ಸೇವೆಗೆ ಸಿದ್ದವಾದ ಅತಿದೊಡ್ಡ ಜೆಟ್ ಎಂಜಿನ್ ಬಳಕೆಯ ಮೊದಲ ಕಮರ್ಷಿಯಲ್ ಫ್ಲೈಟ್

ಬಳಕೆಯಾಗುತ್ತಿರುವ ತಂತ್ರಜ್ಞಾನಗಳು ದಿನೇ ದಿನೇ ಉನ್ನತೀಕರಣ ಹೊಂದುತ್ತಿದ್ದು, ಇದೀಗ ಜಗತ್ತಿನಲ್ಲೇ ಮೊದಲ ಬಾರಿಗೆ ಕಮರ್ಷಿಯಲ್ ಫ್ಲೈಟ್‌ ಒಂದರಲ್ಲಿ ಅತಿ ದೊಡ್ಡ ಜೆಟ್ ಎಂಜಿನ್ ಬಳಕೆ ಮಾಡುತ್ತಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.

By Praveen Sannamani

ವಿಮಾನಯಾನ ಕ್ಷೇತ್ರದಲ್ಲಿ ಬಳಕೆಯಾಗುತ್ತಿರುವ ತಂತ್ರಜ್ಞಾನಗಳು ದಿನೇ ದಿನೇ ಉನ್ನತೀಕರಣ ಹೊಂದುತ್ತಿದ್ದು, ಇದೀಗ ಜಗತ್ತಿನಲ್ಲೇ ಮೊದಲ ಬಾರಿಗೆ ಕಮರ್ಷಿಯಲ್ ಫ್ಲೈಟ್‌ ಒಂದರಲ್ಲಿ ಅತಿ ದೊಡ್ಡ ಜೆಟ್ ಎಂಜಿನ್ ಬಳಕೆ ಮಾಡುತ್ತಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.

ಸೇವೆಗೆ ಸಿದ್ದವಾದ ಅತಿದೊಡ್ಡ ಜೆಟ್ ಎಂಜಿನ್ ಬಳಕೆಯ ಮೊದಲ ಕಮರ್ಷಿಯಲ್ ಫ್ಲೈಟ್

2020ರ ವೇಳೆಗೆ ಸೇವೆಗೆ ಲಭ್ಯವಾಗುತ್ತಿರುವ ಬೋಯಿಂಗ್ 777ಎಕ್ಸ್ ಫ್ಲೈಟ್‌ನಲ್ಲೇ ವಿಶ್ವದ ಅತಿದೊಡ್ಡ ಜಿಇ9ಎಕ್ಸ್ ಜೆಟ್ ಎಂಜಿನ್ ಬಳಕೆ ಮಾಡಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಕ್ಯಾಲಿರ್ಪೋನಿಯಾದಲ್ಲಿ ಹೊಸ ಸಾಧ್ಯತೆಗಳ ಬಗೆಗೆ ತರಹೇವಾರಿ ಟೆಸ್ಟಿಂಗ್‌ಗಳನ್ನು ಸಹ ನಡೆಸಲಾಗಿದೆ.

ಸೇವೆಗೆ ಸಿದ್ದವಾದ ಅತಿದೊಡ್ಡ ಜೆಟ್ ಎಂಜಿನ್ ಬಳಕೆಯ ಮೊದಲ ಕಮರ್ಷಿಯಲ್ ಫ್ಲೈಟ್

ಮೊನ್ನೆ ಕೂಡಾ ಮೊಜಾವೆ ಡಸಾರ್ಟ್‌ನಲ್ಲೂ ಈ ಬಗ್ಗೆ ಟೆಸ್ಟಿಂಗ್‌ಗಳನ್ನು ನಡೆಸಲಾಗಿದ್ದು, ದೈತ್ಯಾಕಾರದ ಫ್ಯಾನ್‌ನೊಂದಿಗೆ 3.4 ಮೀಟರ್ ವೃತ್ತಾಕಾರದ ಡೈಮೀಟರ್ ಹೊಂದಿರುವ ಜಿಇ9ಎಕ್ಸ್ ಜೆಟ್ ಎಂಜಿನ್‌ಗಳು ಬರೋಬ್ಬರಿ 16 ಕಾರ್ಬನ್-ಫೈಬರ್ ಬ್ಲೇಡ್‌ಗಳನ್ನು ಪಡೆದುಕೊಂಡಿದೆ.

ಸೇವೆಗೆ ಸಿದ್ದವಾದ ಅತಿದೊಡ್ಡ ಜೆಟ್ ಎಂಜಿನ್ ಬಳಕೆಯ ಮೊದಲ ಕಮರ್ಷಿಯಲ್ ಫ್ಲೈಟ್

ಈ ಮೂಲಕ 4,50,000 ನ್ಯೂಟನ್ಸ್ ಉತ್ಪಾದಿಸಲಿರುವ ಜಿಇ9ಎಕ್ಸ್ ಜೆಟ್ ಎಂಜಿನ್‌ಗಳು ಸದ್ಯ ಸೇವೆಯಲ್ಲಿರುವ ಜೆಟ್ ಎಂಜಿನ್‌ಗಳಿಂತಗಿಂತ ಶೇ. 30 ರಷ್ಟು ಹೆಚ್ಚುವರಿ ನ್ಯೂಟನ್ಸ್ ಉತ್ಪಾದನಾ ಸಾಮರ್ಥ್ಯವನ್ನು ಪಡೆದಿವೆ. ಇದರಿಂದ ಫ್ಲೈಟ್‌ಗಳ ಸಂಚಾರದ ವೇಗವು ಕೂಡಾ ಮತ್ತಷ್ಟು ಹೆಚ್ಚಳವಾಗಲಿದೆ.

