ಗುರುಗ್ರಾಮ ಪೊಲೀಸರ ಗಸ್ತು ನಿರ್ವಹಣೆಗೆ ಮಿಷನ್ ಗನ್ ಹೊಂದಿರುವ ಮಾಡಿಫೈ ಸ್ಕಾರ್ಪಿಯೊ

ನಮ್ಮ ದೇಶದಲ್ಲಿ ವಾಹನಗಳನ್ನು ಮಾಡಿಫೈಗೊಳಿಸುವುದು ಮೋಟಾರು ವಾಹನ ಕಾಯ್ದೆಯನ್ವಯ ಅಪರಾಧವಾಗಿದೆ. ಮಾಡಿಫೈಗೊಳಿಸಿರುವ ವಾಹನಗಳು ಕಂಡು ಬಂದರೆ ಪೊಲೀಸರು ದಂಡ ವಿಧಿಸುತ್ತಾರೆ. ಆದರೆ ಈಗ ಪೊಲೀಸರೇ ಮಾಡಿಫೈಗೊಂಡಿರುವ ವಾಹನವನ್ನು ಬಳಸಲಿದ್ದಾರೆ.

ಗುರುಗ್ರಾಮ ಪೊಲೀಸರ ಗಸ್ತು ನಿರ್ವಹಣೆಗೆ ಮಿಷನ್ ಗನ್ ಹೊಂದಿರುವ ಮಾಡಿಫೈ ಸ್ಕಾರ್ಪಿಯೊ

ಅಂದ ಹಾಗೆ ತಮ್ಮ ವಾಹನವನ್ನು ಮಾಡಿಫೈಗೊಂಡಿರುವ ವಾಹನವನ್ನು ಬಳಸುತ್ತಿರುವುದು ಗುರುಗ್ರಾಮ ಪೊಲೀಸರು. ಗುರುಗ್ರಾಮ ಪೊಲೀಸರು ಮಹೀಂದ್ರಾ ಕಂಪನಿಯ ಮಾಡಿಫೈ ಸ್ಕಾರ್ಪಿಯೊವನ್ನು ಬಳಸುತ್ತಿದ್ದಾರೆ. ಈ ಕಾರ್ ಅನ್ನು ಅತ್ಯಾಧುನಿಕ ಮಿಷನ್ ಗನ್‍‍ಗಳನ್ನು ಹೊಂದುವ ಸಲುವಾಗಿ ಮಾಡಿಫೈ ಮಾಡಲಾಗಿದೆ.

ಗುರುಗ್ರಾಮ ಪೊಲೀಸರ ಗಸ್ತು ನಿರ್ವಹಣೆಗೆ ಮಿಷನ್ ಗನ್ ಹೊಂದಿರುವ ಮಾಡಿಫೈ ಸ್ಕಾರ್ಪಿಯೊ

ಹೆಚ್ಚುತ್ತಿರುವ ಉಗ್ರಗಾಮಿಗಳ ಉಪಟಳವನ್ನು ಹತ್ತಿಕ್ಕುವ ಸಲುವಾಗಿ ಈ ಮಿಷನ್ ಗನ್‍‍ಗಳನ್ನು ಹೊಂದಲಾಗುತ್ತಿದೆ. ಇದರಿಂದಾಗಿ ಒಂದೇ ಬಾರಿಗೆ ನೂರಾರು ಜನ ಉಗ್ರರನ್ನು ಕೊಲ್ಲಬಹುದಾಗಿದೆ. ವರದಿಗಳ ಪ್ರಕಾರ, ಮೂರು ಮಿಷನ್ ಗನ್‍‍ಗಳನ್ನು ಮೂರು ಮಹೀಂದ್ರಾ ಸ್ಕಾರ್ಪಿಯೊ ವಾಹನಗಳಲ್ಲಿ ಅಳವಡಿಸಲಾಗಿದೆ.

