ಪೆಟ್ರೋಲ್ ಬದಲಿಗೆ ಕೋಕಾಕೋಲಾ ತುಂಬಿಸಿದ ಭೂಪ- ಮುಂದೇನಾಯ್ತು?

By Manoj B.k

ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಹುತೇಕ ದ್ವಿಚಕ್ರ ವಾಹನಗಳು ಪೆಟ್ರೋಲ್ ಎಂಜಿನ್ ಸಹಾಯದಿಂದ ಚಲಿಸುತ್ತಿರುವುದು ಎಂದು ನಮಗೆಲ್ಲಾ ತಿಳಿದೇ ಇದೆ. ಜೊತೆಗೆ ದೇಶದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳು ಕೂಡಾ ಬಿಡುಗಡೆಯಾಗುತ್ತಿದ್ದು, ಪೆಟ್ರೋಲ್ ಎಂಜಿನ್ ಬೈಕ್‌ಗಳಿಗೆ ಟಕ್ಕರ್ ನೀಡುವುದಕ್ಕೆ ಸಜ್ಜಾಗುತ್ತಿವೆ. ಹೀಗಿರುವಾಗ ಇಲ್ಲೊಬ್ಬ ಅಸಾಮಿ ಕೋಕಾಕೋಲಾದಿಂದ ಬೈಕ್ ಚಾಲನೆ ಮಾಡುವ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾನೆ.

ಪೆಟ್ರೋಲ್ ಬದಲಿಗೆ ಕೋಕಾ ಕೋಲಾ ತುಂಬಿಸಿದ ಭೂಪ. ಮುಂದೇನಾಯ್ತು.?

ವಾಹನಗಳ ಇಂಧನಗಳ ಬೆಲೆ ಕಡಿತಗೊಳಿಸುವುದಕ್ಕೆ ಜಗತ್ತಿನಾದ್ಯಂತ ಹಲವು ಹೊಸ ಇಂಧನ ಮಾದರಿಗಳನ್ನು ಪತ್ತೆಹಚ್ಚಲು ಹತ್ತಾರು ಸಂಶೋಧನೆಗಳು ನಡೆಯುತ್ತಿದ್ದು, ಇಲ್ಲೊಬ್ಬ ಯುವಕ ಮಾತ್ರ ಒಂದು ಸಾಧಾರಣ ಕೂಲ್ ಡ್ರಿಂಕ್‍ನಿಂದಲೂ ಬೈಕ್ ಚಾಲನೆ ಮಾಡಬಹುದಾ ಎನ್ನುವ ಕುರಿತು ಹೊಸ ಸಂಶೋಧನೆಗೆ ಕೈ ಹಾಕಿದ್ದಾನೆ. ಹಾಗಾದ್ರೆ ಆ ಯುವಕನ ಐಡಿಯಾ ವರ್ಕೌಟ್ ಆಯ್ತಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ..

ಪೆಟ್ರೋಲ್ ಬದಲಿಗೆ ಕೋಕಾ ಕೋಲಾ ತುಂಬಿಸಿದ ಭೂಪ. ಮುಂದೇನಾಯ್ತು.?

ಈ ವಿಡಿಯೋನಲ್ಲಿ ಬಳಸಲಾದ ಬೈಕ್ ಹೀರೋ ಹೋಂಡಾ ಗ್ಲಾಮರ್. ಮೊದಲಿಗೆ ಈತ ತನ್ನ ಬೈಕಿನಲ್ಲಿದ್ದ ಕೊನೆಯ ಹನಿಯವರೆಗು ಪೆಟ್ರೋಲ್ ಅನ್ನು ಹೊರತೆಗೆದು ಫ್ಯುಯೆಲ್ ಟ್ಯಾಂಕ್‍ನಲ್ಲಿಕೋಕಾಕೋಲಾ ತುಂಬಿಸಿದ್ದ. ನಂತರ ಬೈಕ್ ಸ್ಟಾರ್ಟ್ ಆಯಿತು. ಆದ್ರೆ ಕೋಕಾಕೋಲ ಬೈಕ್ ಎಂಜಿನ್‌ಗೆ ಸಹಕರಿಸುತ್ತಾ ಎನ್ನುವುದೇ ಎಲ್ಲರ ಮನದ ಪ್ರಶ್ನೆ.

ಉತ್ತರ ಇಲ್ಲಿದೆ ನೋಡಿ..

