ಬೈಕ್ ಸವಾರನ ಒತ್ತಾಯಕ್ಕೆ ಮಣಿದು ಸೂಪರ್‌ಬೈಕ್ ಚಾಲನೆ ಮಾಡಿದ ಪೊಲೀಸಪ್ಪ

ವಿಶ್ವದಲ್ಲಿಯೇ ಆಗಲಿ, ಭಾರತದಲ್ಲಿಯೇ ಆಗಲಿ ಬೈಕ್ ಇಷ್ಟಪಡದ ಯುವಕರೇ ಇಲ್ಲವೆಂದು ಹೇಳಬಹುದು. ಭಾರತದ ಬಹುತೇಕ ಯುವ ಜನರು ಒಂದಾದರೂ ದ್ವಿಚಕ್ರ ವಾಹನವನ್ನು ಹೊಂದಿರುತ್ತಾರೆ. ಕೆಲವರು ಒಂದಕ್ಕಿಂತ ಹೆಚ್ಚು ದ್ವಿಚಕ್ರ ವಾಹನಗಳನ್ನು ಹೊಂದಿರುತ್ತಾರೆ.

ಬೈಕ್ ಸವಾರನ ಒತ್ತಾಯಕ್ಕೆ ಮಣಿದು ಸೂಪರ್‌ಬೈಕ್ ಚಾಲನೆ ಮಾಡಿದ ಪೊಲೀಸಪ್ಪ

ಅದರಲ್ಲೂ ಕೆಲ ಯುವಕರು ಸೂಪರ್ ಬೈಕ್‌ಗಳ ಬಗ್ಗೆ ವಿಪರೀತ ಕ್ರೇಜ್ ಹೊಂದಿರುತ್ತಾರೆ. ಭಾರತದಲ್ಲಿ ಮಾರಾಟವಾಗುವ ಸೂಪರ್‌ಬೈಕ್‌ಗಳು ಲಕ್ಷಾಂತರ ರೂಪಾಯಿ ಬೆಲೆ ಹೊಂದಿರುತ್ತವೆ. ಇದರಿಂದ ಸೂಪರ್‌ಬೈಕ್‌ ಖರೀದಿಸಬೇಕೆಂಬ ಹಲವರ ಕನಸು ನನಸಾಗುವುದೇ ಇಲ್ಲ.

ಬೈಕ್ ಸವಾರನ ಒತ್ತಾಯಕ್ಕೆ ಮಣಿದು ಸೂಪರ್‌ಬೈಕ್ ಚಾಲನೆ ಮಾಡಿದ ಪೊಲೀಸಪ್ಪ

ಪೊಲೀಸರಿಗೂ ಸಹ ಸೂಪರ್‌ಬೈಕ್‌'ಗಳನ್ನು ಚಾಲನೆ ಮಾಡಬೇಕೆಂಬ ಕನಸಿರುತ್ತದೆ. ಕೆಲವರು ಅವಕಾಶ ಸಿಕ್ಕಾಗ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ಕರ್ತವ್ಯ ನಿರತ ಪೊಲೀಸ್ ಒಬ್ಬರು ಕವಾಸಕಿ ಝಡ್ 900 ಸೂಪರ್ ಬೈಕ್ ಅನ್ನು ಚಾಲನೆ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಬೈಕ್ ಸವಾರನ ಒತ್ತಾಯಕ್ಕೆ ಮಣಿದು ಸೂಪರ್‌ಬೈಕ್ ಚಾಲನೆ ಮಾಡಿದ ಪೊಲೀಸಪ್ಪ

ಈ ವೀಡಿಯೊವನ್ನು ಝಡ್ 900 ರೈಡರ್ ಯೂಟ್ಯೂಬ್ ಚಾನೆಲ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಕರೋನಾ ವೈರಸ್‌ ಸೋಂಕು ಹರಡುವುದನ್ನು ತಡೆಯಲು ದೇಶಾದ್ಯಂತ ಕರ್ಫ್ಯೂ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಬೈಕ್ ಸವಾರನ ಒತ್ತಾಯಕ್ಕೆ ಮಣಿದು ಸೂಪರ್‌ಬೈಕ್ ಚಾಲನೆ ಮಾಡಿದ ಪೊಲೀಸಪ್ಪ