ಗುರುಗ್ರಾಮ ಪೊಲೀಸರ ಗಸ್ತು ನಿರ್ವಹಣೆಗೆ ಮಿಷನ್ ಗನ್ ಹೊಂದಿರುವ ಮಾಡಿಫೈ ಸ್ಕಾರ್ಪಿಯೊ

ಮಿಷನ್ ಗನ್ ಹೊಂದಿರುವ ಈ ವಾಹನಗಳನ್ನು ಡಿ‍ಎಲ್‍ಎಫ್ ಕಂಪನಿಯು ಗುರುಗ್ರಾಮ ಪೊಲೀಸರಿಗೆ ನೀಡಿದೆ. ಗುರುಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಡಿ‍ಎಲ್‍ಎಫ್ ಕಂಪನಿಯ ಸಿ‍ಇ‍ಒ ಮೊಹಮ್ಮದ್ ಅಖಿಲ್‍‍ರವರು, ಗುರುಗ್ರಾಮ ಪೊಲೀಸ್ ಕಮೀಷನರ್‍‍ರವರಿಗೆ ಈ ಕಾರುಗಳನ್ನು ಹಸ್ತಾಂತರಿಸಿದರು.

ಗುರುಗ್ರಾಮ ಪೊಲೀಸರ ಗಸ್ತು ನಿರ್ವಹಣೆಗೆ ಮಿಷನ್ ಗನ್ ಹೊಂದಿರುವ ಮಾಡಿಫೈ ಸ್ಕಾರ್ಪಿಯೊ

ಈ ಮೂರು ಮಹೀಂದ್ರಾ ಕಾರುಗಳಲ್ಲಿರುವ ರೂಫ್‍‍ಗಳನ್ನು ಮಾಡಿಫೈ ಮಾಡಲಾಗಿದ್ದು, ಮಿಷನ್ ಗನ್‍‍ಗಳನ್ನು ಅಲ್ಲಿ ಅಳವಡಿಸಲಾಗಿದೆ. ಕಾರುಗಳ ರೂಫ್ ಮೇಲೆ ಗನ್‍‍ಗಳನ್ನು ಇಟ್ಟಿರುವ ಕಾರಣಕ್ಕೆ ಸುಲಭವಾಗಿ ಗುರಿಯಾಗಿರಿಸಿಕೊಂಡು ಶೂಟ್ ಮಾಡಬಹುದಾಗಿದೆ.

ಗುರುಗ್ರಾಮ ಪೊಲೀಸರ ಗಸ್ತು ನಿರ್ವಹಣೆಗೆ ಮಿಷನ್ ಗನ್ ಹೊಂದಿರುವ ಮಾಡಿಫೈ ಸ್ಕಾರ್ಪಿಯೊ

ಈ ಲೈಟ್ ಮಿಷನ್ ಗನ್, ಒಂದೇ ಬಾರಿಗೆ ಹಲವಾರು ಗುಂಡುಗಳನ್ನು ಹಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಮಹೀಂದ್ರಾದ ಈ ಕಾರಿನಲ್ಲಿರುವ ಗನ್ ಸಸ್ಪೆಂಷನ್‍‍ನಲ್ಲಿ ಹಲವಾರು ಅಡ್ಜಸ್ಟ್ ಮೆಂಟ್‍‍ಗಳನ್ನು ಮಾಡಲಾಗಿದೆ. ಈ ಮಿಷನ್ ಗನ್ 360 ಡಿಗ್ರಿಯಲ್ಲಿ ಶೂಟ್ ಮಾಡಬಲ್ಲದು.

ಗುರುಗ್ರಾಮ ಪೊಲೀಸರ ಗಸ್ತು ನಿರ್ವಹಣೆಗೆ ಮಿಷನ್ ಗನ್ ಹೊಂದಿರುವ ಮಾಡಿಫೈ ಸ್ಕಾರ್ಪಿಯೊ

ಪ್ರತಿಕೂಲ ಹವಾಮಾನ ಪರಿಸ್ಥಿತಿಯನ್ನು ಎದುರಿಸಲು ಈ ಕಾರುಗಳ ರೂಫ್ ಮೇಲೆ ಸ್ನೋ ಲೈಟ್‍‍ಗಳನ್ನು ಅಳವಡಿಸಲಾಗಿದೆ. ಈ ಲೈಟ್‍‍ಗಳು ಕತ್ತಲಿನಲ್ಲಿ, ಮಳೆಯಲ್ಲಿ, ಹಿಮ ಬೀಳುವಾಗ ಬೆಳಕು ಸ್ಪಷ್ಟವಾಗಿ ಕಾಣುವಂತೆ ಮಾಡುತ್ತವೆ.

