ವಿಮಾನಗಳ ಇಂಧನ ದಕ್ಷತೆ: ವಿಮಾನಗಳ ಮೈಲೇಜ್ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಯಾವುದಾದರೂ ಒಂದು ವಾಹನವನ್ನು ನೋಡಿದಾಕ್ಷಣ ಹಲವರಲ್ಲಿ ಅದರ ಇಂಧನ ದಕ್ಷತೆ ಎಷ್ಟಿದೆ? ಪ್ರತಿ ಲೀಟರ್‌ಗೆ ಎಷ್ಟು ಮೈಲೇಜ್ ಕೊಡಬಹುದು ಎನ್ನುವ ಲೆಕ್ಕಾಚಾರ ಮನಸ್ಸಿನಲ್ಲಿ ಬಂದು ಹೋಗುತ್ತದೆ. ಆದರೆ ಇತರೆ ವಾಹನಗಳಿಂತಲೂ ಭಿನ್ನವಾಗಿರುವ ವಿಮಾನಗಳ ಮೈಲೇಜ್ ಕುರಿತಾದ ಮಾಹಿತಿಗಳು ನಿಮ್ಮಲ್ಲಿ ಇನ್ನಷ್ಟು ಅಚ್ಚರಿ ಮೂಡಿಸಬಹುದು.

ವಿಮಾನಗಳ ಮೈಲೇಜ್ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಸಾಮಾನ್ಯ ವಾಹನಗಳಿಂತ ಐಷಾರಾಮಿ ವಾಹನಗಳಲ್ಲಿನ ಇಂಧನ ದಕ್ಷತೆ ಕುರಿತಾಗಿ ಹಲವರು ಇಂದಿಗೂ ಅಚ್ಚರಿ ವ್ಯಕ್ತಪಡಿಸುವುದುಂಟು. ಆದರೆ ವಿಮಾನಗಳಲ್ಲಿ ಇಂಧನ ಬಳಕೆ ಮತ್ತು ಮೈಲೇಜ್ ಪ್ರಮಾಣದ ಲೆಕ್ಕಾಚಾರಗಳು ನಿಮ್ಮಲ್ಲಿ ಇನ್ನಷ್ಟು ಕುತೂಹಲ ಹುಟ್ಟುಹಾಕಬಲ್ಲವು.

ವಿಮಾನಗಳ ಮೈಲೇಜ್ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ವ್ಯಾಪಾರ, ಉದ್ಯೋಗ ಮತ್ತು ಪ್ರವಾಸ ನಿಮಿತ್ತ ಎಲ್ಲಾ ವರ್ಗದ ಜನರು ಇಂದು ಒಂದಿಲ್ಲೊಂದು ಕಾರಣಕ್ಕೆ ವಿಮಾನಯಾನವನ್ನು ಆಯ್ಕೆ ಮಾಡುತ್ತಿದ್ದು, ವಿಮಾನಯಾವು ಎಷ್ಟೇ ಸರಳವಾಗಿದ್ದರೂ ಅದರಲ್ಲಿನ ಕೆಲವು ಕುತೂಹಲಕಾರಿಯಾದ ವಿಚಾರಗಳು ಯಾವಾಗಲೂ ರಹಸ್ಯವಾಗಿಯೇ ಕಾಣುತ್ತವೆ ಎಂದರೆ ತಪ್ಪಾಗುವುದಿಲ್ಲ.

