ಬರಲಿದೆ ದುಬಾರಿ ಬೆಲೆಯ ಹಾರಾಡುವ ಬೈಕ್..!

ಇದುವರೆಗೂ ನಾವು ಕಾರ್ಟೂನ್‍‍ಗಳಲ್ಲಿ ಹಾಗೂ ಕಾರ್ಟೂನ್ ಸರಣಿಯ ಚಿತ್ರಗಳಲ್ಲಿ ಹಾರಾಡುವ ಬೈಕ್‍‍ಗಳನ್ನು ನೋಡಿದ್ದೇವು. ಈ ರೀತಿಯ ಬೈಕ್‍ಗಳು ನಿಜವಾಗಿ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು ಎಂದುಕೊಂಡಿದ್ದೇವು. ಈಗ ಹಾರಾಡುವ ಬೈಕ್‍‍ಗಳು ನಿಜವಾಗಿ ಬರುತ್ತಿವೆ.

ಬರಲಿದೆ ದುಬಾರಿ ಬೆಲೆಯ ಹಾರಾಡುವ ಬೈಕ್..!

ಈ ಹಾರಾಡುವ ಬೈಕ್‍ಗಳ ಕಲ್ಪನೆಯನ್ನು ನಿಜವಾಗಿಸುತ್ತಿರುವುದು ಫ್ರೆಂಚ್ ಮೂಲದ ಆಟೋಮೋಟಿವ್ ಕಂಪನಿಯಾದ ಲಾಜರೆತ್. ಲಾಜರೆತ್ ಕಂಪನಿಯು ಅಭಿವೃದ್ಧಿಪಡಿಸುತ್ತಿರುವ ಬೈಕ್ ಅನ್ನು ಕೆಲವೇ ಸೆಕೆಂಡ್‍‍ಗಳಲ್ಲಿ ಹೋವರ್‍‍ಬೈ ಆಗಿ ಬದಲಿಸಬಹುದು.

ಬರಲಿದೆ ದುಬಾರಿ ಬೆಲೆಯ ಹಾರಾಡುವ ಬೈಕ್..!

ಇದರಿಂದಾಗಿ ಈ ಬೈಕ್ ಅನ್ನು ಗಾಳಿಯಲ್ಲಿ ಹಾರಾಡಿಸಬಹುದು. ಲಾಜರೆತ್ ಕಂಪನಿಯು ತನ್ನ ಹೊಸ ವಾಹನವಾದ ಎಲ್‍ಎಂ‍‍ವಿ 496 ಅನ್ನು 2019ರ ಆರಂಭದಲ್ಲಿ ಅನಾವರಣಗೊಳಿಸಿತ್ತು. ಈ ವಾಹನವು ಉತ್ಪಾದನಾ ಹಂತದಲ್ಲಿದೆ.

ಬರಲಿದೆ ದುಬಾರಿ ಬೆಲೆಯ ಹಾರಾಡುವ ಬೈಕ್..!

ಲಾಜರೆತ್ 496 ವಾಹನದ ಬೆಲೆಯು 3,80,000 ಡಾಲರ್‍‍‍ಗಳಾಗಿದೆ. ಅಂದರೆ ಭಾರತದ ರೂಪಾಯಿಯ ಮೌಲ್ಯದಲ್ಲಿ ರೂ.3.50 ಕೋಟಿಗಳಾಗುತ್ತದೆ. ಇದು ಮಾರುಕಟ್ಟೆಯಲ್ಲಿರುವ ಅತಿ ದುಬಾರಿ ಬೆಲೆಯ ಕಾರ್ ಎಂದು ಪರಿಗಣಿಸಲಾದ ಬೆಂಟ್ಲಿ ಕಾರಿಗಿಂತ ಹೆಚ್ಚಾಗಿದೆ.

ಬರಲಿದೆ ದುಬಾರಿ ಬೆಲೆಯ ಹಾರಾಡುವ ಬೈಕ್..!

ಲಾಜರೆತ್ ಎಲ್‍ಎಂವಿ 496 ಬೈಕ್ ಅನ್ನು ರಸ್ತೆಯಲ್ಲಿಯೂ ಸಹ ಚಲಾಯಿಸಬಹುದು. ಇದಕ್ಕಾಗಿ ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಲಾಗಿದೆ. ಗಾಳಿಯಲ್ಲಿ ಹಾರಾಡಲು ಅನುಕೂಲವಾಗುವಂತೆ ಈ ಬೈಕಿನಲ್ಲಿ ನಾಲ್ಕು ಜೆಟ್ ಪ್ರೊಪಲ್ಶನ್ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ.