ಈ ಹಿನ್ನೆಲೆಯಲ್ಲಿ ಪೊಲೀಸರು ಅನಗತ್ಯವಾಗಿ ಸಂಚರಿಸುವ ವಾಹನಗಳ ತಪಾಸಣೆಯಲ್ಲಿ ತೊಡಗಿದ್ದಾರೆ. ಹೀಗೆ ತಪಾಸಣೆ ನಡೆಸುವ ವೇಳೆ ಕವಾಸಕಿ ಝಡ್ 900 ಬೈಕ್ ಅನ್ನು ತಡೆದು ನಿಲ್ಲಿಸಲಾಗಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಬೈಕ್ ಸವಾರನ ಒತ್ತಾಯಕ್ಕೆ ಮಣಿದು ಸೂಪರ್‌ಬೈಕ್ ಚಾಲನೆ ಮಾಡಿದ ಪೊಲೀಸಪ್ಪ

ತಪಾಸಣೆ ನಡೆಸಿದ ನಂತರ ಬೈಕ್ ಅನ್ನು ಅಲ್ಲಿಂದ ಮುಂದೆ ತೆರಳಲು ಅನುಮತಿ ನೀಡಲಾಗಿದೆ. ಈ ವೇಳೆ ಬೈಕ್ ಸವಾರ ನೀವು ಫ್ರೆಂಡ್ಲಿ ಪೊಲೀಸ್ ಆಗಿದ್ದು, ಇದುವರೆಗೂ ನಿಮ್ಮಂತಹ ಪೊಲೀಸರನ್ನು ನೋಡಿಲ್ಲವೆಂದು ಹೇಳುತ್ತಾನೆ.

ಬೈಕ್ ಸವಾರನ ಒತ್ತಾಯಕ್ಕೆ ಮಣಿದು ಸೂಪರ್‌ಬೈಕ್ ಚಾಲನೆ ಮಾಡಿದ ಪೊಲೀಸಪ್ಪ

ಈ ವೇಳೆ ಆ ಪೊಲೀಸರಿಗೆ ಬೈಕ್ ಚಾಲನೆ ಮಾಡುವಂತೆ ಒತ್ತಾಯ ಮಾಡುತ್ತಾನೆ. ಯುವಕನ ಮಾತಿಗೆ ಬೆಲೆ ಕೊಡುವ ಆ ಪೊಲೀಸ್ ಬೈಕ್ ಸವಾರನ ಬೈಕ್ ಪಡೆದು ಆ ಬೈಕಿನಲ್ಲಿ ಒಂದು ರೌಂಡ್ ಹಾಕಿದ್ದಾರೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಬೈಕ್ ಸವಾರನ ಒತ್ತಾಯಕ್ಕೆ ಮಣಿದು ಸೂಪರ್‌ಬೈಕ್ ಚಾಲನೆ ಮಾಡಿದ ಪೊಲೀಸಪ್ಪ

ಈ ಘಟನೆ ಮುಂಬೈನಲ್ಲಿ ನಡೆದಿದೆ. ಕವಾಸಕಿ ಝಡ್ 900 ಸೂಪರ್‌ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.8,34,000ಗಳಾಗಿದೆ. ಆನ್ ರೋಡ್ ಬೆಲೆ ಸರಿ ಸುಮಾರು ರೂ.9 ಲಕ್ಷಗಳಾಗುತ್ತದೆ.

ಕವಾಸಕಿ ಝಡ್ 900 ಸೂಪರ್‌ಬೈಕಿನಲ್ಲಿ 948 ಸಿಸಿ ಲಿಕ್ವಿಡ್ ಕೂಲ್ಡ್ ಇನ್ ಲೈನ್, ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 123 ಬಿ‌ಹೆಚ್‌ಪಿ ಪವರ್ ಹಾಗೂ 98.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಬೈಕ್ ಸವಾರನ ಒತ್ತಾಯಕ್ಕೆ ಮಣಿದು ಸೂಪರ್‌ಬೈಕ್ ಚಾಲನೆ ಮಾಡಿದ ಪೊಲೀಸಪ್ಪ

ಈ ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್, ಮಲ್ಟಿ ರೈಡಿಂಗ್ ಮೋಡ್‌, ಡ್ಯುಯಲ್ ಚಾನೆಲ್ ಎಬಿಎಸ್ ಸೇರಿದಂತೆ ಹಲವು ಫೀಚರ್'ಗಳನ್ನು ಅಳವಡಿಸಲಾಗಿದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಡುಕಾಟಿ ಮಾನ್ಸ್ಟರ್ 797 ಹಾಗೂ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ 765 ಸೂಪರ್‌ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ.

ಚಿತ್ರಕೃಪೆ: ಝಡ್ 900 ರೈಡರ್

Most Read Articles

Kannada
English summary
Friendly cop takes Kawasaki Z900 superbike for a ride. Read in Kannada.
Story first published: Monday, May 17, 2021, 12:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X