635 ಕೇಸ್‌ಗಳಿರುವ ಸ್ಕೂಟರಿನ ಕಥೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ.!

ಕೆಲವೊಮ್ಮೆ ಅವರಸದಲ್ಲೊ ಅಥವಾ ಗೊತ್ತಿಲ್ಲದೆಯೋ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಆಗುವುದು ಕಾಮನ್.

By Rahul Ts

ಕೆಲವೊಮ್ಮೆ ಅವರಸದಲ್ಲೊ ಅಥವಾ ಗೊತ್ತಿಲ್ಲದೆಯೋ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಆಗುವುದು ಕಾಮನ್. ಆದರೂ ಅದು ತಪ್ಪು ತಪ್ಪೇ. ಆದ್ರೆ ಇಲ್ಲೊಬ್ಬ ಮಹಾನುಭಾವ ತಾನು ಮಾಡುತ್ತಿರುವುದು ತಪ್ಪು ಅಂತಾ ಗೊತ್ತಿದ್ದರೂ 635 ಬಾರಿ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿರುವುದಲ್ಲದೇ ತನ್ನ ವಾಹನದ ಬೆಲೆಗಿಂತಲೂ ಹೆಚ್ಚಿನ ಮೊತ್ತದ ದಂಡ ಜಡಿಸಿಕೊಂಡಿದ್ದಾನೆ ಅಂದ್ರೆ ನೀವು ನಂಬಲೇಬೇಕು.

635 ಕೇಸ್‌ಗಳಿರುವ ಸ್ಕೂಟರಿನ ಕಥೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ.!

ಹೌದು, ಪ್ರಯಾಣಿಕರ ಸುರಕ್ಷತೆಗಾಗಿ ಟ್ರಾಫಿಕ್ ಪೊಲೀಸರು ಕಠಿಣ ಸಂಚಾರಿ ನಿಯಮಗಳನ್ನ ಜಾರಿ ಮಾಡಿದ್ದರೂ ಕೆಲವರಿಗೆ ಅದು ಅರ್ಥವಾಗುವುದೇ ಇಲ್ಲ. ಇಲ್ಲೊಬ್ಬ ಸ್ಕೂಟರ್ ಸವಾರನೊಬ್ಬ ಕೂಡಾ ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿದ್ದು, ಹೆಲ್ಮೆಟ್​ ರಹಿತ ಬೈಕ್ ಸವಾರಿ, ಸಿಗ್ನಲ್​ ಜಂಪ್​, ನೋ ಪಾರ್ಕಿಂಗ್​ ಸೇರಿದಂತೆ ಬರೋಬ್ಬರಿ 635 ಕೇಸ್‌ಗಳನ್ನು ಜಡಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

635 ಕೇಸ್‌ಗಳಿರುವ ಸ್ಕೂಟರಿನ ಕಥೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ.!

ಅಂದಹಾಗೆ ಈ ಘಟನೆ ನಡೆದಿರುವುದು ಬೇರೆ ಯಾವುದೋ ರಾಜ್ಯದಲ್ಲಿ ಅಲ್ಲ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಘಟನೆ ನಡೆದಿದ್ದು, ಸ್ಕೂಟರ್ ಸವಾರನಿಗೆ ಹಾಕಲಾಗಿರುವ ದಂಡದ ಮೊತ್ತ ಎಷ್ಟು ಅಂತಾ ಕೇಳಿದರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ. ಯಾಕಂದ್ರೆ ದಂಡದ ಮೊತ್ತ ಆತನ ಸ್ಕೂಟರ್ ಬೆಲೆಗಿಂತಲೂ ಹೆಚ್ಚು.

635 ಕೇಸ್‌ಗಳಿರುವ ಸ್ಕೂಟರಿನ ಕಥೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ.!