ಬರಲಿದೆ ದುಬಾರಿ ಬೆಲೆಯ ಹಾರಾಡುವ ಬೈಕ್..!

ಈ ಎಂಜಿನ್‍ಗಳ ಸಹಾಯದಿಂದ 10 ನಿಮಿಷಗಳ ಕಾಲ ಗಾಳಿಯಲ್ಲಿ ಹಾರಾಡಬಹುದಾಗಿದೆ. ಎಲ್‍ಎಂವಿ 496 ಬೈಕಿನಲ್ಲಿರುವಂತಹ ಎಂಜಿನ್‍ಗಳು ಏರ್‍‍ಕ್ರಾಫ್ಟ್ ಗಳಲ್ಲಿರುವ ಜೆಟ್ ಎಂಜಿನ್‍‍ಗಳಂತಿವೆ. ಕಂಪನಿಯು ಬೈಕಿನಲ್ಲಿ ಸೀಮೆ‍ಎಣ್ಣೆಯ ಫ್ಯೂಯಲ್ ಟ್ಯಾಂಕ್ ಅನ್ನು ಸಹ ನೀಡಿದೆ.

ಬರಲಿದೆ ದುಬಾರಿ ಬೆಲೆಯ ಹಾರಾಡುವ ಬೈಕ್..!

ಲಾಜರೆತ್ ಕಂಪನಿಯು ಆರಂಭದಲ್ಲಿ ಕೇವಲ ಐದು ಬೈಕ್‍‍ಗಳನ್ನು ಮಾತ್ರ ತಯಾರಿಸಲಿದೆ. ಬಿಡುಗಡೆಯಾಗಿ ಮಾರಾಟಕ್ಕೆ ಲಭ್ಯವಾದಾಗ ಈ ಐದು ಬೈಕ್‍‍ಗಳನ್ನು ಯಾರೂ ಖರೀದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಬರಲಿದೆ ದುಬಾರಿ ಬೆಲೆಯ ಹಾರಾಡುವ ಬೈಕ್..!

ಬೈಕ್‍‍ಗಳನ್ನು ಚಲಾಯಿಸಿ ಅನುಭವವಿರುವವರು ಈ ಬೈಕ್ ಅನ್ನು ಸುಲಭವಾಗಿ ಚಲಾಯಿಸಬಹುದೆಂಬುದು ಲಾಜರೆತ್ ಕಂಪನಿಯ ಅಭಿಪ್ರಾಯವಾಗಿದೆ. ಈ ಬೈಕ್ ಆರಾಮದಾಯಕ ಚಾಲನೆಗಾಗಿ ಲಘು ತೂಕದ ಹ್ಯಾಂಡಲ್ ಅನ್ನು ಹೊಂದಿದೆ.

ಬರಲಿದೆ ದುಬಾರಿ ಬೆಲೆಯ ಹಾರಾಡುವ ಬೈಕ್..!

ಈ ಬೈಕಿನಲ್ಲಿ ಲಾಜರೆತ್ ಕಂಪನಿಯ ಇತರ ವಾಹನಗಳಲ್ಲಿರುವಂತಹ ಬ್ರೇಕಿಂಗ್ ಸಿಸ್ಟಂ ಹಾಗೂ ಅಂಡರ್‍‍ಕ್ಯಾರಿಯೇಜ್ ಟೆಕ್ನಾಲಜಿಗಳನ್ನು ಅಳವಡಿಸಲಾಗಿದೆ. ಈ ಬೈಕ್ ಹೆಚ್ಚು ಅಡ್ವಾನ್ಸ್ ಆದ ಟಿಎಫ್‍ಎಕ್ಸ್ ಸಸ್ಪೆಂಷನ್‍ ಮೇಲೆ ಚಲಿಸುತ್ತದೆ.

ಬರಲಿದೆ ದುಬಾರಿ ಬೆಲೆಯ ಹಾರಾಡುವ ಬೈಕ್..!