ಈತ ಮಾಡಿದ ಈ ಸಂಶೋಧನೆಯಿಂದ ಬಂದ ಉತ್ತರ ಏನೆಂದರೆ, ಕೋಕಾಕೋಲಾದಿಂದ ಬೈಕ್ ಚಲಾಯಿಸಲು ಸಾಧ್ಯವೇ ಇಲ್ಲವೆಂಬುವುದು. ನೀವು ವಿಡಿಯೋ ಗಮನಿಸಿದ್ದಲ್ಲಿ ಬೈಕ್ ಶುರುವಾಗಿ ಕೆಲ ದೂರ ಮಾತ್ರವೇ ಸಾಗುತ್ತೆ. ಇದು ಹೇಗೆಂದರೆ ಪೆಟ್ರೋಲ್ ಎಲ್ಲವನ್ನು ಹೊರ ತೆಗೆದ ನಂತರ ಕಾರ್ಬೋರೆಟರ್‍‍ನಲ್ಲಿದ್ದ ಪೆಟ್ರೋಲ್‍ನ ಸಹಾಯದಿಂದ. ಆದ್ರೂ ಪೆಟ್ರೋಲ್‍‍ಗೆ ಅದರದ್ದೆ ಆದ ಕೆಲ ಗುಣಗಳನ್ನು ಹೊಂದಿರುತ್ತೆ. ಅವುಗಳ ಸ್ಥಾನವನ್ನು ಪಡೆಯಲು ಬೇರೆ ಯಾವ ಅನೀಲಕ್ಕು ಸಾಧ್ಯವಿಲ್ಲ ಎಂದು ತಿಳಿಯುತ್ತೆ.

ಪೆಟ್ರೋಲ್ ಬದಲಿಗೆ ಕೋಕಾ ಕೋಲಾ ತುಂಬಿಸಿದ ಭೂಪ. ಮುಂದೇನಾಯ್ತು.?

ಭಾರತೀಯ ಸೇನೆಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಈ ಬೈಕ್ ವಿಶೇಷ ಏನು ಗೊತ್ತಾ?

ಭಾರತೀಯ ಸೇನಗಾಗಿ ಟಾಟಾ ಮೋಟಾರ್ಸ್ ತಮ್ಮ ಸಫಾರಿ ಸ್ಟೋರ್ಮ್ ಕಾರನ್ನು ತಯಾರಿಸಿ ನೀಡುತ್ತಿರುವ ಬಗ್ಗೆ ನಾವು ಈಗಾಗಲೇ ತಿಳಿದಿದ್ದೇವೆ. ಆದ್ರೆ ಸೇನೆಯಲ್ಲಿ ಬಳಸಲಾಗುತ್ತಿರವ ದ್ವಿಚಕ್ರ ವಾಹನಗಳು ಕಡಿಮೆ ಶಕ್ತಿಶಾಲಿಯಾದ ಕಾರಣ ಚತ್ತೀಸ್‍ಗಢ್‍ನ ಯುವಕನೊಬ್ಬ 800ಸಿಸಿ ಸಾಮರ್ಥ್ಯವಿರುವ ವಿಶೇಷ ಬೈಕ್ ಒಂದನ್ನ ತಯಾರು ಮಾಡಿದ್ದಾನೆ.

ಪೆಟ್ರೋಲ್ ಬದಲಿಗೆ ಕೋಕಾ ಕೋಲಾ ತುಂಬಿಸಿದ ಭೂಪ. ಮುಂದೇನಾಯ್ತು.?

ಪ್ರಸ್ತುತ ಭಾರತೀಯ ಸೇನೆಯಲ್ಲಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ 350ಸಿಸಿ ಮತ್ತು 500ಸಿಸಿ ಬೈಕ್‍ಗಳನ್ನು ಬಳಸಲಾಗುತ್ತಿದ್ದು, ಅಮೆರಿಕನ್ ಸೇನೆಯು ಹೆಚ್ಚು ಸಾಮರ್ಥ್ಯವಿರುವ ಯುನೈಟೆಡ್ ಮೋಟಾರ್ಸ್‍ನ ಮತ್ತು ಹಾರ್ಲೇ ಡೇವಿಡ್ಸನ್ ಸಂಸ್ಥೆಯ ಅಧಿಕ ಸಾಮರ್ಥ್ಯವಿರುವ ಬೈಕ್‍ಗಳನ್ನು ಬಳಸುತ್ತಿದ್ದಾರೆ.

ಪೆಟ್ರೋಲ್ ಬದಲಿಗೆ ಕೋಕಾ ಕೋಲಾ ತುಂಬಿಸಿದ ಭೂಪ. ಮುಂದೇನಾಯ್ತು.?

