Just In
Don't Miss!
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು
ಭಾರತದ ರಸ್ತೆಗಳು ಅಪಾಯಗಳಿಂದ ಕೂಡಿರುತ್ತವೆ. ಈ ಕಾರಣಕ್ಕೆ ಪ್ರತಿ ದಿನ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಸಣ್ಣ ಕಾರಿಗೆ ದೊಡ್ಡ ಕಾರು ಗುದ್ದಿದಾಗ ಸಣ್ಣ ಕಾರಿಗೆ ಹಾನಿಯಾಗುವುದು ಸಹಜ. ಆದರೆ ಇತ್ತೀಚಿಗೆ ವಿಶಿಷ್ಟವಾದ ಘಟನೆಯೊಂದು ನಡೆದಿದೆ.

ಕೇರಳದಲ್ಲಿ ನಡೆದಿದೆ ಎಂದು ಹೇಳಲಾದ ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಎರಡು ಹೋಂಡಾ ಸಿಟಿ ಕಾರುಗಳ ನಡುವೆ ನ್ಯಾನೊ ಕಾರು ಸಿಲುಕಿಕೊಂಡಿರುವುದನ್ನು ಕಾಣಬಹುದು. ಮುಂದೆ ಸಾಗುತ್ತಿದ್ದ ಹ್ಯುಂಡೈ ಸ್ಯಾಂಟ್ರೊ ಕಾರು ಸ್ಪೀಡ್ ಬ್ರೇಕರ್ ಕಾರಣದಿಂದಾಗಿ ತನ್ನ ವೇಗವನ್ನು ಕಡಿಮೆಗೊಳಿಸಿದೆ. ಈ ಕಾರಣಕ್ಕೆ ಸ್ಯಾಂಟ್ರೊ ಕಾರಿನ ಹಿಂದಿದ್ದ ಹೋಂಡಾ ಸಿಟಿ ಕೂಡ ತನ್ನ ವೇಗವನ್ನು ಕಡಿಮೆಗೊಳಿಸಿದೆ.

ಹೋಂಡಾ ಸಿಟಿ ಕಾರಿನ ಹಿಂದೆ ಟಾಟಾ ನ್ಯಾನೋ ಕಾರು ಬರುತ್ತಿತ್ತು. ಅದರ ಹಿಂದೆ ವೇಗವಾಗಿ ಬಂದ ಹೋಂಡಾ ಸಿಟಿ ಕಾರು ಟಾಟಾ ನ್ಯಾನೊ ಕಾರಿಗೆ ಗುದ್ದಿದೆ. ಎಷ್ಟು ವೇಗವಾಗಿ ಗುದ್ದಿದೆ ಎಂದರೆ ನ್ಯಾನೋ ತನ್ನ ಮುಂದಿದ್ದ ಹೋಂಡಾ ಸಿಟಿ ಕಾರಿಗೆ ಅಪ್ಪಳಿಸಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಈ ಘಟನೆಯಲ್ಲಿ ಎರಡೂ ಹೋಂಡಾ ಸಿಟಿ ಕಾರುಗಳಿಗೆ ಹಾನಿಯಾಗಿದೆ. ನ್ಯಾನೋ ಹಿಂದಿದ್ದ ಹೋಂಡಾ ಸಿಟಿ ಕಾರಿನ ಮುಂಭಾಗದ ಬಂಪರ್ ಹಾಗೂ ಬೂಟ್ಲೋಡ್ ಗಳಿಗೆ ಹಾನಿಯಾಗಿದ್ದರೆ, ಮುಂದಿದ್ದ ಹೋಂಡಾ ಸಿಟಿ ಕಾರಿನ ಹಿಂಭಾಗದ ಬಂಪರ್ ಗೆ ಹಾನಿಯಾಗಿದೆ.

