ಹಾರುವ ಕಾರ್ ಅನಾವರಣಗೊಳಿಸಿದ ಜನರಲ್ ಮೋಟಾರ್ಸ್

ಎಲೆಕ್ಟ್ರಿಕ್ ವಾಹನಗಳ ರೀತಿಯಲ್ಲಿಯೇ ವಾಹನ ಸವಾರರಿಗೆ ಹಾರುವ ವಾಹನಗಳ ಬಗ್ಗೆಯೂ ಆಸಕ್ತಿ ಹೆಚ್ಚುತ್ತಿದೆ. ಕಾರು ಪ್ರಿಯರ ನಿರೀಕ್ಷೆಗೆ ಅನುಸಾರವಾಗಿ ಕೆಲವು ಪ್ರಮುಖ ವಾಹನ ತಯಾರಕ ಕಂಪನಿಗಳು ತಾವು ಅಭಿವೃದ್ಧಿಪಡಿಸಿರುವ ಹಾರುವ ವಾಹನಗಳನ್ನು ಪ್ರದರ್ಶಿಸುತ್ತಿವೆ.

ಹಾರುವ ಕಾರ್ ಅನಾವರಣಗೊಳಿಸಿದ ಜನರಲ್ ಮೋಟಾರ್ಸ್

ವಿಶ್ವವಿಖ್ಯಾತ ವಾಹನ ತಯಾರಕ ಕಂಪನಿಯಾದ ಜನರಲ್ ಮೋಟಾರ್ಸ್ ತಾನು ಅಭಿವೃದ್ಧಿಪಡಿಸುತ್ತಿರುವ ಹಾರುವ ಕಾರ್ ಅನ್ನು ಅನಾವರಣಗೊಳಿಸಿದೆ. ಈ ಹಾರುವ ಕಾರು ಲಂಬವಾಗಿ (ವರ್ಟಿಕಲ್) ಇಳಿಯುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು ಲಂಬವಾಗಿಯೇ ಟೇಕ್ಆಫ್ ಸಹ ಆಗುತ್ತದೆ.

ಹಾರುವ ಕಾರ್ ಅನಾವರಣಗೊಳಿಸಿದ ಜನರಲ್ ಮೋಟಾರ್ಸ್

ಜಿಎಂ ಈ ವಾಹನಕ್ಕೆ ವಿಟಾಲ್ (ವರ್ಟಿಕಲ್ ಟೇಕ್-ಆಫ್ ಹಾಗೂ ಲ್ಯಾಂಡಿಂಗ್ - ವಿಟಿಒಎಲ್) ಎಂದು ಹೆಸರಿಟ್ಟಿದೆ. ಈ ಕಾರಿನ ಹಾರಾಟಕ್ಕೆ ಟೈಲ್ ನೆಲದ ಅಗತ್ಯವಿಲ್ಲ. ಈ ಕಾರು ಆಟೋಮ್ಯಾಟಿಕ್ ಆಗಿ ಹಾರುವ ವಾಹನವಾಗಿದೆ ಎಂಬುದು ಗಮನಾರ್ಹ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹಾರುವ ಕಾರ್ ಅನಾವರಣಗೊಳಿಸಿದ ಜನರಲ್ ಮೋಟಾರ್ಸ್

ಈ ಹಾರುವ ಕಾರು ಡ್ರೋನ್ ಕ್ಯಾಮೆರಾವನ್ನು ಹೊಂದಿದೆ. ಈ ಕಾರು ಗಂಟೆಗೆ ಗರಿಷ್ಠ 55 ಮೈಲಿ ವೇಗದಲ್ಲಿ (ಗಂಟೆಗೆ 88 ಕಿ.ಮೀ) ಹಾರಬಲ್ಲದು. ಈ ಸೂಪರ್ ಸಾಮರ್ಥ್ಯಕ್ಕಾಗಿ ಈ ಹಾರುವ ಕಾರಿನಲ್ಲಿ 90 ಕಿ.ವ್ಯಾನ ವಿದ್ಯುತ್ ಮೋಟರ್ ಅನ್ನು ಬಳಸಲಾಗುತ್ತದೆ.