ಗುರುಗ್ರಾಮ ಪೊಲೀಸರ ಗಸ್ತು ನಿರ್ವಹಣೆಗೆ ಮಿಷನ್ ಗನ್ ಹೊಂದಿರುವ ಮಾಡಿಫೈ ಸ್ಕಾರ್ಪಿಯೊ

ಅತ್ಯಾಧುನಿಕ ಮಿಷನ್ ಗನ್ ಹೊಂದಿರುವ ಈ ಸ್ಕಾರ್ಪಿಯೊಗಳಲ್ಲಿ ಒಂದನ್ನು ಗಾಲ್ಫ್ ಕೋರ್ಸ್ ರೋಡ್‍‍ನಲ್ಲಿಟ್ಟರೆ, ಇನ್ನೆರಡನ್ನು ಸೈಬರ್ ಸೆಕ್ಯುರಿಟಿ ಸೆಂಟರ್‍‍‍ನಲ್ಲಿಡಲಾಗುವುದು. ಈ ಕಾರುಗಳನ್ನು ಕೇವಲ ಭದ್ರತೆಗಾಗಿ ಮಾತ್ರ ಬಳಸದೇ, ಗಸ್ತು ತಿರುಗಲೂ ಸಹ ಬಳಸಲಾಗುವುದು.

ಗುರುಗ್ರಾಮ ಪೊಲೀಸರ ಗಸ್ತು ನಿರ್ವಹಣೆಗೆ ಮಿಷನ್ ಗನ್ ಹೊಂದಿರುವ ಮಾಡಿಫೈ ಸ್ಕಾರ್ಪಿಯೊ

ಅತಿಗಣ್ಯ ವ್ಯಕ್ತಿಗಳ ಭದ್ರತೆಗಾಗಿಯೂ ಸಹ ಈ ಕಾರುಗಳನ್ನು ಬಳಸಲಾಗುವುದರ ಜೊತೆಗೆ, ತುರ್ತು ಸಂಖ್ಯೆಯಾದ 100ರೊಂದಿಗೆ ಕನೆಕ್ಟ್ ಮಾಡಲಾಗುವುದು. ಮಹೀಂದ್ರಾದ ಈ ಕಾರುಗಳು ಬಹುಪಯೋಗಿ ಕಾರುಗಳಾಗಿರಲಿವೆ.

ಗುರುಗ್ರಾಮ ಪೊಲೀಸರ ಗಸ್ತು ನಿರ್ವಹಣೆಗೆ ಮಿಷನ್ ಗನ್ ಹೊಂದಿರುವ ಮಾಡಿಫೈ ಸ್ಕಾರ್ಪಿಯೊ

ಗುರುಗ್ರಾಮ ಪೊಲೀಸರು ಆಧುನಿಕ ಕಾರುಗಳನ್ನು ಹೊಂದುತ್ತಿರುವುದು ಇದು ಮೊದಲ ಬಾರಿಯಲ್ಲ. ಕಳೆದ ವರ್ಷ ಇದೇ ರೀತಿಯ ಹೊಸ ಆರು ಕಾರುಗಳನ್ನು ಗುರುಗ್ರಾಮ ಪೊಲೀಸ್ ಪಡೆಗೆ ಸೇರಿಸಲಾಗಿತ್ತು. ಈ ಕಾರುಗಳನ್ನು ಎನ್‍‍ಜಿ‍ಒ ವೊಂದು ಗುರುಗ್ರಾಮ ಪೊಲೀಸರಿಗೆ ನೀಡಿತ್ತು.

ಗುರುಗ್ರಾಮ ಪೊಲೀಸರ ಗಸ್ತು ನಿರ್ವಹಣೆಗೆ ಮಿಷನ್ ಗನ್ ಹೊಂದಿರುವ ಮಾಡಿಫೈ ಸ್ಕಾರ್ಪಿಯೊ

ಈ ಕಾರುಗಳನ್ನು ಸೊಸೈಟಿ ಫಾರ್ ಸೇಫ್ ಗುರುಗ್ರಾಮ ಎಂಬ ಯೋಜನೆಯಡಿಯಲ್ಲಿ ನೀಡಲಾಗಿತ್ತು. ಈ ಕಾರುಗಳನ್ನು ಗುರುಗ್ರಾಮ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಗುರುಗ್ರಾಮ ನಗರದಾದ್ಯಂತ ಬಳಸುತ್ತಿದ್ದಾರೆ.

Most Read Articles

Kannada
English summary
Gurugram Police receives modified Mahindra Scorpio. Read in Kannada.
Story first published: Monday, February 17, 2020, 14:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X