Just In
- 4 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 4 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 5 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 6 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Movies ತಿಂಗಳುಗಳ ಒಳಗೆ ಬಾಡಿದ ಪ್ರೀತಿ: ಹನ್ಸಿಕಾಗಾಗಿ ಸಿಂಬು ಖರ್ಚು ಮಾಡಿದ್ದು ಒಂದೆರಡು ಕೋಟಿ ಅಲ್ಲ!
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜನಪ್ರಿಯ Jimny ಎಸ್ಯುವಿಯ ಡಿಸೈನ್ ಕಾಪಿ ಮಾಡಿದ ಪ್ರತಿಷ್ಠಿತ ಚೀನಾ ಕಂಪನಿ
ಮೊದಲಿನಿಂದಲೂ ಒರಿಜಿನಲ್ ವಸ್ತುಗಳನ್ನು ಕಾಪಿ ಮಾಡುವುದರಲ್ಲಿ ಚೀನಾ ಎತ್ತಿದ ಕೈ. ಒರಿಜಿನಲ್ ವಸ್ತುಗಳು ಥೇಟ್ ಅದೇ ರೀತಿ ಉತ್ಪಾದಿಸುವುದರಲ್ಲಿ ಅವರು ನಿಸ್ಸಿಮರು. ಅಲ್ಲದೇ ಒರಿಜನಲ್ ಮಾದರಿಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಚೀನಾ ಡೂಪ್ಲಿಕೇಟ್ ಅನ್ನು ತಯಾರಿಸುತ್ತಾರೆ.
ಅದೇ ರೀತಿ ಹಲವಾರು ಜನಪ್ರಿಯ ವಾಹನಗಳ ಡಿಸೈನ್ ಕದ್ದು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಜನಪ್ರಿಯವಾದ ಹಲವು ಕಾರು ಮತ್ತು ಬೈಕುಗಳ ಡಿಸೈನ್ ಕದ್ದು ಹಲವು ಬಾರಿ ಛೀಮಾರಿ ಹಾಕಿಸಿಕೊಂಡರು ಕೂಡ ಚೀನಾ ಮಾತ್ರ ಕಾಪಿ ಮಾಡುವ ಕುತಂತ್ರ ಬುದ್ದಿಯನ್ನು ಬಿಟ್ಟಿಲ್ಲ. ಅಲ್ಲದೇ ಅಂತರಾಷ್ಟ್ರೀಯ ಪೇಟೆಂಟ್ ಕಾನೂನಿನ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದೇ ನಕಲಿ ಮಾದರಿಗಳನ್ನು ತಯಾರಿಸುತ್ತಾರೆ, ಚೀನಾಕ್ಕೆ ಜನಪ್ರಿಯ ಮಾದರಿಗಳ ಡಿಸೈನ್ ಕದ್ದು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದನ್ನು ಒಂದು ಹವ್ಯಾಸ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು.
ಇದೇ ರೀತಿ ಹೊಸ ಉದಾಹರಣೆ ಬೆಳಕಿಗೆ ಬಂದಿದೆ. ಚೀನಾದಲ್ಲಿ ಪ್ರತಿಷ್ಠಿತ ವಾಹನ ತಯಾರಕ ಎಂದು ಪರಿಗಣಿಸಲ್ಪಟ್ಟಿರುವ ಗ್ರೇಟ್ ವಾಲ್ ಮೋಟಾರ್ಸ್, ಟ್ಯಾಂಕ್ 100 ಹೆಸರಿನ ಸಣ್ಣ ಎಸ್ಯುವಿಯನ್ನು ಅನಾವರಣಗೊಳಿಸಿದೆ ಕಾರು ತಯಾರಕರು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅತ್ಯಂತ ಜನಪ್ರಿಯವಾದ ಕಾಂಪ್ಯಾಕ್ಟ್ ಆಫ್-ರೋಡಿಂಗ್ ಎಸ್ಯುವಿ ಸುಜುಕಿ ಜಿಮ್ನಿಯ ವಿನ್ಯಾಸವನ್ನು ಕಾಪಿ ಮಾಡಿದ್ದಾರೆ.
