Just In
Don't Miss!
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ಜರ್ಮನ್ ಅಂಬಾಸಿಡರ್ಗೆ ಬಲು ಇಷ್ಟ ನಮ್ಮ ಅಂಬಾಸಿಡರ್ ಕಾರು..!
ಭಾರತೀಯ ಆಟೋಮೊಬೈಲ್ ಇತಿಹಾಸದಲ್ಲಿ ಹಿಂದೂಸ್ಥಾನ್ ಅಂಬಾಸಿಡರ್ ಕಾರು ಒಂದು ದಂತಕಥೆಯಾಗಿದ್ದು, ಜನರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಭಾರತಕ್ಕೆ ಬರುವ ವಿದೇಶಿ ಆಟೋಮೊಬೈಲ್ ಪ್ರಿಯರು ಅಂಬಾಸಿಡರ್ ಅಥವಾ ಪದ್ಮಿನಿ ಪ್ರಿಮೀಯರ್ ಕಾರನ್ನು ಚಲಾಯಿಸಲು ಇಚ್ಚಿಸುತ್ತಾರೆ.

ಭಾರತದಲ್ಲಿರುವ ಜರ್ಮನಿಯ ರಾಯಭಾರಿ (ಅಂಬಾಸಿಡರ್) ವಾಲ್ಟರ್ ಜೆ ಲಿಂಡರ್ ರವರು ಕಳೆದ ವರ್ಷವಷ್ಟೆ ಅಧಿಕಾರ ಸ್ವೀಕರಿಸಿದ್ದಾರೆ. ಇವರು ತಮ್ಮ ಡಿಪ್ಲೋಮ್ಯಾಟಿಕ್ ನಂಬರ್ ಪ್ಲೇಟ್ ಅನ್ನು ಅಂಬಾಸಿಡರ್ ಕಾರಿನಲ್ಲಿ ಅಳವಡಿಸಿ ನಗರದಾದ್ಯಂತ ಸಂಚರಿಸುತ್ತಾರೆ. ನವದೆಹಲಿಯಲ್ಲಿರುವ ಜರ್ಮನ್ ರಾಯಭಾರ ಕಚೇರಿಯು ಲಿಂಡರ್ರವರು ಬಳಸುತ್ತಿರುವ ಕೆಂಪು ಬಣ್ಣದ ಅಂಬಾಸಿಡರ್ ಕಾರಿನ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದೆ.

ಫೇಸ್ಬುಕ್ನಲ್ಲಿ ಶೇರ್ ಮಾಡಲಾಗಿರುವ ಚಿತ್ರದಲ್ಲಿ ಈ ಕಾರಿಗೆ ಹೊಸ ಬಣ್ಣವನ್ನು ಅಳವಡಿಸುವ ಕುರಿತು ಅಭಿಪ್ರಾಯವನ್ನು ಕೇಳಿದೆ. ಕೆಂಪು ಬಣ್ಣದಲ್ಲಿರುವ ಈ ಕಾರು ಕಳೆದು ಹೋದ ಗತವೈಭವವನ್ನು ನೆನಪಿಸುತ್ತದೆ.

ಈ ಕಾರು ರಸ್ತೆಗಿಳಿದಾಗ ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ. ಆದರೆ ಜರ್ಮನ್ ರಾಯಭಾರ ಕಚೇರಿ ಹಾಗೂ ರಾಯಭಾರಿ ಲಿಂಡರ್ ಇನ್ನೂ ಆಕರ್ಷಕವಾಗಿರುವ ಬಣ್ಣವನ್ನು ಹೊಂದಲು ಬಯಸಿದ್ದು, ಅದಕ್ಕಾಗಿಯೇ ಜನರ ಅಭಿಪ್ರಾಯವನ್ನು ಕೇಳಿದ್ದಾರೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಭಾರತಕ್ಕೆ ರಾಯಭಾರಿಗಳಾಗಿ ಬರುವ ಬಹುತೇಕರು ತಮ್ಮ ಸ್ವಂತ ಕಾರನ್ನು ಆ ದೇಶಗಳಿಂದ ತರಿಸಿಕೊಳ್ಳುತ್ತಾರೆ. ಭಾರತ ಸರ್ಕಾರವು ಸಹ ತನ್ನ ದೇಶದಲ್ಲಿರುವ ರಾಯಭಾರಿಗಳು ತರಿಸಿಕೊಳ್ಳುವ ಕಾರುಗಳಿಗೆ ಯಾವುದೇ ಬಗೆಯ ತೆರಿಗೆಗಳನ್ನು ವಿಧಿಸುವುದಿಲ್ಲ. ಆದ ಕಾರಣ ತಮ್ಮ ಸ್ವಂತ ಕಾರುಗಳಲ್ಲಿಯೇ ಭಾರತದಲ್ಲಿ ಸಂಚರಿಸುತ್ತಾರೆ. ಭಾರತೀಯ ರಸ್ತೆಗಳಲ್ಲಿ ಅನೇಕ ದೇಶಗಳ ರಾಯಭಾರಿಗಳು ತಮ್ಮ ಸ್ವಂತ ವಾಹನಗಳಲ್ಲಿ ಓಡಾಡುವುದನ್ನು ಆಗಾಗ ಕಾಣುತ್ತೇವೆ.

ಇನ್ನೂ ಕೆಲವರು ತಮ್ಮ ದೈನಂದಿನ ಕೆಲಸಗಳಿಗಾಗಿ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಕಾರುಗಳನ್ನು ಬಳಸುತ್ತಾರೆ. ಆದರೆ ಅಂಬಾಸಿಡರ್ ಕಾರ್ ಅನ್ನು ಯಾರೂ ಸಹ ಅಷ್ಟಾಗಿ ಇಷ್ಟಪಡುವುದಿಲ್ಲ.