ಹಾರುವ ಕಾರ್ ಅನಾವರಣಗೊಳಿಸಿದ ಜನರಲ್ ಮೋಟಾರ್ಸ್

ಜಿಎಂ ಕಂಪನಿಯ ಆಲ್ಡಿಯಮ್ ಬ್ಯಾಟರಿಗಳು ಈ ಎಲೆಕ್ಟ್ರಿಕ್ ಮೋಟರ್‌ಗೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತವೆ. ಈ ಕಾರು ಕಡಿಮೆ ತೂಕವನ್ನು ಹೊಂದಿರುವುದರಿಂದ ಹೆಚ್ಚು ದೂರ ಚಲಿಸುವ ನಿರೀಕ್ಷೆಗಳಿವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹಾರುವ ಕಾರ್ ಅನಾವರಣಗೊಳಿಸಿದ ಜನರಲ್ ಮೋಟಾರ್ಸ್

ಈ ಕಾರಿನ ಹಾರಾಟಕ್ಕೆ ನೆರವಾಗಲು ನಾಲ್ಕು ಜೋಡಿ ರೋಟರ್‌ಗಳನ್ನು ಬಳಸಲಾಗುತ್ತದೆ. ಈ ರೋಟರ್‌ಗಳು ಕಾರು ಹೆಚ್ಚಿನ ವೇಗದಲ್ಲಿ ಹಾರಲು ಹಾಗೂ ವರ್ಟಿಕಲ್ ಆಗಿ ಇಳಿಯಲು ನೆರವಾಗುತ್ತವೆ.

ಹಾರುವ ಕಾರ್ ಅನಾವರಣಗೊಳಿಸಿದ ಜನರಲ್ ಮೋಟಾರ್ಸ್

ಈ ಹಾರುವ ಕಾರು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಅಧಿಕೃತ ವೀಡಿಯೊವನ್ನು ಕಂಪನಿಯ ಅಧಿಕೃತ ಯೂಟ್ಯೂಬ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊ ಹಾರುವ ಕಾರಿನ ಚಲನೆ ಹಾಗೂ ಕಾರ್ಯಾಚರಣೆಯ ಬಗ್ಗೆ ಹಲವಾರು ಆಸಕ್ತಿದಾಯಕ ಮಾಹಿತಿಯನ್ನು ಒಳಗೊಂಡಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹಾರುವ ಕಾರ್ ಅನಾವರಣಗೊಳಿಸಿದ ಜನರಲ್ ಮೋಟಾರ್ಸ್

ಈ ಕಾರ್ ಅನ್ನು ಮೂಲ ಮಾದರಿಯಾಗಿ ಪರಿಚಯಿಸಲಾಗುತ್ತದೆ. ಉತ್ಪಾದನಾ ಮಾದರಿಯನ್ನು ಶೀಘ್ರದಲ್ಲೇ ಪರಿಚಯಿಸುವ ನಿರೀಕ್ಷೆಗಳಿವೆ. ಈಗ ಬಿಡುಗಡೆಯಾಗಿರುವ ವೀಡಿಯೊ ಶೀಘ್ರದಲ್ಲೇ ಬರಲಿದೆ ಎಂಬ ಶೀರ್ಷಿಕೆಯನ್ನು ಹೊಂದಿದೆ.

ಹಾರುವ ಕಾರ್ ಅನಾವರಣಗೊಳಿಸಿದ ಜನರಲ್ ಮೋಟಾರ್ಸ್

ಇದರ ಕ್ಯಾಬಿನ್ ಮನೆಯಲ್ಲಿರುವ ಸೋಫಾಗಳಂತಹ ಐಷಾರಾಮಿ ಸೀಟುಗಳನ್ನು ಹೊಂದಿದೆ. ಇದರ ಜೊತೆಗೆ ಈ ಹಾರುವ ಕಾರು ಬಯೋಮೆಟ್ರಿಕ್ ಸೆನ್ಸಾರ್, ವಾಯ್ಸ್ ಕಮಾಂಡ್, ಹ್ಯಾಂಡ್ ಗೆಸ್ಚರ್ ರೆಕಗ್ನಿಷನ್ ಸೇರಿದಂತೆ ಹಲವಾರು ಫೀಚರ್'ಗಳನ್ನು ಹೊಂದಿದೆ.

Most Read Articles
 

Kannada
English summary
General Motors unveils fully autonomous flying car. Read in Kannada.
Story first published: Thursday, January 14, 2021, 14:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X