ವಿಮಾನಗಳಲ್ಲಿ ಬಳಸುವ ಫ್ಯೂಸ್ ಬಾಕ್ಸ್‌ಗಳ ಕಾರ್ಯನಿರ್ವಣೆ ಮತ್ತು ಅವುಗಳ ಪ್ರಾಮುಖ್ಯತೆ!

ವಿಮಾನಗಳಲ್ಲಿ ಬಹುತೇಕ ಎಲ್ಲಾ ವ್ಯವಸ್ಥೆಯು ವಿದ್ಯುತ್‌ ಆಧರಿತವಾಗಿರುತ್ತದೆ. ಲೈಟ್‌ಗಳಿಂದ ಹಿಡಿದು ಎಸಿ ವರೆಗೆ ಎಲ್ಲವನ್ನು ನಿರ್ವಹಿಸಲು ವಿದ್ಯುತ್‌ ಪೂರೈಕೈಯು ಬಹಳ ಮುಖ್ಯವಾಗಿರುತ್ತದೆ. ಇಲ್ಲಿ ವಿದ್ಯತ್ ಇದ್ದರಷ್ಟೇ ಸಾಲದು ಎಲ್ಲಾ ವಿಭಾಗಗಳಿಗೆ ನಿರ್ದಿಷ್ಟ ವೋಲ್ಟೇಜ್‌ನ ವಿದ್ಯುತ್‌ ಪೂರೈಕೆಯ ಅಗತ್ಯವಿದ್ದು, ಇದಕ್ಕಾಗಿ ಫ್ಯೂಸ್‌ ಬಾಕ್ಸ್‌ಗಳನ್ನು ವಿಮಾನಗಳಲ್ಲಿ ಬಳಸಲಾಗುತ್ತದೆ.

ವಿಮಾನಗಳಲ್ಲಿ ಬಳಸುವ ಫ್ಯೂಸ್ ಬಾಕ್ಸ್‌ಗಳ ಕಾರ್ಯನಿರ್ವಣೆ ಮತ್ತು ಅವುಗಳ ಪ್ರಾಮುಖ್ಯತೆ!

ವಿಮಾನಗಳಲ್ಲಿನ ವಿದ್ಯುತ್ ವ್ಯವಸ್ಥೆಗಳಲ್ಲಿ ಫ್ಯೂಸ್‌ಗಳು ಸರ್ವೇ ಸಾಮಾನ್ಯವಾಗಿ ಬಳಸುವ ಪ್ರಮುಖ ಪರಿಕರಗಳಾಗಿವೆ. 1960ರ ದಶಕದ ಮಧ್ಯಾರ್ಧದವರೆಗೆ ವಿಮಾನಗಳಲ್ಲಿನ ವಿದ್ಯುತ್ ಸಾಧನಗಳಿಗೆ ಫ್ಯೂಸ್‌ಗಳು ರಕ್ಷಣೆಯ ಪ್ರಾಥಮಿಕ ರೂಪವಾಗಿತ್ತು. ಆದರೆ ಕಾಲಾನಂತರದಲ್ಲಿ ಸರ್ಕ್ಯೂಟ್‌ ಬ್ರೇಕರ್‌ಗಳಿಂದ ಇದರ ಬಳಕೆ ಕಡಿಮೆಯಾಗಿದೆ.

ವಿಮಾನಗಳಲ್ಲಿ ಬಳಸುವ ಫ್ಯೂಸ್ ಬಾಕ್ಸ್‌ಗಳ ಕಾರ್ಯನಿರ್ವಣೆ ಮತ್ತು ಅವುಗಳ ಪ್ರಾಮುಖ್ಯತೆ!