ಈ ನಿಟ್ಟಿನಲ್ಲಿ ಚತ್ತೀಸ್‍ಗಢ್‍ನಲ್ಲಿನ ರಾಯ್‍ಪುರ್ ನಿವಾಸಿಯಾದ ವೈಭವ್ ಭಾಜ್‍ಪೇ ಎಂಬ ಯುವಕ ಮಾರುತಿ ಆಲ್ಟೋ ಕಾರಿನಲ್ಲಿರುವ 800ಸಿಸಿಯನ್ನು ಎಂಜಿನ್ ಬಳಸಿ ಹೊಸ ಬೈಕ್ ಒಂದನ್ನು ತಯಾರು ಮಾಡಿದ್ದಾನೆ. ಇಂದಿನ ಲೇಖನದಲ್ಲಿ ಈ ಬೈಕಿನ ಕುರಿತಾಗಾಗಿ ಹೆಚ್ಚು ಮಾಹಿತಿಯನ್ನು ತಿಳಿಯಿರಿ. ಸುಮಾರು 18 ತಿಂಗಳ ಕಾಲ ಪ್ರಯತ್ನದ ಫಲವಾಗಿ ವೈಭವ್ ಭಾಜ್‍ಪೇ ಎಂಬ ಯುವಕ ಭಾರತೀಯ ಸೇನೆಗಾಗಿ ವಿಶೇಷವಾದ ಬೈಕ್ ಒಂದನ್ನು ತಯಾರು ಮಾಡಲಾಗಿದ್ದು, ಈ ಬೈಕ್‍ಗೆ ಅಮರ್ ಜವಾನ್ ಎಂದು ಆತ ಹೆಸರಿಟ್ಟಿದ್ದಾನೆ.

ಪೆಟ್ರೋಲ್ ಬದಲಿಗೆ ಕೋಕಾ ಕೋಲಾ ತುಂಬಿಸಿದ ಭೂಪ. ಮುಂದೇನಾಯ್ತು.?

ಈ ಅಮರ್ ಜವಾನ್ ಬೈಕ್ ನೋಡಲು ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದ್ದು, ಬೈಕಿನ ಮುಂಭಾಗದಲ್ಲಿ ಸೈನಿಕನ ಮುಖದ ವಿನ್ಯಾಸದ ಮಾದರಿಯಲ್ಲಿ ಹೆಡ್‍ಲ್ಯಾಂಪ್‍ಗಳು ಮತ್ತು ಸಣ್ಣದಾದ ವಿಂಡ್‍ಶೀಲ್ಡ್ ನ ಮೇಲೆ 'ಅಮರ್ ಜವಾನ್' ಎಂಬ ಹೆಸರನ್ನು ಅಳವಡಿಸಲಾಗಿದೆ. ಸುಮಾರು 24 ರಿಂದ 27 ಲೀಟರ್ ಪೆಟ್ರೋಲ್ ಅನ್ನು ತುಂಬಲಾಗುವ ಈ ಬೈಕ್‍ನಲ್ಲಿ 800ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಇದು ಪ್ರತಿ ಕಿಲೋಮೀಟರ್‍‍ಗೆ 22 ರಿಂದ 27 ಕಿಲೋಮೀಟರ್ ಮೈಲೇಜ್ ನೀಡುವ ಹಾಗೆ ಈ ಬೈಕ್ ಅನ್ನು ತಯಾರು ಮಾಡಿದ್ದಾನೆ.

ಪೆಟ್ರೋಲ್ ಬದಲಿಗೆ ಕೋಕಾ ಕೋಲಾ ತುಂಬಿಸಿದ ಭೂಪ. ಮುಂದೇನಾಯ್ತು.?

ಬೈಕ್‍ಗಳ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೇ, ಹಿಂಭಾಗದಲ್ಲಿ ಡಬಲ್ ಕ್ಯಾಲಿಪರ್ ಡಿಸ್ಕ್ ಬ್ರೇಕ್ ಮತ್ತು ಮುಂಭಾಗದಲ್ಲಿ ಕೂಡಾ ಡಬಲ್ ಕ್ಯಾಲಿಪರ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಫಾರ್ವಡ್ 4 ಗೇರ್‍‍ಗಳು ಮತ್ತು 4 ರಿವರ್ಸ್‍ ಗೇರ್ ಅಂದರೆ ಒಟ್ಟಾರೆಯಾಗಿ 8 ಗೇರ್‍‍ಗಳನ್ನು ಬದಲಾಯಿಸಬಹುದಾಗಿದೆ. ಅಮರ್ ಜವಾನ್ ಬೈಕಿನಲ್ಲಿ ಬಹುತೇಕ ವಾಹನಗಳಲ್ಲಿ ಕಾಣಬಹುದಾದ ಹಳದಿ ಬಣ್ಣದ ಪೆಯಿಂಟ್ ಸ್ಕೀಮ್ ಅನ್ನು ಈ ಬೈಕಿಗೆ ಬಳಸಲಾಗಿದೆ. ಸುಮಾರು 450 ಕಿಲೋಗ್ರಾಂ ತೂಕವಿರುವ ಈ ಬೈಕ್ ಜಿಪಿಎಸ್ ಮತ್ತು ಬ್ಲೂಟೂಥ್ ಕನೆಕ್ಟಿವಿಟಿ ಎಂಬ ಆಯ್ಕೆಗಳನ್ನು ಸಹ ಅಳವಡಿಸಲಾಗಿದೆ.

Source: India Today Social

Most Read Articles

Kannada
English summary
Hero Honda Glamour Bikes Fuel Tank Filled With Coca Cola. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X