Just In
- 18 min ago Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
- 1 hr ago ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- 2 hrs ago Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- 2 hrs ago ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
Don't Miss!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
635 ಕೇಸ್ಗಳಿರುವ ಸ್ಕೂಟರಿನ ಕಥೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ.!
ಕೆಲವೊಮ್ಮೆ ಅವರಸದಲ್ಲೊ ಅಥವಾ ಗೊತ್ತಿಲ್ಲದೆಯೋ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಆಗುವುದು ಕಾಮನ್.
ಕೆಲವೊಮ್ಮೆ ಅವರಸದಲ್ಲೊ ಅಥವಾ ಗೊತ್ತಿಲ್ಲದೆಯೋ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಆಗುವುದು ಕಾಮನ್. ಆದರೂ ಅದು ತಪ್ಪು ತಪ್ಪೇ. ಆದ್ರೆ ಇಲ್ಲೊಬ್ಬ ಮಹಾನುಭಾವ ತಾನು ಮಾಡುತ್ತಿರುವುದು ತಪ್ಪು ಅಂತಾ ಗೊತ್ತಿದ್ದರೂ 635 ಬಾರಿ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿರುವುದಲ್ಲದೇ ತನ್ನ ವಾಹನದ ಬೆಲೆಗಿಂತಲೂ ಹೆಚ್ಚಿನ ಮೊತ್ತದ ದಂಡ ಜಡಿಸಿಕೊಂಡಿದ್ದಾನೆ ಅಂದ್ರೆ ನೀವು ನಂಬಲೇಬೇಕು.
ಹೌದು, ಪ್ರಯಾಣಿಕರ ಸುರಕ್ಷತೆಗಾಗಿ ಟ್ರಾಫಿಕ್ ಪೊಲೀಸರು ಕಠಿಣ ಸಂಚಾರಿ ನಿಯಮಗಳನ್ನ ಜಾರಿ ಮಾಡಿದ್ದರೂ ಕೆಲವರಿಗೆ ಅದು ಅರ್ಥವಾಗುವುದೇ ಇಲ್ಲ. ಇಲ್ಲೊಬ್ಬ ಸ್ಕೂಟರ್ ಸವಾರನೊಬ್ಬ ಕೂಡಾ ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿದ್ದು, ಹೆಲ್ಮೆಟ್ ರಹಿತ ಬೈಕ್ ಸವಾರಿ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಸೇರಿದಂತೆ ಬರೋಬ್ಬರಿ 635 ಕೇಸ್ಗಳನ್ನು ಜಡಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಅಂದಹಾಗೆ ಈ ಘಟನೆ ನಡೆದಿರುವುದು ಬೇರೆ ಯಾವುದೋ ರಾಜ್ಯದಲ್ಲಿ ಅಲ್ಲ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಘಟನೆ ನಡೆದಿದ್ದು, ಸ್ಕೂಟರ್ ಸವಾರನಿಗೆ ಹಾಕಲಾಗಿರುವ ದಂಡದ ಮೊತ್ತ ಎಷ್ಟು ಅಂತಾ ಕೇಳಿದರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ. ಯಾಕಂದ್ರೆ ದಂಡದ ಮೊತ್ತ ಆತನ ಸ್ಕೂಟರ್ ಬೆಲೆಗಿಂತಲೂ ಹೆಚ್ಚು.
ಕಳೆದ ಎರಡು ದಿನಗಳ ಹಿಂದಷ್ಟೇ ಸಂಚಾರಿ ಪೊಲೀಸರು ವಾಹನಗಳ ತಪಾಸಣೆ ವೇಳೆ ಸಿಕ್ಕಿಬಿದ್ದ ಹೋಂಡಾ ಆಕ್ಟೀವ್ ಸ್ಕೂಟರ್ ಮೇಲೆ ಬರೋಬ್ಬರಿ 635 ಪ್ರಕರಣಗಳಿರುವುದು ಪತ್ತೆಯಾಗಿದ್ದು, ಸ್ಕೂಟರ್ ಮೇಲೆ ಇರುವ ಪ್ರಕರಣಗಳ ಪಟ್ಟಿ ನೋಡಿದ ಸಂಚಾರಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.
ಮೈಸೂರಿನ ಮಧುಪ್ರಸಾದ್ ಕೆ ಎಂಬುವರಿಗೆ ಸೇರಿದ ಹೋಂಡಾ ಆಕ್ಟೀವಾ ವಾಹನದ ನೋಂದಣಿ ಸಂಖ್ಯೆಯನ್ನು ಮೊಬೈಲ್ನಲ್ಲಿ ಅಪ್ಡೇಟ್ ಮಾಡುತ್ತಿದ್ದಂತೆ ಬರೋಬ್ಬರಿ 635 ಪ್ರಕರಣಗಳು ದಾಖಲಾಗಿರೋದು ಬೆಳಕಿಗೆ ಬಂತು. ಅಲ್ಲದೇ, ಈ ಪ್ರಕರಣಗಳ ದಂಡದ ಒಟ್ಟು ಮೊತ್ತ ಕೇವಲ ರೂ. 63,500 ಮಾತ್ರವಂತೆ.
