ಬೈಕ್ ಖರೀದಿ ವೇಳೆ ಫ್ರೀ ಹೆಲ್ಮೆಟ್ ನೀಡದ ಡೀಲರ್‍‍ಗಳಿಗೆ ಹೈಕೋರ್ಟ್ ಛೀಮಾರಿ

ಭಾರತವು ರಸ್ತೆ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡದ ದೇಶಗಳಲ್ಲಿ ಒಂದಾಗಿದೆ. ಇಲ್ಲಿನ ರಸ್ತೆ ಸುರಕ್ಷತೆಯು ತೀರಾ ಕೆಟ್ಟದಾಗಿದೆ. ಇದರಿಂದಾಗಿ ಪ್ರತಿ ವರ್ಷ 1.50 ಲಕ್ಷಕ್ಕೂ ಹೆಚ್ಚು ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ.

ಬೈಕ್ ಖರೀದಿ ವೇಳೆ ಫ್ರೀ ಹೆಲ್ಮೆಟ್ ನೀಡದ ಡೀಲರ್‍‍ಗಳಿಗೆ ಹೈಕೋರ್ಟ್ ಛೀಮಾರಿ

ಇದರ ಜೊತೆಗೆ ರಸ್ತೆ ಅಪಘಾತಗಳಿಂದಾಗಿ ಲಕ್ಷಾಂತರ ಜನರು ಗಾಯಗೊಳ್ಳುತ್ತಿದ್ದಾರೆ. ರಸ್ತೆ ಅಪಘಾತಗಳನ್ನು ತಡೆಯಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಸ್ತೆ ಅಪಘಾತಗಳಿಗೆ ಸಂಚಾರ ನಿಯಮಗಳ ಉಲ್ಲಂಘನೆಯು ಸಹ ಕಾರಣ. ಈ ಕಾರಣಕ್ಕೆ ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ.

ಬೈಕ್ ಖರೀದಿ ವೇಳೆ ಫ್ರೀ ಹೆಲ್ಮೆಟ್ ನೀಡದ ಡೀಲರ್‍‍ಗಳಿಗೆ ಹೈಕೋರ್ಟ್ ಛೀಮಾರಿ

ರಸ್ತೆ ಅಪಘಾತಗಳಲ್ಲಿ ಹೆಚ್ಚು ತೊಂದರೆಗೊಳಗಾಗುತ್ತಿರುವುದು ದ್ವಿಚಕ್ರ ವಾಹನ ಸವಾರರು. ಈ ಕಾರಣಕ್ಕೆ ದ್ವಿ ಚಕ್ರ ವಾಹನ ಸವಾರರಿಗೆ ಹಲವಾರು ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ. ಇವುಗಳಲ್ಲಿ ಸವಾರ ಹಾಗೂ ಹಿಂಬದಿ ಸವಾರರಿಬ್ಬರೂ ಹೆಲ್ಮೆಟ್ ಧರಿಸುವುದು ಸಹ ಒಂದು.

ಬೈಕ್ ಖರೀದಿ ವೇಳೆ ಫ್ರೀ ಹೆಲ್ಮೆಟ್ ನೀಡದ ಡೀಲರ್‍‍ಗಳಿಗೆ ಹೈಕೋರ್ಟ್ ಛೀಮಾರಿ

ಕೇಂದ್ರ ಮೋಟಾರು ವಾಹನ ಕಾಯ್ದೆ 1989ರ ಪ್ರಕಾರ ಪ್ರತಿಯೊಂದು ವಾಹನ ತಯಾರಕ ಕಂಪನಿ ಹಾಗೂ ಪ್ರತಿಯೊಬ್ಬ ಡೀಲರ್ ಹೊಸದಾಗಿ ದ್ವಿ ಚಕ್ರ ವಾಹನ ಖರೀದಿಸುವವರಿಗೆ 2 ಹೆಲ್ಮೆಟ್‍‍ಗಳನ್ನು ಉಚಿತವಾಗಿ ನೀಡಬೇಕೆಂಬ ನಿಯಮವಿದೆ.

ಬೈಕ್ ಖರೀದಿ ವೇಳೆ ಫ್ರೀ ಹೆಲ್ಮೆಟ್ ನೀಡದ ಡೀಲರ್‍‍ಗಳಿಗೆ ಹೈಕೋರ್ಟ್ ಛೀಮಾರಿ

ಆದರೆ ನಮ್ಮಲ್ಲಿ ಬಹುತೇಕ ಜನರಿಗೆ ಈ ನಿಯಮದ ಅರಿವಿಲ್ಲ. ಈ ಎರಡೂ ಹೆಲ್ಮೆಟ್‍‍ಗಳು ಬ್ಯುರೋ ಆಫ್ ಇಂಡಿಯನ್ ಸ್ಟಾಂಡರ್ಡ್ ಅಂದರೆ ಬಿ‍ಐ‍ಎಸ್ ನಿಯಮಗಳಿಗೆ ಅನುಸಾರವಾಗಿ ತಯಾರಾಗಿರಬೇಕು. ಆದರೆ ಈ ನಿಯಮಗಳನ್ನು ಯಾರೂ ಪಾಲಿಸುತ್ತಿಲ್ಲ.