ಆಶ್ಚರ್ಯಕರ ಸಂಗತಿಯೆಂದರೆ ಈ ಎರಡು ಕಾರುಗಳ ನಡುವೆ ಸಿಲುಕಿದ್ದ ಟಾಟಾ ನ್ಯಾನೊ ಕಾರಿಗೆ ಯಾವುದೇ ಹಾನಿ ಸಂಭವಿಸಿಲ್ಲ. ನಂಬರ್ ಪ್ಲೇಟಿಗೆ ಮಾತ್ರ ಸ್ವಲ್ಪ ಪ್ರಮಾಣದ ಹಾನಿಯಾಗಿದೆ. ಟಾಟಾ ಮೋಟಾರ್ಸ್ನ ನ್ಯಾನೋ ಕಾರು ಎಷ್ಟು ಬಲಿಷ್ಟವಾಗಿದೆ ಎಂಬುದು ಈ ಘಟನೆಯಿಂದ ತಿಳಿಯುತ್ತದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಘಟನೆಗೆ ನ್ಯಾನೋ ಕಾರಿನ ಹಿಂದಿದ್ದ ಹೋಂಡಾ ಸಿಟಿ ಕಾರು ಚಾಲಕನ ಅಜಾಗರೂಕತೆಯೇ ಕಾರಣ ಎಂಬುದು ಸ್ಪಷ್ಟವಾಗಿದೆ. ಆತ ಕಾರಿನ ವೇಗವನ್ನು ನಿಧಾನಗೊಳಿಸುವ ಬದಲು, ಮತ್ತಷ್ಟು ಹೆಚ್ಚಿಸಿದ್ದಾನೆ. ಆತನ ಗಮನವು ಬೇರೆಡೆಯಿರುವ ಸಾಧ್ಯತೆಗಳಿವೆ.

ಅವನು ಬ್ರೇಕ್ ಹಾಕುವ ಬದಲು ಆಕ್ಸಲರೇಟ್ ಒತ್ತಿದ ಕಾರಣಕ್ಕೆ ಮುಂದಿದ್ದ ನ್ಯಾನೋ ಕಾರಿಗೆ ಗುದ್ದಿದ್ದಾನೆ. ಭಾರತದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ನಮ್ಮ ದೇಶದ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸುವುದಿಲ್ಲ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ.
MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು
ಎರಡು ಹೋಂಡಾ ಸಿಟಿ ಕಾರುಗಳ ನಡುವೆ ಟಾಟಾ ನ್ಯಾನೋ ಕಾರಿನ ಬದಲಿಗೆ ಬೇರೊಂದು ಕಾರು ಇದ್ದಿದ್ದರೆ, ಬಾರಿ ಅನಾಹುತಗಳಾಗುವ ಸಾಧ್ಯತೆಗಳಿದ್ದವು. ಈ ಘಟನೆಯಲ್ಲಿ ಟಾಟಾ ನ್ಯಾನೋ ಕಾರಿಗೆ ಹೆಚ್ಚು ಹಾನಿಯಾಗಿಲ್ಲ.

ಟಾಟಾ ಮೋಟಾರ್ಸ್ ಕಾರುಗಳು ಸುರಕ್ಷತೆಗೆ ಹೆಸರುವಾಸಿಯಾಗಿವೆ. ಟಾಟಾ ಆಲ್ಟ್ರೋಜ್, ಟಾಟಾ ನೆಕ್ಸಾನ್ ನಂತಹ ಕಾರುಗಳು ದೇಶದ ಸುರಕ್ಷಿತ ಕಾರುಗಳು ಎಂಬ ಹೆಗ್ಗಳಿಕೆಯನ್ನು ಪಡೆದಿವೆ. ಟಾಟಾ ಮೋಟಾರ್ಸ್ ಕಂಪನಿಯು ತನ್ನ ಕಾರುಗಳನ್ನು ಬಲಿಷ್ಟವಾಗಿ ನಿರ್ಮಿಸುವುದರ ಜೊತೆಗೆ ಕಾರುಗಳಲ್ಲಿ ಹಲವಾರು ಸುರಕ್ಷತಾ ಸಾಧನಗಳನ್ನು ನೀಡುತ್ತಿದೆ.