ಲಾಜರೆತ್ ಬೈಕಿನಲ್ಲಿರುವ ನಾಲ್ಕು ಜೆಟ್ ಎಂಜಿನ್‍‍ಗಳು ಒಟ್ಟಿಗೆ 1,300 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತವೆ. ಬೈಕಿನ ಅಲ್ಟಿಟ್ಯೂಡ್, ಸ್ಪೀಡ್, ಫ್ಯೂಯಲ್ ಲೆವೆಲ್, ಪೊಸಿಷನ್, ಡೈರೆಕ್ಷನ್ ಎಲ್ಲವೂ ಬೈಕಿನಲ್ಲಿ ಅಳವಡಿಸಲಾಗಿರುವ ಡ್ಯಾಶ್‍ಬೋರ್ಡ್‍‍ನಲ್ಲಿ ಡಿಸ್‍‍ಪ್ಲೇಯಾಗುತ್ತವೆ.

ಬರಲಿದೆ ದುಬಾರಿ ಬೆಲೆಯ ಹಾರಾಡುವ ಬೈಕ್..!

ಲಾಜರೆತ್ ಬೈಕಿನ ತೂಕವನ್ನು ಕಡಿಮೆಗೊಳಿಸಲು ಈ ಬೈಕಿನಲ್ಲಿ ಕೆವ್ಲರ್ ಕಾರ್ಬನ್ ಕಾಂಬಿನೇಷನ್‍ ಅನ್ನು ಬಳಸಲಾಗಿದೆ. ಅಂದ ಹಾಗೆ ಕೆವ್ಲರ್ ಎಂಬುದು ಬುಲೆಟ್ ಪ್ರೂಫ್‍‍ಗಳಿಗಾಗಿ ಬಳಸುವ ವಸ್ತುವಾಗಿದೆ. ಇದನ್ನು ಬುಲೆಟ್ ಪ್ರೂಫ್ ವಾಹನ, ಜಾಕೆಟ್ ಹಾಗೂ ಸೂಟ್‍‍ಗಳನ್ನು ತಯಾರಿಸಲು ಬಳಸಲಾಗುತ್ತದೆ.

ಬರಲಿದೆ ದುಬಾರಿ ಬೆಲೆಯ ಹಾರಾಡುವ ಬೈಕ್..!

ರಸ್ತೆಯಲ್ಲಿ ಚಲಿಸುವಾಗ ಈ ಬೈಕ್ ಎಲೆಕ್ಟ್ರಿಕ್ ಮೋಟರ್‍‍ಗಳ ಸಹಾಯದಿಂದ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಮೋಟರ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 96 ಕಿ.ಮೀಗಳವರೆಗೆ ಚಲಿಸುತ್ತದೆ. ಬೈಕ್ ಗಾಳಿಯಲ್ಲಿದ್ದಾಗ ಎಲೆಕ್ಟ್ರಿಕ್ ಮೋಟರ್ ತನ್ನ ಕೆಲಸವನ್ನು ಸ್ಥಗಿತಗೊಳಿಸುತ್ತದೆ.

ಬರಲಿದೆ ದುಬಾರಿ ಬೆಲೆಯ ಹಾರಾಡುವ ಬೈಕ್..!

ಈ ಬೈಕಿನ ತೂಕವು 140 ಕೆ.ಜಿಗಳಾಗಿದೆ. ಈ ಬೈಕಿನಲ್ಲಿರುವ ಜೆಟ್‍‍ಕ್ಯಾಟ್ ಟರ್ಬೈನ್‍‍ಗಳು 96,000 ಆರ್‍‍ಪಿ‍ಎಂನಲ್ಲಿ ತಿರುಗುತ್ತವೆ. ಗಾಳಿಯಲ್ಲಿರುವಾಗ ಈ ಬೈಕ್ ಅನ್ನು ಹ್ಯಾಂಡಲ್‍‍ಬಾರ್‍‍ನಲ್ಲಿರುವ ಜಾಯ್‍‍ಸ್ಟಿಕ್‍‍ಗಳ ಸಹಾಯದಿಂದ ನಿಯಂತ್ರಿಸಬಹುದಾಗಿದೆ.

ಈ ಬೈಕ್ ನೆಲದಿಂದ 3.3 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತದೆ. ಈ ಎತ್ತರವು ಹೆಚ್ಚು ಇಲ್ಲದಿದ್ದರೂ ಲಾಜರೆತ್ ಮುಂಬರುವ ದಿನಗಳಲ್ಲಿ ಇದಕ್ಕಿಂತ ಹೆಚ್ಚಿನ ಎತ್ತರದಲ್ಲಿ ಹಾರಾಡಬಲ್ಲ ಬೈಕ್‍‍ಗಳನ್ನು ಅಭಿವೃದ್ಧಿಪಡಿಸಲಿದ್ದು, ಸಂಚಾರ ದಟ್ಟಣೆಯಿಂದ ಪಾರಾಗಲು ಅನುಕೂಲವಾಗಲಿದೆ.

