ಪ್ರವಾಹ ಪೀಡಿತ ಕೇರಳಕ್ಕೆ ಹೋಂಡಾ ಸಂಸ್ಥೆಯು ನೀಡಿದ ದೇಣಿಗೆ ಎಷ್ಟು ಗೊತ್ತಾ?

By Praveen Sannamani

ಪ್ರಕೃತಿಯ ವಿಕೋಪಕ್ಕೆ ಸಿಕ್ಕ ನರಳಿದ ಕೇರಳ ಇದೀಗ ಅಕ್ಷರಶಃ ಕಂಗಾಲಾಗಿದೆ. ಭೀಕರ ಮಳೆ, ಪ್ರವಾಹಕ್ಕೆ ದೇವರನಾಡು ಕೇರಳ ನಲುಗಿ ಹೋಗಿದ್ದು, ಎಷ್ಟೋ ಜನರು ಪ್ರಾಣ, ಎಷ್ಟೋ ಜನರು ಮನೆ, ಆಸ್ತಿ ಎಲ್ಲವನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಹೀಗಿರುವಾಗ ದೇಶದ ಜನಪ್ರಿಯ ಆಟೋ ಉತ್ಪಾದನಾ ಸಂಸ್ಥೆಗಳು ಸಹ ಕೇರಳ ಜನತೆಯ ನೆರವಿಗೆ ಬಂದಿದ್ದು, ಪುನರ್ ವಸತಿಗಾಗಿ ಹಣಕಾಸಿನ ನೆರವು ನೀಡುತ್ತಿವೆ.

ಪ್ರವಾಹ ಪೀಡಿತ ಕೇರಳಕ್ಕೆ ಹೋಂಡಾ ಸಂಸ್ಥೆಯು ನೀಡಿದ ದೇಣಿಗೆ ಎಷ್ಟು ಗೊತ್ತಾ?

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕೋರಿಕೆ ಹಿನ್ನೆಲೆಯಲ್ಲಿ ನೆರವಿನ ಮಹಾಪೂರವೇ ಹರಿದು ಬರುತ್ತಿದ್ದು, ಸಂಘ ಸಂಸ್ಥೆಗಳು ಸೇರಿದಂತೆ ಜನಸಾಮಾನ್ಯರು ಸಹ ತಮ್ಮ ಕಷ್ಟದ ಪರಿಸ್ಥಿತಿಯಲ್ಲೂ ತಮಗಾದಷ್ಟು ನೆರವು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇದರ ಮಧ್ಯೆ ಆಟೋ ಉತ್ಪಾದನಾ ಸಂಸ್ಥೆಗಳು ಸಹ ದೊಡ್ಡ ಮೊತ್ತದ ಪರಿಹಾರವನ್ನು ನೀಡುತ್ತಿದ್ದು, ಈಗಾಗಲೇ ಹಲವು ಆಟೋ ಉತ್ಪಾದನಾ ಸಂಸ್ಥೆಗಳು ಪರಿಹಾರ ಮೊತ್ತದ ಚೆಕ್ ಅನ್ನು ಸಂತ್ರಸ್ತರ ನಿಧಿಗೆ ದೇಣಿಗೆ ನೀಡಿವೆ.

ಪ್ರವಾಹ ಪೀಡಿತ ಕೇರಳಕ್ಕೆ ಹೋಂಡಾ ಸಂಸ್ಥೆಯು ನೀಡಿದ ದೇಣಿಗೆ ಎಷ್ಟು ಗೊತ್ತಾ?

ಇವುಗಳಲ್ಲಿ ಮುಖ್ಯವಾಗಿ ಹೋಂಡಾ ಇಂಡಿಯಾ, ಮಾರುತಿ ಸುಜುಕಿ, ಹ್ಯುಂಡೈ, ಮರ್ಸಿಡಿಸ್ ಬೆಂಝ್, ಟಿವಿಎಸ್, ಬಜಾಜ್ ಆಟೋ, ಟಾಟಾ ಮೋಟಾರ್ಸ್, ಫೋಕ್ಸ್‌ವ್ಯಾಗನ್, ಬಿಎಂಡಬ್ಲ್ಯು ಸಂಸ್ಥೆಗಳು ಕೇರಳ ಜನತೆಯ ಸಂಕಷ್ಟಕ್ಕೆ ನೆರವಾಗುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ.

ಪ್ರವಾಹ ಪೀಡಿತ ಕೇರಳಕ್ಕೆ ಹೋಂಡಾ ಸಂಸ್ಥೆಯು ನೀಡಿದ ದೇಣಿಗೆ ಎಷ್ಟು ಗೊತ್ತಾ?

ಹೋಂಡಾ ಇಂಡಿಯಾ ಸಂಸ್ಥೆಯು ಆಟೋ ಉತ್ಪಾದನಾ ಸಂಸ್ಥೆಗಳ ಪೈಕಿ ಅತಿ ಹೆಚ್ಚು ನೆರವು ನೀಡಿದ್ದು, ಬರೋಬ್ಬರಿ ರೂ.3 ಕೋಟಿ ಪರಿಹಾರ ನೀಡಿ ಮಾನವೀಯತೆ ಮೆರೆದಿದ್ದು, ಮಾರುತಿ ಸುಜುಕಿ ಸಂಸ್ಥೆಯು ಸಹ ರೂ.3.50 ಕೋಟಿ ಪರಿಹಾರ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರವಾಹ ಪೀಡಿತ ಕೇರಳಕ್ಕೆ ಹೋಂಡಾ ಸಂಸ್ಥೆಯು ನೀಡಿದ ದೇಣಿಗೆ ಎಷ್ಟು ಗೊತ್ತಾ?