ದಂಡ ವಸೂಲಿಗೆ ಪೊಲೀಸರ ಹರಸಾಹಸ
ಇನ್ನು ಮೈಸೂರಿನಲ್ಲಿ ವಶಕ್ಕೆ ಪಡೆಯಲಾಗಿರುವ ಈ ಸ್ಕೂಟರ್ ಅತಿ ಹೆಚ್ಚು ನಿಯಮ ಉಲ್ಲಂಘನೆ ಮಾಡಿರುವ ವಾಹನ ಎಂದು ಗುರುತಿಸಲಾಗಿದ್ದು, ಇದನ್ನು ಮಾರಾಟ ಮಾಡಿದರೂ ಅಷ್ಟು ಹಣ ಸಿಗುವುದಿಲ್ಲ ಎಂಬುವುದು ಪೊಲೀಸರಿಗೆ ಖಾತ್ರಿಯಾಗಿ ಹೋಗಿದೆ.
ಹೀಗಾಗಿ ದಂಡ ವಸೂಲಾತಿಗೆ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುವ ಪೊಲೀಸರಿಗೆ ಸ್ಕೂಟರ್ ಅನ್ನು ಹಾರಾಜು ಹಾಕಬೇಕೋ ಅಥವಾ ಆರೋಪಿಯಿಂದಲೇ ನೇರವಾಗಿ ದಂಡ ವಸೂಲಿ ಮಾಡಬೇಕೋ ಎಂಬ ಗೊಂದಲದಲ್ಲಿದ್ದಾರೆ.
ನಂಗೆ ಸ್ಕೂಟರ್ ಬೇಡವೇ ಬೇಡ..!
ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಾ ಕ್ಷಣವೇ ಎಚ್ಚೇತ್ತುಕೊಂಡ ಸ್ಕೂಟರ್ ಮಾಲೀಕ ಮಧುಕುಮಾರ್ ರೂ. 63,500 ರೂ. ಪಾವತಿ ಮಾಡಲೇಬೇಕು ಎಂದಾಗ ಸ್ಕೂಟರ್ ಅನ್ನು ಪೊಲೀಸರ ಬಳಿಯೇ ಬಿಟ್ಟು ಹೋಗಿದ್ದಾನೆ. ನನ್ನ ಬಳಿ ದಂಡ ಪಾವತಿಸಲು ಹಣವೇ ಇಲ್ಲ ಹೀಗಾಗಿ ಸ್ಕೂಟರ್ ನೀವೇ ಇಟ್ಟುಕೊಳ್ಳಿ ಎಂದು ಹೊರಟುಹೋಗಿದ್ದಾನೆ.
ಇನ್ನು ವಶಕ್ಕೆ ಪಡೆಯಾಗಿರುವ ಸ್ಕೂಟರ್ ಅನ್ನು ಹರಾಜಿಗಿಟ್ಟರೂ ದಂಡದ ಮೊತ್ತವನ್ನು ಮರುಪಾವತಿ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಹೀಗಾಗಿ ಮೈಸೂರು ನಗರದ ಪೊಲೀಸರು ಈ ಕೇಸ್ನ ಬಗ್ಗೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಯೋಚಿಸುತ್ತಿದ್ದಾರೆ.
ಒಂದು ವೇಳೆ ಸ್ಕೂಟರ್ ಅನ್ನು ಹರಾಜಿಗಿಟ್ಟರೂ ಸುಮಾರು 20 ರಿಂದ 25 ಸಾವಿರ ತನಕ ಮಾರಾಟವಾಗುವುದು ಕಷ್ಟ. ಯಾಕೆಂದ್ರೆ ಈ ಸ್ಕೂಟರ್ ಅನ್ನು ಮಧುಪ್ರಸಾದ್ ಮಾರ್ಚ್ 2015ರಲ್ಲಿ ಖರೀದಿ ಮಾಡಿದ್ದು, ಸ್ಕೂಟರ್ ಖರೀದಿಸಿದಾಗ ಒಂದೇ ಒಂದು ಬಾರಿ ಈ ಸ್ಕೂಟರ್ ವಿಮೆ ಮಾಡಿಸಲಾಗಿತ್ತು. ಅಲ್ಲಿಂದ ಯಾವುದೇ ವಿಮೆ ಕೂಡಾ ಮಾಡಿಸಿಲ್ಲ.
ಇದರಿಂದ ವಿಮೆ ಇಲ್ಲದೇ ಈ ಸ್ಕೂಟರ್ ಅನ್ನು ಪೊಲೀಸರು ಕೂಡಾ ಮಾರಾಟ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಮಾರಾಟ ಮಾಡಲೇಬೇಕು ಅಂದಾದರೇ ಸಂಚಾರಿ ಪೊಲೀಸರೇ ತಮ್ಮ ಜೇಬಿನಿಂದ ಹಣ ಹಾಕಿ ವಿಮೆ ಮಾಡಿಸಿದ ನಂತರವೇ ಇದನ್ನು ಹರಾಜು ಹಾಕಬೇಕಾದ ಪರಿಸ್ಥಿತಿ ಇದೆ. ಒಟ್ಟಿನಲ್ಲಿ 635 ಕೇಸ್ಗಳು ಆಗುವ ತನಕವೂ ಸಮ್ಮನೆ ಇದ್ದ ಪೊಲೀಸರಿಗೆ ಇದೀಗ ಸ್ಕೂಟರ್ ಸಿಕ್ಕಿಬಿದ್ದಿರುವುದು ಕೂಡಾ ದಂಡ ವಸೂಲಿ ಮಾಡುವುದೇ ಸವಾಲಾಗಿ ಪರಿಣಮಿಸಿದೆ.