ದೋಷಪೂರಿತ ಸ್ಕೂಟರ್ ಮಾರಾಟ ಮಾಡಿದ ಡೀಲರ್‌ಗೆ ಬಿತ್ತು ದಂಡ..!

ಸ್ವಂತ ಸ್ಕೂಟರ್, ಬೈಕ್ ಅಥವಾ ಕಾರುಗಳನ್ನು ಹೊಂದಬೇಕೆಂಬುದು ಬಹುತೇಕರ ಕನಸು. ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ತಮ್ಮ ಆದಾಯದಲ್ಲಿ ಉಳಿತಾಯ ಮಾಡಿ, ಇಲ್ಲವೇ ಬ್ಯಾಂಕುಗಳಿಂದ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಮಾಡಿ ವಾಹನ ಖರೀದಿಸುತ್ತಾರೆ.

ದೋಷಪೂರಿತ ಸ್ಕೂಟರ್‍‍ಗೆ ಮಾರಿದ ಡೀಲರ್‍‍ಗೆ ಬಿತ್ತು ದಂಡ..!

ತಾವು ಖರೀದಿಸುವ ವಾಹನವು ಬಹು ಕಾಲ ಬಾಳಿಕೆ ಬರಲಿ ಎಂಬ ಕಾರಣಕ್ಕಾಗಿ ಪ್ರತಿಷ್ಟಿತ ಕಂಪನಿಗಳ ವಾಹನಗಳನ್ನು, ಪ್ರತಿಷ್ಟಿತ ಡೀಲರ್‍‍ಗಳ ಬಳಿಯಿಂದ ಖರೀದಿಸುತ್ತಾರೆ. ಆದರೆ ಖರೀದಿಸಿದ ಹೊಸ ವಾಹನವು ಆರಂಭದಲ್ಲಿಯೇ ಕೈ ಕೊಟ್ಟರೆ ಹೇಗಾಗಬೇಡ. ಹೈದರಾಬಾದಿನಲ್ಲಿ ಆಗಿದ್ದೂ ಇದೇ ಕಥೆ. ದೋಷಪೂರಿತ ಸ್ಕೂಟರ್ ಮಾರಾಟ ಮಾಡಿ, ಬದಲಿ ಸ್ಕೂಟರ್ ನೀಡಲು ನಿರಾಕರಿಸಿದ ಡೀಲರ್‍‍ಗೆ ದಂಡ ವಿಧಿಸಲಾಗಿದೆ.

ದೋಷಪೂರಿತ ಸ್ಕೂಟರ್‍‍ಗೆ ಮಾರಿದ ಡೀಲರ್‍‍ಗೆ ಬಿತ್ತು ದಂಡ..!

ಹೈದರಾಬಾದಿನ ಜಿಲ್ಲಾ ಗ್ರಾಹಕ ವೇದಿಕೆಯು ಹೋಂಡಾದ ಅಧಿಕೃತ ಮಾರಾಟಗಾರ ಹಾಗೂ ಸೇವಾ ಕೇಂದ್ರಕ್ಕೆ ಬೇರೆ ದ್ವಿಚಕ್ರ ವಾಹನವನ್ನು ನೀಡಲು ಆದೇಶಿಸಿ, ಗ್ರಾಹಕನಿಗೆ ದೋಷಯುಕ್ತ ಸ್ಕೂಟರ್ ಮಾರಾಟ ಮಾಡಿದ್ದಕ್ಕಾಗಿ ರೂ.50,000 ದಂಡ ವಿಧಿಸಿದೆ.

ದೋಷಪೂರಿತ ಸ್ಕೂಟರ್‍‍ಗೆ ಮಾರಿದ ಡೀಲರ್‍‍ಗೆ ಬಿತ್ತು ದಂಡ..!

ದೂರುದಾರರಾದ ಘೋರಿ ಮೆಹ್ ಜಬೀನ್ ಅವರು 2016ರ ನವೆಂಬರ್ 21ರಂದು ರಾಮ್ ಟೂ ವೀಲರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಿಂದ ರೂ.50,883ಗಳನ್ನು ಪಾವತಿಸಿ, ಹೋಂಡಾ ಡಿಯೊ ಖರೀದಿಸಿದ್ದಾರೆ. ಅದಕ್ಕಾಗಿ ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲ ಪಡೆದಿದ್ದಾರೆ.

ದೋಷಪೂರಿತ ಸ್ಕೂಟರ್‍‍ಗೆ ಮಾರಿದ ಡೀಲರ್‍‍ಗೆ ಬಿತ್ತು ದಂಡ..!

ಡಿಯೋವನ್ನು ಖರೀದಿಸಿದ ದಿನದಿಂದ, ವಾಹನವು ಹಲವು ಮೆಕಾನಿಕಲ್ ಸಮಸ್ಯೆಗಳನ್ನು ಹೊಂದಿದೆ. ಈ ಸಮಸ್ಯೆಗಳನ್ನು ಸರಿಪಡಿಸಲು ಅನೇಕ ಬಾರಿ ಸೇವಾ ಕೇಂದ್ರಕ್ಕೆ ಸ್ಕೂಟರ್ ಅನ್ನು ನೀಡಿದ್ದಾರೆ. ದೋಷಗಳನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಸರ್ವಿಸ್ ಸೆಂಟರ್‍‍ನವರು ತಿಳಿಸಿದ ನಂತರ ಈ ಸ್ಕೂಟರಿಗೆ ಬದಲಿಗೆ ಬೇರೆ ಸ್ಕೂಟರ್ ನೀಡಲು ಮನವಿ ಮಾಡಿಕೊಂಡಿದ್ದಾರೆ.

