ಸ್ವಾತಂತ್ರ್ಯ ಸಂಭ್ರಮ: ದೇಶ ಪ್ರೇಮಕ್ಕಾಗಿ 5 ದೇಶಗಳಲ್ಲಿ 5,000 ಕಿ.ಮೀ ಸಂಚರಿಸಿದ ಐವರು ಸ್ನೇಹಿತರು

ಐವರು ಸ್ನೇಹಿತರು, 5 ದೇಶಗಳಲ್ಲಿ 5000 ಕಿ.ಮೀ ಪ್ರಯಾಣದ ನಡುವೆ ಸ್ವಾತಂತ್ರ್ಯದ ಉತ್ಸಾಹ. ಸ್ವಾತಂತ್ರ್ಯ ದಿನಾಚರಣೆಯನ್ನು ಹೊಸ ರೀತಿಯಲ್ಲಿ ಆಚರಿಸಲು ಐವರು ಸ್ನೇಹಿತರು ರಸ್ತೆ ಮೂಲಕ ಸಂಚರಿಸಿ, ಸಿಂಗಾಪುರ ಸೇರಿದಂತೆ ಐದು ದೇಶಗಳನ್ನು ಸುತ್ತಿ ಭಾರತಕ್ಕೆ ಬಂದಿದ್ದಾರೆ.

ಸ್ವಾತಂತ್ರ್ಯ ಸಂಭ್ರಮ: ದೇಶ ಪ್ರೇಮಕ್ಕಾಗಿ 5 ದೇಶಗಳಲ್ಲಿ 5,000 ಕಿ.ಮೀ ಸಂಚರಿಸಿದ ಐವರು ಸ್ನೇಹಿತರು

ಈ ಬೈಕ್‌ ಸವಾರಿಗೆ ಗ್ರೇಟ್‌ ಇಂಡಿಪೆಂಡೆನ್ಸ್‌ ಡೇ ರೈಡ್‌ ಎಂಬ ಹೆಸರನ್ನಿಡಲಾಗಿತ್ತು. ನಿಖಿಲ್ ಕಶ್ಯಪ್, ಭಾನು ಪ್ರತಾಪ್ ಸಿಂಗ್, ಹರ್ಕೀರತ್ ಸಿಂಗ್, ದಿವ್ಯಾ ರಾಘು ಹಾಗೂ ಅವರ ಐದು ವರ್ಷದ ಮಗು ಈ ಬೈಕ್ ಸವಾರಿಯಲ್ಲಿ ಭಾಗಿಯಾಗಿದ್ದರು. ಎಲ್ಲರೂ ವಿಭಿನ್ನ ಹಿನ್ನೆಲೆಯಿಂದ ಬಂದವರು. ಕಳೆದ ಹತ್ತು ವರ್ಷಗಳಿಂದ ಒಟ್ಟಿಗೆ ಪ್ರಯಾಣಿಸುತ್ತಿರುವ ಅವರು ಈ ಅನುಭವವನ್ನು ಹಿಂದೆಂದಿಗಿಂತಲೂ ವಿಭಿನ್ನವೆಂದು ಬಣ್ಣಿಸಿದ್ದಾರೆ.ಈ ತಂಡದ ಸದಸ್ಯರು 2016ರಲ್ಲಿ ತಮ್ಮ ಪ್ರಯಾಣವನ್ನು ಆರಂಭಿಸಿದ್ದರು. ಆದರೆ ಮ್ಯಾನ್ಮಾರ್ ನಲ್ಲಿ ಭೂಕಂಪ ಉಂಟಾದ ಕಾರಣಕ್ಕೆ ತಮ್ಮ ವಾಹನಗಳನ್ನು ಸಿಂಗಾಪುರದಲ್ಲಿ ಬಿಟ್ಟು ಭಾರತಕ್ಕೆ ವಾಪಸಾಗಿದ್ದರು.

