ಗೂಗಲ್ ಮ್ಯಾಪ್ ಬಳಸಿ ಕಾಡು ಸೇರಿದ ಟಾಟಾ ಹ್ಯಾರಿಯರ್ ಕಾರು ಚಾಲಕ

ಗೂಗಲ್ ಮ್ಯಾಪ್ ರಸ್ತೆ ಗೊತ್ತಿಲ್ಲದ ವಾಹನ ಸವಾರರಿಗೆ ನೆರವಾಗುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಕೆಲವೊಮ್ಮೆ ಗೂಗಲ್ ಮ್ಯಾಪ್ ಅನ್ನು ಕಣ್ಣುಮುಚ್ಚಿ ನಂಬುವುದು ಅಪಾಯಕ್ಕೆ ದೂಡಬಹುದು.

ಗೂಗಲ್ ಮ್ಯಾಪ್ ಬಳಸಿ ಕಾಡು ಸೇರಿದ ಟಾಟಾ ಹ್ಯಾರಿಯರ್ ಕಾರು ಚಾಲಕ

ಈ ರೀತಿಯ ಹಲವಾರು ಘಟನೆಗಳು ವಿಶ್ವಾದ್ಯಂತ ಹಾಗೂ ಭಾರತದಲ್ಲಿಯೂ ನಡೆದಿವೆ. ಕೆಲವರು ಗೂಗಲ್ ಮ್ಯಾಪ್ ಅನ್ನು ನಂಬಿ ದಾರಿ ತಪ್ಪಿರುವ ಹಲವಾರು ಉದಾಹರಣೆಗಳಿವೆ. ಈಗ ಇದೇ ರೀತಿಯ ಮತ್ತೊಂದು ಘಟನೆ ವರದಿಯಾಗಿದೆ. ಈ ಬಗ್ಗೆ ಟೀಮ್-ಬಿಹೆಚ್ ಪಿಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ಘಟನೆ ಈ ಪೋಸ್ಟ್ ಮಾಡಿರುವವರ ಸ್ನೇಹಿತರಿಗೆ ಸಂಬಂಧಿಸಿದೆ.

ಗೂಗಲ್ ಮ್ಯಾಪ್ ಬಳಸಿ ಕಾಡು ಸೇರಿದ ಟಾಟಾ ಹ್ಯಾರಿಯರ್ ಕಾರು ಚಾಲಕ

ಅವರ ಸ್ನೇಹಿತರು ತಮ್ಮ ಟಾಟಾ ಹ್ಯಾರಿಯರ್ ಕಾರಿನಲ್ಲಿ ಹೆತ್ತವರೊಂದಿಗೆ ಮಹಾರಾಷ್ಟ್ರದ ಪುಣೆಯಿಂದ ಮಧ್ಯಪ್ರದೇಶದ ಜಬಲ್ ಪುರಕ್ಕೆ ಪ್ರಯಾಣಿಸುತ್ತಿದ್ದರು. ಜಬಲ್ ಪುರವು ಪುಣೆಯಿಂದ ಸುಮಾರು 1,000 ಕಿ.ಮೀ ದೂರದಲ್ಲಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಗೂಗಲ್ ಮ್ಯಾಪ್ ಬಳಸಿ ಕಾಡು ಸೇರಿದ ಟಾಟಾ ಹ್ಯಾರಿಯರ್ ಕಾರು ಚಾಲಕ

ಅವರು ಇದೇ ಮೊದಲ ಬಾರಿಗೆ ಇಷ್ಟು ದೂರದ ಪ್ರಯಾಣ ಕೈಗೊಂಡಿದ್ದಾರೆ. ಅವರಿಗೆ ದಾರಿ ಗೊತ್ತಿರಲಿಲ್ಲ. ಆದರೆ ಗೂಗಲ್ ಮ್ಯಾಪ್ ಸಹಾಯದಿಂದ ಹೋಗಲು ನಿರ್ಧರಿಸಿದರು. ಅವರು ಬೆಳಿಗ್ಗೆ 9 ಗಂಟೆಗೆ ಪುಣೆಯಿಂದ ತಮ್ಮ ಪ್ರಯಾಣವನ್ನು ಆರಂಭಿಸಿ ಅಂದು ರಾತ್ರಿ ನಾಗ್ಪುರದಲ್ಲಿ ತಂಗಲು ನಿರ್ಧರಿಸಿದ್ದಾರೆ.

