ಕೇವಲ ಎರಡೂವರೆ ಗಂಟೆಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತೆ ಈ ಬುಲೆಟ್ ಟ್ರೈನ್

ದೇಶಾದ್ಯಂತ ರೈಲು ಸಾರಿಗೆಯಲ್ಲಿ ಬಹುದೊಡ್ಡ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಹೈ ಸ್ಪೀಡ್ ಟ್ರೈನ್ ಮತ್ತು ಬುಲೆಟ್ ಟ್ರೈನ್ ಯೋಜನೆಗಳಿಗೆ ಚಾಲನೆ ನೀಡುತ್ತಿದೆ. ಇದೀಗ ಬಹುನೀರಿಕ್ಷಿತ ಮೈಸೂರು ಟು ಚೆನ್ನೈ ನಡುವಿನ ಬುಲೆಟ್ ಟ್ರೈನ್ ಯೋಜನೆ ಜಾರಿಗೆ ಚಿಂತನೆ ನಡೆಸಿದ್ದು, ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ಮೈಸೂರು ಟು ಚೆನ್ನೈ ನಡುವಿನ ಪ್ರಯಾಣದ ಅವಧಿಯು 7 ಗಂಟೆಯಿಂದ ಎರಡೂವರೆ ಗಂಟೆಗೆ ತಗ್ಗಲಿದೆ.

ಕೇವಲ ಎರಡೂವರೆ ಗಂಟೆಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತೆ ಈ ಬುಲೆಟ್ ಟ್ರೈನ್

ಭಾರತೀಯ ರೈಲ್ವೆ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ತರುತ್ತಿರುವ ಜಪಾನ್ ಮತ್ತು ಜರ್ಮನ್ ಸರ್ಕಾರಗಳು ಕೇಂದ್ರ ಸರ್ಕಾರದ ಜೊತೆಗೂಡಿ ಸುಧಾರಿತ ಮಾದರಿಯ ಹೈ ಸ್ಪೀಡ್ ಟ್ರೈನ್ ಮತ್ತು ಬುಲೆಟ್ ಟ್ರೈನ್ ಯೋಜನೆಗಳಿಗೆ ಹಸಿರು ನಿಶಾನೆ ತೊರಿದ್ದು, ಇದೀಗ ಮೈಸೂರು ಟು ಚೆನ್ನೈ ವಾಯಾ ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಬುಲೆಟ್ ಟ್ರೈನ್ ಯೋಜನೆಯ ಸಾಧ್ಯತೆ ಕುರಿತಂತೆ ಜರ್ಮನ್ ಸರ್ಕಾರವು ನೀಲನಕ್ಷೆ ಒಂದನ್ನು ಸಿದ್ದಪಡಿಸಿದೆ.

ಕೇವಲ ಎರಡೂವರೆ ಗಂಟೆಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತೆ ಈ ಬುಲೆಟ್ ಟ್ರೈನ್

ಮೈಸೂರು, ಬೆಂಗಳೂರು ಮತ್ತು ಚೆನ್ನೈ ನಡುವಿನ ಸಾರಿಗೆ ವ್ಯವಸ್ಥೆಯ ಬಗ್ಗೆ ಕೆಲವು ತಿಂಗಳಿನಿಂದ ಅಧ್ಯಯನ ನಡೆಸಿರುವ ಜರ್ಮನ್ ಸರ್ಕಾರವು ಈ ಭಾಗದಲ್ಲಿ ಬುಲೆಟ್ ಟ್ರೈನ್ ಯೋಜನೆಯನ್ನು ಕೈಗೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಕೇಂದ್ರ ರೈಲ್ವೆ ಇಲಾಖೆಗೆ ಅಧ್ಯಯನದ ವರದಿ ಸಲ್ಲಿಸಿದೆ.

