ಇಲ್ಲಿ ಕೇವಲ 30 ಸೇಕೆಂಡುಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತೆ..!!

ಪ್ರತಿಯೊಬ್ಬರಿಗೆ ಬೈಕ್, ಕಾರು ಓಡಿಸೋದು ಅಂದ್ರೆ ತುಂಬಾನೇ ಇಷ್ಟ. ಆದ್ರೆ ಲೈಸೆನ್ಸ್ ಇಲ್ಲದೇ ವಾಹನ ಚಾಲನೆ ಮಾಡೊದೇ ಕಷ್ಟ. ಸರಿ ಲೈಸೆನ್ಸ್ ಮಾಡಿಸೋಣ ಅಂದ್ರೆ ಆರ್ಟಿ‌ಓ ಆಫೀಸ್ ಬಳಿ ಉದ್ದ ಉದ್ದ ಕ್ಯೂ ನಿಲ್ಲಬೇಕು. ಜೊತೆಗೆ ಏಜೆಂಟ್‌ಗಳ ಕಾಟಾ ಬೇರೇ.

By Praveen Sannamani

ಪ್ರತಿಯೊಬ್ಬರಿಗೆ ಬೈಕ್, ಕಾರು ಓಡಿಸೋದು ಅಂದ್ರೆ ತುಂಬಾನೇ ಇಷ್ಟ...ಆದ್ರೆ ಲೈಸೆನ್ಸ್ ಇಲ್ಲದೇ ವಾಹನ ಚಾಲನೆ ಮಾಡೊದೇ ಕಷ್ಟ.. ಸರಿ ಲೈಸೆನ್ಸ್ ಮಾಡಿಸೋಣ ಅಂದ್ರೆ ಆರ್‌ಟಿಓ ಆಫೀಸ್ ಬಳಿ ಉದ್ದ ಉದ್ದ ಕ್ಯೂ ನಿಲ್ಲಬೇಕು. ಜೊತೆಗೆ ಏಜೆಂಟ್‌ಗಳ ಕಾಟಾ ಬೇರೆ.. ಈ ರೀತಿಯ ಗೊಣಗಾಟ ಇದ್ದೇ ಇರುತ್ತೆ.. ಆದ್ರೆ ಇದಕ್ಕೆ ಹೊಸ ಪರಿಹಾರ ಎನ್ನುವಂತೆ ಗಾಜಿಯಾಬಾದ್ ಆರ್‌ಟಿಓ ಅಧಿಕಾರಿಗಳ ಹೊಸ ಕ್ರಮದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು..

ಇಲ್ಲಿ ಕೇವಲ 30 ಸೇಕೆಂಡುಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತೆ..!!

ಹೌದು.. ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಇನ್ಮುಂದೆ ನೀವು ಪರದಾಡಬೇಕಾಗಿಲ್ಲ..ಅದು ಜಸ್ಟ್ 30 ಸೇಕೆಂಡುಗಳಲ್ಲಿ ಅಂದ್ರೆ ನೀವು ನಂಬಲೇಬೇಕು. ಡಿಎಲ್‌ಗಾಗಿ ಅರ್ಜಿ ಹಾಕಿದ ನಂತರ ಡ್ರೈವಿಂಗ್ ಟೆಸ್ಟ್ ಸೇರಿದಂತೆ ಹಲವು ಸುತ್ತಿನ ಪರೀಕ್ಷೆಗಳನ್ನು ಪಾಸ್ ನಂತರವೇ ಡಿಎಲ್ ಪಡೆಯಬೇಕಿರುವುದು ಸದ್ಯದ ಪರಿಸ್ಥಿತಿ. ಹೀಗಿರುವಾಗ ದೆಹಲಿ ಬಳಿಯ ಗಾಜಿಯಾಬಾದ್‌ನಲ್ಲಿ ಆರ್‌ಟಿಓ ಕಛೇರಿಯಲ್ಲಿ ಡಿಎಲ್‌ಗಾಗಿ ಅರ್ಜಿ ಹಾಕಿದ್ರೆ ಕೇವಲ 30 ಸೇಕೆಂಡುಗಳಲ್ಲಿ ಪಡೆಯಬಹುದು ಅಂದ್ರೆ ನೀವು ನಂಬಲೇಬೇಕು.

ಇಲ್ಲಿ ಕೇವಲ 30 ಸೇಕೆಂಡುಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತೆ..!!