ಬರಲಿದೆ ದುಬಾರಿ ಬೆಲೆಯ ಹಾರಾಡುವ ಬೈಕ್..!

ಈ ಬೈಕ್ ಅನ್ನು ಚಲಾಯಿಸಲು ವಿಶೇಷ ಲೈಸೆನ್ಸ್ ನ ಅಗತ್ಯವಿದೆಯೆ ಎಂಬುದನ್ನು ಲಾಜರೆತ್ ಕಂಪನಿಯು ಖಚಿತಪಡಿಸಿಲ್ಲ. ಈ ಬೈಕ್ ವಿಶೇಷ ರೀತಿಯಾಗಿರುವುದರಿಂದ ಹಾಗೂ ಕೇವಲ 5 ಬೈಕ್ ಅನ್ನು ಮಾತ್ರ ತಯಾರಿಸುತ್ತಿರುವುದರಿಂದ ಈ ಬೈಕ್ ಅನ್ನು ಖರೀದಿಸುವವರು ಜಾಗರೂಕತೆಯಿಂದ ಚಲಾಯಿಸಬೇಕಾಗುತ್ತದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಹಾರುವ ಬೈಕಿನ ಬಗ್ಗೆ ನೀವು ಈಗಾಗಲೇ ಕೇಳಿದ್ದಿರಿ. ಹಾಗೆಯೇ ಹಾರುವ ಕಾರುಗಳ ಬಗ್ಗೆಯೂ ಹಲವಡೆ ಅರಕೆಗಳು ಚುರುಕುಗೊಳ್ಳುತ್ತಿವೆ. ಇದಕ್ಕೆ ಪೂರಕ್ಕೆ ಎಂಬಂತೆ ಪಿಎಲ್-ವಿ ಲಿಬರ್ಟಿ ಸಂಸ್ಥೆಯ ಹೊಸ ಮಾದರಿಯ ಹಾರುವ ಕಾರು ಗೈರೊಕಾಪ್ಟಾರ್ ಇದೀಗ ಬಿಡುಗಡೆಗೆ ಸಿದ್ದವಾಗಿದ್ದು, ಭಾರತದಲ್ಲೂ ಸದ್ದು ಮಾಡುವ ಸುಳಿವು ನೀಡಿದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಆಟೋ ಉದ್ಯಮದಲ್ಲಿ ದಿನದಿಂದ ದಿನಕ್ಕೆ ಹೊಸ ಸಂಶೋಧನೆಗಳು ಮತ್ತು ಆವಿಷ್ಕಾರಗಳು ನಡೆಯುತ್ತಲೇ ಇದ್ದು, ಇದೀಗ ಹಾರುವ ಕಾರುಗಳ ಉತ್ಪಾದನೆ ಸಾಧ್ಯತೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಸಿ ಬಿಸಿ ಚರ್ಚೆಗಳ ಬೆನ್ನಲ್ಲೇ ಡಚ್ ಮೂಲದ ಪಿಎಲ್-ವಿ ಲಿಬರ್ಟಿ ಸಂಸ್ಥೆಯು ಹೊಸ ಪ್ರಯತ್ನಕ್ಕೆ ಕೈ ಹಾಕಿ ಅದರಲ್ಲಿ ಯಶಸ್ವಿಯಾಗುವ ತವಕದಲ್ಲಿದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

