ಮಾರ್ಚ್ 30ರಿಂದ ಮಾರಾಟವಾಗಲಿದೆ ಹರ್ಬಲ್ ಪೆಟ್ರೋಲ್..!

ತಮಿಳುನಾಡಿನ ರಾಮರ್ ಪಿಳ್ಳೈರವರು ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಇವರು ಗಿಡಮೂಲಿಕೆಗಳಿಂದ ಪೆಟ್ರೋಲ್ ತಯಾರಿಸಿರುವುದಾಗಿ ಹೇಳಿಕೊಂಡಿದ್ದರು. ಇವರ ಈ ಹೇಳಿಕೆಯು ತಮಿಳುನಾಡಿನ ವಾಹನ ಸವಾರರಲ್ಲಿ ಹೆಚ್ಚು ನಿರೀಕ್ಷೆಯನ್ನು ಜೊತೆಗೆ ವಿವಾದವನ್ನು ಹುಟ್ಟಿ ಹಾಕಿದೆ.

ಮಾರ್ಚ್ 30ರಿಂದ ಮಾರಾಟವಾಗಲಿದೆ ಹರ್ಬಲ್ ಪೆಟ್ರೋಲ್..!

ತಮಿಳುನಾಡಿನಲ್ಲಿ ಈ ಹರ್ಬಲ್ ಪೆಟ್ರೋಲ್ ಕುರಿತು ವಿಭಿನ್ನ ಅಭಿಪ್ರಾಯಗಳಿವೆ. ಕೆಲವರು ಹರ್ಬಲ್ ಪೆಟ್ರೋಲ್ ಅನ್ನು ಸ್ವಾಗತಿಸಿದರೆ, ಇನ್ನೂ ಕೆಲವರು ಇದನ್ನು ಟೀಕಿಸುತ್ತಿದ್ದಾರೆ. ಈಗ ರಾಮರ್ ಪಿಳ್ಳೈರವರು ನೀಡಿರುವ ಹೇಳಿಕೆಯು ಜನರ ಗಮನವನ್ನು ಅವರತ್ತ ಸೆಳೆದಿದೆ.

ಮಾರ್ಚ್ 30ರಿಂದ ಮಾರಾಟವಾಗಲಿದೆ ಹರ್ಬಲ್ ಪೆಟ್ರೋಲ್..!

ಸುಪ್ರೀಂ ಕೋರ್ಟ್ ಆದೇಶದ ನಂತರ ರಾಮರ್ ಪಿಳ್ಳೈರವರು ಈ ಹರ್ಬಲ್ ಪೆಟ್ರೋಲ್ ಮಾರಾಟವನ್ನು ಆರಂಭಿಸಿದ್ದಾರೆ. ಈ ಹರ್ಬಲ್ ಪೆಟ್ರೋಲ್ ಅನ್ನು ಈಗಾಗಲೇ ಚೆನ್ನೈನಲ್ಲಿ ಮಾರಾಟ ಮಾಡಲಾಗುತ್ತಿದೆ. ಜನವರಿ 29ರಿಂದ ಈ ಗಿಡಮೂಲಿಕೆ ಪೆಟ್ರೋಲ್ ಅನ್ನು ಮಾರಾಟ ಮಾಡಲಾಗುತ್ತಿದೆ.

ಮಾರ್ಚ್ 30ರಿಂದ ಮಾರಾಟವಾಗಲಿದೆ ಹರ್ಬಲ್ ಪೆಟ್ರೋಲ್..!

ಆದರೆ ದಿನಕ್ಕೇ ಕೇವಲ 150 ಲೀಟರ್ ಪೆಟ್ರೋಲ್ ಅನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಈ ಹರ್ಬಲ್ ಪೆಟ್ರೋಲ್‍‍ನ ಬೆಲೆ ಪ್ರತಿ ಲೀಟರಿಗೆ ರೂ.30ಗಳಾಗಿದೆ. ಈ ಮಾರಾಟದ ಯಶಸ್ಸಿನಿಂದ ಉತ್ತೇಜಿತರಾಗಿರುವ ರಾಮರ್ ಪಿಳ್ಳೈರವರು ತಮಿಳುನಾಡಿನಾದ್ಯಂತ ಈ ಹರ್ಬಲ್ ಪೆಟ್ರೋಲ್ ಅನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

ಮಾರ್ಚ್ 30ರಿಂದ ಮಾರಾಟವಾಗಲಿದೆ ಹರ್ಬಲ್ ಪೆಟ್ರೋಲ್..!