ದೋಷಪೂರಿತ ಸ್ಕೂಟರ್‍‍ಗೆ ಮಾರಿದ ಡೀಲರ್‍‍ಗೆ ಬಿತ್ತು ದಂಡ..!

ಸರ್ವಿಸ್ ಸೆಂಟರ್‍‍ನವರು ತಮ್ಮ ಲಿಖಿತ ಹೇಳಿಕೆಯಲ್ಲಿ, ಪ್ರತಿ ಬಾರಿ ಸ್ಕೂಟರ್ ಅನ್ನು ತಮ್ಮ ಬಳಿ ತಂದಾಗ, ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ತಿಳಿಸಿದ್ದರು. ಹೋಂಡಾ ಕಂಪನಿಯು ತಯಾರು ಮಾಡುವ ವಾಹನಗಳನ್ನು ಮಾರಾಟ ಮಾಡಲು ಹಾಗೂ ಸರ್ವಿಸ್ ನೀಡಲು ಮಾತ್ರ ತಮಗೆ ಅಧಿಕಾರವಿದೆ.

ದೋಷಪೂರಿತ ಸ್ಕೂಟರ್‍‍ಗೆ ಮಾರಿದ ಡೀಲರ್‍‍ಗೆ ಬಿತ್ತು ದಂಡ..!

ವಾಹನದ ಉತ್ಪಾದನೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದರು. ಹೈದರಾಬಾದಿನ ಮೂರನೇ ಜಿಲ್ಲಾ ಗ್ರಾಹಕ ವೇದಿಕೆಯ ನ್ಯಾಯಪೀಠವು ಮೆಕಾನಿಕಲ್ ಸಮಸ್ಯೆಗಳು ಹೊಸ ಸ್ಕೂಟರಿನಲ್ಲಿ ಬಹು ಬೇಗ ಬಂದಿದ್ದು, ಇದರಿಂದಾಗಿ ದೂರುದಾರರಿಗೆ ಅನಾನುಕೂಲವಾಗಿರುವುದನ್ನು ಗಮನಿಸಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ದೋಷಪೂರಿತ ಸ್ಕೂಟರ್‍‍ಗೆ ಮಾರಿದ ಡೀಲರ್‍‍ಗೆ ಬಿತ್ತು ದಂಡ..!

ಗ್ರಾಹಕರು ಹೊಸ ವಾಹನವನ್ನು ಖರೀದಿಸಿದಾಗ, ತಾಂತ್ರಿಕ ಸಮಸ್ಯೆಗಳು ಯಾವಾಗಲೋ ಒಮ್ಮೆ ಬರುತ್ತವೆ ಎಂದು ನಿರೀಕ್ಷಿಸುತ್ತಾರೆ. ಪದೇ ಪದೇ ತೊಂದರೆಗೊಳಗಾಗುವ ಸಮಸ್ಯೆಗಳಿಂದಾಗಿ ಅದನ್ನು ರಿಪೇರಿ ಮಾಡುತ್ತಾ ಹೈರಾಣಾಗಿ ವಾಹನವನ್ನು ಖರೀದಿಸುವ ಉದ್ದೇಶವೇ ಕಳೆದುಹೋಗುತ್ತದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ದೋಷಪೂರಿತ ಸ್ಕೂಟರ್‍‍ಗೆ ಮಾರಿದ ಡೀಲರ್‍‍ಗೆ ಬಿತ್ತು ದಂಡ..!

ಹೊಸ ವಾಹನವು, ಹಲವಾರು ತೊಂದರೆಗಳನ್ನು ಹೊಂದಿರಬಾರದು. ವಾಹನವು ವಾರಂಟಿ ಅವಧಿಯನ್ನು ಹೊಂದಿತ್ತು. ಗ್ರಾಹಕರನ್ನು ತೃಪ್ತಿಪಡಿಸುವುದು ಡೀಲರ್‍‍ಗಳ ಕರ್ತವ್ಯವಾಗಿದೆ. ಹೊಸ ವಾಹನದಲ್ಲಿ ನಿರಂತರ ಮೆಕಾನಿಕಲ್ ಸಮಸ್ಯೆಗಳು ಕಂಡು ಬಂದಿರುವುದರಿಂದ, ದೂರುದಾರರು ಬೇರೆ ವಾಹನವನ್ನು ಪಡೆಯಲು ಅರ್ಹರಾಗಿರುತ್ತಾರೆ.

MOST READ: ಪೆಟ್ರೋಲ್ ಬಂಕ್‍‍ನಿಂದ ಹೊರಡುವ ಮುನ್ನ ಎಚ್ಚರ..!

ದೋಷಪೂರಿತ ಸ್ಕೂಟರ್‍‍ಗೆ ಮಾರಿದ ಡೀಲರ್‍‍ಗೆ ಬಿತ್ತು ದಂಡ..!

ಸ್ಕೂಟರ್ ಅನ್ನು ಬದಲಿಸುವುದರ ಜೊತೆಗೆ, ದೂರುದಾರರಿಗೆ ದೂರಿನ ವೆಚ್ಚವಾಗಿ ರೂ.5000ಗಳನ್ನು ನೀಡಬೇಕೆಂದು ಆದೇಶ ನೀಡಿದೆ. ಈ ಪ್ರಕರಣದ ನಂತರವಾದರೂ ಡೀಲರ್‍‍ಗಳು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸುತ್ತಾರೆಯೇ ಎಂಬುದನ್ನು ಕಾದು ನೋಡೋಣ.

Most Read Articles

Kannada
English summary
Honda service centre asked to replace faulty scooter, fined Rs 50,000 - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X