ಪಾರ್ಕಿಂಗ್ ಸಮಸ್ಯೆಗಳಿಗೆ ಮುಕ್ತಿ ನೀಡಿದ ಗೂಗಲ್ !!

ಇತ್ತೀಚೆಗೆ ಬೆಂಗಳೂರಿನ ಜನರನ್ನು ಕಾಡಲು ಟ್ರಾಫಿಕ್ ಎಂಬ ಭೂತದ ಜೊತೆ ಪಾರ್ಕಿಂಗ್ ಎಂಬ ಪೆಡಂಬೂತ ಸಹ ಜೊತೆಯಾಗಿದ್ದು, ಇದಕ್ಕೆ ಪರಿಹಾರ ಇಲ್ಲಿದೆ.

By Girish

ಸಾವಿರಾರು ಕಾರುಗಳ ಮಧ್ಯೆ ನಮ್ಮ ಕಾರು ಎಲ್ಲಿ ನಿಲ್ಲಿಸಿದ್ದೇವೆ ಎಂಬುದನ್ನೇ ಎಷ್ಟೋ ಬಾರಿ ನಾವು ಮರೆತುಬಿಡುತ್ತೇವೆ. ಈ ರೀತಿಯ ತೊಂದರೆಗಳನ್ನು ಹೋಗಲಾಡಿಸುವ ಉದ್ದೇಶದಿಂದ ಗೂಗಲ್ ತನ್ನ ಮ್ಯಾಪ್ ನಲಿ ಹೊಸ ವೈಶಿಷ್ಟ್ಯತೆಯನ್ನು ಹೊರತಂದಿದೆ.

ಪಾರ್ಕಿಂಗ್ ಸಮಸ್ಯೆಗಳಿಗೆ ಮುಕ್ತಿ ನೀಡಿದ ಗೂಗಲ್ !!

ನಿಮ್ಮ ಕಾರನ್ನು ಸರಿಯಾದ ಸ್ಥಳದಲ್ಲಿ ಪಾರ್ಕಿಂಗ್ ಮಾಡಲು ಸಾಧ್ಯವಾಗದೆ ಎಷ್ಟೋ ಬಾರಿ ನೀವು ಶಾಪಿಂಗ್ ಅಥವಾ ಮತ್ತಿನೇನೋ ಕೆಲಸವನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾದ ನಿರ್ಧಾರಕ್ಕೆ ಬಂದಿರುತ್ತೀರಿ, ಇನ್ನು ಮುಂದೆ ಈ ರೀತಿಯ ತೊಂದರೆಗಳಿಗೆ ಫುಲ್ ಸ್ಟಾಪ್ ಹಾಕುವ ಸಮಯ ಹತ್ತಿರ ಬಂದಿದೆ.

ಪಾರ್ಕಿಂಗ್ ಸಮಸ್ಯೆಗಳಿಗೆ ಮುಕ್ತಿ ನೀಡಿದ ಗೂಗಲ್ !!

ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗೂಗಲ್ ಮ್ಯಾಪ್ ಪರಿಹಾರವೊಂದನ್ನು ಹುಡುಕಿದ್ದ, ಇನ್ನು ಮುಂದೆ ನಿಶ್ಚಿಂತೆಯಾಗಿ ಕಾರು ಪಾರ್ಕ್ ಪಾರ್ಕ್ ಮಾಡಬಹುದಾಗಿದೆ.

ಪಾರ್ಕಿಂಗ್ ಸಮಸ್ಯೆಗಳಿಗೆ ಮುಕ್ತಿ ನೀಡಿದ ಗೂಗಲ್ !!

ಹೌದು, ದೈತ್ಯ ಗೂಗಲ್ ಕಂಪನಿಯ ಮ್ಯಾಪ್ ಅಪ್ಲಿಕೇಶನ್‌ನಲ್ಲಿ ಹೊಚ್ಚ ಹೊಸ ವಿಶೇಷತೆಯನ್ನು ಕಂಪನಿಯು ಹೊರತಂದಿದ್ದು, ಪಾರ್ಕಿಂಗ್ ತೊಂದರೆಗಳು ಕೊನೆಗೊಳ್ಳಲಿದೆ.

