Just In
- 5 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 5 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 6 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 6 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮೋಲ್ ಯಾದವ್ ಜೊತೆ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡ ಮಹಾರಾಷ್ಟ್ರ ಸರ್ಕಾರ
ಅಮೋಲ್ ಯಾದವ್ ಎಂಬ ಹೆಸರಿನ ಈ ವ್ಯಕ್ತಿ ಈ ಹಿಂದೆ ತಮ್ಮ ಮನೆಯ ಟೆರೇಸ್ ಮೇಲೆ ಸ್ವಂತ ವಿಮಾನವನ್ನು ನಿರ್ಮಿಸಿದ್ದಲ್ಲೇ ಇದೀಗ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಬೃಹತ್ ಯೋಜನೆಗಾಗಿ ಬರೋಬ್ಬರಿ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡಿದ್ದಾರೆ.
ಮುಂಬೈನ ಈ ವ್ಯಕ್ತಿಯ ಈ ಸಾಧನೆ ಖಂಡಿತ ನಿಮಗೆ ಅಚ್ಚರಿ ತರಿಸುತ್ತದೆ. ಹೌದು, ಅಮೋಲ್ ಯಾದವ್ ಎಂಬ ಹೆಸರಿನ ಈ ವ್ಯಕ್ತಿ ಈ ಹಿಂದೆ ತಮ್ಮ ಮನೆಯ ಟೆರೇಸ್ ಮೇಲೆ ಸ್ವಂತ ವಿಮಾನವನ್ನು ನಿರ್ಮಿಸಿದ್ದಲ್ಲೇ ಇದೀಗ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಬೃಹತ್ ಯೋಜನೆಗಾಗಿ ಬರೋಬ್ಬರಿ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡಿದ್ದಾರೆ.
ಉತ್ತರ ಮುಂಬೈನ ಕಾಂಡಿವಲಿ ನಿವಾಸಿಯಾಗಿರುವ ಮಾಜಿ ಪೈಲಟ್ ಅಮೋಲ್ ಯಾದವ್ ಆರು ವರ್ಷಗಳ ಹಿಂದೆ ತಮ್ಮ ಮನೆಯ ತಾರಸಿಯಲ್ಲಿ ಆರು ಸೀಟರ್ನ ವಿಮಾನವೊಂದನ್ನು ನಿರ್ಮಾಣ ಮಾಡಿದ್ದಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದ್ದರು.
Recommended Video
ಮತ್ತೊಂದು ವಿಚಾರವೆಂದರೆ, ಈ ವಿಶೇಷ ರೀತಿಯ ವಾಹನವನ್ನು ವಿಟಿ-ಎನ್ಎಂಡಿ(ವಿಕ್ಟರ್ ಟ್ಯಾಂಗೊ ನರೇಂದ್ರ ಮೋದಿ ದೇವೇಂದ್ರ) ಎಂದು ಹೆಸರಿಸುವ ಮೂಲಕ ತಮ್ಮ ಕನಸಿನ ಯೋಜನೆಗೆ ಮತ್ತೊಂದು ಅಯಾಮ ನೀಡಿದ್ದರು.
ಅದೇ ಜನಪ್ರಿಯತೆಯಲ್ಲಿದ್ದ ಅಮೋಲ್ ಯಾದವ್ಗೆ ಇದೀಗ ಬೃಹತ್ ಯೋಜನೆಯೊಂದು ಹುಡುಕಿಕೊಂಡು ಬಂದಿದ್ದು, 19 ಸೀಟರ್ನ ಒಟ್ಟಾರೆ 1300 ವಿಮಾನಗಳನ್ನು ಸಿದ್ಧಪಡಿಸಿ ಕೊಡುವಂತೆ ಮಹಾರಾಷ್ಟ್ರ ಸರ್ಕಾರ ಅಮೋಲ್ ಯಾದವ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ಲಘು ವಿಮಾನ ತಯಾರಿಕೆಯಲ್ಲಿ ಜನಪ್ರಿಯತೆ ಗಳಿಸಿರುವ ಅಮೋಲ್ ಯಾದವ್ ಮಾಲೀಕತ್ವದ ಥ್ರಸ್ಟ್ ಏರ್ಕ್ರಾಫ್ಟ್ ಕಂಪನಿಯೊಂದಿಗೆ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡಿದ್ದು, ಇದಕ್ಕಾಗಿ ಪಾಲ್ಘರ್ ಜಿಲ್ಲೆಯಲ್ಲಿ 157 ಭೂಮಿ ಕೂಡಾ ನೀಡಲಾಗಿದೆ.
