ವಾಹನ ಸವಾರರಿಗೆ ಕಂಟಕವಾಗಿದ್ದ ದೆವ್ವಗಳ ಚಳಿ ಬಿಡಿಸಿದ ಪೊಲೀಸರು..!

1990ರ ದಶಕದಲ್ಲಿ ಬಿಡುಗಡೆಯಾಗಿದ್ದ ಕೆಲವು ಹಾರರ್ ಚಿತ್ರಗಳಲ್ಲಿ ದೆವ್ವಗಳನ್ನು ಬಿಳಿ ಬಣ್ಣದ ಡ್ರೆಸ್‍‍ನಲ್ಲಿ, ಮುಖ ಮುಚ್ಚಿಕೊಂಡ ಉದ್ದ ಕೂದಲಿರುವ ವಿಗ್‍‍ಗಳಲ್ಲಿ ತೋರಿಸಿ ದೆವ್ವಗಳೆಂದರೆ ಹೀಗಿರುತ್ತವೆ ಎಂದು ಬ್ರಾಂಡ್ ಮಾಡಲಾಗಿತ್ತು.

ವಾಹನ ಸವಾರರಿಗೆ ಕಂಟಕವಾಗಿದ್ದ ದೆವ್ವಗಳ ಚಳಿ ಬಿಡಿಸಿದ ಪೊಲೀಸರು..!

ಈ ದೆವ್ವಗಳು ತೆರೆಯ ಮೇಲೆ ಬಂದರೆ ಚಿಕ್ಕ ಮಕ್ಕಳು ಹೆದರಿ ಥಿಯೆಟರ್‍‍ನಲ್ಲೇ ಮಲಗಿ ಬಿಡುತ್ತಿದ್ದವು. ಈ ರೀತಿಯ ದೆವ್ವಗಳನ್ನು ಜನರನ್ನು ಮನರಂಜಿಸುವ ಉದ್ದೇಶದಿಂದ ಸೃಷ್ಟಿಸಲಾಗುತ್ತಿತ್ತು. ಆದರೆ ಬೆಂಗಳೂರಿನಲ್ಲಿ ನಡೆದಿರುವ ಘಟನೆಯು ತೀರಾ ವಿಚಿತ್ರವಾದುದು. ಈ ಮಾಡರ್ನ್ ದೆವ್ವಗಳು, ರಾತ್ರಿ ದಾರಿಯಲ್ಲಿ ಓಡಾಡುತ್ತಿದ್ದ ವಾಹನ ಸವಾರರನ್ನು ಹೆದರಿಸುತ್ತಿದ್ದವು.

ವಾಹನ ಸವಾರರಿಗೆ ಕಂಟಕವಾಗಿದ್ದ ದೆವ್ವಗಳ ಚಳಿ ಬಿಡಿಸಿದ ಪೊಲೀಸರು..!

ಅಂದ ಹಾಗೆ ಇವುಗಳು ನಿಜವಾದ ದೆವ್ವಗಳಲ್ಲ. ದೆವ್ವಗಳಂತೆ ವೇಷ ಧರಿಸಿ ವಾಹನ ಸವಾರರನ್ನು ಹೆದರಿಸುವುದು ಇವರಿಗಿರುವ ಖಯಾಲಿ. ಈ ದೆವ್ವಗಳು ವಾಹನ ಸವಾರರನ್ನು ಹೆದರಿಸಲು ಹೋಗಿ ಪೊಲೀಸರ ಬಲೆಗೆ ಬಿದ್ದಿವೆ.

ವಾಹನ ಸವಾರರಿಗೆ ಕಂಟಕವಾಗಿದ್ದ ದೆವ್ವಗಳ ಚಳಿ ಬಿಡಿಸಿದ ಪೊಲೀಸರು..!