ಕಳೆದ ಎರಡು ದಿನಗಳ ಹಿಂದಷ್ಟೇ ಸಂಚಾರಿ ಪೊಲೀಸರು ವಾಹನಗಳ ತಪಾಸಣೆ ವೇಳೆ ಸಿಕ್ಕಿಬಿದ್ದ ಹೋಂಡಾ ಆಕ್ಟೀವ್​ ಸ್ಕೂಟರ್ ಮೇಲೆ ಬರೋಬ್ಬರಿ 635 ಪ್ರಕರಣಗಳಿರುವುದು ಪತ್ತೆಯಾಗಿದ್ದು, ಸ್ಕೂಟರ್ ಮೇಲೆ ಇರುವ ಪ್ರಕರಣಗಳ ಪಟ್ಟಿ ನೋಡಿದ ಸಂಚಾರಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.

635 ಕೇಸ್‌ಗಳಿರುವ ಸ್ಕೂಟರಿನ ಕಥೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ.!

ಮೈಸೂರಿನ ಮಧುಪ್ರಸಾದ್ ಕೆ ಎಂಬುವರಿಗೆ ಸೇರಿದ ಹೋಂಡಾ ಆಕ್ಟೀವಾ ವಾಹನದ ನೋಂದಣಿ ಸಂಖ್ಯೆಯನ್ನು ಮೊಬೈಲ್‌ನಲ್ಲಿ ಅಪ್‌ಡೇಟ್ ಮಾಡುತ್ತಿದ್ದಂತೆ ಬರೋಬ್ಬರಿ 635 ಪ್ರಕರಣಗಳು ದಾಖಲಾಗಿರೋದು ಬೆಳಕಿಗೆ ಬಂತು. ಅಲ್ಲದೇ, ಈ ಪ್ರಕರಣಗಳ ದಂಡದ ಒಟ್ಟು ಮೊತ್ತ ಕೇವಲ ರೂ. 63,500 ಮಾತ್ರವಂತೆ.

635 ಕೇಸ್‌ಗಳಿರುವ ಸ್ಕೂಟರಿನ ಕಥೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ.!

ದಂಡ ವಸೂಲಿಗೆ ಪೊಲೀಸರ ಹರಸಾಹಸ

ಇನ್ನು ಮೈಸೂರಿನಲ್ಲಿ ವಶಕ್ಕೆ ಪಡೆಯಲಾಗಿರುವ ಈ ಸ್ಕೂಟರ್ ಅತಿ ಹೆಚ್ಚು ನಿಯಮ ಉಲ್ಲಂಘನೆ ಮಾಡಿರುವ ವಾಹನ ಎಂದು ಗುರುತಿಸಲಾಗಿದ್ದು, ಇದನ್ನು ಮಾರಾಟ ಮಾಡಿದರೂ ಅಷ್ಟು ಹಣ ಸಿಗುವುದಿಲ್ಲ ಎಂಬುವುದು ಪೊಲೀಸರಿಗೆ ಖಾತ್ರಿಯಾಗಿ ಹೋಗಿದೆ.

635 ಕೇಸ್‌ಗಳಿರುವ ಸ್ಕೂಟರಿನ ಕಥೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ.!

ಹೀಗಾಗಿ ದಂಡ ವಸೂಲಾತಿಗೆ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುವ ಪೊಲೀಸರಿಗೆ ಸ್ಕೂಟರ್ ಅನ್ನು ಹಾರಾಜು ಹಾಕಬೇಕೋ ಅಥವಾ ಆರೋಪಿಯಿಂದಲೇ ನೇರವಾಗಿ ದಂಡ ವಸೂಲಿ ಮಾಡಬೇಕೋ ಎಂಬ ಗೊಂದಲದಲ್ಲಿದ್ದಾರೆ.

635 ಕೇಸ್‌ಗಳಿರುವ ಸ್ಕೂಟರಿನ ಕಥೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ.!

ನಂಗೆ ಸ್ಕೂಟರ್ ಬೇಡವೇ ಬೇಡ..!

ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಾ ಕ್ಷಣವೇ ಎಚ್ಚೇತ್ತುಕೊಂಡ ಸ್ಕೂಟರ್ ಮಾಲೀಕ ಮಧುಕುಮಾರ್ ರೂ. 63,500 ರೂ. ಪಾವತಿ ಮಾಡಲೇಬೇಕು ಎಂದಾಗ ಸ್ಕೂಟರ್ ಅನ್ನು ಪೊಲೀಸರ ಬಳಿಯೇ ಬಿಟ್ಟು ಹೋಗಿದ್ದಾನೆ. ನನ್ನ ಬಳಿ ದಂಡ ಪಾವತಿಸಲು ಹಣವೇ ಇಲ್ಲ ಹೀಗಾಗಿ ಸ್ಕೂಟರ್ ನೀವೇ ಇಟ್ಟುಕೊಳ್ಳಿ ಎಂದು ಹೊರಟುಹೋಗಿದ್ದಾನೆ.

635 ಕೇಸ್‌ಗಳಿರುವ ಸ್ಕೂಟರಿನ ಕಥೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ.!

ಇನ್ನು ವಶಕ್ಕೆ ಪಡೆಯಾಗಿರುವ ಸ್ಕೂಟರ್ ಅನ್ನು ಹರಾಜಿಗಿಟ್ಟರೂ ದಂಡದ ಮೊತ್ತವನ್ನು ಮರುಪಾವತಿ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಹೀಗಾಗಿ ಮೈಸೂರು ನಗರದ ಪೊಲೀಸರು ಈ ಕೇಸ್‍‍ನ ಬಗ್ಗೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಯೋಚಿಸುತ್ತಿದ್ದಾರೆ.

635 ಕೇಸ್‌ಗಳಿರುವ ಸ್ಕೂಟರಿನ ಕಥೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ.!

ಒಂದು ವೇಳೆ ಸ್ಕೂಟರ್ ಅನ್ನು ಹರಾಜಿಗಿಟ್ಟರೂ ಸುಮಾರು 20 ರಿಂದ 25 ಸಾವಿರ ತನಕ ಮಾರಾಟವಾಗುವುದು ಕಷ್ಟ. ಯಾಕೆಂದ್ರೆ ಈ ಸ್ಕೂಟರ್ ಅನ್ನು ಮಧುಪ್ರಸಾದ್ ಮಾರ್ಚ್ 2015ರಲ್ಲಿ ಖರೀದಿ ಮಾಡಿದ್ದು, ಸ್ಕೂಟರ್ ಖರೀದಿಸಿದಾಗ ಒಂದೇ ಒಂದು ಬಾರಿ ಈ ಸ್ಕೂಟರ್‍ ವಿಮೆ ಮಾಡಿಸಲಾಗಿತ್ತು. ಅಲ್ಲಿಂದ ಯಾವುದೇ ವಿಮೆ ಕೂಡಾ ಮಾಡಿಸಿಲ್ಲ.

635 ಕೇಸ್‌ಗಳಿರುವ ಸ್ಕೂಟರಿನ ಕಥೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ.!

ಇದರಿಂದ ವಿಮೆ ಇಲ್ಲದೇ ಈ ಸ್ಕೂಟರ್ ಅನ್ನು ಪೊಲೀಸರು ಕೂಡಾ ಮಾರಾಟ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಮಾರಾಟ ಮಾಡಲೇಬೇಕು ಅಂದಾದರೇ ಸಂಚಾರಿ ಪೊಲೀಸರೇ ತಮ್ಮ ಜೇಬಿನಿಂದ ಹಣ ಹಾಕಿ ವಿಮೆ ಮಾಡಿಸಿದ ನಂತರವೇ ಇದನ್ನು ಹರಾಜು ಹಾಕಬೇಕಾದ ಪರಿಸ್ಥಿತಿ ಇದೆ. ಒಟ್ಟಿನಲ್ಲಿ 635 ಕೇಸ್‌ಗಳು ಆಗುವ ತನಕವೂ ಸಮ್ಮನೆ ಇದ್ದ ಪೊಲೀಸರಿಗೆ ಇದೀಗ ಸ್ಕೂಟರ್ ಸಿಕ್ಕಿಬಿದ್ದಿರುವುದು ಕೂಡಾ ದಂಡ ವಸೂಲಿ ಮಾಡುವುದೇ ಸವಾಲಾಗಿ ಪರಿಣಮಿಸಿದೆ.

Most Read Articles

Kannada
English summary
Honda activa with 635 violations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X