ಗೂಗಲ್ ಮ್ಯಾಪ್ ಬಳಸಿ ಕಾಡು ಸೇರಿದ ಟಾಟಾ ಹ್ಯಾರಿಯರ್ ಕಾರು ಚಾಲಕ

ನಾಗ್ಪುರ ಪುಣೆಯಿಂದ ಸುಮಾರು 700 ಕಿ.ಮೀ ದೂರದಲ್ಲಿದೆ. ರಾತ್ರಿ 11 ಘಂಟೆ ಸುಮಾರಿಗೆ ನಾಗ್ಪುರ ತಲುಪಬಹುದು ಎಂದು ಗೂಗಲ್ ನಕ್ಷೆ ತೋರಿಸಿದೆ. ಗೂಗಲ್ ಮ್ಯಾಪ್ ಮುಖ್ಯ ರಸ್ತೆಯಿಂದ ಅಮರಾವತಿ ಕಡೆಗೆ ತಿರುವು ಪಡೆಯುವಂತೆ ತೋರಿಸಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಗೂಗಲ್ ಮ್ಯಾಪ್ ಬಳಸಿ ಕಾಡು ಸೇರಿದ ಟಾಟಾ ಹ್ಯಾರಿಯರ್ ಕಾರು ಚಾಲಕ

ಹಿಂದೆ ಮುಂದೆ ನೋಡದೇ ಟಾಟಾ ಹ್ಯಾರಿಯರ್ ಚಾಲನೆ ಮಾಡುತ್ತಿದವರು ಗೂಗಲ್ ಮ್ಯಾಪ್ ಹೇಳಿದ ಕಡೆಗೆ ಹೊರಟಿದ್ದಾರೆ. ಆ ದಾರಿ ತುಂಬಾ ಕಿರಿದಾಗಿತ್ತು. ಜೊತೆಗೆ ಕತ್ತಲೆಯಿಂದ ಕೂಡಿತ್ತು. ರಸ್ತೆಯೂ ಸರಿಯಿರಲಿಲ್ಲ.

ಗೂಗಲ್ ಮ್ಯಾಪ್ ಬಳಸಿ ಕಾಡು ಸೇರಿದ ಟಾಟಾ ಹ್ಯಾರಿಯರ್ ಕಾರು ಚಾಲಕ

ಆದರೆ ಗೂಗಲ್ ಮ್ಯಾಪ್ ಆ ರಸ್ತೆಯನ್ನು ಸೂಚಿಸಿದ ಕಾರಣಕ್ಕೆ ಅದೇ ಹಾದಿಯಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಆ ಮಾರ್ಗದಲ್ಲಿ ಸುಮಾರು 20 ಕಿ.ಮೀ ಪ್ರಯಾಣಿಸಿದ ನಂತರ ಸೇತುವೆಯೊಂದು ಮುರಿದು ಬಿದ್ದಿರುವುದು ಕಂಡುಬಂದಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಗೂಗಲ್ ಮ್ಯಾಪ್ ಬಳಸಿ ಕಾಡು ಸೇರಿದ ಟಾಟಾ ಹ್ಯಾರಿಯರ್ ಕಾರು ಚಾಲಕ