ಸೇವೆಗೆ ಸಿದ್ದವಾದ ಅತಿದೊಡ್ಡ ಜೆಟ್ ಎಂಜಿನ್ ಬಳಕೆಯ ಮೊದಲ ಕಮರ್ಷಿಯಲ್ ಫ್ಲೈಟ್

3,30,000 ನಷ್ಟು ನ್ಯೂಟನ್ಸ್ ಉತ್ಪಾದಿಸುವ ಜೆಟ್ ಎಂಜಿನ್‌ಗಳೇ ಸದ್ಯಕ್ಕೆ ಅತಿ ಹೆಚ್ಚು ನ್ಯೂಟಾನ್ಸ್ ಉತ್ಪಾದಿಸುವ ಎಂಜಿನ್ ಮಾದರಿಗಳಾಗಿದ್ದು, ಬೋಯಿಂಗ್ A380 ಫ್ಲೈಟ್‌ನಲ್ಲಿ ಬಳಕೆ ಮಾಡಲಾಗಿರುವ ಜೆಟ್ ಎಂಜಿನ್‌ಗಳಿಗೂ ಇದು ತೀವ್ರ ಸ್ಪರ್ಧಿಯಾಗಬಲ್ಲದು.

ಸೇವೆಗೆ ಸಿದ್ದವಾದ ಅತಿದೊಡ್ಡ ಜೆಟ್ ಎಂಜಿನ್ ಬಳಕೆಯ ಮೊದಲ ಕಮರ್ಷಿಯಲ್ ಫ್ಲೈಟ್

ಇದಲ್ಲದೇ 2016ರಿಂದಲೇ ಈ ಬಗ್ಗೆ ಪರೀಕ್ಷಾರ್ಥ ಹಾರಾಟ ನಡೆಸಿರುವ ಜಿಇ ಏವಿಯೆಷನ್, ಇದುವರೆಗೆ ಹೊಸ ಎಂಜಿನ್ ಮೂಲಕವೇ 355 ಗಂಟೆಗಳಷ್ಟು ಟೆಸ್ಟಿಂಗ್ ನಡೆಸಿ ಎಂಜಿನ್ ಕಾರ್ಯಕ್ಷಮತೆಯಲ್ಲಿ ಹಲವಾರು ಬದಲಾವಣೆ ತಂದಿದೆ.

ಸೇವೆಗೆ ಸಿದ್ದವಾದ ಅತಿದೊಡ್ಡ ಜೆಟ್ ಎಂಜಿನ್ ಬಳಕೆಯ ಮೊದಲ ಕಮರ್ಷಿಯಲ್ ಫ್ಲೈಟ್

ಇದೀಗ ಜಿಇ9ಎಕ್ಸ್ ಹಾರಾಟಕ್ಕೆ ಸಂಪೂರ್ಣ ಸಿದ್ದವಾಗಿದ್ದು, 2020ರ ವೇಳೆಗೆ ವಾಣಿಜ್ಯ ಹಾರಾಟ ನಡೆಸಲಿರುವ ಬೋಯಿಂಗ್ 777ಎಕ್ಸ್ ಫ್ಲೈಟ್‌ನಲ್ಲಿ ಅಳವಡಿಕೆ ಮಾಡಲಾಗುತ್ತಿದೆ. ಈ ಮೂಲಕ ಹೊಸ ತಂತ್ರಜ್ಞಾನವೊಂದು ವಿಮಾನಯಾನ ಕ್ಷೇತ್ರವನ್ನು ಮೊತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಸಿದ್ದವಾಗುತ್ತಿರುವುದು ಮತ್ತೊಂದು ವಿಶೇಷ.

ಸೇವೆಗೆ ಸಿದ್ದವಾದ ಅತಿದೊಡ್ಡ ಜೆಟ್ ಎಂಜಿನ್ ಬಳಕೆಯ ಮೊದಲ ಕಮರ್ಷಿಯಲ್ ಫ್ಲೈಟ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಬೋಯಿಂಗ್ A380 ಕಮರ್ಷಿಯಲ್ ಫ್ಲೈಟ್ ಬಳಕೆ ಮಾಡಲಾಗುತ್ತಿರುವ ಜೆಟ್ ಎಂಜಿನ್‌ಗಳೇ ಸದ್ಯ ಉನ್ನತ ಮಟ್ಟದ ಜೆಟ್ ಎಂಜಿನ್‌ಗಳಾಗಿದ್ದು, ಇವುಗಳನ್ನು ಹಿಂದಿಕ್ಕಲು ಬರುತ್ತಿರುವ ಜಿಇ9ಎಕ್ಸ್ ಮಾದರಿಯು ಮತ್ತಷ್ಟು ಹೊಸ ಹೊಸ ಆವಿಷ್ಕಾರಗಳಿಗೆ ಮುನ್ನುಡಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01. ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೊಸ ರೂಲ್ಸ್..!!

02. ಅಂಬಾನಿ ಮಗನ ಕಾರಿನಲ್ಲಿರುವ ಈ ಗಡಿಯಾರದ ಬೆಲೆ ಕೇವಲ 1.95 ಕೋಟಿ !! ಇನ್ನು ಈ ಕಾರಿನ ಬೆಲೆ ಕೇಳ್ಬೇಡಿ

03. 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

04. ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

05. ಬಜಾಜ್ ಡೋಮಿನಾರ್ 400 v/s ಆರ್‌ಇ ಹಿಮಾಲಯನ್... ಈ ಬಾರಿ ಟಾಂಗ್ ಕೊಟ್ಟವರು ಯಾರು?

Most Read Articles

Kannada
Read more on plane technology
English summary
World’s Largest Jet Engine On A Commercial Flight Tested.
Story first published: Monday, March 26, 2018, 14:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X