ಅನೇಕ ಆಧುನಿಕ ವಿಮಾನಗಳು ಈಗ ಸರ್ಕ್ಯೂಟ್ ಬ್ರೇಕರ್‌ಗಳನ್ನು ಹೊಂದಿರುವ ಕಾರಣ ಇದೀಗ ಫ್ಯೂಸ್ ಬಾಕ್ಸ್‌ಗಳು ಬಳಕೆ ಕಡಿಮೆಯಾಗಿದೆ. ವಿಮಾನವನ್ನು ವಿನ್ಯಾಸಗೊಳಿಸಲು ಮತ್ತು ನಿರ್ಮಿಸಲು ಫ್ಯೂಸ್‌ ಬಾಕ್ಸ್‌ಗಳನ್ನು ಇಂದಿಗೂ ಏರೋಸ್ಪೇಸ್ ತಯಾರಕರು ಬಳಸುತ್ತಿದ್ದಾರೆ. ಫ್ಯೂಸ್ ಬಾಕ್ಸ್‌ಗಳು ಎಂದರೇನು? ಅವು ವಿಮಾನಗಳಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ? ಎಂಬುದನ್ನು ಇಲ್ಲಿ ತಿಳಿಯಬಹುದು.

ವಿಮಾನಗಳಲ್ಲಿ ಬಳಸುವ ಫ್ಯೂಸ್ ಬಾಕ್ಸ್‌ಗಳ ಕಾರ್ಯನಿರ್ವಣೆ ಮತ್ತು ಅವುಗಳ ಪ್ರಾಮುಖ್ಯತೆ!

ಫ್ಯೂಸ್ ಬಾಕ್ಸ್ ಎಂದರೇನು?

ಹೆಸರೇ ಸೂಚಿಸುವಂತೆ ಫ್ಯೂಸ್ ಬಾಕ್ಸ್ ಎಂಬುದು ಬಹು ಫ್ಯೂಸ್‌ಗಳನ್ನು ಒಳಗೊಂಡಿರುವ ಪೆಟ್ಟಿಗೆಯಾಗಿದ್ದು ಅದರಲ್ಲಿ ವಿವಿಧ ಗಾತ್ರಗಳಲ್ಲಿರುವ ಫ್ಯೂಸ್‌ಗಳು ಇರುತ್ತವೆ. ಕೆಲವು ಫ್ಯೂಸ್ ಬಾಕ್ಸ್‌ಗಳು ಹೆಚ್ಚು ಸಪೋರ್ಟ್‌ ಮಾಡುತ್ತವೆ ಇನ್ನು ಕೆಲವು ಕಡಿಮೆ ಸಪೋರ್ಟ್‌ ಮಾಡುತ್ತವೆ. ಎಲ್ಲಾ ಫ್ಯೂಸ್ ಪೆಟ್ಟಿಗೆಗಳು ಫ್ಯೂಸ್‌ಗಳ ಭೌತಿಕ ಆವರಣಗಳಾಗಿವೆ.

ವಿಮಾನಗಳಲ್ಲಿ ಬಳಸುವ ಫ್ಯೂಸ್ ಬಾಕ್ಸ್‌ಗಳ ಕಾರ್ಯನಿರ್ವಣೆ ಮತ್ತು ಅವುಗಳ ಪ್ರಾಮುಖ್ಯತೆ!

ವಿಮಾನಗಳಲ್ಲಿ ಹೇಗೆ ಕೆಲಸ ಮಾಡುತ್ತವೆ?

ಸಣ್ಣ ವಿಮಾನವಾಗಿರಲಿ ಅಥವಾ ಬೃಹತ್‌ ಘಾತ್ರದ ವಿಮಾನವೇ ಆಗಿರಲಿ ಅತ್ಯಾಧುನಿಕ ವಿದ್ಯುತ್ ವ್ಯವಸ್ಥೆಯನ್ನು ಹೊಂದಿರುತ್ತವೆ. ಅದರ ಕ್ಯಾಬಿನ್ ಲೈಟ್‌ಗಳು, ಹವಾನಿಯಂತ್ರಣಗಳು, ಇಂಡಿಕೇಟರ್‌ಗಳು ಮತ್ತು ಇತರ ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸಲು ವಿದ್ಯುತ್ ಅಗತ್ಯವಿರುತ್ತದೆ. ವಿದ್ಯುತ್ ಇಲ್ಲದೆ, ಪೈಲಟ್‌ಗಳು ಈ ವಿದ್ಯುತ್ ಸಾಧನಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ.