ಪಾರ್ಕಿಂಗ್ ಸಮಸ್ಯೆಗಳಿಗೆ ಮುಕ್ತಿ ನೀಡಿದ ಗೂಗಲ್ !!

ಗೂಗಲ್ ಮ್ಯಾಪ್‌ನ ಈ ಹೊಸ ಫೀಚರ್ ಪಟ್ಟಣಗಳಲ್ಲಿ ವಾಸಿಸುವ ಜನರಿಗೆ ಅತ್ಯಂತ ಅವಶ್ಯಕವಾಗಿದ್ದು, ಇನ್ನು ಮುಂದೆ ಎಲ್ಲಾ ರೀತಿಯ ತೊಂದರೆಗಳಿಗೂ ಮುಕ್ತಿ ದೊರಕಲಿದೆ ಎಂಬ ಆಶಾಭಾವನೆ ಮೂಡಿರುವುದಂತೂ ಸತ್ಯ.

ಪಾರ್ಕಿಂಗ್ ಸಮಸ್ಯೆಗಳಿಗೆ ಮುಕ್ತಿ ನೀಡಿದ ಗೂಗಲ್ !!

ಸದ್ಯ ಬಿಡುಗಡೆಗೊಳಿಸಿರುವ ಈ ಹೊಸ ಫೀಚರ್‍‌ನಿಂದಾಗಿ ನಿಮಗೆ ಅತ್ಯಂತ ಸುಲಭವಾಗಿ ಪಾರ್ಕಿಂಗ್ ಸ್ಥಳವನ್ನು ಗುರುತಿಸಬಹುದಾಗಿದ್ದು, ಇದರಿಂದಾಗಿ ನಿಮ್ಮ ಸಮಯ ಉಳಿತಾಯವಾಗುವುದಂತೂ ಖಂಡಿತ.

ಪಾರ್ಕಿಂಗ್ ಸಮಸ್ಯೆಗಳಿಗೆ ಮುಕ್ತಿ ನೀಡಿದ ಗೂಗಲ್ !!

ಸ್ವತಃ ಗೂಗಲ್ ಪಾರ್ಕಿಂಗ್ ಸ್ಥಳದ ಬಗ್ಗೆ ನಕ್ಷೆಯಲ್ಲಿ ವರದಿ ನೀಡಲಿದ್ದು, ಇದರಿಂದಾಗಿ ಪಾರ್ಕಿಂಗ್ ಸ್ಥಳದ ಬಗ್ಗೆ ಗೊಂದಲ ನಿವಾರಣೆಯಾಗಲಿದೆ.

ಪಾರ್ಕಿಂಗ್ ಸಮಸ್ಯೆಗಳಿಗೆ ಮುಕ್ತಿ ನೀಡಿದ ಗೂಗಲ್ !!

ಬಳಕೆದಾರರು ಗೂಗಲ್ ಮ್ಯಾಪ್ಸ್‌ನಲ್ಲಿ ಗೂಗಲ್ ಲೊಕೇಶನ್ ತೋರಿಸುವ ನೀಲಿ ಬಟನ್ ಒತ್ತುವ ಮೂಲಕ ಈ ಸೇವೆಗೆ ಚಾಲನೆ ನೀಡಬಹುದಾಗಿದೆ.

ಪಾರ್ಕಿಂಗ್ ಸಮಸ್ಯೆಗಳಿಗೆ ಮುಕ್ತಿ ನೀಡಿದ ಗೂಗಲ್ !!

ನೀಲಿ ಗುಂಡಿ ಒತ್ತಿದ ನಂತರ 'ಸೇವ್ ಯುವರ್ ಪಾರ್ಕಿಂಗ್' ಆಯ್ಕೆನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದ್ದು, ಹೀಗೆ ಮಾಡುವುದರಿಂದ ಮ್ಯಾಪ್ ಗೆ ಪಾರ್ಕಿಂಗ್ ಲೊಕೇಶನ್ ಸೇರ್ಪಡೆಯಾಗುತ್ತದೆ.

ಪಾರ್ಕಿಂಗ್ ಸಮಸ್ಯೆಗಳಿಗೆ ಮುಕ್ತಿ ನೀಡಿದ ಗೂಗಲ್ !!