ಬೈಕ್ ಖರೀದಿ ವೇಳೆ ಫ್ರೀ ಹೆಲ್ಮೆಟ್ ನೀಡದ ಡೀಲರ್‍‍ಗಳಿಗೆ ಹೈಕೋರ್ಟ್ ಛೀಮಾರಿ

ಇದನ್ನು ಪ್ರಶ್ನಿಸಿ ಬಾಂಬೆ ಹೈ ಕೋರ್ಟಿನ ನಾಗ್ಪುರ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಸೌರಭ್ ಭಾರಧ್ವಜ್ ಹಾಗೂ ಮನೀಶ್ ಸಿಂಗ್ ಚೌಹಾನ್‍ ಎಂಬುವವರು ಸಲ್ಲಿಸಿದ್ದರು.

ಬೈಕ್ ಖರೀದಿ ವೇಳೆ ಫ್ರೀ ಹೆಲ್ಮೆಟ್ ನೀಡದ ಡೀಲರ್‍‍ಗಳಿಗೆ ಹೈಕೋರ್ಟ್ ಛೀಮಾರಿ

ಫೆಬ್ರವರಿ 12ರಂದು ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ರವಿ ದೇಶಪಾಂಡೆ ಹಾಗೂ ನ್ಯಾ. ಅಮಿತ್ ಬೋರ್ಕರ್‍‍ರವರನ್ನು ಒಳಗೊಂಡ ವಿಭಾಗೀಯ ಪೀಠ, ಮೋಟಾರು ವಾಹನ ಕಾಯ್ದೆಯಲ್ಲಿರುವಂತೆ ನಿಯಮವನ್ನು ಪಾಲಿಸಲು ಆದೇಶಿಸಿದೆ.

ಬೈಕ್ ಖರೀದಿ ವೇಳೆ ಫ್ರೀ ಹೆಲ್ಮೆಟ್ ನೀಡದ ಡೀಲರ್‍‍ಗಳಿಗೆ ಹೈಕೋರ್ಟ್ ಛೀಮಾರಿ

ಈ ನಿಯಮವನ್ನು ಪಾಲಿಸದಿರುವುದಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಈ ನಿಯಮವನ್ನು ಪಾಲಿಸದಿದ್ದರೆ ಮಹಾರಾಷ್ಟ್ರದಲ್ಲಿ ವಾಹನಗಳ ನೊಂದಣಿಯನ್ನು ಸ್ಥಗಿತಗೊಳಿಸುವುದಾಗಿ ನ್ಯಾಯಪೀಠ ತಿಳಿಸಿದೆ.

ಬೈಕ್ ಖರೀದಿ ವೇಳೆ ಫ್ರೀ ಹೆಲ್ಮೆಟ್ ನೀಡದ ಡೀಲರ್‍‍ಗಳಿಗೆ ಹೈಕೋರ್ಟ್ ಛೀಮಾರಿ

ಎಲ್ಲಾ ದ್ವಿ ಚಕ್ರ ವಾಹನ ಕಂಪನಿಗಳು ಈ ನಿಯಮವನ್ನು ಪಾಲಿಸಬೇಕೆಂದು ನ್ಯಾಯಾಧೀಶರು ಸೂಚಿಸಿದ್ದಾರೆ. ನ್ಯಾಯಾಧೀಶರು ಈ ನಿಯಮವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಹಾಗೂ ಟ್ರಾಫಿಕ್ ಕಮೀಷನರ್‍‍ರವರಿಗೆ ಆರು ವಾರಗಳ ಗಡುವು ನೀಡಿದೆ.

ಬೈಕ್ ಖರೀದಿ ವೇಳೆ ಫ್ರೀ ಹೆಲ್ಮೆಟ್ ನೀಡದ ಡೀಲರ್‍‍ಗಳಿಗೆ ಹೈಕೋರ್ಟ್ ಛೀಮಾರಿ

ಇದನ್ನು ಜಾರಿಗೊಳಿಸಿರುವ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶದಲ್ಲಿ ಹೇಳಲಾಗಿದೆ. ಬಾಂಬೆ ಹೈಕೋರ್ಟಿನ ಈ ಆದೇಶದಿಂದ ಹೊಸ ದ್ವಿ ಚಕ್ರ ವಾಹನಗಳನ್ನು ಖರೀದಿಸುವವರು ಖುಷಿಯಾಗುವುದು ಖಚಿತ.

Most Read Articles

Kannada
English summary
Give 2 free helmets to all two wheeler buyers says Bombay High Court. Read in Kannada.
Story first published: Saturday, February 15, 2020, 13:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X