ಇಲ್ಲಿ ಇದ್ದವರಿಗೆ ಒಂದು ಕಾನೂನು.. ಇಲ್ಲದವರಿಗೆ ಇನ್ನೊಂದು ಕಾನೂನು..

ಕಾನೂನುಗಳು ಎಲ್ಲರಿಗೂ ಒಂದೇ ಆಗಿರಬೇಕು. ಹಾಗಾದರೇ ಮಾತ್ರ ಜನಕ್ಕೆ ಈ ಬಗ್ಗೆ ಭಯವಿರುತ್ತೆ. ಇಲ್ಲವಾದ್ರೆ ಅದು ಹೇಗೆ ಕಾನೂನು ಅನ್ನಿಸಿಕೊಳ್ಳುತ್ತೆ ಹೇಳಿ.

By Praveen Sannamani

ಕಾನೂನುಗಳು ಎಲ್ಲರಿಗೂ ಒಂದೇ ಆಗಿರಬೇಕು. ಹಾಗಾದರೆ ಮಾತ್ರ ಜನರಿಗೆ ಈ ಬಗ್ಗೆ ಭಯವಿರುತ್ತೆ. ಇಲ್ಲವಾದ್ರೆ ಅದು ಹೇಗೆ ಕಾನೂನು ಅನ್ನಿಸಿಕೊಳ್ಳುತ್ತೆ ಹೇಳಿ? ಇದಕ್ಕೆ ಸ್ಪಷ್ಟ ಉದಾಹರಣೆ ಅಂದ್ರೆ, ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿರುವ ಕರ್ನಾಟಕ ಹೈಕೋರ್ಟ್ ಸೇವೆಯಲ್ಲಿರುವ ಕಾರಿನ ಚಿತ್ರಗಳು.

ಇಲ್ಲಿ ಇದ್ದರಿಗೆ ಒಂದು ಕಾನೂನು.. ಇಲ್ಲವರಿಗೆ ಇನ್ನೊಂದು ಕಾನೂನು..

ಹೌದು. ಕಳೆದ 2 ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಟೊಯೊಟಾ ಇನೋವಾ ಕಾರೊಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನೋ ಪಾರ್ಕಿಂಗ್‌ನಲ್ಲೇ ಕಾರು ನಿಲ್ಲಿಸಲಾಗಿದ್ದು, ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಯಾವುದೇ ರೀತಿ ಕ್ರಮಕೈಗೊಳ್ಳದಿರುವುದು ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ.

ಇಲ್ಲಿ ಇದ್ದರಿಗೆ ಒಂದು ಕಾನೂನು.. ಇಲ್ಲವರಿಗೆ ಇನ್ನೊಂದು ಕಾನೂನು..

ಬೆಂಗಳೂರಿನ ಪ್ರತಿಷ್ಠಿತ ಎಂಜಿ ರೋಡ್‌ನಲ್ಲೇ ಈ ಪ್ರಕರಣ ನಡೆದಿದ್ದು, ಮಹಾತ್ಮಾ ಗಾಂಧಿ ಮೆಟ್ರೋ ನಿಲ್ದಾಣ ಮುಂದಿರುವ ನೋ ಪಾರ್ಕಿಂಗ್ ಬೋರ್ಡ್ ಮುಂದೆಯೇ ಕೆಎ-01 ಜಿ-6093 ನೋಂದಣಿಯ ಟೊಯೊಟಾ ಇನೋವಾ ಕಾರನ್ನು ಪಾರ್ಕ್ ಮಾಡಲಾಗಿತ್ತು.

ಇಲ್ಲಿ ಇದ್ದರಿಗೆ ಒಂದು ಕಾನೂನು.. ಇಲ್ಲವರಿಗೆ ಇನ್ನೊಂದು ಕಾನೂನು..