ಗಾಜಿಯಾಬಾದ್ ಆರ್‌ಟಿಓ ಅಧಿಕಾರಿಗಳು ದೇಶದಲ್ಲಿರುವ ಇತರೆ ಆರ್‌ಟಿಓ ಅಧಿಕಾರಿಗಳಿಂತ ವೇಗವಾಗಿ ವಾಹನ ಸವಾರರಿಗೆ ಡಿಎಲ್ ವಿತರಣೆ ಮಾಡುವಲ್ಲಿ ಜನಪ್ರಿಯತೆ ಸಾಧಿಸುತ್ತಿದ್ದು, ಅಧಿಕಾರಿಗಳ ಜೇಬಿಗೆ ಇಂತಿಷ್ಟು ಹಣ ಸಂದಾಯ ಮಾಡಿದ್ರೆ ಸಾಕು ಡ್ರೈವಿಂಗ್ ಟೆಸ್ಟ್ ಅನ್ನು ಕೂಡಾ ನಡೆಸೋದಿಲ್ಲವಂತೆ.

ಇಲ್ಲಿ ಕೇವಲ 30 ಸೇಕೆಂಡುಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತೆ..!!

ಅಂದಹಾಗೆ, ನಾವು ಹೇಳ ಹೊರಟಿರುವುದು ಡಿಎಲ್ ವಿತರಣೆಯಲ್ಲಿನ ಉತ್ತಮ ಬೆಳವಣಿಗೆ ಅಂತೂ ಅಲ್ಲವೇ ಅಲ್ಲ. ಹಣದಾಸೆಗೆ ಬಿದ್ದಿರುವ ಆರ್‌ಟಿಓ ಅಧಿಕಾರಿಗಳು ಕೇವಲ 30 ಸೇಕೆಂಡುಗಳಷ್ಟು ಡ್ರೈವಿಂಗ್ ಟೆಸ್ಟ್ ನಡೆಸುವ ಮೂಲಕ ಡಿಎಲ್ ವಿತರಣೆ ಮಾಡುತ್ತಿದ್ದಾರೆ.

ಇಲ್ಲಿ ಕೇವಲ 30 ಸೇಕೆಂಡುಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತೆ..!!

ಏಜೆಂಟರ್ ಮೂಲಕ ಬರುವ ಪರೀಕ್ಷಾರ್ಥಿಗಳ ಬಳಿ ಹೆಚ್ಚುವರಿ ಪಡೆದು ಕೇವಲ 30 ಸೇಕೆಂಡು ಕಾಲ ಡ್ರೈವಿಂಗ್ ಟೆಸ್ಟ್ ನಡೆಸುವ ಇಲ್ಲಿನ ಆರ್‌ಟಿಓ ಅಧಿಕಾರಿಗಳು, ಹಣ ಪಡೆಯುವ ಮೂಲಕ ಪರೀಕ್ಷೆಗೆ ಬರುವ ಶೇ.98 ಪರೀಕ್ಷಾರ್ಥಿಗಳನ್ನು ಪಾಸ್ ಮಾಡಿ ಡಿಎಲ್ ವಿತರಣೆ ಮಾಡುತ್ತಿದ್ದಾರೆ.

ಇಲ್ಲಿ ಕೇವಲ 30 ಸೇಕೆಂಡುಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತೆ..!!

ಗಾಜಿಯಾಬಾದ್ ಆರ್‌ಟಿಓ ಅಧಿಕಾರಿಗಳು ನಡೆಸುವ ಕೇವಲ 30 ಸೇಕೆಂಡುಗಳ ಡ್ರೈವಿಂಗ್ ಟೆಸ್ಟ್‌ನಲ್ಲಿ ಪರೀಕ್ಷಾರ್ಥಿಗಳು 10 ಮೀಟರ್‌ನಷ್ಟು ತಮ್ಮ ವಾಹನಗಳನ್ನು ಚಾಲನೆ ಮಾಡಿದ್ರೆ ಮುಗಿತು ಅವರು ಡಿಎಲ್‌ಗೆ ಅರ್ಹರು ಎಂದು ಪರಿಗಣಿಸಲಾಗುತ್ತಿದ್ದು, ಈ ಬಗ್ಗೆ ಪರೀಕ್ಷಾರ್ಥಿಯೊಬ್ಬ ಆರ್‌ಟಿಓ ಅಧಿಕಾರಿಗಳ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾನೆ.

