ಕಾರಿನ ಟಯರ್ ಒಳಕ್ಕೂ ಬಂತು ಗೋಪ್ರೊ ಕ್ಯಾಮರಾ

ಕ್ಯಾಮೆರಾಗಳನ್ನು ಕಾರುಗಳ ಮುಂದೆ, ಹಿಂದೆ ಅಥವಾ ಕಾರುಗಳ ಒಳಗೆ ಅಳವಡಿವುದನ್ನು ಕಂಡಿದ್ದೇವೆ ಅಥವಾ ಕೇಳಿದ್ದೇವೆ. ಆದರೆ ಕಾರಿನ ಟಯರ್ ಒಳಗೆ ಕ್ಯಾಮೆರಾ ಅಳವಡಿಸಲಾಗಿರುವುದನ್ನು ಇದುವರೆಗೂ ನೋಡಿಲ್ಲ.

ಕಾರಿನ ಟಯರ್ ಒಳಕ್ಕೂ ಬಂತು ಗೋಪ್ರೊ ಕ್ಯಾಮರಾ

ಇದೇ ಮೊದಲ ಬಾರಿಗೆ ಕಾರಿನ ಟಯರ್ ಒಳಗೆ ಗೋಪ್ರೊ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಕಾರು ಚಾಲನೆ ಮಾಡುವ ಮೂಲಕ ಚಿತ್ರೀಕರಿಸಲಾಗಿದೆ.ಕಾರಿನ ಟಯರ್‌ನಲ್ಲಿ ಗೋಪ್ರೊ ಕ್ಯಾಮೆರಾ ಇಡುವ ರೀತಿಯಲ್ಲಿ ಈ ಮರ್ಸಿಡಿಸ್ ಬೆಂಝ್ ಕಾರಿನ ಮಾಲೀಕರು ತಮ್ಮ ಕಾರನ್ನು ಸಿದ್ದಗೊಳಿಸಿದ್ದಾರೆ. ಕಾರು ಚಾಲನೆಯಲ್ಲಿರುವಾಗ ಟಯರ್‌ನ ಪರಿಸ್ಥಿತಿ ಏನಾಗಿರುತ್ತದೆ ಎಂಬುದನ್ನು ತಿಳಿಯಲು ಈ ವೀಡಿಯೊ ಮಾಡಲಾಗಿದೆ.

ಕಾರಿನ ಟಯರ್ ಒಳಕ್ಕೂ ಬಂತು ಗೋಪ್ರೊ ಕ್ಯಾಮರಾ

ಕಾರು ಮಾಲೀಕರು ಈ ಪ್ರಯೋಗಕ್ಕಾಗಿ ಗೋಪ್ರೊ ಕ್ಯಾಮೆರಾಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಗೋಪ್ರೊ ಯಾವುದೇ ಸನ್ನಿವೇಶವನ್ನು ವೀಡಿಯೊ ರೆಕಾರ್ಡಿಂಗ್‌ಗೆ ಬಳಸಬಹುದಾದ ಕ್ಯಾಮೆರಾ ಎಂದು ಅವರು ಹೇಳಿದ್ದಾರೆ. ಅವರು ಈ ಕ್ಯಾಮೆರಾ ಯಶಸ್ವಿಯಾಗಿ ರೆಕಾರ್ಡಿಂಗ್‌ ಮಾಡುತ್ತದೆ ಎಂಬ ನಂಬಿಕೆಯನ್ನು ಹೊಂದಿದ್ದರು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕಾರಿನ ಟಯರ್ ಒಳಕ್ಕೂ ಬಂತು ಗೋಪ್ರೊ ಕ್ಯಾಮರಾ

ಕಾರಿನ ಟಯರ್ ತೆರೆದಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ನಂತರ ಗೋಪ್ರೊ ಕ್ಯಾಮೆರಾವನ್ನು ಟಯರ್ ನ ರಿಮ್‌ನ ಮಧ್ಯದಲ್ಲಿ ವೆಲ್ಡಿಂಗ್ ಮಾಡುವ ಮೂಲಕ ಅಳವಡಿಸಲಾಗಿದೆ. ಒಳಗೆ ಏನು ನಡೆಯುತ್ತಿದೆ ಎಂಬುದನ್ನು ಕಾಣಲು ಕ್ಯಾಮೆರಾದೊಂದಿಗೆ ಸಣ್ಣ ಎಲ್‌ಇಡಿ ಲೈಟ್ ಕೂಡ ಅಳವಡಿಸಲಾಗಿತ್ತು.

ಕಾರಿನ ಟಯರ್ ಒಳಕ್ಕೂ ಬಂತು ಗೋಪ್ರೊ ಕ್ಯಾಮರಾ

ಕ್ಯಾಮೆರಾವನ್ನು ಅಳವಡಿಸಿದ ನಂತರ ಟಯರ್ ಅನ್ನು ಮತ್ತೆ ಜೋಡಿಸಲಾಗುತ್ತದೆ. ಕಾರು ಚಾಲಕನು ಕಾರನ್ನು ಚಾಲನೆ ಮಾಡುತ್ತಾ ಹೊರಟಿದ್ದಾನೆ. ಈ ಕಾರನ್ನು ಮೊದಲು ಹದಗೆಟ್ಟ ರಸ್ತೆಗಳಲ್ಲಿ ಚಾಲನೆ ಮಾಡಿ, ನಂತರ ಸುಸ್ಥಿತಿಯಲ್ಲಿದ್ದ ರಸ್ತೆಗಳಲ್ಲಿ ಪರೀಕ್ಷಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಒಂದು ಸುತ್ತು ಪೂರ್ಣಗೊಂಡ ನಂತರ, ನೆಲದ ಪಕ್ಕದಲ್ಲಿರುವ ಟಯರ್ ನ ಭಾಗವು ಪದೇ ಪದೇ ಪ್ರೆಸ್ ಆಗುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಕ್ಯಾಮೆರಾ ಗಟ್ಟಿಮುಟ್ಟಾಗಿರುವ ಕಾರಣಕ್ಕೆ ಟಯರ್‌ನೊಳಗಿನ ಒತ್ತಡವನ್ನು ತಡೆದುಕೊಂಡಿದೆ ಎಂದು ಕಾರಿನ ಮಾಲೀಕರು ಹೇಳಿದ್ದಾರೆ.

ಕಾರಿನ ಟಯರ್ ಒಳಕ್ಕೂ ಬಂತು ಗೋಪ್ರೊ ಕ್ಯಾಮರಾ

ಈ ಮೊದಲು ಬೇರೆ ಕ್ಯಾಮೆರಾಗಳ ಮೂಲಕ ಪರೀಕ್ಷಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಟಯರ್‌ಗಳಲ್ಲಿನ ಗಾಳಿಯ ಒತ್ತಡದಿಂದಾಗಿ ಕ್ಯಾಮೆರಾಗಳು ಸ್ಥಗಿತಗೊಂಡಿದ್ದವು ಎಂದು ಅವರು ಹೇಳಿದ್ದಾರೆ. ಈ ವೀಡಿಯೊ ವೀಕ್ಷಿಸುತ್ತಿರುವ ಸಾರ್ವಜನಿಕರು ಕಾರು ಮಾಲೀಕರ ಕ್ರಿಯೆಟಿವಿಟಿಯನ್ನು ಶ್ಲಾಘಿಸುತ್ತಿದ್ದಾರೆ.

Most Read Articles

Kannada
English summary
Go pro camera installed inside the car tyre. Read in Kannada.
Story first published: Wednesday, August 5, 2020, 18:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X