ಟ್ಯಾಂಕ್ 100 ಅನ್ನು ಮೂರು-ಡೋರು ಮತ್ತು ಐದು-ಡೋರಿನ ಮಾದರಿಗಳಲ್ಲಿ ಬಹಿರಂಗಪಡಿಸಲಾಗಿದೆ. ಒಟ್ಟಾರೆ ಉದ್ದ ಮತ್ತು ವೀಲ್ಬೇಸ್ನಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸ ಕಂಡುಬರುವುದಿಲ್ಲ. ಟ್ಯಾಂಕ್ 100 ನ ಮುಂಭಾಗವನ್ನು ಹೊರತುಪಡಿಸಿ, ಸಂಪೂರ್ಣ ಎಸ್ಯುವಿ ಅದೇ ಬಾಕ್ಸ್ ಸಿಲೂಯೆಟ್ ಮತ್ತು ಗಾಜಿನ ಫಲಕಗಳೊಂದಿಗೆ ಜಿಮ್ನಿಯ ಪ್ರತಿರೂಪವಾಗಿದೆ.
ಮುಂಬಾಗವು ವಾಸ್ತವವಾಗಿ ನ್ಯೂ ಜನರೇಷನ್ ಫೋರ್ಡ್ ಬ್ರಾಂಕೊವನ್ನು ನೆನಪಿಸುತ್ತದೆ. ಮುಂಭಾಗದಲ್ಲಿ, ಟ್ಯಾಂಕ್ 100 ಸಂಪೂರ್ಣ ಬ್ಲ್ಯಾಕ್ ಬಹು-ಸ್ಲ್ಯಾಟೆಡ್ ಗ್ರಿಲ್ ಅನ್ನು ಪಡೆಯುತ್ತದೆ, ಇದು ಸಂಯೋಜಿತ ಎಲ್ಇಡಿ DRL ಮತ್ತು ಟರ್ನ್ ಸಿಗ್ನಲ್ಗಳೊಂದಿಗೆ ಪ್ರತಿ ಬದಿಯಲ್ಲಿ ಸುತ್ತಿನ ಹೆಡ್ಲ್ಯಾಂಪ್ಗಳಿಂದ ಸುತ್ತುವರಿಯಲ್ಪಟ್ಟಿದೆ.
ಜಿಮ್ನಿಯಂತೆ, ಅದರ ಚೈನೀಸ್ ಮಾದರಿಯು ಉಪಯುಕ್ತವಾದ ಬಂಪರ್ ಅನ್ನು ಸಹ ಹೊಂದಿದೆ, ಅದು ಒರಟಾದ ಲುಕ್ ಅನ್ನು ನೀಡುತ್ತದೆ. ಸಂಪೂರ್ಣ ಬಂಪರ್ಗೆ ಬ್ಲ್ಯಾಕ್ ಬಣ್ಣ ಬಳಿಯಲಾಗಿದೆ ಮತ್ತು ಎರಡು ವೃತ್ತಾಕಾರದ ಫಾಂಗ್ ಲ್ಯಾಂಪ್ ಗಳನ್ನು ಹೊಂದಿದೆ
ಬದಿಯಿಂದ ನೋಡಿದಾಗ, ದೃಢವಾದ ಪ್ಲಾಸ್ಟಿಕ್ ಬ್ಲ್ಯಾಕ್ ಬಣ್ಣದ ಕ್ಲಾಡಿಂಗ್ಗಳಿಂದ ಮುಚ್ಚಿದ ಬಹುತೇಕ ಒಂದೇ ರೀತಿಯ ವ್ಹೀಲ್ ಅರ್ಚಾರ್ ಗಳನ್ನು ಹೊಂದಿರುತ್ತದೆ.ಜಿಮ್ನಿಯಿಂದ ಎರವಲು ಪಡೆದ ಇತರ ಮುಖ್ಯಾಂಶಗಳು ಬ್ಲಾಕ್ ಅಂಶಗಳನ್ನು ಡೋರಿನಲ್ಲಿ, ಮೀರರ್ಸ್ ಮತ್ತು ಜಿಮ್ನಿಯ ವಿಂಡೋಗಳಲ್ಲಿ ಸಂಪೂರ್ಣವಾಗಿ ಪುನರಾವರ್ತಿಸುವ ಸೈಡ್ ವಿಂಡೋ ಪ್ಯಾನೆಲ್ಗಳನ್ನು ಒಳಗೊಂಡಿವೆ. ಇನ್ನು ಬೃಹತ್ ವ್ಹೀಲ್ ಅರ್ಚಾರ್ ಗಳನ್ನು ಹೊಂದಿವೆ. ಅವುಗಳು ಜಿಮ್ನಿಯಲ್ಲಿ ಬಳಸಿದ ಪ್ರತಿಬಿಂಬಗಳ ಪ್ರತಿಬಿಂಬಗಳಾಗಿವೆ.