ಕಾರು ಎಲ್ಲಿ ಪಾರ್ಕ್ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಲೂ ಸಹ ಆಯ್ಕೆ ನೀಡಲಾಗಿದ್ದು, ಪಾರ್ಕ್ ಮಾಡಿರುವ ಸ್ಥಳದ ಬಗ್ಗೆ ತಿಳಿಯಲು ಮ್ಯಾಪ್ ಮೇಲೆ ಲೇಬಲ್ ಸಹಾಯ ಪಡೆಯಬೇಕಾಗುತ್ತದೆ.

ಪಾರ್ಕಿಂಗ್ ಸಮಸ್ಯೆಗಳಿಗೆ ಮುಕ್ತಿ ನೀಡಿದ ಗೂಗಲ್ !!

ಕಾರು ಪಾರ್ಕ್ ಮಾಡಿದ ಸ್ಥಳದ ಬಗ್ಗೆ ಹೆಚ್ಚಿನ ವಿವರಗಳು ಬೇಕಾದಲ್ಲಿ ಇದೇ ಲೇಬಲ್ ಓಪನ್ ಮಾಡಿಕೊಂಡು ಅಲ್ಲಿ ವಿವರಗಳನ್ನೂ ಬರೆಯಬಹುದಾಗಿದೆ.

ಪಾರ್ಕಿಂಗ್ ಸಮಸ್ಯೆಗಳಿಗೆ ಮುಕ್ತಿ ನೀಡಿದ ಗೂಗಲ್ !!

ಇನ್ನು ಪಾರ್ಕಿಂಗ್ ಸ್ಥಳದ ಮ್ಯಾಪಿನ ಚಿತ್ರ ತೆಗೆದು ಅದನ್ನು ಗೆಳೆಯರು, ನಿಮಗೆ ಬೇಕಾದವರೊಂದಿಗೆ ಹಂಚಿಕೊಳ್ಳಬಹುದಾಗಿದ್ದು, ಇದರಿಂದಾಗಿ ಗೆಳೆಯರನ್ನು ಸಂಧಿಸಲು ಸಹಾಯವಾಗಲಿದೆ.

ಪಾರ್ಕಿಂಗ್ ಸಮಸ್ಯೆಗಳಿಗೆ ಮುಕ್ತಿ ನೀಡಿದ ಗೂಗಲ್ !!

ಇನ್ನು ಐಒಎಸ್ ಮೊಬೈಲ್‌ನಲ್ಲಿ ನೀಲಿ ಡಾಟ್ ಮುಟ್ಟಿದ ನಂತರ ನೇರವಾಗಿ ‘ಸೆಟ್ ಆಸ್ ಪಾರ್ಕಿಂಗ್ ಲೊಕೇಶನ್' ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

ಪಾರ್ಕಿಂಗ್ ಸಮಸ್ಯೆಗಳಿಗೆ ಮುಕ್ತಿ ನೀಡಿದ ಗೂಗಲ್ !!

ಇನ್ನು, ಯುಎಸ್'ಬಿ ಆಡಿಯೋ ಅಥವಾ ಬ್ಲೂಟೂತ್ ಉಪಯೋಗಿಸಿ ಅಟೋಮ್ಯಾಟಿಕ್ ಆಗಿ ಪಾರ್ಕಿಂಗ್ ಲೊಕೇಶನ್ ಸೇವ್ ಮಾಡಬಹುದಾಗಿದ್ದು, ಹೀಗೆ ಮಾಡುವುದರಿಂದ ಮೊಬೈಲ್ ಸಂಪರ್ಕ ಇಲ್ಲದೆ ಇದ್ದರು ಸಹ ತನ್ನಿಂತಾನೇ ಕಾರಿನ ಲೊಕೇಶನ್ ಅಟೋಮ್ಯಾಟಿಕ್ ಆಗಿ ಮ್ಯಾಪಿನಲ್ಲಿ ಸೇವ್ ಆಗಲಿದೆ ಎಂದು ಗೂಗಲ್ ತಿಳಿಸಿದೆ.

Most Read Articles

Kannada
Read more on ಗೂಗಲ್ google
English summary
Read in Kannada about new feature introduced by Google Maps. Know more information about parking spot of your car and more.
Story first published: Thursday, April 27, 2017, 14:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X