ಗೂಗಲ್ ಸಹ ಸಂಸ್ಥಾಪಕನಿಂದ ರಹಸ್ಯವಾಗಿ ಹಾರುವ ಕಾರು ನಿರ್ಮಾಣ?

By Nagaraja

ಸರ್ಚ್ ಎಂಜಿನ್ ದೈತ್ಯ 'ಗೂಗಲ್' ಸ್ವಯಂಚಾಲಿತ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವುದು ನಿಮಗೆಲ್ಲರಿಗೂ ತಿಳಿದ ವಿಚಾರ. ಸೆಲ್ಪ್ ಡ್ರೈವಿಂಗ್ ಕಾರುಗಳು ಇನ್ನೇನು ನನಸಾಗುತ್ತಿದೆ ಎನ್ನುತ್ತಿರುವಾಗಲೇ ಗೂಗಲ್ ಸಹ ಸಂಸ್ಥಾಪಕ ಲ್ಯಾರಿ ಪೇಜ್ ರಹಸ್ಯವಾಗಿ ಹಾರುವ ಕಾರು ನಿರ್ಮಿಸುತ್ತಿದ್ದಾರೆ ಎಂಬ ಕುತೂಹಲದಾಯಕ ಸುದ್ದಿ ಹೊರಬಂದಿದೆ.

ಬಲ್ಲ ಮೂಲಗಳ ಪ್ರಕಾರ ಎರಡು ಸಂಸ್ಥೆಗಳ ಜೊತೆ ಕೈಜೋಡಿಸಿಕೊಂಡಿರುವ ಲ್ಯಾರಿ ಪೇಜ್, ಹಾರುವ ಕಾರುಗಳ ತಂತ್ರಜ್ಞಾನ ಮತ್ತು ಅಭಿವೃದ್ಧಿಗಾಗಿ ಬರೋಬ್ಬರಿ 671 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.

ಗೂಗಲ್ ಸಹ ಸಂಸ್ಥಾಪಕನಿಂದ ರಹಸ್ಯವಾಗಿ ಹಾರುವ ಕಾರು ನಿರ್ಮಾಣ?

ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲೇ ಸ್ಥಿತಗೊಂಡಿರುವ ಗೂಗಲ್‌ನ ಎರಡು ಪ್ರತಿಸ್ಪರ್ಧಿ ಸಂಸ್ಥೆಗಳಾದ ಝೀ ಡಾಟ್ ಏರೋ ಮತ್ತು ಕಿಟ್ಟಿ ಹಾವ್ಕ್ ಎಂಬ ಸಂಸ್ಥೆಗಳಲ್ಲಿ ಲ್ಯಾರಿ ಪೇಜ್ ಬಂಡವಾಳ ಹೂಡಿದ್ದಾರೆ.

ಗೂಗಲ್ ಸಹ ಸಂಸ್ಥಾಪಕನಿಂದ ರಹಸ್ಯವಾಗಿ ಹಾರುವ ಕಾರು ನಿರ್ಮಾಣ?

2020ರಲ್ಲಿ ಆರಂಭವಾಗಿರುವ ಝೀ ಡಾಟ್ ಏರೋ ಅತಿ ಚಿಕ್ಕದಾದ ವಿದ್ಯುತ್ ಚಾಲಿತ ಹಾರುವ ಕಾರುಗಳನ್ನು ಅಭಿವೃದ್ಧಿಪಡಿಸುತ್ತದೆ. ಇದು ಲಂಬವಾಗಿ ಲ್ಯಾಂಡ್ ಮಾಡುವ ಸಾಮರ್ಥ್ಯ ಹೊಂದಿರುತ್ತದೆ.

ಗೂಗಲ್ ಸಹ ಸಂಸ್ಥಾಪಕನಿಂದ ರಹಸ್ಯವಾಗಿ ಹಾರುವ ಕಾರು ನಿರ್ಮಾಣ?

ಸರಳವಾದ, ಹೆಚ್ಚು ಸಾಂಪ್ರದಾಯಿಕ ವಿನ್ಯಾಸಿತ ಹಾರುವ ಕಾರುಗಳನ್ನು ನಿರ್ಮಿಸುವುದರಲ್ಲಿ ಝೀ ಡಾಟ್ ಏರೋ ಕಾರ್ಯ ಮಗ್ನವಾಗಿದೆ. ಸಂಸ್ಥೆಯು ಗೂಗಲ್ ನ ಭಾಗವಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಹಲವು ಊಹಾಪೋಹಗಳಿದ್ದರೂ ಝೀ ಡಾಟ್ ಏರೋ ಇದನ್ನು ನಿರಾಕರಿಸಿದೆ.