ಬೆಂಗಳೂರು ಪೊಲೀಸರು, ಬಿಳಿ ಬಟ್ಟೆ ಹಾಗೂ ಮುಖ ಮುಚ್ಚಿಕೊಳ್ಳುವಂತಹ ಉದ್ದನೆಯ ಕೂದಲಿನ ವಿಗ್‍‍ಗಳನ್ನು ಧರಿಸಿ ಯಶವಂತಪುರದ ಬಳಿಯ ಶರೀಫ್‍‍ನಗರದಲ್ಲಿ ವಾಹನಗಳಲ್ಲಿ ಚಲಿಸುತ್ತಿದ್ದವರನ್ನು ಹೆದರಿಸುತ್ತಿದ್ದ 7 ಯುವಕರನ್ನು ಸೋಮವಾರ ಬಂಧಿಸಿದ್ದಾರೆ.

ವಾಹನ ಸವಾರರಿಗೆ ಕಂಟಕವಾಗಿದ್ದ ದೆವ್ವಗಳ ಚಳಿ ಬಿಡಿಸಿದ ಪೊಲೀಸರು..!

ಈ ಯುವಕರು ಸಾರ್ವಜನಿಕರನ್ನು ಹೆದರಿಸುವ ವೀಡಿಯೊವನ್ನು ರೆಕಾರ್ಡ್ ಮಾಡಿರುವ ಕುಚೇಷ್ಟೆಯ ವೀಡಿಯೊಗಳು ಅವರ ಬಂಧನದ ನಂತರ ವೈರಲ್ ಆಗಿವೆ. ವೀಡಿಯೊವೊಂದರಲ್ಲಿ, ದೆವ್ವಗಳಂತೆ ವೇಷ ಧರಿಸಿರುವ ಇಬ್ಬರು ಯುವಕರು ಚಾಲಕನನ್ನು ಹೆದರಿಸುವ ಪ್ರಯತ್ನದಲ್ಲಿ ಆಟೋರಿಕ್ಷಾ ಕಡೆಗೆ ಓಡುತ್ತಿರುವುದನ್ನು ಕಾಣಬಹುದು.

ವಾಹನ ಸವಾರರಿಗೆ ಕಂಟಕವಾಗಿದ್ದ ದೆವ್ವಗಳ ಚಳಿ ಬಿಡಿಸಿದ ಪೊಲೀಸರು..!

ಆಟೋರಿಕ್ಷಾ ಚಾಲಕನು ತನ್ನ ಆಟೋವನ್ನು ಭಯದಿಂದ ಹಿಂದಕ್ಕೆ ಓಡಿಸುತ್ತಿರುವುದನ್ನು ಕಾಣಬಹುದು. ವಾಹನ ಚಾಲಕರನ್ನು ಹೆದರಿಸುತ್ತಿರುವ ಹಲವಾರು ವೀಡಿಯೊಗಳು ಸಹ ವೈರಲ್ ಆಗಿವೆ. ಸೋಮವಾರ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ, 20 ವರ್ಷದ ಶಾನ್ ಕಾಲಿಕ್ ಹಾಗೂ ಆತನ ಸ್ನೇಹಿತರು ವಾಹನ ಸವಾರರನ್ನು ಹೆದರಿಸಲು ಪ್ರಯತ್ನಿಸಿದ್ದಾರೆ.

ವಾಹನ ಸವಾರರಿಗೆ ಕಂಟಕವಾಗಿದ್ದ ದೆವ್ವಗಳ ಚಳಿ ಬಿಡಿಸಿದ ಪೊಲೀಸರು..!

ಅವರಲ್ಲಿ ಕೆಲವರನ್ನು ಹೆದರಿಸಿದ್ದಾರೆ. ಆಟೋ ಡ್ರೈವರ್‍‍ವೊಬ್ಬರು, ಈ ಘಟನೆಯನ್ನು ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಬೀಟ್ ಕಾನ್‌ಸ್ಟೆಬಲ್‌ಗೆ ತಿಳಿಸಿದ್ದಾರೆ. ಆಟೋ ಡ್ರೈವರ್ ಭಯಭೀತರಾಗಿದ್ದರು. ರಸ್ತೆಯಲ್ಲಿ ದೆವ್ವಗಳಿವೆ ಎಂದು ಅವರು ಮೊದಲಿಗೆ ಹೇಳಿದರು.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ವಾಹನ ಸವಾರರಿಗೆ ಕಂಟಕವಾಗಿದ್ದ ದೆವ್ವಗಳ ಚಳಿ ಬಿಡಿಸಿದ ಪೊಲೀಸರು..!