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಈ ರೀತಿ ಕಾನೂನು ಉಲ್ಲಂಘನೆ ಮಾಡಿರುವುದು ಯಾರೋ ಜನಸಾಮಾನ್ಯರಲ್ಲ. ಬದಲಾಗಿ ರಾಜ್ಯ ಹೈಕೋರ್ಟ್ ಸೇವೆಯಲ್ಲಿರುವ ಕಾರು ಕಾನೂನು ಉಲ್ಲಂಘನೆ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಕಾರಣವಾಗಿದೆ.

ಇಲ್ಲಿ ಇದ್ದರಿಗೆ ಒಂದು ಕಾನೂನು.. ಇಲ್ಲವರಿಗೆ ಇನ್ನೊಂದು ಕಾನೂನು..

ಜೊತೆಗೆ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ವಾಹನದ ಬಗ್ಗೆ ಅಲ್ಲಿಯೇ ಇದ್ದ ಟ್ರಾಫಿಕ್ ಪೊಲೀಸರಿಗೆ ಕೆಲವರು ಮಾಹಿತಿ ನೀಡಿದ್ದು, ಆಗಲೂ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರು ಹಾರಿಕೆ ಉತ್ತರ ನೀಡುತ್ತಿರುವ ವಿಡಿಯೋ ಒಂದು ಕೂಡಾ ಇದೀಗ ವೈರಲ್ ಆಗಿದೆ.

ಇಲ್ಲಿ ಇದ್ದರಿಗೆ ಒಂದು ಕಾನೂನು.. ಇಲ್ಲವರಿಗೆ ಇನ್ನೊಂದು ಕಾನೂನು..

ವಿಡಿಯೋದಲ್ಲಿನ ಹೇಳಿಕೆ ಪ್ರಕಾರ ಉನ್ನತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ತಮಗೆ ಅನುಮತಿ ಇಲ್ಲ ಎಂದಿದ್ದಾರೆ. ಇದರಿಂದಾಗಿ ಕೆಲಕಾಲ ಸಾರ್ವಜನಿಕರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ಕೂಡಾ ನಡೆದಿದೆ.

ಇಲ್ಲಿ ಇದ್ದರಿಗೆ ಒಂದು ಕಾನೂನು.. ಇಲ್ಲವರಿಗೆ ಇನ್ನೊಂದು ಕಾನೂನು..

ಇದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇನೋವಾ ಕಾರಿನ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದ್ದರೂ, ಅವರು ಸಹ ಈ ಬಗ್ಗೆ ಜಾಣ ಮೌನ ವಹಿಸಿದ್ದಾರೆ. ಅದೇ ರೀತಿ ಯಾರಾದ್ರು ಜನಸಾಮಾನ್ಯರು ಮಾಡಿದ್ರೆ ಇರೋ ಬರೋ ಕೇಸ್‌ಗಳನ್ನು ಹಾಕಿ ದಂಡ ವಸೂಲಿ ಮಾಡುತ್ತಿದ್ರು ಎನ್ನವುದು ಸಾರ್ವಜನಿಕ ಅಭಿಪ್ರಾಯವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01. ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೊಸ ರೂಲ್ಸ್..!!

02. ರಸ್ತೆ ನಿಯಮ ಉಲ್ಲಂಘಿಸುವರಿಗೆ ಕಾದಿದೆ ಮಾರಿಹಬ್ಬ- ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ಗೊತ್ತಾ?

03. 127 ಬಾರಿ ಓವರ್ ಸ್ಪೀಡ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಈ ಕಾರಿಗೆ ಬಿದ್ದ ದಂಡ ಎಷ್ಟು ಗೊತ್ತಾ?

04. ಗ್ರಾಹಕರೇ ಎಚ್ಚರ !! ಮೋಸ ಮಾಡ್ತಾರೆ ಪೆಟ್ರೋಲ್ ಬಂಕ್ ಸಿಬ್ಬಂದಿ...

05. ಭೀಕರ ಅಪಘಾತದಲ್ಲಿ ಫಾರ್ಚೂನರ್ ಪುಡಿ ಪುಡಿ- ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರು..!!

Most Read Articles

Kannada
Read more on traffic police bengaluru
English summary
High Court Vehicle Parked in No Parking Area at MG Road Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X