ಸ್ವಾತಂತ್ರ್ಯ ಸಂಭ್ರಮ: ದೇಶ ಪ್ರೇಮಕ್ಕಾಗಿ 5 ದೇಶಗಳಲ್ಲಿ 5,000 ಕಿ.ಮೀ ಸಂಚರಿಸಿದ ಐವರು ಸ್ನೇಹಿತರು

2018ರ ಆಗಸ್ಟ್ 15ರಂದು ಸಿಂಗಾಪುರದಲ್ಲಿರುವ ಭಾರತದ ರಾಯಭಾರಿ ಕಚೇರಿಯಿಂದ ಮತ್ತೆ ತಮ್ಮ ಪ್ರಯಾಣವನ್ನು ಆರಂಭಿಸಿದರು. ಸಿಂಗಾಪುರ, ಮಲೇಷ್ಯಾ, ಥೈಲ್ಯಾಂಡ್, ಮ್ಯಾನ್ಮಾರ್ ದೇಶಗಳಲ್ಲಿನ ಪ್ರಯಾಣದ 21 ದಿನಗಳ ಬಳಿಕ ಭಾರತವನ್ನು ತಲುಪಿದರು. ಕಲ್ಕತ್ತಾದಲ್ಲಿ ತಮ್ಮ ಪ್ರಯಾಣವನ್ನು ಕೊನೆಗೊಳಿಸಿದರು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸ್ವಾತಂತ್ರ್ಯ ಸಂಭ್ರಮ: ದೇಶ ಪ್ರೇಮಕ್ಕಾಗಿ 5 ದೇಶಗಳಲ್ಲಿ 5,000 ಕಿ.ಮೀ ಸಂಚರಿಸಿದ ಐವರು ಸ್ನೇಹಿತರು

ಈ ಪ್ರಯಾಣದ ಅವಧಿಯಲ್ಲಿ ಈ ತಂಡದ ಸದಸ್ಯರು ಅನೇಕ ಭಾಷೆ, ಸಂಪ್ರದಾಯ, ಪದ್ಧತಿ, ಸಂಸ್ಕೃತಿಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಸಿಂಗಾಪುರದಲ್ಲಿ ಫಾರ್ಮುಲಾ 1 ಟ್ರ್ಯಾಕ್‌ನಲ್ಲಿ ಸವಾರಿ, ಮಲೇಷ್ಯಾದಲ್ಲಿ ವೇಗದ ಮಿತಿಯಿಲ್ಲದೆ ಚಾಲನೆ ಮಾಡುವುದು, ಥೈಲ್ಯಾಂಡ್‌ನಲ್ಲಿ ನಡೆದ ಬೈಕ್ ಫೆಸ್ಟಿವಲ್ (ಬೆಟಾಂಗ್ ಬೈಕ್ ವೀಕ್), ಮ್ಯಾನ್ಮಾರ್‌ನ 20 ಲೇನ್‌ಗಳು ಸೇರಿದಂತೆ ವಿವಿಧ ದೇಶಗಳಲ್ಲಿ ಹೊಸ ಅನುಭವಗಳನ್ನು ಪಡೆದಿದ್ದಾರೆ.

ಸ್ವಾತಂತ್ರ್ಯ ಸಂಭ್ರಮ: ದೇಶ ಪ್ರೇಮಕ್ಕಾಗಿ 5 ದೇಶಗಳಲ್ಲಿ 5,000 ಕಿ.ಮೀ ಸಂಚರಿಸಿದ ಐವರು ಸ್ನೇಹಿತರು

ಇದರ ಜೊತೆಗೆ 2ನೇ ಮಹಾಯುದ್ಧದ ವೇಳೆ ಜಪಾನಿಯರು ನಿರ್ಮಿಸಿದ 69 ಸೇತುವೆಗಳನ್ನು ದಾಟಿ, ವಿಶ್ವದ ಅತ್ಯಂತ ದುಬಾರಿ ಹೆದ್ದಾರಿಯಲ್ಲಿ ಸವಾರಿ ಮಾಡಿದ್ದಾರೆ. ಟ್ರಾಪಿಕ್ ಆಫ್ ಕ್ಯಾನ್ಸರ್ ಹಾಗೂ ಟೋಕಿಯೊದಿಂದ, ಅಫ್ಘಾನಿಸ್ತಾನ, ಕೊರಿಯಾ, ಸಿಂಗಾಪುರ್, ಭಾರತ ಹಾಗೂ ಪಾಕಿಸ್ತಾನದಲ್ಲಿ ಹರಡಿರುವ 1300 ಕಿ.ಮೀ ಉದ್ದದ ಏಷ್ಯನ್ ಹೆದ್ದಾರಿಯನ್ನು ದಾಟಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸ್ವಾತಂತ್ರ್ಯ ಸಂಭ್ರಮ: ದೇಶ ಪ್ರೇಮಕ್ಕಾಗಿ 5 ದೇಶಗಳಲ್ಲಿ 5,000 ಕಿ.ಮೀ ಸಂಚರಿಸಿದ ಐವರು ಸ್ನೇಹಿತರು