ಬ್ಲ್ಯಾಕ್ ರೂಫ್ ಎಸ್ಯುವಿಗೆ ಉತ್ತಮವಾದ ಡ್ಯುಯಲ್-ಟೋನ್ ನೋಟವನ್ನು ನೀಡುತ್ತದೆ. ಟ್ಯಾಂಕ್ 100 ಎಸ್ಯುವಿ ಹಿಂಭಾಗದ ಕಡೆಗೆ ಚಲಿಸುವಾಗ, ಒಂದೇ ರೀತಿಯ ಲಂಬವಾಗಿ ಆಧಾರಿತ ಟೈಲ್ಲೈಟ್ಗಳು, ರೂಫ್-ಮೌಂಟಡ್ ಸ್ಟಾಪ್ ಲ್ಯಾಂಪ್ ಮತ್ತು ಅದರ ಮೇಲೆ ಸ್ಪೇರ್ ವೀಲ್ ಅನ್ನು ಅಳವಡಿಸಲಾಗಿರುವ ಫ್ಲಾಟ್ ಟೈಲ್ಗೇಟ್ನೊಂದಿಗೆ ವಸ್ತುಗಳು ಜಿಮ್ನಿಗೆ ಹೋಲುತ್ತವೆ.
ಅದೇ ರೀತಿಯ ದೃಢವಾದ ಬಂಪರ್ ಅನ್ನು ಹಿಂಭಾಗದಲ್ಲಿ ಸ್ಥಾಪಿಸಲಾಗಿದೆ, ಇದು ಕೆಳಗೆ ಎರಡು ವುಕ್ ಗಳನ್ನು ಪಡೆಯುತ್ತದೆ. ಈ ಎಸ್ಯುವಿಯ ಒಳಾಂಗಣದ ಚಿತ್ರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ ಆದರೆ ಕ್ಯಾಬಿನ್ ಅದರ ದೊಡ್ಡ ಒಡಹುಟ್ಟಿದ ಟ್ಯಾಂಕ್ 300 ಮಾದರಿಗೆ ಹೋಲುತ್ತದೆ ಎಂದು ಹೇಳಲಾಗುತ್ತದೆ. ಇದರರ್ಥ ಟ್ಯಾಂಕ್ 100 ಎಸ್ಯುವಿಯಲ್ಲಿ ದೊಡ್ಡ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ನೀಡಬಹುದು.
ಗ್ರೇಟ್ ವಾಲ್ ಮೋಟಾರ್ಸ್ ಎಸ್ಯುವಿಯ ಪವರ್ಟ್ರೇನ್ನ ವಿವರಗಳನ್ನು ಹಂಚಿಕೊಂಡಿಲ್ಲ ಆದರೆ ಕೆಲವು ವರದಿಗಳು ಪವರ್ಟ್ರೇನ್ ಅನ್ನು ತನ್ನ ಹಿರಿಯ ಸಹೋದರರಿಂದ ಎರವಲು ಪಡೆಯಬಹುದು ಎಂದು ಹೇಳಲಾಗುತ್ತಿದೆ,
ಇದರರ್ಥ ಟ್ಯಾಂಕ್ 100 ಅನ್ನು 2.0-ಲೀಟರ್ ನಾಲ್ಕು-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 224 ಬಿಹೆಚ್ಪಿ ಪವರ್ ಮತ್ತು 387 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚಿನ-ಸ್ಪೆಕ್ ರೂಪಾಂತರಗಳಲ್ಲಿ ಮೂರು ಡಿಫರೆನ್ಷಿಯಲ್ ಲಾಕ್ಗಳನ್ನು ಹೊಂದಿರುವ 4WD ಸಿಸ್ಟಮ್ನೊಂದಿಗೆ ಟ್ಯಾಂಕ್ 100 ಅನ್ನು ಅಳವಡಿಸಲಾಗುವುದು ಎಂದು ವರದಿಗಳು ಬಹಿರಂಗಪಡಿಸುತ್ತವೆ. ಇದರೊಂದಿಗೆ ಡೀಸೆಲ್ ಮೋಟರ್ ಕೂಡ ಇರಬಹುದು.
