ದಂಡ ವಿರೋಧಿಸಿ ನಡು ರಸ್ತೆಯಲ್ಲೇ ಮಲಗಿದ ಭೂಪ..!

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ದಂಡವನ್ನು ವಿಧಿಸುವ ಮೋಟಾರು ವಾಹನ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ಜಾರಿಗೆ ತರಲಾಗಿದೆ. ಈ ಕಾಯ್ದೆಯನ್ನು ಮಾರ್ಪಡಿಸಿದ ಹಲವು ರಾಜ್ಯಗಳಲ್ಲಿ ಗುಜರಾತ್ ಕೂಡ ಒಂದು.

ದಂಡ ವಿರೋಧಿಸಿ ನಡು ರಸ್ತೆಯಲ್ಲೇ ಮಲಗಿದ ಭೂಪ..!

ಆದರೂ, ಈ ದಂಡದ ಬಗ್ಗೆ ಸಂತೋಷಪಡದ ಹಾಗೂ ದಂಡದ ವಿರುದ್ಧ ಪ್ರತಿಭಟಿಸುತ್ತಿರುವ ಅನೇಕ ವಾಹನ ಚಾಲಕರು ಇನ್ನೂ ಇದ್ದಾರೆ. ಗುಜರಾತಿನ ಬೈಕ್ ಸವಾರರೊಬ್ಬರು ರಸ್ತೆಯ ಮೇಲೆ ಮಲಗಿ ಪ್ರತಿಭಟನೆ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ.

ದಂಡ ವಿರೋಧಿಸಿ ನಡು ರಸ್ತೆಯಲ್ಲೇ ಮಲಗಿದ ಭೂಪ..!

ಗುಜರಾತ್‌ನ ವಡೋದರಾದಲ್ಲಿ ನಡೆದಿರುವ ಘಟನೆಯನ್ನು ವೀಡಿಯೊ ಮಾಡಲಾಗಿದೆ. ಆ ವೀಡಿಯೊದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯು ರಸ್ತೆಯ ಮಧ್ಯದಲ್ಲಿ ಮಲಗಿರುವುದನ್ನು ಕಾಣಬಹುದು. ಆತನ ಸುತ್ತಲೂ ಪತ್ರಕರ್ತರು ಹಾಗೂ ಪೊಲೀಸರಿದ್ದಾರೆ. ಹೆಲ್ಮೆಟ್ ಇಲ್ಲದೆ ತನ್ನ ಮಗುವಿನೊಂದಿಗೆ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಹಿಡಿದು ದಂಡ ವಿಧಿಸಿದ ನಂತರ ಈ ಘಟನೆ ನಡೆದಿದೆ.

ದಂಡ ವಿರೋಧಿಸಿ ನಡು ರಸ್ತೆಯಲ್ಲೇ ಮಲಗಿದ ಭೂಪ..!

ವೀಡಿಯೋ ಪ್ರಕಾರ, ಮಗುವನ್ನು ಕಾಲೇಜಿಗೆ ಡ್ರಾಪ್ ಮಾಡಲು ಹೋಗುವಾಗ ಹೆಲ್ಮೆಟ್ ಧರಿಸದ ಕಾರಣಕ್ಕೆ ಪೊಲೀಸರು ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಿಸಿ ದಂಡ ವಿಧಿಸಿದ್ದಾರೆ. ಪೊಲೀಸರ ತಪಾಸಣೆಯ ವೇಳೆಯಲ್ಲಿ ಆ ವ್ಯಕ್ತಿಯು ಪೊಲೀಸರಿಗೆ ಬೈಕಿನ ರಿಜಿಸ್ಟ್ರೇಷನ್ ಪೇಪರ್ ಹಾಗೂ ಇನ್ಶೂರೆನ್ಸ್ ಗೆ ಸಂಬಂಧಪಟ್ಟ ದಾಖಲೆಗಳನ್ನು ತೋರಿಸಿಲ್ಲ.

ದಂಡ ವಿರೋಧಿಸಿ ನಡು ರಸ್ತೆಯಲ್ಲೇ ಮಲಗಿದ ಭೂಪ..!

ಈ ದಾಖಲೆಗಳಿಲ್ಲದ ಕಾರಣಕ್ಕೆ ಪೊಲೀಸರು ಭಾರೀ ಪ್ರಮಾಣದ ದಂಡವನ್ನು ವಿಧಿಸಿದ್ದಾರೆ. ವರದಿಗಳ ಪ್ರಕಾರ ಪೊಲೀಸರು ಆ ಬೈಕ್ ಅನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದರು ಎಂದು ಹೇಳಲಾಗಿದೆ. ಎಷ್ಟು ಪ್ರಮಾಣದ ದಂಡವನ್ನು ವಿಧಿಸಲಾಗಿದೆ ಎಂಬುದು ತಿಳಿದು ಬಂದಿಲ್ಲ.

ದಂಡ ವಿರೋಧಿಸಿ ನಡು ರಸ್ತೆಯಲ್ಲೇ ಮಲಗಿದ ಭೂಪ..!