ಗೂಗಲ್ ಸಹ ಸಂಸ್ಥಾಪಕನಿಂದ ರಹಸ್ಯವಾಗಿ ಹಾರುವ ಕಾರು ನಿರ್ಮಾಣ?

ಬದಲಾಗಿ ಗೂಗಲ್ ಸಹ ಸಂಸ್ಥಾಪಕ ವೈಯಕ್ತಿಕ ಹೂಡಿಕೆಯ ಮುಖಾಂತರ ತನ್ನ ಅಧೀನತೆಯನ್ನುಹೊಂದಿದ್ದಾರೆ. ಇವೆಲ್ಲದರ ನಡುವೆ ಹಾರುವ ಕಾರಿನ ಅಭಿವೃದ್ಧಿ ವಿಚಾರವನ್ನು ಪೇಜ್ ರಹಸ್ಯವಾಗಿಟ್ಟುಕೊಂಡಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಗೂಗಲ್ ಸಹ ಸಂಸ್ಥಾಪಕನಿಂದ ರಹಸ್ಯವಾಗಿ ಹಾರುವ ಕಾರು ನಿರ್ಮಾಣ?

2015ರಲ್ಲಿ ಲ್ಯಾರಿ ಪೇಜ್ ಅವರು ಕಿಟ್ಟಿ ಹಾವ್ಕ್ ಎಂಬ ಸಂಸ್ಥೆಯಲ್ಲೂ ಹೂಡಿಕೆ ಮಾಡಿದ್ದರು. ಇವೆರಡು ಸಂಸ್ಥೆಗಳು ಗೂಗಲ್ ಸಮೀಪದಲ್ಲೇ ಸ್ಥಿತಗೊಂಡಿರುವುದು ಗಮನಾರ್ಹವೆನಿಸುತ್ತದೆ.

ಗೂಗಲ್ ಸಹ ಸಂಸ್ಥಾಪಕನಿಂದ ರಹಸ್ಯವಾಗಿ ಹಾರುವ ಕಾರು ನಿರ್ಮಾಣ?

ಲ್ಯಾರಿ ಪೇಜ್ ಅವರ ಹಾರುವ ಕಾರುಗಳ ಮೇಲಿನ ಹೂಡಿಕೆಯು ಸಂಪೂರ್ಣವಾಗಿಯೂ ವೈಯಕ್ತಿಕ ಮಹತ್ವಾಕಾಂಕ್ಷೆಯಾಗಿದೆ. ಅಲ್ಲದೆ ವಿನ್ಯಾಸದ ಬಗೆಗಿನ ವಿವರಗಳನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗಿದೆ.

ಗೂಗಲ್ ಸಹ ಸಂಸ್ಥಾಪಕನಿಂದ ರಹಸ್ಯವಾಗಿ ಹಾರುವ ಕಾರು ನಿರ್ಮಾಣ?

ಮಗದೊಂದು ಮೂಲಗಳ ಪ್ರಕಾರ ನಾಸಾ, ಬೋಯಿಂಗ್, ಸ್ಪೋಕ್ಸ್ ಎಕ್ಸ್ ಗಳಂತಹ ಪ್ರತಿಷ್ಠಿತ ಸಂಸ್ಥೆಗಳಿಂದ ಅಂತರಿಕ್ಷಯಾನ ವಿನ್ಯಾಸಗಾರರು ಮತ್ತು ಎಂಜಿನಿಯರ್ ಗಳನ್ನು ನೇಮಕ ಮಾಡಿರುವ ಗೂಗಲ್, ಎರಡು ಸಿಂಗಲ್ ಸೀಟಿನ ಮಾದರಿಗಳ ಟೆಸ್ಟಿಂಗ್ ನಲ್ಲಿ ತೊಡಗಿಸಿಕೊಂಡಿದೆ.

ಗೂಗಲ್ ಸಹ ಸಂಸ್ಥಾಪಕನಿಂದ ರಹಸ್ಯವಾಗಿ ಹಾರುವ ಕಾರು ನಿರ್ಮಾಣ?

ಅತ್ತ ಟೆರ್ರಾಫ್ಯೂಜಿಯಾ ಮತ್ತು ಏರೋಮೊಬೈಲ್ ಗಳಂತಹ ಸಂಸ್ಥೆಗಳು ಹಾರುವ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಈ ಮಹತ್ತರ ಯೋಜನೆಯು ಮುಂದಿನ ಒಂದು ದಶಕದಲ್ಲಿ ನನಸಾಗುವ ನಿರೀಕ್ಷೆಯಿದೆ.

Most Read Articles

Kannada
English summary
Google co-founder Larry Page funding to develop Flying cars
Story first published: Friday, June 17, 2016, 10:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X