ಫೆಬ್ರವರಿ 27ರಿಂದ ವಿರುದ್ದ‍ನಗರ್, ಥೆಣಿ, ಮಧುರೈ ಹಾಗೂ ತೆಂಕಣಿಗಳಲ್ಲಿ ಈ ಹರ್ಬಲ್ ಪೆಟ್ರೋಲ್ ಮಾರಾಟವನ್ನು ಆರಂಭಿಸಲಾಗುವುದು. ಹರ್ಬಲ್ ಪೆಟ್ರೋಲ್ ಅನ್ನು ಮಾರಾಟ ಮಾಡಲು ಏಜೆಂಟರುಗಳನ್ನು ನೇಮಿಸಲಾಗಿದೆ.

ಮಾರ್ಚ್ 30ರಿಂದ ಮಾರಾಟವಾಗಲಿದೆ ಹರ್ಬಲ್ ಪೆಟ್ರೋಲ್..!

ರಾಜಪಲೈನಲ್ಲಿ ನಡೆದ ಸಮಾರಂಭದಲ್ಲಿ ಏಜೆಂಟರುಗಳನ್ನು ನೇಮಿಸಲಾಗಿದೆ. ಈ ಸಮಾರಂಭದಲ್ಲಿ ರಾಮರ್ ಪಿಳ್ಳೈರವರು ಸಹ ಭಾಗವಹಿಸಿದ್ದರು. ಸಮಾರಂಭದ ನಂತರ ಮಾತನಾಡಿದ ರಾಮರ್ ಪಿಳ್ಳೈರವರು ಅನೇಕ ಸಂಗತಿಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ಮಾರ್ಚ್ 30ರಿಂದ ಮಾರಾಟವಾಗಲಿದೆ ಹರ್ಬಲ್ ಪೆಟ್ರೋಲ್..!

ಹರ್ಬಲ್ ಪೆಟ್ರೋಲ್ ಅನ್ನು ಮಾರಾಟ ಮಾಡದಂತೆ ಯಾರೂ ತಡೆಯುವಂತಿಲ್ಲವೆಂದು ಕೋರ್ಟ್ ಆದೇಶ ನೀಡಿದೆ ಎಂದು ಅವರು ಹೇಳಿದರು. ಈ ಗಿಡಮೂಲಿಕೆಯ ಪೆಟ್ರೋಲ್‍‍‍ನಿಂದ ವಾಹನಗಳ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ.

ಮಾರ್ಚ್ 30ರಿಂದ ಮಾರಾಟವಾಗಲಿದೆ ಹರ್ಬಲ್ ಪೆಟ್ರೋಲ್..!

ಈ ಪೆಟ್ರೋಲ್‍‍ನಿಂದ ಚಲಿಸುವ ದ್ವಿ ಚಕ್ರ ವಾಹನಗಳು ಪ್ರತಿ ಲೀಟರಿಗೆ 80 ಕಿ.ಮೀ ಮೈಲೇಜ್ ನೀಡುತ್ತವೆ. ಕನ್ಯಾಕುಮಾರಿಯಲ್ಲಿ ಪ್ರತಿದಿನ 15,000 ಲೀಟರ್ ಹರ್ಬಲ್ ಪೆಟ್ರೋಲ್ ಉತ್ಪಾದಿಸಲು ದೊಡ್ಡ ಉತ್ಪಾದನಾ ಘಟಕವನ್ನು ಆರಂಭಿಸಲಾಗಿದೆ.

ಮಾರ್ಚ್ 30ರಿಂದ ಮಾರಾಟವಾಗಲಿದೆ ಹರ್ಬಲ್ ಪೆಟ್ರೋಲ್..!

ತಮಿಳುನಾಡಿನಾದ್ಯಂತ ಈ ಪೆಟ್ರೋಲ್ ಮಾರಾಟ ಮಾಡಲು ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದ್ದು, ಮಾರ್ಚ್ 30ರಿಂದ ತಮಿಳುನಾಡಿನಾದ್ಯಂತ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ಹರ್ಬಲ್ ಪೆಟ್ರೋಲ್‍‍ನ ಬೆಲೆ ಪ್ರತಿ ಲೀಟರಿಗೆ ರೂ.30ಗಳಾದರೆ, ಪ್ರತಿ ಲೀಟರ್ ಡೀಸೆಲ್‍‍ನ ಬೆಲೆ ರೂ.24ಗಳಾಗಲಿದೆ ಎಂದು ರಾಮರ್ ಪಿಳ್ಳೈರವರು ಹೇಳಿದರು.

Most Read Articles

Kannada
English summary
Herbal Petrol will be available throughout Tamil Nadu from March 30. Read in Kannada.
Story first published: Monday, February 24, 2020, 10:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X