ಆದರೆ ದಂಡವನ್ನು ಪಾವತಿಸಲು ಇಷ್ಟವಿಲ್ಲದ ಆ ವ್ಯಕ್ತಿಯು ನಡು ರಸ್ತೆಯಲ್ಲಿ ಪ್ರತಿಭಟನೆ ಶುರು ಮಾಡಿದ್ದಾನೆ. ಆ ವ್ಯಕ್ತಿಯು ವೀಡಿಯೊದಲ್ಲಿ ಪೊಲೀಸರು ಮಾಡಿರುವುದು ಕಾನೂನುಬದ್ಧವಲ್ಲ. ತನ್ನ ಮಗುವನ್ನು ಡ್ರಾಪ್ ಮಾಡಲು ಕಾಲೇಜಿಗೆ ಹೋಗುತ್ತಿದ್ದಾಗಿ ಹೇಳಿದ್ದಾನೆ.

ದಂಡ ವಿರೋಧಿಸಿ ನಡು ರಸ್ತೆಯಲ್ಲೇ ಮಲಗಿದ ಭೂಪ..!

ಆ ಕಾರಣಕ್ಕಾಗಿ ಆತನು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾನೆ. ಆ ವ್ಯಕ್ತಿಯು ನಗರದೊಳಗೆ ನಿಧಾನಗತಿಯ ವೇಗದಲ್ಲಿ ಸವಾರಿ ಮಾಡುವುದರಿಂದ ಹೆಲ್ಮೆಟ್‍‍ನ ಅಗತ್ಯವಿಲ್ಲ ಎಂದು ಹೇಳುವುದನ್ನು ವೀಡಿಯೊದಲ್ಲಿ ಕೇಳಬಹುದು.

ದಂಡ ವಿರೋಧಿಸಿ ನಡು ರಸ್ತೆಯಲ್ಲೇ ಮಲಗಿದ ಭೂಪ..!

ಅನೇಕ ರಾಜ್ಯಗಳಲ್ಲಿ, ದ್ವಿಚಕ್ರ ವಾಹನಗಳಲ್ಲಿ ಓಡಾಡುವ ಹಿಂಬದಿಯ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕು. ಈ ನಿಯಮದಿಂದ ಧಾರ್ಮಿಕ ಟರ್ಬನ್‌ ಧರಿಸುವ ಸಿಖ್ಖರಿಗೆ ಹಾಗೂ ಸ್ಕಲ್ ಕ್ಯಾಪ್ ಧರಿಸುವ ಮುಸ್ಲಿಮರಿಗೆ ವಿನಾಯಿತಿ ನೀಡಲಾಗಿದೆ.

ದಂಡ ವಿರೋಧಿಸಿ ನಡು ರಸ್ತೆಯಲ್ಲೇ ಮಲಗಿದ ಭೂಪ..!

ಗುಜರಾತ್‌ನಲ್ಲಿ, ಹೊಸ ಮೋಟಾರು ವಾಹನ ಕಾಯ್ದೆಯ ವಿರುದ್ಧ ವಾಹನ ಚಾಲಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ, ಹಿಂಬದಿಯ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ನಿಯಮದಿಂದ ವಿನಾಯಿತಿ ನೀಡಲಾಗಿದೆ.

ಭಾರತದಲ್ಲಿ ಬೈಕ್ ಸವಾರ ಹಾಗೂ ಹಿಂಬದಿಯ ಸವಾರರಿಬ್ಬರಿಗೂ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಅಪಘಾತದ ಸಮಯದಲ್ಲಿ ಹೆಲ್ಮೆಟ್ ಧರಿಸಿದ್ದರೆ ತಲೆಗೆ ಆಗುವ ಗಾಯಗಳಿಂದ ರಕ್ಷಣೆ ಸಿಗಲಿದೆ.

ದಂಡ ವಿರೋಧಿಸಿ ನಡು ರಸ್ತೆಯಲ್ಲೇ ಮಲಗಿದ ಭೂಪ..!

ಅಪಘಾತದ ಸಮಯದಲ್ಲಿ ತಲೆ ಮೊದಲು ರಸ್ತೆಗೆ ಬಿದ್ದರೆ, ಮಾರಣಾಂತಿಕ ಗಾಯಗಳಾಗುವ ಸಾಧ್ಯತೆಗಳಿವೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಹೊಂದಿದೆ. ಇದರ ಜೊತೆಗೆ ಹೆಚ್ಚಿನ ಸಂಖ್ಯೆಯ ಅಪಘಾತಗಳು ದ್ವಿಚಕ್ರ ವಾಹನಗಳಿಂದಲೇ ಉಂಟಾಗುತ್ತಿವೆ.

ದಂಡ ವಿರೋಧಿಸಿ ನಡು ರಸ್ತೆಯಲ್ಲೇ ಮಲಗಿದ ಭೂಪ..!

ದ್ವಿಚಕ್ರ ವಾಹನ ಸವಾರರು ಯಾವಾಗಲೂ ಸುರಕ್ಷತೆಯ ಕಾರಣಕ್ಕೆ ಸರಿಯಾದ ಹೆಲ್ಮೆಟ್ ಧರಿಸಬೇಕು. ಅನೇಕ ನಗರಗಳಲ್ಲಿ, ಪೊಲೀಸರು ಹೆಲ್ಮೆಟ್ ಪಟ್ಟಿಯನ್ನು ಪರಿಶೀಲಿಸಿ, ಸುರಕ್ಷಿತವಾಗಿರದಿದ್ದರೆ ದಂಡ ವಿಧಿಸುತ್ತಾರೆ.

Most Read Articles

Kannada
English summary
Gujarat man caught riding without helmet lies on road in protest video details - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X