ವಿಮಾನಗಳಲ್ಲಿ ಬಳಸುವ ಫ್ಯೂಸ್ ಬಾಕ್ಸ್‌ಗಳ ಕಾರ್ಯನಿರ್ವಣೆ ಮತ್ತು ಅವುಗಳ ಪ್ರಾಮುಖ್ಯತೆ!

ವಿದ್ಯುತ್ ಉಪಕರಣಗಳಿಗೆ ಸಹಜವಾಗಿ ಬೇಕಾದ ಪ್ರಮಾಣದಲ್ಲಿ ವೋಲ್ಟೇಜ್ ಅಗತ್ಯವಿರುತ್ತದೆ. ವಿದ್ಯುತ್ ಸಾಧನಕ್ಕೆ ಹೆಚ್ಚಿನ ಪ್ರಮಾಣದ ಶಕ್ತಿಯನ್ನು ಅನ್ವಯಿಸಿದರೆ, ಅದು ಅಸಮರ್ಪಕವಾಗಿ ಕಾರ್ಯನಿರ್ವಹಿಸಬಹುದು - ಅಥವಾ ಸಾಧನವು ಸಂಪೂರ್ಣವಾಗಿ ಸ್ಥಗಿತಗೊಂಡು ವಿಮಾನದ ವಿದ್ಯುತ್‌ ವ್ಯವಸ್ಥೆಯೇ ಏರುಪೇರಾಗುವ ಸಾಧ್ಯತೆ ಇರುತ್ತದೆ.

ವಿಮಾನಗಳಲ್ಲಿ ಬಳಸುವ ಫ್ಯೂಸ್ ಬಾಕ್ಸ್‌ಗಳ ಕಾರ್ಯನಿರ್ವಣೆ ಮತ್ತು ಅವುಗಳ ಪ್ರಾಮುಖ್ಯತೆ!

ಹೆಚ್ಚುವರಿ ವೋಲ್ಟೇಜ್ ಬರುವ ಸಂದರ್ಭದಲ್ಲಿ ವಿದ್ಯುತ್ ಹರಿವನ್ನು ನಿಯಂತ್ರಿಸುವ ಮೂಲಕ ವಿದ್ಯುತ್ ಉಪಕರಣಗಳನ್ನು ಹಾನಿಯಿಂದ ರಕ್ಷಿಸಲು ಫ್ಯೂಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಇವು ವಿಮಾನಕ್ಕೆ ಬೇಕಾದ ವಿದ್ಯುತ್‌ ಅನ್ನು ಮಾತ್ರ ರವಾನಿಸಿ, ಹೆಚ್ಚಿನ ವಿದ್ಯುತ್‌ ಹರಿವನ್ನು ನಿಯಂತ್ರಿಸುವುದರ ಜೊತೆಗೆ ಪವರ್‌ ಅನ್ನು ಉಳಿತಾಯ ಮಾಡುತ್ತದೆ.

ವಿಮಾನಗಳಲ್ಲಿ ಬಳಸುವ ಫ್ಯೂಸ್ ಬಾಕ್ಸ್‌ಗಳ ಕಾರ್ಯನಿರ್ವಣೆ ಮತ್ತು ಅವುಗಳ ಪ್ರಾಮುಖ್ಯತೆ!

ವಿಮಾನದಲ್ಲಿ ಫ್ಯೂಸ್‌ಗಳು ಹಾಗೆಯೇ ಅವುಗಳನ್ನು ಸ್ಥಾಪಿಸಿದ ಫ್ಯೂಸ್ ಬಾಕ್ಸ್ ಅನ್ನು ವಿದ್ಯುತ್ ಮೂಲ ಮತ್ತು ವಿದ್ಯುತ್ ಉಪಕರಣಗಳ ನಡುವೆ ಇರಿಸಲಾಗುತ್ತದೆ. ಈ ಮೂಲಕ ವಿದ್ಯುತ್‌ ಹರಿವಿನಲ್ಲಿ ವ್ಯತ್ಯಯ ಉಂಟಾದರೆ ಸರಿಪಡಿಸಿಲು ಸುಲಭವಾಗಿರುತ್ತದೆ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳು ಕಂಡುಬರುವುದು ತೀರಾ ವಿರಳ ಏಕೆಂದರೆ ಫ್ಯೂಸ್‌ಗಳು ವೋಲ್ಟೇಜ್ ರೇಟಿಂಗ್ ಅನ್ನು ಹೊಂದಿರುತ್ತವೆ.

