಮ ತಿಕ್ಕಿದ ಖದೀಮರು

ಆತನ ಮಾತನ್ನು ನಂಬಿದ ಯುವಕ ತನ್ನ ಹೆಸರು, ಮೊಬೈಲ್ ನಂಬರ್ ಹಾಗೂ ಪಿನ್ ಮಾಹಿತಿಗಳನ್ನು ಆ ವಂಚಕನಿಗೆ ನೀಡಿದ್ದಾನೆ. ಇಷ್ಟೆಲ್ಲಾ ಮಾಹಿತಿಯನ್ನು ಪಡೆದ ವಂಚಕನು ಆ ಯುವಕನ ಮೊಬೈಲಿಗೆ ಬಂದ ಒ‍ಟಿಪಿಯನ್ನೂ ಸಹ ಪಡೆದಿದ್ದಾನೆ.

ಫಾಸ್ಟ್ ಟ್ಯಾಗ್ ಹೆಸರಲ್ಲಿ ಗ್ರಾಹಕನಿಗೆ ಉಂಡೆ ನಾಮ ತಿಕ್ಕಿದ ಖದೀಮರು

ಒಟಿಪಿಯನ್ನು ಹೇಳಿದ ತಕ್ಷಣವೇ ಯುವಕನ ಮೊಬೈಲಿಗೆ ಆತನ ಬ್ಯಾಂಕ್ ಖಾತೆಯಿಂದ ರೂ.50,000 ಡೆಬಿಟ್ ಆಗಿರುವ ಎಸ್‍ಎಂ‍ಎಸ್ ಬರುತ್ತದೆ. ಯುವಕನಿಗೆ ತಾನು ಮೋಸ ಹೋಗಿರುವುದು ತಿಳಿಯುತ್ತದೆ.

ಫಾಸ್ಟ್ ಟ್ಯಾಗ್ ಹೆಸರಲ್ಲಿ ಗ್ರಾಹಕನಿಗೆ ಉಂಡೆ ನಾಮ ತಿಕ್ಕಿದ ಖದೀಮರು

ಈ ಬಗ್ಗೆ ಮಾತನಾಡಿರುವ ಯುವಕನು ನನ್ನ ಮೊಬೈಲಿಗೆ ಕರೆ ಮಾಡಿದ ವ್ಯಕ್ತಿಯು ತನ್ನನ್ನು ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡ. ಫಾಸ್ಟ್ ಟ್ಯಾಗ್‍‍ಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕೆಂದು ತಿಳಿಸಿ, ಒಟಿಪಿಯನ್ನು ಪಡೆದು ವಂಚಿಸಿದ್ದಾನೆ ಎಂದು ಹೇಳಿದ್ದಾನೆ.

ಫಾಸ್ಟ್ ಟ್ಯಾಗ್ ಹೆಸರಲ್ಲಿ ಗ್ರಾಹಕನಿಗೆ ಉಂಡೆ ನಾಮ ತಿಕ್ಕಿದ ಖದೀಮರು

ಈ ಕಾರಣಕ್ಕಾಗಿಯೇ ಬ್ಯಾಂಕ್‍‍ಗಳು ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಯಾರೊಂದಿಗೂ ಯಾವುದೇ ಸಂದರ್ಭದಲ್ಲಿಯೂ ಹಂಚಿ ಕೊಳ್ಳದಂತೆ ಎಸ್‍ಎಂ‍ಎಸ್‍‍ಗಳನ್ನು ಕಳುಹಿಸುತ್ತಲೇ ಇರುತ್ತವೆ. ಆದರೂ ಜನ ಯಾಮಾರುತ್ತಲೇ ಇದ್ದಾರೆ.

ಫಾಸ್ಟ್ ಟ್ಯಾಗ್ ಹೆಸರಲ್ಲಿ ಗ್ರಾಹಕನಿಗೆ ಉಂಡೆ ನಾಮ ತಿಕ್ಕಿದ ಖದೀಮರು

ವರದಿಗಳ ಪ್ರಕಾರ, ಫಾಸ್ಟ್ ಟ್ಯಾಗ್‍‍ಗಳನ್ನು ಮೊಬೈಲ್ ಮೂಲಕ ಆಕ್ಟಿವೇಟ್ ಮಾಡಲು ಸಾಧ್ಯವಿಲ್ಲ. ಫಾಸ್ಟ್ ಟ್ಯಾಗ್‍‍ಗಳನ್ನು ಮೈ ಫಾಸ್ಟ್ ಟ್ಯಾಗ್ ಪ್ರೊಸೆಸರ್ ಮೂಲಕ ಅಥವಾ ಬ್ಯಾಂಕ್‍‍ಗಳಿಂದ ನೇರವಾಗಿ ಆಕ್ಟಿವೇಟ್ ಮಾಡಿಸಿಕೊಳ್ಳಬೇಕಾಗುತ್ತದೆ.

ಫಾಸ್ಟ್ ಟ್ಯಾಗ್ ಹೆಸರಲ್ಲಿ ಗ್ರಾಹಕನಿಗೆ ಉಂಡೆ ನಾಮ ತಿಕ್ಕಿದ ಖದೀಮರು

ನಿಮಗೆ ಫಾಸ್ಟ್ ಟ್ಯಾಗ್ ಆಕ್ಟಿವೇಟ್ ಆಗಲು ಯಾವುದೇ ಸಮಸ್ಯೆ ಕಂಡು ಬಂದಲ್ಲಿ ಸಂಬಂಧಪಟ್ಟ ಬ್ಯಾಂಕ್‍‍ಗಳಲ್ಲಿ ಪರಿಹರಿಸಿಕೊಳ್ಳಬೇಕು. ಗ್ರಾಹಕರು ಆದಷ್ಟು ಎನ್‍‍ಹೆಚ್‍ಎ‍ಐ ಜಾರಿಗೆ ತಂದಿರುವ ಪ್ರಿಪೇಯ್ಡ್ ಫಾಸ್ಟ್ ಟ್ಯಾಗ್‍‍ಗಳನ್ನು ಬಳಸುವುದು ಒಳ್ಳೆಯದು. ಫಾಸ್ಟ್ ಟ್ಯಾಗ್‍‍‍ಗಳನ್ನು ಹೊಂದಲು ಬ್ಯಾಂಕ್ ಖಾತೆಯ ಪಾಸ್‍‍‍ವರ್ಡ್ ಆಗಲಿ ಅಥವಾ ಯುಪಿ‍ಐ ಪಿನ್‍‍‍ಗಳ ಅಗತ್ಯವಾಗಲಿ ಇರುವುದಿಲ್ಲ.

Kannada
English summary
Fraudsters have found a new way to cheat citizens with Fastag. Read in Kannada.
Story first published: Thursday, January 23, 2020, 17:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X