ವಿಮಾನಗಳ ಮೈಲೇಜ್ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಅದರಲ್ಲೂ ವಿಮಾನಗಳಲ್ಲಿ ಬಳಕೆಯಾಗುವ ವಿಶೇಷ ಇಂಧನ, ಅದರ ಕಾರ್ಯಕ್ಷಮತೆ, ಮೈಲೇಜ್ ಪ್ರಮಾಣ ಮತ್ತು ಕಾರ್ಯಾಚರಣೆಯ ಕುರಿತಾಗಿ ಹಲವಾರು ಆಸಕ್ತಿದಾಯಕ ವಿಚಾರಗಳಿದ್ದು, ಇಂಧನ ಬಳಕೆ ಮತ್ತು ಮೈಲೇಜ್ ಪ್ರಮಾಣದ ಕುರಿತಾದ ಒಂದು ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ವಿಮಾನಗಳ ಮೈಲೇಜ್ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ವಿಮಾನಗಳಲ್ಲಿನ ಇಂಧನ ವಿಧಗಳು

ವಿಶ್ವಾದ್ಯಂತ ವಿಮಾನಯಾನದಲ್ಲಿ ಆಯಾ ರಾಷ್ಟ್ರಗಳಿಗೆ ಅನುಗುಣವಾಗಿ ವಿವಿಧ ಇಂಧನ ಮಾನದಂಡಗಳನ್ನು ಹೊಂದಿರುವ ತೈಲಗಳನ್ನು ಬಳಕೆ ಮಾಡುತ್ತವೆ. ಭಾರತದಲ್ಲಿ ವಾಯುಯಾನ ಉದ್ಯಮದಲ್ಲೂ ವ್ಯಾಪಕ ಶ್ರೇಣಿಯ ಇಂಧನ ಬಳಕೆಯಿದ್ದು, ವಿಶ್ವಾದ್ಯಂತ ಸಾಮಾನ್ಯವಾಗಿ ಜೆಟ್ ಎ-1(JET A-1) ಬಳಕೆ ಮಾಡಲಾಗುತ್ತಿದೆ.

ವಿಮಾನಗಳ ಮೈಲೇಜ್ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಜೆಟ್ ಇಂಧನವು ಸೀಮೆಎಣ್ಣೆ ಆಧಾರಿತವಾಗಿದ್ದು, ಜೆಟ್ ಇಂಧನವು ಬಣ್ಣರಹಿತ, ದಹನಕಾರಿ, ನೇರ ಚಾಲನೆಯಲ್ಲಿರುವ ಪೆಟ್ರೋಲಿಯಂ ಡಿಸ್ಟಿಲೇಟ್ ದ್ರವವಾಗಿದೆ. ಹೀಗಾಗಿ ಇದು ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್‌ಗಿಂತಲೂ ಕಡಿಮೆ ದರ ಹೊಂದಿದ್ದು, ಇದು ಪ್ರತಿ ಕೆ.ಜಿಗೆ ಸದ್ಯ ರೂ. 39.06 ಪೈಸೆ ಬೆಲೆ ಹೊಂದಿದೆ.

ವಿಮಾನಗಳ ಮೈಲೇಜ್ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಸಾಮಾನ್ಯವಾಗಿ ಜೆಟ್ ವಿಮಾನಗಳ ಇಂಧನವನ್ನು ಪ್ರಮುಖ ಇಂಧನ ಪೂರೈಕೆ ಕಂಪನಿಗಳು ವಿಮಾನಯಾನ ಸಂಸ್ಥೆಗಳಿಗೆ ಕೆ.ಜಿ ಲೆಕ್ಕಾಚಾರದಲ್ಲಿ ಪೂರೈಕೆ ಮಾಡುತ್ತಿದ್ದು, ವಿವಿಧ ಜೆಟ್ ಇಂಧನಗಳಲ್ಲಿ ಜೆಪಿ-1 ಶುದ್ಧ ಇಂಧನ ಮಾದರಿಯಾಗಿದೆ.

ವಿಮಾನಗಳ ಇಂಧನ ದಕ್ಷತೆ: ವಿಮಾನಗಳ ಮೈಲೇಜ್ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಮೈಲೇಜ್ ಪ್ರಮಾಣವೆಷ್ಟು?