ಸುಜುಕಿ ಜಿಮ್ನಿ(Suzuki Jimny) ಮಿನಿ-ಎಸ್ಯುವಿಯ ಬಗ್ಗೆ ಹೇಳುವುದಾದರೆ, ಈ ಆಫ್-ರೋಡರ್ ಅಂತರರಾಷ್ಟ್ರೀಯ ಮಾರುಕಟ್ಟೆಗಲ್ಲಿ ಭರ್ಜರಿ ಬೇಡಿಕೆಯೊಂದಿಗೆ ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರಸ್ತುತ ತಲೆಮಾರಿನ ಸುಜುಕಿ ಜಿಮ್ನಿ ಮಿನಿ-ಎಸ್ಯುವಿಯು 2018ದಿಂದ ಮಾರಾಟವಾಗುತ್ತಿದೆ. ಇನ್ನು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ದೇಶೀಯ ಮಾರುಕಟ್ಟೆಯಲ್ಲಿ ಜಿಮ್ನಿ ಆಫ್-ರೋಡರ್ ಎಸ್ಯುವಿಯನ್ನು ಪರಿಚಯಿಸುವ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಪ್ರಸ್ತುತ ಭಾರತದಲ್ಲಿ ಗ್ರಾಹಕರ ಪ್ರತಿಕ್ರಿಯೆಯನ್ನು ವಿಶ್ಲೇಷಿಸುತ್ತಿದೆ.
ಭಾರತದಲ್ಲಿನ ಪ್ರಸ್ತುತ ಕಾಂಪ್ಯಾಕ್ಟ್ ಎಸ್ಯುವಿಗಳಿಗಿಂತ ಭಿನ್ನವಾಗಿ, ಸುಜುಕಿ ಜಿಮ್ನಿ ಆಫ್-ರೋಡ್ ಎಸ್ಯುವಿಯಾಗಿದ್ದು, ಇದು ಸ್ವಲ್ಪ ಕಡಿಮೆ ಪ್ರಾಯೋಗಿಕ ಮತ್ತು ಹೆಚ್ಚು ಉದ್ದೇಶಿತವಾಗಿದೆ. ಪ್ರಸ್ತುತ ಬಾರತದಲ್ಲಿ ಕಂಪನಿಯು ತನ್ನ ಗುರುಗ್ರಾಮ್ ಸ್ಥಾವರದಲ್ಲಿ ಮೂರು-ಡೋರಿನ ಜಿಮ್ನಿಯನ್ನು ತಯಾರಿಸುತ್ತದೆ ಮತ್ತು ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿದೆ.
ಈ ಸುಜುಕಿ ಜಿಮ್ನಿ ಮಿನಿ-ಎಸ್ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಹೊಸ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ. ಇದು 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು.
2020ರ ಆಟೋ ಎಕ್ಸ್ಪೋ ಸಂದರ್ಭದಲ್ಲಿ ಮಾರುತಿ ಸುಜುಕಿ ಭಾರತದಲ್ಲಿ ಜಿಮ್ನಿಯನ್ನು ಪ್ರದರ್ಶಿಸಿದಾಗ ಆಫ್-ರೋಡ್ ವಾಹನ ಪ್ರಿಯರಿಗೆ ಹೆಚ್ಚಿನ ಕುತೂಹಲ ಹುಟ್ಟು ಹಾಕಿತು. ಒಟ್ಟಿನಲ್ಲಿ ಭಾರತದಲ್ಲಿ ಬಿಡುಗಡೆಯಾದರೆ ಈ ಬಹುನಿರೀಕ್ಷಿತ ಸುಜುಕಿ 5-ಡೋರ್ ಜಿಮ್ನಿ ಮಿನಿ ಎಸ್ಯುವಿಯು 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಮಾದರಿಯ ಉತ್ತರಾಧಿಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಮಹೀಂದ್ರಾ ಥಾರ್ ಎಸ್ಯುವಿಗೆ ಉತ್ತಮ ಪೈಪೋಟಿಯನ್ನು ನೀಡುತ್ತದೆ.