ಇಲ್ಲಿ ಕೇವಲ 30 ಸೇಕೆಂಡುಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತೆ..!!

ಡ್ರೈವಿಂಗ್ ಕ್ಲಾಸ್ ಒಂದರ ಮೂಲಕ ಡಿಎಲ್‌ಗೆ ಅರ್ಜಿ ಸಲ್ಲಿಸಿದ್ದ ಆ ವಿದ್ಯಾರ್ಥಿ ಕಳೆದ ಎರಡು ದಿನಗಳ ಹಿಂದಷ್ಟೇ ಡ್ರೈವಿಂಗ್ ಟೆಸ್ಟ್‌ಗಾಗಿ ಬಂದಿದ್ದ. ಟೆಸ್ಟಿಂಗ್ ವೇಳೆ ಕಠಿಣ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ ಎಂದುಕೊಂಡಿದ್ದ ಆ ವಿದ್ಯಾರ್ಥಿಗೆ ಶಾಕ್ ಕಾದಿತ್ತು.

ಇಲ್ಲಿ ಕೇವಲ 30 ಸೇಕೆಂಡುಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತೆ..!!

ಪರೀಕ್ಷೆಗಾಗಿ ಕಾರು ಏರಿ ಕುಳಿತ ವಿದ್ಯಾರ್ಥಿಯು ಕಾರನ್ನು ಸ್ಟಾರ್ಟ್ ಮಾಡಿ 10 ಮೀಟರ್ ಮುಂದೆ ಹೋಗಿಲ್ಲ ಅದಾಗಲೇ ಆರ್‌ಟಿಓ ಅಧಿಕಾರಿಗಳು ನೀವು ಡಿಎಲ್ ಅರ್ಹರಾಗಿದ್ದಿರಿ ನಿಮ್ಮ ಡಿಎಲ್ ಇನ್ನೇರಡು ದಿನಗಳಲ್ಲಿ ನಿಮ್ಮ ಮನೆಗೆ ತಲಪುತ್ತೆ ಹೋಗಿ ಎಂದರಂತೆ.

ಇಲ್ಲಿ ಕೇವಲ 30 ಸೇಕೆಂಡುಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತೆ..!!

ಅರೇ! ಇದ್ಯಾವ ರೀತಿಯ ಟೆಸ್ಟಿಂಗ್ ಅಂದುಕೊಂಡ ವಿದ್ಯಾರ್ಥಿ ಅಸಿಸ್ ಯಾದವ್ ಕಾರು ಇಳಿದು ಹೋರಬಂದಿದ್ದಾನೆ. ಅವನ ಹಿಂದೆಯೇ ಕ್ಯೂ ನಿಂತಿದ್ದ ನೂರಾರು ಪರೀಕ್ಷಾರ್ಥಿಗಳಿಗೂ ಹೀಗೆ ಮಾಡಿ ಡಿಎಲ್ ಆಗಿ ಪಾಸ್ ಆಗಿದ್ದೀರಿ ಅಂದರಂತೆ.

ಇಲ್ಲಿ ಕೇವಲ 30 ಸೇಕೆಂಡುಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತೆ..!!

ಜೊತೆಗೆ ನಿಮ್ಮ ಏಜೆಂಟರ್ ಬಳಿ ಇಂತಿಷ್ಟು ಹಣ ನೀಡಿದ್ರೆ ಮಾತ್ರ ಡಿಎಲ್ ಪಡೆಯಬಹುದು ಎಂದ ಆರ್‌ಟಿಓ ಅಧಿಕಾರಿಗಳು ಪರೀಕ್ಷಾರ್ಥಿಗಳಿಂದ ಹಗಲು ದರೋಡೆ ಮಾಡುತ್ತಿದ್ದು, ಈ ಬಗ್ಗೆ ಅಸಿಸ್ ಯಾದವ್ ಸಾಮಾಜಿಕ ಜಾಲತಾಣಗಳಲ್ಲಿ ತನದಾಗ ಅನುಭವನ್ನು ಬಿಚ್ಚಿಟ್ಟಿದ್ದಾನೆ.