ವಿಮಾನಗಳಲ್ಲಿ ಬಳಸುವ ಫ್ಯೂಸ್ ಬಾಕ್ಸ್‌ಗಳ ಕಾರ್ಯನಿರ್ವಣೆ ಮತ್ತು ಅವುಗಳ ಪ್ರಾಮುಖ್ಯತೆ!

ವೋಲ್ಟೇಜ್ ರೇಟಿಂಗ್ ಫ್ಯೂಸ್ ಮೂಲಕ ರವಾನಿಸಬಹುದಾದ ಗರಿಷ್ಠ ವೋಲ್ಟೇಜ್ ಅನ್ನು ಪ್ರತಿನಿಧಿಸುತ್ತದೆ. ವೋಲ್ಟೇಜ್ ಈ ರೇಟಿಂಗ್ ಅನ್ನು ಮೀರಿದರೆ, ಫ್ಯೂಸ್ ಸ್ಫೋಟವಾಗುತ್ತದೆ. ಇದು ಸಾಮಾನ್ಯವಾಗಿ ಫ್ಯೂಸ್‌ನೊಳಗೆ ಕರಗುವ ತಂತುವಿನ ಸಾಮಾನ್ಯ ಕಾರ್ಯವನ್ನು ಒಳಗೊಂಡಿರುತ್ತದೆ. ವೋಲ್ಟೇಜ್‌ ನಿಯಂತ್ರಣ ಸರಿಯಾಗಿ ಕೆಲಸಮಾಡುತ್ತಿದೆ ಎಂಬುದನ್ನು ವಿಮಾನದ ಸಿಬ್ಬಂದಿ ಆಗಾಗ್ಗೆ ಪರಿಶೀಲಿಸುತ್ತಿರುತ್ತಾರೆ.

ವಿಮಾನಗಳಲ್ಲಿ ಬಳಸುವ ಫ್ಯೂಸ್ ಬಾಕ್ಸ್‌ಗಳ ಕಾರ್ಯನಿರ್ವಣೆ ಮತ್ತು ಅವುಗಳ ಪ್ರಾಮುಖ್ಯತೆ!

ಫ್ಯೂಸ್‌ಗಳು ಓವರ್‌ ವೋಲ್ಟೇಜ್ ಅನ್ನು ತಡೆಯುವುದಿಲ್ಲ. ಬದಲಾಗಿ, ಹೆಚ್ಚುವರಿ ವೋಲ್ಟೇಜ್ ಅನ್ನು ವಿದ್ಯುತ್ ಉಪಕರಣಗಳಿಗೆ ತಲುಪದಂತೆ ತಡೆಯಲು ಅವುಗಳನ್ನು ಬಳಸಲಾಗುತ್ತದೆ. ಮೊದಲೇ ಹೇಳಿದಂತೆ, ರೇಟ್ ಮಾಡಲಾದ ವೋಲ್ಟೇಜ್‌ಗಿಂತ ಹೆಚ್ಚಿನ ವೋಲ್ಟೇಜ್‌ಗೆ ಒಡ್ಡಿಕೊಂಡರೆ ಫ್ಯೂಸ್‌ಗಳು ಸಿಡಿಯುತ್ತವೆ.

ವಿಮಾನಗಳಲ್ಲಿ ಬಳಸುವ ಫ್ಯೂಸ್ ಬಾಕ್ಸ್‌ಗಳ ಕಾರ್ಯನಿರ್ವಣೆ ಮತ್ತು ಅವುಗಳ ಪ್ರಾಮುಖ್ಯತೆ!