ವಿಮಾನಗಳಲ್ಲಿ ಬೃಹತ್ ಎಂಜಿನ್‌ ಚಾಲನೆಗೆ ಪೂರಕವಾಗಿರುವ ಜೆಟ್ ಎ-1 ಇಂಧನವು ಉತ್ತಮ ಇಂಧನ ದಕ್ಷತೆಯನ್ನು ಹೊಂದಿದ್ದು, ಇಂಧನ ಬಳಕೆ ಪ್ರಮಾಣವು ವಿಮಾನ ಮಾದರಿಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಉದಾಹರಣೆಗೆ ಬೋಯಿಂಗ್ 747 ಮಾದರಿಯ ಇಂಧನ ಕಾರ್ಯಕ್ಷಮತೆ ಕುರಿತು ನೋಡುವುದಾರೆ ಇದು ಪ್ರತಿ ಸೆಕೆಂಡ್‌ಗೆ ಕನಿಷ್ಠ 4 ಲೀಟರ್ ಇಂಧನ ಬಳಕೆ ಮಾಡುತ್ತದೆ.

ವಿಮಾನಗಳ ಇಂಧನ ದಕ್ಷತೆ: ವಿಮಾನಗಳ ಮೈಲೇಜ್ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಪ್ರತಿ ಸೆಕೆಂಡ್‌ಗೆ ಕನಿಷ್ಠ 4 ಲೀಟರ್ ಇಂಧನ ಬಳಕೆ ಮಾಡಿದರೆ ಅದು ಪ್ರತಿ ನಿಮಿಷಕ್ಕೆ 240 ಲೀಟರ್ ಇಂಧನ ಬಳಕೆ ಮಾಡುತ್ತದೆ. ಅಂದರೆ ಅಂದು ಬೋಯಿಂಗ್ ವಿಮಾನವು ನಿರಂತರವಾಗಿ 1 ಗಂಟೆಗಳ ಕಾಲ ಪ್ರಯಾಣ ಬೆಳೆಸಿದರೆ ಅದು ಬರೋಬ್ಬರಿ 14,400 ಲೀಟರ್ ಇಂಧನ ಉಪಯೋಗಿಸುತ್ತದೆ.

ವಿಮಾನಗಳ ಇಂಧನ ದಕ್ಷತೆ: ವಿಮಾನಗಳ ಮೈಲೇಜ್ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಬೋಯಿಂಗ್ 747 ಮಾದರಿಯು ಸತತ 13 ಗಂಟೆಗಳ ಕಾಲ ಅಮೆರಿಕದ ನ್ಯೂಯಾರ್ಕ್ ನಗರದಿಂದ ಜಪಾನಿನ ಟೊಕಿಯೊ ನಗರಕ್ಕೆ ಪ್ರಯಾಣ ಬೆಳಸಿದಾಗ ಬರೋಬ್ಬರಿ 1,87,200 ಲೀಟರ್ ಇಂಧನ ದಹಿಸುತ್ತದೆ ಎಂದರೆ ನಿಮಗೆ ಅಚ್ಚರಿಯಾಗಬಹುದು.

ವಿಮಾನಗಳ ಇಂಧನ ದಕ್ಷತೆ: ವಿಮಾನಗಳ ಮೈಲೇಜ್ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಏರ್‌ಬಸ್ ಎ321 ನಿಯೋ ವಿಮಾನದಲ್ಲಿನ ಇಂಧನ ಬಳಕೆ

ಭಾರತದ ಪ್ರಮುಖ ವಿಮಾನಗಳಲ್ಲಿ ಒಂದಾಗಿರುವ ಏರ್‌ಬಸ್ ಎ321 ನಿಯೋ ದೆಹಲಿಯಿಂದ ಮುಂಬೈ ತಲುಪಲು ಸತತ ಎರಡು ಗಂಟೆಗಳ ಪ್ರಯಾಣದೊಂದಿಗೆ 1200 ಕಿ.ಮೀ ದೂರ ಕ್ರಮಿಸಲು ಕನಿಷ್ಠ ಪ್ರತಿ ಕಿ.ಮೀಗೆ 4.18 ಲೀಟರ್ ಇಂಧನ ಬಳಕೆ ಮಾಡುತ್ತದೆ.

