ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು

ಹರಿಯಾಣದ ಗುರುಗ್ರಾಮದಲ್ಲಿ ಕಳೆದ ಮೂರು ತಿಂಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ರೂ.6.12 ಕೋಟಿ ದಂಡ ವಿಧಿಸಲಾಗಿದೆ. ಗುರುಗ್ರಾಮದಲ್ಲಿ ಸಂಚಾರ ಉಲ್ಲಂಘನೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಗುರುಗ್ರಾಮ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು

ಗುರುಗ್ರಾಮ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಓವರ್ ಲೋಡ್ ಹೊಂದಿದ್ದ ಹಾಗೂ ನಿಯಮ ಉಲ್ಲಂಘಿಸಿ ಚಲಿಸುತ್ತಿದ್ದ ಪ್ರಯಾಣಿಕರ ವಾಹನಗಳನ್ನು ಪತ್ತೆಹಚ್ಚಲು ವಿಶೇಷ ಕಾರ್ಯಾಚರಣೆಯನ್ನು ನಡೆಸಿದರು. ಈ ಕಾರ್ಯಾಚರಣೆಯಲ್ಲಿ ನಿಯಮ ಉಲ್ಲಂಘಿಸಿದ ವಾಹನಗಳಿಗೆ ಸ್ಥಳದಲ್ಲಿಯೇ ದಂಡ ವಿಧಿಸಲಾಯಿತು.

ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು

ಈ ಬಗ್ಗೆ ಮಾತನಾಡಿರುವ ಅಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು, ಕಳೆದ ಮೂರು ತಿಂಗಳಿನಿಂದ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಗುರುಗ್ರಾಮದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ರಸ್ತೆ ಸುರಕ್ಷತೆಯ ಬಗ್ಗೆ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನೂ ಸಹ ಆರಂಭಿಸಿದ್ದಾರೆ. ಈ ಅಭಿಯಾನವು ಫೆಬ್ರವರಿ 17ರವರೆಗೆ ನಡೆಯಲಿದೆ.

ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು

ಎಲ್ಲಾ ವಾಹನ ಸವಾರರಿಗೂ ಸಂಚಾರ ನಿಯಮಗಳ ಬಗ್ಗೆ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಹಿಂದಿರುವ ಉದ್ದೇಶ. ವಾಹನ ಸವಾರರಲ್ಲಿ ಜಾಗೃತಿ ಮೂಡುವುದರಿಂದ ರಸ್ತೆ ಅಪಘಾತಗಳ ಪ್ರಮಾಣ ಕಡಿಮೆಯಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು

ಓವರ್‌ಲೋಡ್ ಆಗಿರುವ ವಾಹನಗಳು ಹಾಗೂ ಸರಿಯಾಗಿ ಕಾರ್ಯನಿರ್ವಹಿಸದ ಪ್ರಯಾಣಿಕರ ವಾಹನಗಳನ್ನು ವಶಪಡಿಸಿಕೊಂಡು ಚಾಲಕರ ಪರವಾನಗಿಯನ್ನು ಮೂರು ತಿಂಗಳವರೆಗೆ ಅಮಾನತುಗೊಳಿಸಲಾಗುವುದೆಂದು ಎಂದು ಅಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು

ಅನೇಕ ವಾಹನ ಸವಾರರು ವಾಹನಗಳಲ್ಲಿ ಓವರ್‌ಲೋಡ್ ಮಾಡುವುದರಿಂದ ಆಗುವ ಅಪಾಯಗಳ ಬಗ್ಗೆ ತಿಳಿದಿಲ್ಲ. ಓವರ್‌ಲೋಡ್ ಮಾಡುವುದರಿಂದ ವಾಹನವು ಹೆಚ್ಚು ಇಂಧನವನ್ನು ಬಳಸಬೇಕಾಗುತ್ತದೆ. ಓವರ್‌ಲೋಡ್'ನಿಂದಾಗಿ ವಾಹನದ ಪ್ರಮುಖ ಭಾಗಗಳಲ್ಲಿ ಹಲವಾರು ಸಮಸ್ಯೆಗಳು ಕಂಡು ಬರುತ್ತವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು

ವಿಶೇಷವಾಗಿ ಟಯರ್‌, ಸಸ್ಪೆಂಷನ್ ಹಾಗೂ ಎಂಜಿನ್‌ನಂತಹ ಪ್ರಮುಖ ಭಾಗಗಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಇದರಿಂದಾಗಿ ವಾಹನಗಳ ಜೀವಿತಾವಧಿ ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಓವರ್‌ಲೋಡ್ ಮಾಡದಿದ್ದರೆ ವಾಹನದ ಜೀವಿತಾವಧಿ ಹಾಗೂ ಮೈಲೇಜ್ ಹೆಚ್ಚಾಗುವ ಸಾಧ್ಯತೆಗಳಿವೆ.

ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು

ಭಾರತದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles
 

Kannada
English summary
Gurugram RTO officials impose Rs.6.12 crore fine on motorists for violating traffic rules. Read in Kannada.
Story first published: Thursday, January 21, 2021, 10:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X