ವಿದ್ಯುತ್ ಉಪಕರಣಗಳು ಅಥವಾ ಫ್ಯೂಸ್‌ಗೆ ಸಂಪರ್ಕ ಹೊಂದಿದ ಇತರ ವ್ಯವಸ್ಥೆಗಳು ಫ್ಯೂಸ್‌ ಮೂಲಕ ಶಕ್ತಿಯನ್ನು ಪಡೆಯುವುದರಿಂದ ನಿಯಮಿತ ಶಕ್ತಿಗಿಂತ ಹೆಚ್ಚು ವಿದ್ಯುತ್‌ ಅನ್ನು ಪಡೆಯುವುದಿಲ್ಲ. ಈ ಮೂಲಕ ಫ್ಯೂಸ್‌ ವಿಮಾನದ ವಿದ್ಯುತ್‌ ವ್ಯವಸ್ಥೆಯನ್ನು ಹಾನಿಯಿಂದ ರಕ್ಷಿಸುತ್ತದೆ.

ವಿಮಾನಗಳಲ್ಲಿ ಬಳಸುವ ಫ್ಯೂಸ್ ಬಾಕ್ಸ್‌ಗಳ ಕಾರ್ಯನಿರ್ವಣೆ ಮತ್ತು ಅವುಗಳ ಪ್ರಾಮುಖ್ಯತೆ!

ಫ್ಯೂಸ್ ಬಾಕ್ಸ್‌ನೊಂದಿಗೆ, ವಿಮಾನಗಳಲ್ಲಿ ಫ್ಯೂಸ್‌ಗಳನ್ನು ನಿರ್ವಹಿಸುವುದು ಸುಲಭ. ಹೆಚ್ಚಿನ ವಿಮಾನಗಳು ತಮ್ಮ ಮುಖ್ಯ ವಿದ್ಯುತ್ ಉಪಕರಣಗಳಿಗೆ ಒಂದು ಅಥವಾ ಹೆಚ್ಚಿನ ಸರ್ಕ್ಯೂಟ್ ಬ್ರೇಕರ್‌ಗಳನ್ನು ಬಳಸುತ್ತವೆ. ಇದು ಇತ್ತೀಚೆಗೆ ಹೆಚ್ಚು ಪ್ರಚಲಿತವಾಗಿದೆ. ಇವು ಕೂಡ ಮಾಡ್ರನ್ ವಿದ್ಯತ್ ವ್ಯವಸ್ಥೆಗೆ ಸಹಕಾರಿಯಾಗಿದೆ.

ವಿಮಾನಗಳಲ್ಲಿ ಬಳಸುವ ಫ್ಯೂಸ್ ಬಾಕ್ಸ್‌ಗಳ ಕಾರ್ಯನಿರ್ವಣೆ ಮತ್ತು ಅವುಗಳ ಪ್ರಾಮುಖ್ಯತೆ!

ಆದರೂ ಕೆಲ ಅನಿವಾರ್ಯವಲ್ಲದ ವಿದ್ಯುತ್ ಉಪಕರಣಗಳಿಗೆ, ಫ್ಯೂಸ್ ಬಾಕ್ಸ್ ಅನ್ನು ಬಳಸಬಹುದು. ಫ್ಯೂಸ್ ಬಾಕ್ಸ್ ವಿಮಾನದ ಎಲ್ಲಾ ಫ್ಯೂಸ್‌ಗಳನ್ನು ಒಂದೇ ಪ್ರದೇಶಕ್ಕೆ ಸಂಯೋಜಿಸುವುದರಿಂದ ಸರ್ಕ್ಯೂಟ್ ಬ್ರೇಕರ್‌ಗಳು ಇದ್ದರೂ ಫ್ಯೂಸ್‌ಗಳನ್ನು ಬಳಸುವುದು ಉತ್ತಮ ಎಂದು ಇಂಜಿನೀಯರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

Most Read Articles

Kannada
Read more on ವಿಮಾನ plane
English summary
Fuse boxes in airplanes and their importance
Story first published: Monday, April 18, 2022, 19:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X