ಅವರು ದೂರು ನೀಡಿದ ನಂತರ, ಇತರ ಪ್ರಯಾಣಿಕರು ಸಹ ವಾಹನ ಸವಾರರನ್ನು ಹೆದರಿಸುತ್ತಿರುವ ಕೆಲವು ಯುವಕರ ಬಗ್ಗೆ ದೂರು ನೀಡಿದರು. ಅಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ನಾವು ಏಳು ಜನರನ್ನು ಬಂಧಿಸಿದ್ದೇವೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‍‍ರವರು ತಿಳಿಸಿದರು.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಈ ಸಂಬಂಧ ಶಾನ್ ಕಾಲಿಕ್ (20), ನಿವೇದ್ (20), ಸಜೀಲ್ ಮೊಹಮ್ಮದ್ (21), ಮೊಹಮ್ಮದ್ ಅಖ್ಯೂಬ್ (20), ಸಾಖಿಬ್ (20), ಸೈಯದ್ ನಬೀಲ್ (20) ಮತ್ತು ಯೂಸೆಫ್ ಅಹ್ಮದ್ (20) ಎಂಬುವವರನ್ನು ಬಂಧಿಸಲಾಗಿದೆ. ಹುಡುಗರು ಕುಚೇಷ್ಟೆಗಳನ್ನು ಮಾಡಲು ಬಯಸಿದ್ದಾರೆ. ಅವರು ಚಿಕ್ಕವರಾಗಿದ್ದು, ಮೋಜು ಮಾಡಲು ಬಯಸಿದ್ದಾರೆ.

ಜನರನ್ನು ಹೆದರಿಸುವುದು, ಕಿಡಿಗೇಡಿತನ ಮಾಡುವುದು ಕಾನೂನುಬಾಹಿರವಾಗಿದ್ದು, ಆಟೋ ಚಾಲಕ ದೂರು ನೀಡಿದ್ದರಿಂದ, ನಾವು ಈ 7 ಯುವಕರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಹನ ಸವಾರರಿಗೆ ಕಂಟಕವಾಗಿದ್ದ ದೆವ್ವಗಳ ಚಳಿ ಬಿಡಿಸಿದ ಪೊಲೀಸರು..!

ಈ ಏಳು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341 (ತಪ್ಪಾದ ಸಂಯಮ), 504 (ಶಾಂತಿ ಉಲ್ಲಂಘನೆಯನ್ನು ಉಂಟುಮಾಡುವ ಉದ್ದೇಶದಿಂದ ಅವಮಾನ), 506 (ಕ್ರಿಮಿನಲ್ ಬೆದರಿಕೆ) ಹಾಗೂ 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರು ಎಸಗಿರುವ ಅಪರಾಧಗಳು ಜಾಮೀನು ನೀಡುವ ಪ್ರಕರಣಗಳಾದ್ದರಿಂದ ಪೊಲೀಸ್ ಠಾಣೆಯಲ್ಲಿಯೇ ಜಾಮೀನು ನೀಡಿ ಬಿಡುಗಡೆಗೊಳಿಸಿರುವುದಾಗಿ ಸೋಲದೇವನಹಳ್ಳಿ ಪೊಲೀಸರು ತಿಳಿಸಿದ್ದಾರೆ.

Most Read Articles

Kannada
English summary
Ghost prank in Bangalore youth arrested for scaring people on the roads - Read in Kannada
Story first published: Tuesday, November 12, 2019, 14:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X