ಮಾರುತಿ ಸುಜುಕಿ ಸಂಸ್ಥೆಯು ನೀಡಿರುವ ರೂ.3.50 ಕೋಟಿ ಪರಿಹಾರದಲ್ಲಿ ರೂ. 2 ಕೋಟಿ ಸಂಸ್ಥೆಯ ಪರವಾಗಿ ಮತ್ತು ರೂ. 1.50 ಕೋಟಿ ಉದ್ಯೋಗಿಗಳು ಮತ್ತು ಡೀಲರ್ಸ್ ಪರವಾಗಿ ನೆರವು ನೀಡಿದ್ದು, ಪ್ರಧಾನ ಮಂತ್ರಿಯವರ ಪ್ರಕೃತಿ ವಿಕೋಪ ನಿರ್ವಹಣಾ ನಿಧಿಗೆ ಈ ಹಣವನ್ನು ವರ್ಗಾವಣೆ ಮಾಡಲಾಗಿದೆ.

ಪ್ರವಾಹ ಪೀಡಿತ ಕೇರಳಕ್ಕೆ ಹೋಂಡಾ ಸಂಸ್ಥೆಯು ನೀಡಿದ ದೇಣಿಗೆ ಎಷ್ಟು ಗೊತ್ತಾ?

ಇದಾಗ ಬಳಿಕ ಬಜಾಜ್ ಆಟೋ ಸಂಸ್ಥೆಯಿಂದ ರೂ. 2 ಕೋಟಿ, ಹ್ಯುಂಡೈ ಇಂಡಿಯಾ ಸಂಸ್ಥೆಯಿಂದ ರೂ. 1 ಕೋಟಿ ಮತ್ತು ಟಿವಿಎಸ್ ಸಂಸ್ಥೆಯ ಕಡೆಯಿಂದ ರೂ. 1 ಕೋಟಿ ಪರಿಹಾರ ಹರಿದು ಬಂದಿದ್ದು, ಇನ್ನುಳಿದಂತೆ ಮರ್ಸಿಡಿಸ್ ಬೆಂಝ್ ಸಂಸ್ಥೆಯು ರೂ. 30 ಲಕ್ಷ ನೆರವು ನೀಡಿರುವುದು ನಿರಾಶ್ರಿತರ ಕಣ್ಣೀರು ಒರೆಸುವುದಕ್ಕೆ ಸಹಕಾರಿಯಾಗಲಿದೆ.

ಪ್ರವಾಹ ಪೀಡಿತ ಕೇರಳಕ್ಕೆ ಹೋಂಡಾ ಸಂಸ್ಥೆಯು ನೀಡಿದ ದೇಣಿಗೆ ಎಷ್ಟು ಗೊತ್ತಾ?

ಇನ್ನು ಕೇರಳದಲ್ಲಿ ಭೀಕರ ಪ್ರವಾಹಕ್ಕೆ ಸಿಲುಕಿ ಸಾವಿರಾರು ವಾಹನಗಳು ನಿಷ್ಕೀಯಗೊಂಡಿದ್ದು, ಇವುಗಳ ರಿಫೇರಿಗಾಗಿ ವಾಹನ ಮಾಲೀಕರು ಪರದಾಟುತ್ತಿದ್ದಾರೆ. ಹೀಗಾಗಿ ಪರಿಹಾರವನ್ನು ಹಣದ ರೂಪದಲ್ಲಿ ನೀಡುವ ಬದಲು ಕೆಲವು ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮದೇ ನಿರ್ಮಾಣದ ವಾಹನಗಳಿಗೆ ಉಚಿತವಾಗಿ ತಾಂತ್ರಿಕ ಸೇವೆ ನೀಡಲು ನಿರ್ಧರಿಸಿವೆ.

ಪ್ರವಾಹ ಪೀಡಿತ ಕೇರಳಕ್ಕೆ ಹೋಂಡಾ ಸಂಸ್ಥೆಯು ನೀಡಿದ ದೇಣಿಗೆ ಎಷ್ಟು ಗೊತ್ತಾ?

ಹೀಗಾಗಿ ತುರ್ತಾಗಿ ವಾಹನ ರಿಫೇರಿ ಕಾರ್ಯುವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದ್ದು, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಉಚಿತವಾಗಿ ತಾಂತ್ರಿಕ ದೋಷವನ್ನು ಸರಿಪಡಿಸುವುದಾಗಿ ಭರವಸೆ ನೀಡಿವೆ.

ಪ್ರವಾಹ ಪೀಡಿತ ಕೇರಳಕ್ಕೆ ಹೋಂಡಾ ಸಂಸ್ಥೆಯು ನೀಡಿದ ದೇಣಿಗೆ ಎಷ್ಟು ಗೊತ್ತಾ?

ಒಟ್ಟಿನಲ್ಲಿ ಸಂಕಷ್ಟ ಪರಿಸ್ಥಿತಿಯಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಿರುವ ಆಟೋ ಉತ್ಪಾದನಾ ಸಂಸ್ಥೆಗಳು ಪ್ರವಾಹದಲ್ಲಿ ಬಳಲಿದವರ ಕಣ್ಣೀರು ಒರೆಸಲು ನೆರವಾಗಿದ್ದು, ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರೆ ಆಟೋ ಉತ್ಪಾದನಾ ಸಂಸ್ಥೆಗಳು ಸಹ ತಮ್ಮ ಸಾಮಾಜಿಕ ಜವಾಬ್ದಾರಿಯ ಬಗ್ಗೆ ತಿಳಿಯಬೇಕಾದ ಅವಶ್ಯಕತೆಯಿದೆ.

Most Read Articles

Kannada
Read more on auto news off beat
English summary
Honda Inndia helps to kerala flood with 3 crores fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X