ಕಳುವಾದ ಕಾರನ್ನು ಎಂಟು ತಿಂಗಳ ನಂತರ ಮರಳಿ ಪಡೆದ ಕವಿ

ಕವಿ ಹಾಗೂ ಸದ್ಯಕ್ಕೆ ರಾಜಕೀಯದಲ್ಲಿ ಸಕ್ರಿಯರಾಗಿರುವ ವ್ಯಕ್ತಿಯೊಬ್ಬರಿಗೆ ಸೇರಿದ ಐಷಾರಾಮಿ ಕಾರನ್ನು ವಾಹನಗಳ್ಳರಿಂದ ವಶಕ್ಕೆ ಪಡೆಯಲಾಗಿದೆ. ಕಳುವಾದ ಎಂಟು ತಿಂಗಳ ಬಳಿಕ ಪೊಲೀಸರು ಈ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಕಳುವಾದ ಕಾರನ್ನು ಎಂಟು ತಿಂಗಳ ನಂತರ ಮರಳಿ ಪಡೆದ ಕವಿ

ನೆಚ್ಚಿನ ಕಾರನ್ನು ಕಳೆದು ಕೊಂಡು ಆಘಾತದಲ್ಲಿದ್ದ ಹಿಂದಿ ಕವಿ ಕುಮಾರ್ ವಿಶ್ವಾಸ್, ಕಾರು ಸಿಕ್ಕ ನಂತರ ಖುಷಿಯಾಗಿದ್ದಾರೆ. ಕುಮಾರ್ ವಿಶ್ವಾಸ್ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ ಶಿಕ್ಷಕರಾಗಿ, ಆಮ್ ಆದ್ಮಿ ಪಕ್ಷದ ಕಾರ್ಯನಿರ್ವಾಹಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಕಳುವಾದ ಕಾರನ್ನು ಎಂಟು ತಿಂಗಳ ನಂತರ ಮರಳಿ ಪಡೆದ ಕವಿ

ಕುಮಾರ್ ವಿಶ್ವಾಸ್ ಉತ್ತರ ಪ್ರದೇಶದ ಗಾಜಿಯಾಬಾದ್ ನ ವಸುಂಧರಾ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರು ಫೆಬ್ರವರಿ 15ರಂದು ತಮ್ಮ ಮನೆಯ ಹೊರಗೆ ನಿಲ್ಲಿಸಿದ್ದ ಟೊಯೊಟಾ ಫಾರ್ಚೂನರ್ ಕ್ಯಾರಿ ಕಾರನ್ನು ಕಳುವು ಮಾಡಲಾಗಿತ್ತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಳುವಾದ ಕಾರನ್ನು ಎಂಟು ತಿಂಗಳ ನಂತರ ಮರಳಿ ಪಡೆದ ಕವಿ

ದೂರು ದಾಖಲಿಸಿಕೊಂಡಿದ್ದ ಗಾಜಿಯಾಬಾದ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು. ಕಾರು ಕಳುವಾದ 8 ತಿಂಗಳ ಬಳಿಕ ಫಾರ್ಚೂನರ್ ಕಾರನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಕಾರನ್ನು ಕಳವು ಮಾಡಿದ್ದ ನಾಲ್ಕು ಜನರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ಕಳುವಾದ ಕಾರನ್ನು ಎಂಟು ತಿಂಗಳ ನಂತರ ಮರಳಿ ಪಡೆದ ಕವಿ

ಕಾರು ಕಳ್ಳರನ್ನು ಅಮೀರ್ ಅಲಿಯಾಸ್ ಕಾಮಿಲ್, ಮೊಮಿನ್ ಅಲಿಯಾಸ್ ಮೊಹಮ್ಮದ್ ಕಲ್ಲು, ಆರಿಫ್ ಅಲಿಯಾಸ್ ಕಲಾ ಹಾಗೂ ನಾಶಿಬುದ್ದೀನ್ ಅಲಿಯಾಸ್ ನಶಾಬೊಯೆನ್ ಎಂದು ಗುರುತಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಳುವಾದ ಕಾರನ್ನು ಎಂಟು ತಿಂಗಳ ನಂತರ ಮರಳಿ ಪಡೆದ ಕವಿ

ಕುಮಾರ್ ವಿಸ್ವಾಸ್ ಅವರ ಕಾರಿನ ಜೊತೆಗೆ ಕಳುವು ಮಾಡಲಾಗಿದ್ದ ಮಾರುತಿ ಸ್ವಿಫ್ಟ್ ಮತ್ತು ಫಾರ್ಚೂನರ್ ಎಸ್‌ಯುವಿಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ಗನ್ ಹಾಗೂ ಸೆಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಕಳುವಾದ ಕಾರನ್ನು ಎಂಟು ತಿಂಗಳ ನಂತರ ಮರಳಿ ಪಡೆದ ಕವಿ