ಕೇವಲ ಎರಡೂವರೆ ಗಂಟೆಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತೆ ಈ ಬುಲೆಟ್ ಟ್ರೈನ್

ಈ ಕುರಿತು ಕೇಂದ್ರ ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವಿನ್ ಲೋಹಾನಿ ಅವರನ್ನು ಭೇಟಿ ಮಾಡಿದ ಜರ್ಮನ್ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿಯಾದ ಮಾರ್ಟಿನ್ ನೆ ಅವರು, ಸುಮಾರು 18 ತಿಂಗಳು ಕಾಲ ಅಧ್ಯಯನ ನಡೆಸಿದ ಸಿದ್ದಪಡಿಸಲಾದ ವರದಿ ನೀಡಿ ಕಾರ್ಯಯೋಜನೆಯ ಸಾಧ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕೇವಲ ಎರಡೂವರೆ ಗಂಟೆಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತೆ ಈ ಬುಲೆಟ್ ಟ್ರೈನ್

ಒಂದು ವೇಳೆ ಜರ್ಮನ್ ಸರ್ಕಾರವು ಸಿದ್ದಪಡಿಸಿರುವ ಹೊಸ ಯೋಜನೆಯ ನೀಲನಕ್ಷೆಗೆ ಕೇಂದ್ರ ಸರ್ಕಾರವು ಒಪ್ಪಿಗೆ ಸೂಚಿಸಿದ್ದೆ ಆದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಬುಲೆಟ್ ಟ್ರೈನ್ ಟ್ರ್ಯಾಕ್‌ಗೆ ಇಳಿಯಲಿದ್ದು, 435 ಕಿ.ಮಿ ದೂರವನ್ನು ಕೇವಲ 2 ಗಂಟೆ 25 ನಿಮಿಷಗಳಲ್ಲಿ ತಲುಪಬಹುದಾಗಿದೆಯೆಂತೆ.

ಕೇವಲ ಎರಡೂವರೆ ಗಂಟೆಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತೆ ಈ ಬುಲೆಟ್ ಟ್ರೈನ್

320 ಕಿ.ಮಿ ವೇಗದಲ್ಲಿ ಚಾಲನೆ..!

ಜರ್ಮನ್ ಸರ್ಕಾರವು ಸಲ್ಲಿಸಿರುವ ಕಾರ್ಯ ಸಾಧ್ಯತೆ ವರದಿ ಪ್ರಕಾರ, ಹೊಸ ಬುಲೆಟ್ ಟ್ರೈನ್ ಪ್ರತಿ ಗಂಟೆಗೆ 320ಕಿ.ಮೀ ವೇಗದಲ್ಲಿ ಚಲಿಸಲಿದ್ದು, ಮೈಸೂರು ಟು ಬೆಂಗಳೂರು ನಡುವೆ 3 ನಿಲ್ದಾಣ ಮತ್ತು ಬೆಂಗಳೂರು ಟು ಚೆನ್ನೈ ನಡುವೆ ಮೂರು ನಿಲ್ದಾಣಗಳು ಸ್ಥಾಪನೆಗೊಳ್ಳುವ ಸಾಧ್ಯತೆಗಳಿವೆ.

ಕೇವಲ ಎರಡೂವರೆ ಗಂಟೆಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತೆ ಈ ಬುಲೆಟ್ ಟ್ರೈನ್

ಯೋಜನೆಗಾಗಿ 1 ಲಕ್ಷ ಕೋಟಿ ವೆಚ್ಚ

ಹೌದು, ಮೆಟ್ರೋ ಪಿಲ್ಲರ್‌ಗಳಂತೆ ಪ್ರತ್ಯೇಕ ಮಾರ್ಗ ಹೊಂದುವ ಬುಲೆಟ್ ಟ್ರೈನ್ ಮಾರ್ಗವು ಶೇ.84 ರಷ್ಟು ನೆಲದಿಂದ ಎತ್ತರದ ಹಳಿ ಮಾರ್ಗವನ್ನು ಹೊಂದಲಿದ್ದರೆ, ಶೇ. 11 ರಷ್ಟು ಸುರಂಗ ಮಾರ್ಗ ಮತ್ತು ಶೇ.5 ರಷ್ಟು ಮಾತ್ರ ನೆಲಮಟ್ಟ ಟ್ರ್ಯಾಕ್‌ನಲ್ಲಿ ಸಾಗಲಿದೆ.