ವಿಮಾನಗಳ ಇಂಧನ ದಕ್ಷತೆ: ವಿಮಾನಗಳ ಮೈಲೇಜ್ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಏರ್‌ಬಸ್ ಎ321ನಿಯೋ ಮಾದರಿಯು ಗಂಟೆಗೆ ಸರಾಸರಿ 600 ಕಿಮೀ ವೇಗದಲ್ಲಿ ಪ್ರತಿ ನಿಮಿಷಕ್ಕೆ 10 ಕಿಮೀ ಚಲಿಸಲಿದ್ದು, ಒಟ್ಟಾರೆ 1200 ಕಿ.ಮೀ ದೂರವನ್ನು ತಲುಪಲು ಅದು ಬರೋಬ್ಬರಿ 5,016 ಲೀಟರ್ ಇಂಧನ ಬಳಕೆ ಮಾಡುತ್ತದೆ.

ವಿಮಾನಗಳ ಇಂಧನ ದಕ್ಷತೆ: ವಿಮಾನಗಳ ಮೈಲೇಜ್ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಅಂದರೆ ಏರ್‌ಬಸ್ ಎ321 ನಿಯೋ ವಿಮಾನವು ಪ್ರತಿ ಸೆಕೆಂಡ್‌ಗೆ 0.683 ಲೀಟರ್ ಇಂಧನ ಬಳಕೆ ಮಾಡಿದಂತಾಗಿದ್ದು, ಪ್ರತಿ ನಿಮಿಷಕ್ಕೆ ಕನಿಷ್ಠ 41 ಲೀಟರ್ ಇಂಧನ ಬಳಕೆ ಮಾಡುತ್ತದೆ. ಏರ್‌ಬಸ್ ಎ321 ನಿಯೋ ಮಾದರಿಯಲ್ಲಿ ಒಟ್ಟು 32,940 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಇದ್ದು, ಇದು ಒಂದು ಬಾರಿ ಪೂರ್ತಿ ಟ್ಯಾಂಕ್ ಮೂಲಕ ಸುಮಾರು 7,500 ಕಿ.ಮೀ ನಷ್ಟು ಹಾರಾಟ ನಡೆಸಬಲ್ಲದು.

ವಿಮಾನಗಳ ಇಂಧನ ದಕ್ಷತೆ: ವಿಮಾನಗಳ ಮೈಲೇಜ್ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಇಷ್ಟೊಂದು ಪ್ರಮಾಣದ ಇಂಧನ ಬಳಕೆಯಿಂದ ಲಾಭ ಹೇಗೆ?

ಸಾಮಾನ್ಯ ವಾಹನಗಳಲ್ಲಿನ ಇಂಧನ ಬಳಕೆಯ ವೆಚ್ಚವನ್ನು ವಿಮಾನಗಳ ಇಂಧನಗಳ ವೆಚ್ಚಕ್ಕೆ ಹೋಲಿಕೆ ಮಾಡಿಕೊಂಡಿದಾಗ ಅದರಲ್ಲಿ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ. ಆದರೆ ವಿಮಾನ ಇಂಧನ ಬಳಕೆಯ ವೆಚ್ಚವು ಹೆಚ್ಚಳವಾಗಿದ್ದರೂ ಅದರಲ್ಲಿ ಪ್ರಯಾಣಿಕರ ಸಂಖ್ಯೆ, ಅತಿ ಕಡಿಮೆ ಅವಧಿಯಲ್ಲಿ ಗಮ್ಯಸ್ಥಾನ ತಲುಪುವಿಕೆಯು ವಿಮಾನಯಾನ ಕಾರ್ಯಾಚರಣೆಯ ಮೌಲ್ಯವನ್ನು ಹೆಚ್ಚಿಸುತ್ತದೆ.

Most Read Articles

Kannada
Read more on ವಿಮಾನ plane
English summary
Fuel economy in aircraft here is full details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X