ಈ ಗ್ಯಾಂಗ್ ಕದ್ದ ಕಾರುಗಳನ್ನು ಮಾರಾಟ ಮಾಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಇದಕ್ಕಾಗಿ ಈ ಕಾರುಗಳ ನಕಲಿ ಚಾಸಿಸ್ ನಂಬರ್ ಹಾಗೂ ನಕಲಿ ಎಂಜಿನ್ ನಂಬರ್ ಗಳನ್ನು ಸಿದ್ಧಪಡಿಸಲಾಗಿತ್ತು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಳುವಾದ ಕಾರನ್ನು ಎಂಟು ತಿಂಗಳ ನಂತರ ಮರಳಿ ಪಡೆದ ಕವಿ

ಈ ಬಗ್ಗೆ ಗೌಪ್ಯ ಮಾಹಿತಿ ಪಡೆದ ಪೊಲೀಸರು ವಾಹನಗಳ್ಳರನ್ನು ಬಂಧಿಸಿದ್ದಾರೆ. ಇದರ ಜೊತೆಗೆ ಈ ಗ್ಯಾಂಗ್ ನಿಂದ ವಾಹನಗಳಿಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳುವಾದ ಕಾರನ್ನು ಎಂಟು ತಿಂಗಳ ನಂತರ ಮರಳಿ ಪಡೆದ ಕವಿ

ಈ ಗ್ಯಾಂಗ್ ಕಳುವು ಮಾಡಿದ ವಾಹನಗಳನ್ನು ಮಾರಾಟ ಮಾಡಲು ಆಧುನಿಕ ತಂತ್ರಗಳನ್ನು ಬಳಸುತ್ತಿತ್ತು. ಇದಕ್ಕಾಗಿ ಅಪಘಾತಕ್ಕೀಡಾಗಿರುವ ಅಥವಾ ಅನುಪಯುಕ್ತ ವಾಹನಗಳ ದಾಖಲೆಯನ್ನು ಪಡೆಯಲಾಗುತ್ತಿತ್ತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಳುವಾದ ಕಾರನ್ನು ಎಂಟು ತಿಂಗಳ ನಂತರ ಮರಳಿ ಪಡೆದ ಕವಿ

ನಂತರ ವಾಹನಗಳನ್ನು ಕಳವು ಮಾಡಲಾಗುತ್ತಿತ್ತು. ಕದ್ದ ವಾಹನದ ಚಾಸಿಸ್ ನಂಬರ್ ಹಾಗೂ ಇನ್ನಿತರ ವಸ್ತುಗಳನ್ನು ಅವರ ಬಳಿ ಇರುವ ದಾಖಲೆಗಳ ಪ್ರಕಾರ ಬದಲಾಯಿಸಲಾಗುತ್ತದೆ.

ಕಳುವಾದ ಕಾರನ್ನು ಎಂಟು ತಿಂಗಳ ನಂತರ ಮರಳಿ ಪಡೆದ ಕವಿ

ಈ ಎಲ್ಲಾ ಕಾರ್ಯಗಳನ್ನು ಮಾಡಿದ ನಂತರ ಕದ್ದ ಕಾರುಗಳನ್ನು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ವಾಹನಗಳನ್ನು ಅವುಗಳ ಮಾಲೀಕರು ಸಹ ಗುರುತಿಸಲು ಸಾಧ್ಯವಾಗದ ರೀತಿಯಲ್ಲಿ ಬದಲಿಸಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಳುವಾದ ಕಾರನ್ನು ಎಂಟು ತಿಂಗಳ ನಂತರ ಮರಳಿ ಪಡೆದ ಕವಿ

ಈ ಕಾರಣಕ್ಕಾಗಿಯೇ ವಾಹನ ಕಳ್ಳತನ ಪ್ರಕರಣಗಳನ್ನು ಭೇದಿಸಲು ಪೊಲೀಸರು ಹೆಣಗಾಡುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಕುಮಾರ್ ವಿಶ್ವಾಸ್ ಅವರ ಐಷಾರಾಮಿ ಕಾರನ್ನು 8 ತಿಂಗಳ ನಂತರ ವಶಕ್ಕೆ ಪಡೆದಿರುವುದು ಆಶ್ಚರ್ಯವನ್ನುಂಟು ಮಾಡಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Hindi poet turned politician gets back stolen car after 8 months. Read in Kannada.
Story first published: Tuesday, October 20, 2020, 10:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X