2020ರ ಕೊನೆಯಲ್ಲಿ ಹಾರುವ ಕಾರುಗಳ ಉತ್ಪಾದನೆಯನ್ನು ಶುರು ಮಾಡುವ ಬಗ್ಗೆ ಸುಳಿವು ನೀಡಿರುವ ಪಿಎಲ್-ವಿ ಲಿಬರ್ಟಿ ಸಂಸ್ಥೆಯು, ಹೆಲಿಕಾಪ್ಟರ್‌ಗಿಂತ ಕಡಿಮೆ ದರ್ಜೆಯ ಮತ್ತು ಟ್ರೈಸೈಕಲ್‌ಗಳಿಂತ ಉನ್ನತ ಸೌಲಭ್ಯಗಳನ್ನು ಹೊಂದಿರುವ ಗೈರೊಕಾಪ್ಟಾರ್ ಕಾರುನ್ನು ನಿರ್ಮಾಣ ಮಾಡಿದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಇದರೊಂದಿಗೆ ಸುಧಾರಿತ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಟು ಸೀಟರ್ ಸೌಲಭ್ಯವನ್ನು ಹೊಂದಿರುವ ಹಾರುವ ಕಾರಗಳು ಮೊದಲು ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆ ಪ್ರವೇಶ ಪಡೆಯಲಿದ್ದು, ತದನಂತರ 2021ರ ವೇಳೆಗೆ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳಲ್ಲಿ ಹಾರುವ ಕಾರುಗಳಿಗೆ ರೆಕ್ಕೆ ಬರಲಿದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಇದಕ್ಕೆ ಕಾರಣ ಅಮೆರಿಕನ್ ಮತ್ತು ಯುರೋಪಿನ್ ಮಾರುಕಟ್ಟೆಯಲ್ಲಿ ಈಗಾಗಲೇ ಹಾರುವ ಕಾರುಗಳಿಗೆ ಮಾನ್ಯತೆ ಸಿಕಿದ್ದು, 2021ರ ವೇಳೆಗೆ ಹೊಸ ಮಾದರಿಯ ಸಾರಿಗೆ ವ್ಯವಸ್ಥೆಯು ಜಗತ್ತಿಗೆ ತೆರೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಸದ್ಯಕ್ಕೆ ಭಾರತದಲ್ಲಿ ಫೋಟೋಟೈಪ್ ಮಾದರಿಗಳ ಮೂಲಕ ಪರೀಕ್ಷೆ ನಡೆಸಲು ಮುಂದಾಗಿರುವ ಪಿಎಲ್-ವಿ ಲಿಬರ್ಟಿ ಸಂಸ್ಥೆಯು ಪ್ರಾಯೋಗಿಕವಾಗಿ ಖಾಸಗಿ ಸಂಸ್ಥೆಗಳಿಗೆ, ಆರೋಗ್ಯ ಸಂಸ್ಥೆಗಳಿಗೆ, ಕೊಸ್ಟ್ ಗಾರ್ಡ್, ಸರ್ಕಾರಿ ಏಜೆನ್ಸಿಸ್ ಮತ್ತು ಪೊಲೀಸ್ ಇಲಾಖೆಗಳ ಕಾರ್ಯಚರಣೆಗಾಗಿ ಬಳಕೆ ಮಾಡಲಿದ್ದು, ತದನಂತರ ಸಾರ್ವಜನಿಕ ಸಾರಿಗೆಯಾಗಿಯೂ ಬಳಕೆ ಮಾಡುವ ನೀರಿಕ್ಷೆಯಲ್ಲಿದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಇನ್ನು ಕಾರ್ಬನ್ ಮತ್ತು ಟೈಟಾನಿಯಂನಿಂದ ಗೈರೊಕಾಪ್ಟಾರ್ ಕಾರುಗಳ ಬಾಡಿ ಕಿಟ್ ಅಭಿವೃದ್ಧಿ ಮಾಡಲಾಗುತ್ತಿದ್ದು, 680 ಕೆಜಿ ತೂಕವನ್ನು ಪಡೆದುಕೊಂಡಿವೆ. ಹೀಗಾಗಿ ಕಡಿಮೆ ಅಂತರದಲ್ಲಿ ಟೆಕ್ ಆಫ್ ಮತ್ತು ಲ್ಯಾಂಡಿಂಗ್‌ಗೆ ಅನಕೂಲಕರರವಾಗಿವೆ ಎನ್ನಬಹುದು.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಮೂಲಗಳ ಪ್ರಕಾರ, ಪಿಎಲ್-ವಿ ಲಿಬರ್ಟಿಯ ಸಂಸ್ಥೆಯ ಕಾರುಗಳು ಟೆಕ್ ಆಫ್ ಆಗಲು 165 ಮೀಟರ್ ಮತ್ತು ಲ್ಯಾಂಡಿಂಗ್‌ಗೆ 30 ಮೀಟರ್ ‌ಬೇಕಾಗಲಿದ್ದು, 100 ಬಿಎಚ್‌ಪಿ ಉತ್ಪಾದನಾ ಎಂಜಿನ್ ಬಳಕೆ ಮಾಡಲಾಗಿದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಈ ಮೂಲಕ ಪ್ರತಿಗಂಟೆಗೆ 180ಕಿಮಿ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದಿರುವ ಪಿಎಲ್-ವಿ ಲಿಬರ್ಟಿ ಹಾರುವ ಕಾರು ಕೇವಲ ಆಕಾಶದಲ್ಲಿದಷ್ಟೇ ಅಲ್ಲದೇ ಸಾಮಾನ್ಯ ಕಾರುಗಳಂತೆ ರಸ್ತೆಯಲ್ಲೂ ಸುಗಮವಾಗಿ ಸಂಚರಿಸಬಲ್ಲವು.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ರಸ್ತೆಯಲ್ಲಿ ಸಂಚರಿಸುವಾಗ ಕಾರಿನ ರೆಕ್ಕೆಗಳು ಮಡಿಚಿಕೊಳ್ಳುವ ವ್ಯವಸ್ಥೆಯನ್ನು ಇದರಲ್ಲಿ ಇರಿಸಲಾಗಿದ್ದು, ಮೂರು ಚಕ್ರಗಳೊಂದಿಗೆ ವೇಗವಾಗಿ ಸಂಚರಿಸುವುದಲ್ಲದೇ ಅರಾಮದಾಯಕ ಪ್ರಯಾಣವನ್ನು ಒದಗಿಸಲಿವೆ ಎನ್ನುತ್ತೆ ಪಿಎಲ್-ವಿ ಲಿಬರ್ಟಿ ಸಂಸ್ಥೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಹೀಗಾಗಿ ಕೆಲವೇ ನಿಮಿಷಗಳಲ್ಲಿ ನಿಮಗೆ ಬೇಕಾದ ಸ್ಥಳಗಳನ್ನು ತಲುಪಲು ಸಹಾಯಕವಾಗುವ ಈ ಕಾರುಗಳ ಬೆಲೆ ಕೊಂಚ ದುಬಾರಿಯಾಗಿದ್ದು, ಎರಡು ಮಾದರಿಯಲ್ಲಿ ಪಿಎಲ್-ವಿ ಲಿಬರ್ಟಿ ಹಾರುವ ಕಾರುಗಳನ್ನು ನಿರ್ಮಾಣ ಮಾಡಲಾಗಿದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಮೈಲೇಜ್

ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಪಿಎಲ್-ವಿ ಲಿಬರ್ಟಿಯ ಗೈರೊಕಾಪ್ಟಾರ್ ಹಾರುವ ಕಾರುಗಳು ಪ್ರತಿ ಚಾರ್ಜ್‌ಗೆ 482 ಕಿ.ಮಿ(ಆಕಾಶದಲ್ಲಿ) ಮತ್ತು 1,287 ಕಿ.ಮಿ ರಸ್ತೆಯ ಮೇಲೆ ಚಲಿಸುವಷ್ಟು ಸಾಮರ್ಥ್ಯವನ್ನು ಹೊಂದಿವೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಹಾರುವ ಕಾರುಗಳ ಬೆಲೆ ಭಾರತೀಯ ಮೌಲ್ಯದಲ್ಲಿ ಹೇಳುವುದಾರೇ ಆರಂಭಿಕ ಹೊಸ ಕಾರಿನ ಬೆಲೆಯನ್ನು ರೂ. 3.20 ಕೋಟಿಯಾಗಿರಲಿದ್ದು, ಕಾರು ಖರೀದಿಗೆ ಮುಂಗಡ ಪಾವತಿಸಿದ 150 ಗಂಟೆಗಳ ಒಳಗಾಗಿ ಹೊಸ ಕಾರು ಒದಗಿಸುವ ಬಗ್ಗೆ ಪಿಎಲ್-ವಿ ಲಿಬರ್ಟಿಯು ಭರವಸೆ ನೀಡಿದೆ.

ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಬುಕ್ಕಿಂಗ್ ಆರಂಭ

ಪಿಎಲ್-ವಿ ಲಿಬರ್ಟಿ ಸಂಸ್ಥೆಯು ತನ್ನ ಬಹುನೀರಿಕ್ಷಿತ ಗೈರೊಕಾಪ್ಟಾರ್ ಹಾರುವ ಕಾರುಗಳನ್ನು 2020ರ ಕೊನೆಯಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಆಸಕ್ತ ಗ್ರಾಹಕರಿಂದ ಈಗಿನಿಂದಲೇ ಫ್ರೀ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಆಟೋ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಠಿಸಿದೆ.

Most Read Articles

Kannada
English summary
Flying bike from french automotive Lazareth - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more