ಕೇವಲ ಎರಡೂವರೆ ಗಂಟೆಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತೆ ಈ ಬುಲೆಟ್ ಟ್ರೈನ್

ಹೀಗಾಗಿ ಈ ಯೋಜನೆಯೂ ತುಸು ವೆಚ್ಚದಾಯಕವಾಗಿದ್ದು, ಬರೋಬ್ಬರಿ 1 ಲಕ್ಷ ಕೋಟಿ ಬೇಕಾಗಬಹುದು ಎನ್ನಲಾಗಿದೆ. ಜೊತೆಗೆ ಯೋಜನೆ ಜಾರಿ ವೇಳೆ ಹೆಚ್ಚುವರಿಯಾಗಿ 150 ಕೋಟಿ ಬೇಕಾಗಬಹುದು ಎಂದಿರುವ ಜರ್ಮನ್ ಸರ್ಕಾರವು, ಹೊಸ ಯೋಜನೆಯ ಜಾರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿಕೊಂಡಿದೆ.

ಕೇವಲ ಎರಡೂವರೆ ಗಂಟೆಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತೆ ಈ ಬುಲೆಟ್ ಟ್ರೈನ್

ಟ್ರಾಫಿಕ್ ಸಮಸ್ಯೆಗೆ ಹೊಸ ಪರಿಹಾರ

ಸದ್ಯ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಪ್ರತಿದಿನ ಸಾವಿರಾರು ಪ್ಯಾಸೆಂಜರ್ ವಾಹನಗಳು ಓಡಾಡುತ್ತಿದ್ದು, ಕನಿಷ್ಠ ಅಂದ್ರು 6 ರಿಂದ 8 ಗಂಟೆಗಳ ಕಾಲ ಪ್ರಯಾಣದ ಅವಧಿ ತೆಗೆದುಕೊಳ್ಳುತ್ತೆ. ಹೀಗಾಗಿ ಬೆಂಗಳೂರು ಟು ಮೈಸೂರು ಮತ್ತು ಬೆಂಗಳೂರು ಚೆನ್ನೈ ನತ್ತ ಪ್ರಯಾಣಿಸುವವರಿಗೆ ಇದು ಸಾಕಷ್ಟು ಸಹಕಾರಿಯಾಗುತ್ತೆ ಎನ್ನಬಹುದು.

MOST READ: ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ಕೇವಲ ಎರಡೂವರೆ ಗಂಟೆಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತೆ ಈ ಬುಲೆಟ್ ಟ್ರೈನ್

ವಿಮಾನಯಾನಕ್ಕಿಂತಲೂ ಸುಲಭ

ಹಾಗೆ ನೋಡಿದ್ರೆ ಬೆಂಗಳೂರು ಟು ಚೆನ್ನೈ ತಲುಪಲು ವಿಮಾನಯಾನವು ಕೇವಲ 1 ಗಂಟೆ 5 ನಿಮಿಷ ತಲುಪುತ್ತೆ. ಹೀಗಿರುವಾಗ ಬುಲೆಟ್ ಟ್ರೈನ್ ಅವಶ್ಯಕತೆ ಇದೆಯಾ ಎನ್ನುವ ಪ್ರಶ್ನೆ ಮೂಡಬಹುದು. ಆದ್ರೆ ವಿಮಾನಯಾನಕ್ಕಿಂತ ಬುಲೆಟ್ ಟ್ರೈನ್ ಬೆಸ್ಟ್ ಎನ್ನುವುದು ನಮ್ಮ ಅಭಿಪ್ರಾಯ.

ಕೇವಲ ಎರಡೂವರೆ ಗಂಟೆಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತೆ ಈ ಬುಲೆಟ್ ಟ್ರೈನ್

ಇದಕ್ಕೆ ಕಾರಣ, ನೀವು ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣ ಮಾಡುವುದಾದರೇ ನಗರದ ಕೇಂದ್ರ ಪ್ರದೇಶದಿಂದ ವಿಮಾನ ನಿಲ್ದಾಣ ತಲುಪುದು ಅಷ್ಟು ಸುಲಭವಲ್ಲ. ಕನಿಷ್ಠ ಅಂದ್ರು ಒಂದೂವರಿಂದ ಎರಡು ಗಂಟೆಗಳ ಕಾಲ ಪ್ರಯಾಣಿಸಬೇಕಾದ ಅವಶ್ಯಕತೆಯಿರುತ್ತೆ.