ತಮ್ಮ ಈ ಸವಾರಿಗೆ ದೇಶಪ್ರೇಮವೇ ಮುಖ್ಯ ಕಾರಣವೆಂದು ತಂಡದ ಸದಸ್ಯರು ಹೇಳಿದ್ದಾರೆ. ಈ ತಂಡದ ಸದಸ್ಯರು ಸ್ವಾತಂತ್ರ್ಯ ದಿನದಂದು ನಮ್ಮ ದೇಶಕ್ಕಾಗಿ ಏನಾದರೂ ಮಾಡಲು ಬಯಸಿದ್ದರು. ಈ ಕಾರಣಕ್ಕೆ ಈ ಸವಾರಿಯನ್ನು ಹಮ್ಮಿಕೊಂಡಿದ್ದರು. ಸದ್ಯಕ್ಕೆ ಕೋವಿಡ್ -19 ಕಾರಣದಿಂದಾಗಿ ಈ ತಂಡದ ಸದಸ್ಯರೆಲ್ಲರೂ ಮನೆಯಲ್ಲಿಯೇ ಇದ್ದಾರೆ.

ಸ್ವಾತಂತ್ರ್ಯ ಸಂಭ್ರಮ: ದೇಶ ಪ್ರೇಮಕ್ಕಾಗಿ 5 ದೇಶಗಳಲ್ಲಿ 5,000 ಕಿ.ಮೀ ಸಂಚರಿಸಿದ ಐವರು ಸ್ನೇಹಿತರು

ಈ ತಂಡದ ಸದಸ್ಯರು ತಮ್ಮ ಸವಾರಿಗಾಗಿ 3 ಕೆಟಿಎಂ ಡ್ಯೂಕ್ 390 ಬೈಕ್ ಗಳನ್ನು ಹಾಗೂ ಬೆಂಬಲಕ್ಕಾಗಿ ಒಂದು ಇನೋವಾ ಕಾರ್ ಅನ್ನು ಕೊಂಡೊಯ್ದಿದ್ದರು. ಈ ಬೈಕಿನ ಬಿಡಿಭಾಗಗಳು, ದುರಸ್ತಿ ಹಾಗೂ ಉಪಕರಣಗಳು ಈ ಐದು ದೇಶಗಳಲ್ಲಿ ಸುಲಭವಾಗಿ ದೊರಕುವ ಕಾರಣಕ್ಕೆ ಈ ಬೈಕ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸ್ವಾತಂತ್ರ್ಯ ಸಂಭ್ರಮ: ದೇಶ ಪ್ರೇಮಕ್ಕಾಗಿ 5 ದೇಶಗಳಲ್ಲಿ 5,000 ಕಿ.ಮೀ ಸಂಚರಿಸಿದ ಐವರು ಸ್ನೇಹಿತರು

ಈ ಗ್ರೇಟ್ ಇಂಡಿಪೆಂಡೆನ್ಸ್ ರೈಡ್ ನ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶೀಘ್ರದಲ್ಲೇ ಒಟಿಟಿ ಪ್ಲಾಟ್ ಫಾರಂನಲ್ಲಿ ಕಿರು-ಸರಣಿಯಾಗಿ ಬರುವ ನಿರೀಕ್ಷೆಗಳಿವೆ. ಈ ಸರಣಿಯ 21 ಕಂತುಗಳಲ್ಲಿ 21 ದಿನಗಳ ಪ್ರಯಾಣವನ್ನು ತೋರಿಸಲಾಗುತ್ತದೆ.

Most Read Articles

Kannada
English summary
Great Independence day ride 5 friends travelled 5 countries and 5000 kms. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X