ಸೇತುವೆಯ ಎಡಭಾಗದಲ್ಲಿದ್ದ ಮಾರ್ಗದ ಮೂಲಕ ಅವರು ಹೋಗಲು ನಿರ್ಧರಿಸಿದ್ದಾರೆ. ಆ ಮಾರ್ಗದ ಮೂಲಕ ಸಾಗಲು ಯತ್ನಿಸಿದಾಗ ಅವರ ಕಾರು ಕೆಸರಿನಲ್ಲಿ ಹೂತು ಹೋಗಿದೆ. ಸುಮಾರು ಅರ್ಧ ಘಂಟೆಯವರೆಗೆ ಕೆಸರಿನಿಂದ ಹೊರಬರಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

ಗೂಗಲ್ ಮ್ಯಾಪ್ ಬಳಸಿ ಕಾಡು ಸೇರಿದ ಟಾಟಾ ಹ್ಯಾರಿಯರ್ ಕಾರು ಚಾಲಕ

ಈ ಮಧ್ಯೆ ಅವರು ಕಾರಿನ ಎಂಜಿನ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಹೆಡ್‌ಲ್ಯಾಂಪ್‌ಗಳು ಸಹ ಕೆಟ್ಟು ಹೋಗಿದ್ದವು. ಬೇರೆ ದಾರಿ ಕಾಣದೇ ಬೆಳಿಗ್ಗೆ 2.30ಕ್ಕೆ ಮೆಕಾನಿಕ್ ಒಬ್ಬರಿಗೆ ಕರೆ ಮಾಡಿದ್ದಾರೆ. ಮೆಕಾನಿಕ್ 70 ಮೈಲಿ ದೂರದಿಂದ ಬಂದು ಕಾರನ್ನು ರಿಪೇರಿ ಮಾಡಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಗೂಗಲ್ ಮ್ಯಾಪ್ ಬಳಸಿ ಕಾಡು ಸೇರಿದ ಟಾಟಾ ಹ್ಯಾರಿಯರ್ ಕಾರು ಚಾಲಕ

ಗೂಗಲ್ ಮ್ಯಾಪ್ ಅನ್ನು ಅತಿಯಾಗಿ ನಂಬಿಕೊಂಡವರಿಗೆ ಈ ಘಟನೆಯು ಆಘಾತವನ್ನುಂಟು ಮಾಡಿದೆ. ನಗರ ಪ್ರದೇಶಗಳಲ್ಲಿ ದಿನ ನಿತ್ಯ ಗೂಗಲ್ ಮ್ಯಾಪ್ ಬಳಸಿದರೆ ಯಾವುದೇ ತೊಂದರೆಯಿಲ್ಲ. ಆದರೆ ದೂರದ ಪ್ರಯಾಣ ಮಾಡುವಾಗ, ಗೂಗಲ್ ಮ್ಯಾಪ್ ಅನ್ನು ಕುರುಡಾಗಿ ನಂಬುವುದು ಅಪಾಯಕಾರಿಯಾಗಬಲ್ಲದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಗೂಗಲ್ ಮ್ಯಾಪ್ ಬಳಸಿ ಕಾಡು ಸೇರಿದ ಟಾಟಾ ಹ್ಯಾರಿಯರ್ ಕಾರು ಚಾಲಕ

ದೂರದ ಪ್ರಯಾಣವನ್ನು ಆರಂಭಿಸುವ ಮೊದಲು ಆ ಮಾರ್ಗದಲ್ಲಿ ಓಡಾಡಿ ಅನುಭವವಿರುವವರಿಂದ ಮಾರ್ಗದ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಒಂದು ವೇಳೆ ಗೂಗಲ್ ಮ್ಯಾಪ್ ಬಳಸುವುದೇ ಆದರೆ ಎರಡೆರಡು ಬಾರಿ ಪರಿಶೀಲಿಸುವುದು ಉತ್ತಮ.

Most Read Articles

Kannada
English summary
Google map takes Tata Harrier driver to forest. Read in Kannada.
Story first published: Wednesday, October 21, 2020, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X