ಇಲ್ಲಿ ಕೇವಲ 30 ಸೇಕೆಂಡುಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತೆ..!!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ದೆಹಲಿಯಲ್ಲಿ ಡಿಎಲ್ ಪಡೆಯಲು ಸಾಧ್ಯವಾಗದ ಸಾವಿರಾರು ಪರೀಕ್ಷಾರ್ಥಿಗಳು ಗಾಜಿಯಾಬಾದ್‌ಗೆ ಬರುತ್ತಿದ್ದು, ಇಂತಿಷ್ಟು ಹಣ ನೀಡಿದ್ರೆ ಸಾಕು ಸರಿಯಾಗಿ ಡ್ರೈವಿಂಗ್ ಬರದಿದ್ದರು ಡಿಎಲ್ ಪಾಸ್ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇಲ್ಲಿ ಕೇವಲ 30 ಸೇಕೆಂಡುಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತೆ..!!

ಸರಿಯಾಗಿ ವಾಹನ ಚಾಲನೆ ಮಾಡಲು ಬರದಿದ್ದರೂ ಅವರಿಂದ ಹಣ ಪಡೆದು ಡಿಎಲ್ ವಿತರಣೆ ಮಾಡುತ್ತಿರುವ ಫರಿದಾಬಾದ್ ಆರ್‌ಟಿಓ ಅಧಿಕಾರಿಗಳ ಕ್ರಮಕ್ಕೆ ಈಗಾಗಲೇ ಹಲವರು ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಸುದ್ದಿಮಾಧ್ಯಮಗಳು ವರದಿ ಮಾಡಲು ಹೋದಾಗ ಅವರು ಹೇಳಿದ್ದೆ ಬೇರೆ.

ಇಲ್ಲಿ ಕೇವಲ 30 ಸೇಕೆಂಡುಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತೆ..!!

ಗಾಜಿಯಾಬಾದ್ ಆರ್‌ಟಿಓ ಕಛೇರಿಯಲ್ಲಿ ಡ್ರೈವಿಂಗ್ ಟೆಸ್ಟ್ ಮಾಡಲು ಸರಿಯಾದ ಸ್ಥಳಾವಕಾಶದ ಕೊರತೆಯಿದ್ದು, ಈ ಹಿನ್ನೆಲೆ ಡಿಎಲ್‌ಗಾಗಿ ಬರುವ ಪರೀಕ್ಷಾರ್ಥಿಗಳಿಗೆ ಕಡಿಮೆ ಅವಧಿಯಲ್ಲಿ ಟೆಸ್ಟಿಂಗ್ ಮಾಡುತ್ತಿದ್ದೇವೆ ಹೊರತು ಹಣ ಪಡೆದು ಡಿಎಲ್ ವಿತರಣೆ ಮಾಡುತ್ತಿದ್ದಾರೆ ಎನ್ನುವುದು ಸುಳ್ಳು ಸುದ್ದಿ ಎಂದಿದ್ದಾರೆ.

ಇಲ್ಲಿ ಕೇವಲ 30 ಸೇಕೆಂಡುಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತೆ..!!

ಒಟ್ಟಿನಲ್ಲಿ ಡಿಎಲ್‌ಗಾಗಿ ತಿಂಗಳುಗಟ್ಟಲೇ ಕಾಯಬೇಕಾದ ಪರಿಸ್ಥಿತಿಯಿದ್ದರೂ ಗಾಜಿಯಾಬಾದ್ ಆರ್‌ಟಿಓ ಅಧಿಕಾರಿಗಳು ಮಾತ್ರ 30 ಸೇಕೆಂಡುಗಳಲ್ಲಿ ಡ್ರೈವಿಂಗ್ ಟೆಸ್ಟ್ ನಡೆಸಿ ಡಿಎಲ್ ವಿತರಣೆ ಮಾಡುತ್ತಿದ್ದು, ಅಷ್ಟು ಕಡಿಮೆ ಅವಧಿಯಲ್ಲಿ ಟೆಸ್ಟ್ ನಡೆಸಿ ಯಾವ ಮಾನದಂಡಗಳ ಆಧಾರ ಮೇಲೆ ಡಿಎಲ್ ವಿತರಣೆ ಮಾಡುತ್ತಾರೋ ಅನ್ನೋದೆ ಯಕ್ಷ ಪ್ರಶ್ನೆ....

Most Read Articles

Kannada
English summary
In Ghaziabad, pass driving test in 30 seconds flat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X