ಕೇವಲ ಎರಡೂವರೆ ಗಂಟೆಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತೆ ಈ ಬುಲೆಟ್ ಟ್ರೈನ್

ಅಲ್ಲಿಗೆ ಪ್ರಯಾಣ ಅವಧಿ ದುಪ್ಪಟ್ಟು ಆಗುವುದಲ್ಲದೇ ಕ್ಯಾಬ್ ಬಾಡಿಗೆ ಸೇರಿ ಪ್ರಯಾಣದ ವೆಚ್ಚ ಕೂಡಾ ಹೆಚ್ಚಲಿದೆ. ಹೀಗಾಗಿ ನಗರದ ಮಧ್ಯದಲ್ಲೇ ಹಾಯ್ದು ಹೊಗುವ ಬುಲೆಟ್ ಟ್ರೈನ್ ಸೇವೆಯಿಂದಾಗಿ ನಗರದ ಎಲ್ಲಾ ಭಾಗದ ಪ್ರಯಾಣಿಕರಿಗೂ ಅನುಕೂಲ ಎನ್ನಬಹುದಾಗಿದ್ದು, ಮೈಸೂರಿಗೆ ಬರುವ ಪ್ರವಾಸಿಗರಿಗೂ ಇದು ಸಾಕಷ್ಟು ಅನುಕೂಲಕರವಾಗಲಿದೆ.

MOST READ: ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?

ಕೇವಲ ಎರಡೂವರೆ ಗಂಟೆಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತೆ ಈ ಬುಲೆಟ್ ಟ್ರೈನ್

ಇದರಿಂದ ಜರ್ಮನ್ ಸರ್ಕಾರ ನಿರ್ಮಾಣ ಮಾಡಲು ಮುಂದಾಗಿರುವ ಈ ಯೋಜನೆಗೆ ಕೇಂದ್ರ ಸರ್ಕಾರವು ಒಪ್ಪಿಗೆ ಸೂಚಿಸುವ ಸಾಧ್ಯತೆಗಳಿದ್ದು, ಮುಂದಿನ ವರ್ಷದಿಂದ ಯೋಜನೆ ಆರಂಭಗೊಂಡಲ್ಲಿ 2025ರ ವೇಳೆಗೆ ಬುಲೆಟ್ ಟ್ರೈನ್‌ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಗಲಿದೆ.

ಕೇವಲ ಎರಡೂವರೆ ಗಂಟೆಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತೆ ಈ ಬುಲೆಟ್ ಟ್ರೈನ್

ಕೇವಲ ಮೈಸೂರು ಟು ಚೆನ್ನೈ ಮಾರ್ಗವಷ್ಟೇ ಅಲ್ಲದೇ ದೆಹಲಿ ಟು ಮುಂಬೈ, ದೆಹಿಲಿ ಟು ಕೋಲ್ಕತ್ತಾ, ಮುಂಬೈ ಟು ಚೆನ್ನೈ ಮತ್ತು ಮುಂಬೈ ಟು ನಾಗ್ಪುರ ಮಧ್ಯದಲ್ಲ ಬುಲೆಟ್ ಟ್ರೈನ್ ಯೋಜನೆಯ ನೀಲನಕ್ಷೆ ಸಿದ್ದಪಡಿಸಿರುವ ಜರ್ಮನ್ ಸರ್ಕಾರವು, ಜಪಾನ್ ಸರ್ಕಾರ ನಿರ್ಮಾಣ ಮಾಡುತ್ತಿರುವ ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ಟ್ರೈನ್ ಯೋಜನೆಗಿಂತಲೂ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದೆ.

Most Read Articles

Kannada
Read more on train ರೈಲು
English summary
Chennai-Mysore via Bengaluru in 2 hrs 25 mins! Germany proposes bullet train; submits study to Indian Railways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X