ಹಿಂದೂಸ್ಥಾನ್ ಅಂಬಾಸಿಡರ್ ಕಾರು ಭಾರತದಲ್ಲಿ ನಿರ್ಮಾಣವಾದ ಮೊದಲ ಕಾರ್ ಆಗಿದೆ. ಈ ಕಾರಿನ ನಿರ್ಮಾಣವನ್ನು 1957ರಲ್ಲಿ ಆರಂಭಿಸಲಾಯಿತು. ಈ ಕಾರಿನ ಉತ್ಪಾದನೆಯು 2014ರವರೆಗೆ ಮುಂದುವರೆಯಿತು. ಭಾರತದಲ್ಲಿ ಅತಿ ಹೆಚ್ಚಿನ ಅವಧಿಯವರೆಗೆ ನಿರ್ಮಾಣವಾದ ಕಾರ್ ಎಂಬ ಹೆಗ್ಗಳಿಕೆಯನ್ನು ಅಂಬಾಸಿಡರ್ ಹೊಂದಿದೆ.
MOST READ: ಟ್ಯೂಬ್ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್ಲೆಸ್ ಟಯರ್ ಸದ್ದು ಶುರು

ಭಾರತದಲ್ಲಿರುವ ಹೊಸ ಕಾರುಗಳಿಗೆ ಪೈಪೋಟಿ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಅಂಬಾಸಿಡರ್ ಕಾರಿನ ನಿರ್ಮಾಣವನ್ನು ಸ್ಥಗಿತಗೊಳಿಸಲಾಯಿತು. ಆದರೆ ಈ ಕಾರಿನ ನಿರ್ಮಾಣವಾಗುತ್ತಿದ್ದ ಕೊಲ್ಕತ್ತಾದಲ್ಲಿ ಈ ಕಾರ್ ಅನ್ನು ಬಹು ಸಂಖ್ಯೆಯಲ್ಲಿ ಕಾಣಬಹುದು.

ಅಂಬಾಸಿಡರ್ ಕಾರು ರಾಜಕಾರಣಿಗಳಿಂದ ಗಣ್ಯವ್ಯಕ್ತಿಗಳವರೆಗೆ ಬಹಳಷ್ಟು ಜನರಿಗೆ ನೆಚ್ಚಿನ ಕಾರ್ ಆಗಿತ್ತು. ವಾಸ್ತವದಲ್ಲಿ ಅಂಬಾಸಿಡರ್ ಕಾರು ಭಾರತೀಯ ಮೂಲದ ಕಾರ್ ಅಲ್ಲ. ಈ ಕಾರು ಮೊರಿಸ್ ಆಕ್ಸ್ ಫರ್ಡ್ ಸೀರಿಸ್ 3 ಕಾರಿನ ಮೇಲೆ ಆಧಾರಿತವಾಗಿದೆ. ಹಿಂದೂಸ್ಥಾನ್ ಮೋಟಾರ್ಸ್ ಈ ಕಾರ್ ಅನ್ನು ಭಾರತದಲ್ಲಿ ನಿರ್ಮಾಣ ಮಾಡಲು 1954ರಲ್ಲಿ ಲೈಸೆನ್ಸ್ ಪಡೆದರೂ ಉತ್ಪಾದನೆಯು 1957ರಲ್ಲಿ ಶುರುವಾಯಿತು.
MOST READ: ಬೆಂಗಳೂರಿನ ಉದ್ಯಮಿ ಮದುವೆಮನೆಯಲ್ಲಿ ಐಷಾರಾಮಿ ಕಾರುಗಳ ಕಲರವ..!

ಬಹು ಜನಪ್ರಿಯವಾಗಿದ್ದ ಅಂಬಾಸಿಡರ್ ಕಾರ್ ಅನ್ನು ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್ಜಿ ಮಾದರಿಗಳಲ್ಲಿ ಮಾರಾಟ ಮಾಡಲಾಯಿತು. ಆದರೆ ಜರ್ಮನಿಯ ರಾಯಭಾರಿರವರು ಬಳಸುತ್ತಿರುವುದು ಯಾವ ಮಾದರಿಯ ಕಾರು ಎಂಬುದು ಸ್ಪಷ್ಟವಾಗಿಲ್ಲ.

1.9 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿದ್ದ ಕಾರು 73 ಬಿಹೆಚ್ಪಿ ಹಾಗೂ 130 ಎನ್ಎಂ ಟಾರ್ಕ್ ಉತ್ಪಾದಿಸುತ್ತಿತ್ತು. 2.0 ಡೀಸೆಲ್ ಎಂಜಿನ್ ಹೊಂದಿದ್ದ ಕಾರು 55 ಬಿಹೆಚ್ಪಿ ಹಾಗೂ 112 ಎನ್ಎಂ ಟಾರ್ಕ್ ಉತ್ಪಾದಿಸುತ್ತಿತ್ತು.
MOST READ: ಉಬರ್ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಮೊದಲ ತಲೆಮಾರಿನ ಅಂಬಾಸಿಡರ್ ಕಾರುಗಳನ್ನು ವಿವಿಧ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಅಂಬಾಸಿಡರ್ ಕಾರುಗಳು ಭಾರತೀಯ ರಸ್ತೆಗಳಿಂದ ಬಹುತೇಕ ಕಣ್ಮರೆಯಾಗಿವೆ. ವಾಲ್ಟರ್ ಜೆ ಲಿಂಡರ್ ರವರಂತಹ ಕಾರು ಪ್ರಿಯರು ಈ ಕಾರುಗಳನ್ನು ಜೀವಂತವಾಗಿಡುತ್ತಿದ್ದಾರೆ.