ಹೀಗಾಗಿ ಮುಂದಿನ 3 ವರ್ಷಗಳ ಅವಧಿಯಲ್ಲಿ 19 ಸೀಟರ್ ಸಾಮರ್ಥ್ಯದ 600 ಲಘು ವಿಮಾನಗಳನ್ನು ಸಿದ್ದಪಡಿಸಬೇಕಿರುವ ಥ್ರಸ್ಟ್ ಏರ್ಕ್ರಾಫ್ಟ್ ಸಂಸ್ಥೆಯು, ದೇಶಿಯವಾಗಿ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಲಘು ವಿಮಾನಗಳನ್ನು ಅಭಿವೃದ್ದಿ ಮಾಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ.
10 ಸಾವಿರ ಉದ್ಯೋಗ ಸೃಷ್ಠಿ
ಹೌದು, 35 ಸಾವಿರ ಕೋಟಿ ಮೌಲ್ಯದ ಈ ಒಪ್ಪಂದದಿಂದ ವಿಫುಲ ಉದ್ಯೋಗ ಅವಕಾಶಗಳು ಸೃಷ್ಠಿಯಾಗಲಿದ್ದು, ವಿವಿಧ ಹಂತದಲ್ಲಿ 10 ಸಾವಿರ ಉದ್ಯೋಗ ಅವಕಾಶಗಳು ಒದಗಿಸಲಾಗುತ್ತಿದೆ.
ಇನ್ನು ಅಮೋಲ್ ಯಾದವ್ ಈ ಹಿಂದೆ ನಿರ್ಮಿಸಿದ್ದ 6 ಆಸನಗಳ ಲಘು ವಿಮಾನವು ಗಂಟೆಗೆ ಸುಮಾರು 342 ಕಿ.ಮೀ ವೇಗದಲ್ಲಿ ಗರಿಷ್ಠ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದ್ದು, ಇದು 2,000 ಕಿ.ಮೀ ವ್ಯಾಪ್ತಿಯಲ್ಲಿ 13000 ಕಿಲೋಮೀಟರು ಎತ್ತರದಲ್ಲಿ ಹಾರಾಟ ನಡೆಸಬಲ್ಲದು.
ಇದಕ್ಕಾಗಿ ಸತತ ಆರು ವರ್ಷಗಳ ಸಮಯವನ್ನು ತೆಗೆದುಕೊಂಡಿದ್ದ ಯಾದವ್ ಅವರು ಈ ವಿಮಾನವನ್ನು ನಿರ್ಮಿಸಲು ಕೇವಲ 4 ಕೋಟಿ ಹಣ ಖರ್ಚು ಮಾಡಿದ್ದರು. ಆದ್ರೆ ಇದು ಬೇರೆ ವಿಮಾನ ತಯಾರಿಕಾ ಸಂಸ್ಥೆಗಳಿಗೆ ಹೊಲಿಕೆ ಮಾಡಿದ್ರೆ ಅರ್ಧಕ್ಕಿಂತ ಕಡಿಮೆ ಖರ್ಚು ಎನ್ನಬಹುದು.
ಈ ಮೂಲಕ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಲಘು ವಿಮಾನಗಳನ್ನು ತಯಾರಿಸಬಹುದು ಎಂದು ತೊರಿಸಿಕೊಟ್ಟಿದ್ದ ಅಮೋಲ್ ಯಾದವ್ ಪ್ರಯತ್ನಕ್ಕೆ ಇದೀಗ ಮನ್ನಣೆ ಸಿಕ್ಕಿದ್ದು, 35 ಸಾವಿರ ಕೋಟಿ ಒಪ್ಪಂದ ಸಿಕ್ಕಿರುವುದು ಅವರ ಶ್ರಮದ ಪ್ರತಿಫಲವಾಗಿದೆ.
Trending On DriveSpark Kannada:
ಲಾರಿ ಮತ್ತು ಫಾರ್ಚೂನರ್ ಮಧ್ಯೆ ಡಿಕ್ಕಿ- ಬಿಜೆಪಿ ಶಾಸಕ ಸ್ಥಳದಲ್ಲೇ ಸಾವು..!!
ರಾಯಲ್ ಎನ್ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?